ಗುಡ್ಡದಲ್ಲಿ ಜೂಜಾಟ..7 ಮಂದಿ ಪೊಲೀಸರ ವಶಕ್ಕೆ!

Friday, August 10th, 2018
mangaluru

ಮಂಗಳೂರು: ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದಲ್ಲಿ ಸರ್ಕಾರಿ ಗುಡ್ಡದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ 7 ಮಂದಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಾರ್ಯ ಗ್ರಾಮದ ಮರ್ಜಾಳ ಎಂಬಲ್ಲಿರುವ ಸರ್ಕಾರಿ ಗುಡ್ಡದಲ್ಲಿ ಇವರು ಜೂಜಾಟವಾಡುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ತಣ್ಣೀರುಪಂಥ ಗ್ರಾಮ ಪಂಚಾಯತ್ ಸದಸ್ಯ ಆದಂ(42), ಇಕ್ಬಾಲ್ (38), ಮಹಮ್ಮದ್ ಶಫಿ (23) , ಸುಂದರ ಆಚಾರಿ (35), ಲಕ್ಷ್ಮಣ(35), ಸತೀಶ್ (40) , ನವೀನ್ (42) ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 21,510 ನಗದು, 3 ಮೋಟಾರು ಸೈಕಲ್‌ ಹಾಗೂ ಒಂದು […]

ಕರಾವಳಿಯಲ್ಲಿ ವರುಣನ ಅಬ್ಬರ..ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ!

Friday, August 10th, 2018
karavali

ಮಂಗಳೂರು: ಕರಾವಳಿಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿ ಹಾಗು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಬಿರುಸುಗೊಂಡಿದೆ . ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗಂಡಿಬಾಗಿಲು ಪ್ರದೇಶದಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಏಕಾಏಕಿ ಗುಡ್ಡ ಕುಸಿದ ಪರಿಣಾಮ ಮನೆ ಹಾಗು ಅಪಾರ ಪ್ರಮಾಣದಲ್ಲಿ ಕೃಷಿ, ತೋಟ ನಾಶವಾಗಿದೆ. ಬೆಟ್ಟದ ಮೇಲಿಂದ ಹರಿದು ಬರುವ […]

ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಶಾಶ್ವತ ಪರಿಹಾರ ಬೇಕಾಗಿಲ್ಲ: ಜಿ.ಪರಮೇಶ್ವರ್

Friday, August 10th, 2018
ramanath-rai

ಮಂಗಳೂರು: ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಶಾಶ್ವತ ಪರಿಹಾರ ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದು ಬೇಕಾಗಿಲ್ಲ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕಿಡಿಕಾರಿದರು. ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ 2017-18 ರಲ್ಲಿ 12,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರಿಂದ ರಾಷ್ಟ್ರೀಯ ಬ್ಯಾಂಕ್ನಲ್ಲಿರುವ 30 ಸಾವಿರ ಕೋಟಿ ರೂ. ಸರ್ಕಾರಕ್ಕೆ ಹೊರೆಯಿದೆ. ಆ ಹೊರೆ ತಪ್ಪಿಸಿದರೆ ಅದೇ ಹಣದಲ್ಲಿ ರೈತರಿಗೆ ಬೇಕಾದ ಹನಿ ನೀರಾವರಿ, […]

ಭೂಮಿ ಒಳಗಿಂದ ಭಾರೀ ಸದ್ದು.. ಆತಂಕಗೊಂಡ ಜನ!

Friday, August 10th, 2018
chikmagaluru

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ‌ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಒಳಗಿಂದ ಬಂದ ಭಾರೀ ಸದ್ದು ಕೇಳಿ ಆತಂಕಗೊಂಡ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಳೆದೆರಡು ತಿಂಗಳಿಂದ ಆಗಾಗ ಇಂತಹ ಅನುಭವ ಆಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಶಬ್ದದಿಂದ ಮನೆಯಲ್ಲಿನ ಪಾತ್ರೆಗಳು, ಗೃಹಪಯೋಗಿ ವಸ್ತುಗಳು ಕೆಳಗೆ‌ ಬೀಳುತ್ತಿವೆ. ಒಂದೆಡೆ ಮಳೆ, ಮತ್ತೊಂದೆಡೆ ಭೂಮಿಯೊಳಗಿಂದ ಬರುತ್ತಿರುವ ಸದ್ದಿನಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಪುಂಜಾಲಕಟ್ಟೆಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

