ಗೊಂದಲ ಬೇಡ, ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ : ಆರ್ ಅಶೋಕ್

Wednesday, September 29th, 2021
R Ashoka

ಬೆಂಗಳೂರು  : ಯಾರಿಗೂ ಯಾವುದೇ ಗೊಂದಲ ಬೇಡ, ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ೧ ಲಕ್ಷ ರೂಪಾಯಿ ನೀಡುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ವಿಧಾನಸೌಧದಲ್ಲಿ ಹೇಳಿದರು. “ರಾಜ್ಯ ಸರ್ಕಾರ ಜನರ ಪರವಾಗಿ ಇದೆ. ನಮ್ಮದು ಜನಸ್ನೇಹಿ ಸರ್ಕಾರ. ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯನನ್ನು ಕಳೆದುಕೊಂಡವರಿಗೆ 1 ಲಕ್ಷ ರೂ ವಿಪತ್ತು ಪರಿಹಾರ ನಿಧಿಯಿಂದ ನೀಡುತ್ತೇವೆ. ಕೇಂದ್ರ ಸರ್ಕಾರ ಕೋವಿಡ್ ನಿಂದ ಮೃತಪಟ್ಟ ಎಲ್ಲರಿಗೂ 50,000 ರೂ‌ ನೀಡುತ್ತದೆ. ಬಿಪಿಎಲ್ ಕಾರ್ಡ್ […]

ಅಕ್ಟೋಬರ್ 1ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ಥಿಯೇಟರ್, ರಂಗಮಂದಿರಗಳು ಓಪನ್

Wednesday, September 29th, 2021
Theater

ಮಂಗಳೂರು :  ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಕೋವಿಡ್-19 ಪ್ರಕರಣಗಳ ಸಂಭಾವ್ಯ ಏರಿಕೆಯನ್ನು ತಡೆಯಲು ಈವರೆಗೆ ಹೊರಡಿಸಿರುವ ಮಾರ್ಗಸೂಚಿ ಮತ್ತು ಅದೇಶಗಳಿಗೆ ಕೆಲವೊಂದು ಸೇರ್ಪಡೆಗಳು ಮತ್ತು ಮಾರ್ಪಾಡುಗಳನ್ನು ಮಾಡಿ ಸರಕಾರ ಆದೇಶಿಸಿರುತ್ತದೆ. ಈ ಆದೇಶಗಳು ಹಾಗೂ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ ಕೋವಿಡ್-19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 34 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 141 (1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ […]

ಲಢಾಕ್ ನಲ್ಲಿ ಸಿಂಧೂ ನದಿ ಪೂಜೆ ನೆರವೇರಿಸಿದ ಯೂಥ್ ಆಫ್ ಜಿ ಎಸ್ ಬಿ.

Wednesday, September 29th, 2021
Ladak

ಮಂಗಳೂರು  :  ಗೌಡ ಸಾರಸ್ವತ ಬ್ರಾಹ್ಮಣರ ದೊಡ್ಡ ಸಂಖ್ಯೆಯ ಪ್ರವಾಸಿಗರ ಗುಂಪು ಯೂಥ್ ಆಫ್ ಜಿ ಎಸ್ ಬಿ ನೇತೃತ್ವದಿಂದ ಇದೇ ಪ್ರಪ್ರಥಮ ಬಾರಿಗೆ ಲಢಾಕ್ ಪ್ರಾಂತ್ಯದ ಸಪ್ತ ಪವಿತ್ರ ನದಿಗಳಲ್ಲಿ ಒಂದಾಗಿರುವ ಸಿಂಧೂ ಮಾತೆಯ ಪೂಜೆ ನೆರವೇರಿಸಿತು. ಕೆಲ ಸಮಯ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಲಢಾಕ್ ನ ಸಿಂಧೂ ನದಿ ಪೂಜೆ ನೆರವೇರಿಸಿದ್ದು ಈ ಮೂಲಕ ಲಡಾಕ್ ಗೆ ಆಗಮಿಸುವ ಪ್ರವಾಸಿಗರು ಕೂಡ ಸಿಂಧೂ ದರ್ಶನ ಮಾಡಬೇಕೆಂಬ ಉದ್ದೇಶ ಹೊಂದಿದ್ದರು. ಇದರಿಂದ ಪ್ರೇರಣೆ ಗೊಂಡ ಯೂಥ್ […]

ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನೈತಿಕ ಗೂಂಡಾಗಿರಿ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ- ಡಿವೈಎಫ್ಐ

Wednesday, September 29th, 2021
Moral policing

ಮಂಗಳೂರು :  ಸುರತ್ಕಲ್ ಎನ್.ಐ.ಟಿ.ಕೆ ಸಮೀಪ ಜೀಪಿನಲ್ಲಿ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ತಡೆದು ದಾಂಧಲೆ ನಡೆಸಿ ಹಲ್ಲೆಗೆ ಯತ್ನಿಸಿದ ಬಿಜೆಪಿಯ ಗೂಂಡಾ ಕಾರ್ಯಕರ್ತರ ಕೃತ್ಯವನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡಿಸಿದೆ. ಪೊಲೀಸ್ ಇಲಾಖೆ ಈ ಕೂಡಲೇ ಗೂಂಡಾಗಿರಿ ನಡೆಸಿದವರ ಮೇಲೆ ಕಠಿಣ ಕಾನೂನಿನಡಿ ಶಿಕ್ಷೆಗೊಳಪಡಿಸಿ ಬಂಧಿಸಲು ಒತ್ತಾಯಿಸುತ್ತದೆ. ದೇರಳಕಟ್ಟೆ ಕೆ.ಎಸ್‌ ಹೆಗ್ಡೆ ಮೆಡಿಕಲ್‌ ಕಾಲೇಜಿನಲ್ಲಿ ವ್ಯಾಸಂಗ ನಡೆಸುವ ವೈದ್ಯಕೀಯ ವಿದ್ಯಾರ್ಥಿಗಳು ಮಣಿಪಾಲಕ್ಕೆ ತೆರಳಿ ಬರುವಂತಹ ಹೊತ್ತಿನಲ್ಲಿ ಸುರತ್ಕಲ್ ಬಳಿ ತಡೆದು ಹಲ್ಲೆ ನಡೆಸಿದ ಬಿಜೆಪಿ, ಬಜರಂಗದಳದ […]

ಲ್ಯಾಂಡ್ ಲಿಂಕ್ಸ್ ಗೆ ನರ್ಮ್ ಬಸ್ ಸಂಚಾರ ಆರಂಭ, ಶಾಸಕ ಡಾ.ಭರತ್ ಶೆಟ್ಟಿ ವೈ ಹಸಿರು ನಿಶಾನೆ

Wednesday, September 29th, 2021
Landlinks-Bus

ಕೊಂಚಾಡಿ: ಲ್ಯಾಂಡ್ ಲಿಂಕ್ಸ್  ಪ್ರದೇಶದ ಜನರ ಬಹುದಿನದ ಬೇಡಿಕೆಯಾದ ಸರಕಾರಿ ಬಸ್ ಓಡಾಟದ ಕನಸು ನನಸಾಗಿದೆ. ಬುಧವಾರ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ನರ್ಮ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು ಈ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು, ನೌಕರಿಗೆ ಹೋಗುವ ಜನರಿಗೆ ಅನುಕೂಲವಾದ ಸಮಯದಲ್ಲಿ ನರ್ಮ್ ಬಸ್ ಸಂಚಾರ ಅವಕಾಶ ನೀಡಲಾಗಿದೆ.ಪ್ರತೀ 45 ನಿಮಿಷಕ್ಕೆ ನರ್ಮ್ ಬಸ್ ಓಡಾಟ ನಡೆಸಲಿದೆ.ಇದೀಗ ಪ್ರಾಯೋಗಿಕವಾಗಿ ಸಮಯದಲ್ಲಿ ಓಡಾಟ ನಡೆಸಲಿದೆ.ಬಳಿಕ ಜನರ ಬೇಡಿಕೆ ತಕ್ಕಂತೆ ಸಮಯ […]

ದತ್ತಪೀಠದಲ್ಲಿ ಪೂಜೆಗೆ ಮೌಲ್ವಿ ನೇಮಕ ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್, ಬಿಜೆಪಿ ಮುಖಂಡರಿಂದ ಸ್ವಾಗತ

Tuesday, September 28th, 2021
Datta Peeta

ಚಿಕ್ಕಮಗಳೂರು : ದತ್ತಪೀಠದಲ್ಲಿ ಪೂಜೆಗೆ ಮೌಲ್ವಿ ನೇಮಕ ಮಾಡಿದ್ದ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್, ಪೂಜಾ ವಿಧಾನದ ಕುರಿತು ಹೊಸದಾಗಿ ತೀರ್ಮಾನ ತೆಗೆದುಕೊಳ್ಳುವಂತೆ ನೀಡಿರುವ ಆದೇಶವನ್ನು ರಾಜ್ಯ ಬಿಜೆಪಿ ಮುಖಂಡರು ಸ್ವಾಗತಿಸಿದ್ದಾರೆ. ದತ್ತ ಪೀಠದ ವಿಚಾರದಲ್ಲಿ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ದತ್ತ ಮಾಲಾಧಾರಿಗಳು ಮತ್ತು ದತ್ತ ಪೀಠದ ಮೇಲೆ ನಂಬಿಕೆ ಇರಿಸಿರುವ ಅಸಂಖ್ಯಾತ ಭಕ್ತರಿಗೆ ಶುಭ ವಿಚಾರ ಬಂದಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ. ಯಾವತ್ತೂ ಸತ್ಯಕ್ಕೆ ಜಯ ಖಚಿತ ಎಂಬುದು ಇದರಿಂದ ಋಜುವಾತಾಗಿದೆ. […]

ಬೊಕ್ಕಪಟ್ನ- ಬೋಳೂರಿನಿಂದ ಕಂಕನಾಡಿ ರೈಲ್ವೇ ನಿಲ್ದಾಣದ ವರೆಗೆ ನೂತನ ಸರಕಾರಿ ಸಿಟಿ ಬಸ್ ಸೇವೆಗೆ ಶಾಸಕ ಕಾಮತ್ ಚಾಲನೆ

Monday, September 27th, 2021
Bokkapatna

ಮಂಗಳೂರು: ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೊಕ್ಕಪಟ್ನ- ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಅಮೃತಾನಂದಮಯಿ ಆಶ್ರಮದ ಮೂಲಕವಾಗಿ ಕಂಕನಾಡಿ ರೈಲ್ವೇ ಸ್ಟೇಷನ್ ವರೆಗೆ ಮತ್ತು ಅಲ್ಲಿಂದ ವಾಪಸು ಬೋಳೂರು ಸುಲ್ತಾನ್ ಬತ್ತೇರಿ – ಬೊಕ್ಕಪಟ್ನದ ವರೆಗೆ ಸರಕಾರಿ ಸಿಟಿ ಬಸ್ ಸೇವೆಯನ್ನು ಹೊಸದಾಗಿ ದಿನಾಂಕ 27.9.2021 ರಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಸ್ಥಳೀಯ ಸಾರ್ವಜನಿಕರು ಬಹಳ ಕಾಲದಿಂದಲೂ ಇಲ್ಲಿ ಸರಕಾರಿ […]

ಕುಂಬಳೆಯ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟ ಮತ್ತೋರ್ವನ ಬಂಧನ

Monday, September 27th, 2021
Vishal Rathod

ಕಾಸರಗೋಡು : ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಿಜಾಪುರದ ಮೂಲದ ವಿಶಾಲ್ ರಾಥೋಡ್ (22) ಎಂದು ಗುರುತಿಸಲಾಗಿದೆ. ಕುಂಬಳೆಯ ಸ್ನೇಹಾ ಎಂಬ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿಶಾಲ್ ನನ್ನು ಬಂಧಿಸಲಾಗಿದೆ. ಸೆ. 17ರಂದು ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಸ್ನೇಹಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಿಂದ ಲಭಿಸಿದ್ದ ಪತ್ರದಲ್ಲಿ ಇಬ್ಬರ ಮೊಬೈಲ್ ನಂಬ್ರ ಹಾಗೂ ಹೆಸರು ಬರೆದಿಡಲಾಗಿತ್ತು. ಇದನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ ಕುಂಬಳೆ ಠಾಣಾ ಪೊಲೀಸರು […]

ತುಳುವೆರೆ ಪಕ್ಷದ ವೆಬ್‌ಸೈಟ್ ಲೋಕಾರ್ಪಣೆ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Monday, September 27th, 2021
Tuluvere Paksha

ಬೆಳ್ತಂಗಡಿ : ತುಳುವೆರೆ ಪಕ್ಷದ ವೆಬ್‌ಸೈಟ್ ಲೋಕಾರ್ಪಣೆ ಮತ್ತು ಸದಸ್ಯತ್ವ ಅಭಿಯಾನಕ್ಕೆ ಅಂಬೇಡ್ಕರ್ ಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕರ್ತರ ಸಮಾವೇಶ ಮತ್ತು ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷದ ಸ್ಥಾಪಕ ಅಧ್ಯಕ್ಷರಾದ ಶೈಲೇಶ್ ಆರ್.ಜೆ.ಯವರು ವಹಿಸಿ ಮಾತನಾಡುತ್ತ ತುಳು ಭಾಷೆಯ ಸ್ಥಾನಮಾನ ಮತ್ತು ತುಲುನಾಡ್ ರಾಜ್ಯ ರಚನೆಯ ಬೇಡಿಕೆಗೆ ಸುಧೀರ್ಘಕಾಲದಿಂದ ತುಳುವರು ಹೋರಾಟ ನಡೆಸುತ್ತಿದ್ದರು ತುಳು ಭಾಷೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಧಿಕೃತ ಭಾಷೆಯೆಂಬ ಸ್ಥಾನಮಾನ ನೀಡಲು ವಿಫಲವಾಗಿದೆ, 8ನೇ ಪರಿಚ್ಛೇದಕ್ಕೆ ಸೇರಿಸಲು […]

ಕಾರ್ಕಳ ಮೆಸ್ಕಾಂ ಉಪವಿಭಾಗಗಳಿಗೆ ರೂ. 6 ಕೋಟಿ ವಿಶೇಷ ಅನುದಾನ : ವಿ ಸುನಿಲ್ ಕುಮಾರ್

Sunday, September 26th, 2021
Sunil Kumar V

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲೊ ವೊಲ್ಟೇಜ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಕಾರ್ಕಳ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ಮೆಸ್ಕಾಂ ಉಪ ವಿಭಾಗಗಳಿಗೆ ರೂ. 6.00 ಕೋಟಿ ವಿಶೇಷ ಅನುದಾನದಲ್ಲಿ ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕ (ಟಿಸಿ) ಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಲೊ ವೊಲ್ಟೇಜ್ ಹಾಗೂ ವಿದ್ಯುತ್ ಪರಿವರ್ತಕಗಳ ಸಮಸ್ಯೆ ಬಗೆಹರಿಸಲಾಗುವುದು ಎಂದು ಕ್ಷೇತ್ರದ ಶಾಸಕರು, ಮಾನ್ಯ ಇಂಧನ […]