Friday, August 10th, 2018
police

ಮಂಗಳೂರು: ಜಾನುವಾರುಗಳನ್ನು ಕಳ್ಳತನ ಮಾಡಿ, ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವವರನ್ನು ಬೆನ್ನಟ್ಟಿ ಗೋವುಗಳನ್ನು ರಕ್ಷಿಸಿದ ಘಟನೆ ಪುಂಜಾಲಕಟ್ಟೆಯ ಸೊಣಂದೂರು ಅಡ್ತಿಳ ಎಂಬಲ್ಲಿ ನಡೆದಿದೆ. ಮಂಗಳೂರು ಜಿಲ್ಲಾ ಡಿಸಿಐಬಿ ಪೊಲೀಸರ ತಂಡ ಈ ಸಾಹಸ ಮೆರೆದಿದೆ. ಈ ಸಂದರ್ಭದಲ್ಲಿ ವಾಹನವನ್ನು ಆರೋಪಿಗಳು ಸ್ಥಳದಲ್ಲಿಯೇ ಬಿಟ್ಟು ಸಾಗಾಟದ ಸಮಯದಲ್ಲಿ ಬೆಂಗಾವಲಿಗಿದ್ದ ವಾಹನದಲ್ಲಿ ಪರಾರಿಯಾಗಿದ್ದಾರೆ. ಅಕ್ರಮ ಜಾನುವಾರು ಸಾಗಾಟದ ಕುರಿತು ಖಚಿತ ಮಾಹಿತಿ ಪಡೆದ ಡಿಸಿಐಬಿ ಪೊಲೀಸರ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಸಮೀಪ ಗಸ್ತಿನಲ್ಲಿದ್ದರು. ಈ ಸಂದರ್ಭದಲ್ಲಿ […]

ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ..!

Friday, August 10th, 2018
arrested

ಬೆಳ್ತಂಗಡಿ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಕ್ರಿಬೆಟ್ಟುವಿನಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತುಂಬೆ ರಾಮಲ್ ಕಟ್ಟೆ ನಿವಾಸಿ ಅಬ್ದುಲ್ ಜಬ್ಬಾರ್ ಮತ್ತು ಬಾಂಬಿಲ ನಿವಾಸಿ ಸಂಶೀರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 850 ಕೆ.ಜಿ. ಗೋಮಾಂಸ ಮತ್ತು ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೂಂಜಾಲಕಟ್ಟೆ ಕಡೆಯಿಂದ ಮಂಗಳೂರಿಗೆ ಪಿಕಪ್ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಾರೆಂದು ಬಂದ ಮಾಹಿತಿಯಂತೆ ಜಕ್ರಿಬೆಟ್ಟುವಿನಲ್ಲಿ ಪೊಲೀಸರು ಪಿಕಪ್ ವಾಹನವನ್ನು ತಡೆದಿದ್ದರು. ಈ ಸಂದರ್ಭ ಪಿಕಪ್ನಲ್ಲಿ 850 ಕೆ.ಜಿ ದನದ […]

ಇಂಟಕ್ ಅಧ್ಯಕ್ಷನ ಮೇಲೆ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತು ಅವರ ಬೆಂಬಲಿಗರಿಂದ ಹಲ್ಲೆ

Thursday, August 9th, 2018
Congress-fight

ಮಂಗಳೂರು : ಕಾಂಗ್ರೆಸ್ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ ಮೇಲೆ ನಗರದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ‘ಕ್ವಿಟ್ ಇಂಡಿಯಾ’ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ  ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ  ಚೈನ್ ಕಿತ್ತುಕೊಂ ಡ ಘಟನೆ ನಗರದ ಪುರಭವನದಲ್ಲಿ ಗುರುವಾರ ನಡೆದಿದೆ. ಪುರಭವನದಲ್ಲಿ ನಡೆದ ಕ್ವಿಟ್ ಇಂಡಿಯಾ ಎಂಬ ಕಾರ್ಯಕ್ರಮದ ಅಂತ್ಯದಲ್ಲಿ ಕಾಂಗ್ರೆಸ್ ನಾಯಕರ ಮುಂದೆಯೇ ಹಲ್ಲೆ ನಡೆಸಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಪುನೀತ್ ಶೆಟ್ಟಿ ಮೇಲೆ ಮಿಥುನ್ ರೈ ಮತ್ತು ಆತನ ಬೆಂಬಲಿಗರು ಏಕಾಏಕಿ ದಾಳಿ ನಡೆಸಿದ್ದಾರೆ. ಸುಮಾರು […]

ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದಿದ್ದ ಇಂಜಿನಿಯರ್..ಶವವಾಗಿ ಪತ್ತೆ!

Thursday, August 9th, 2018
engineer

ಚಿಕ್ಕಮಗಳೂರು: ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದಿದ್ದ ಇಂಜಿನಿಯರ್ವೋರ್ವರು 15 ದಿನಗಳ ಬಳಿಕ ಶವವಾಗಿ ಭದ್ರಾ ನದಿಯಲ್ಲಿ ಪತ್ತೆಯಾಗಿದ್ದಾರೆ. ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುವಾಗ ಕಾಲು ಜಾರಿ ಕಿರಣ್ ನದಿಗೆ ಬಿದ್ದಿದ್ದರು. ಇಂದು ಮಾಗುಂಡಿ ಸಮೀಪದಲ್ಲಿರುವ ಭದ್ರಾ ನದಿಯಲ್ಲಿ ಕಿರಣ್ ಮೃತದೇಹ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆ‌ ಸುರಿಯುತ್ತಿರುವ ಹಿನ್ನಲೆ ಭದ್ರಾ ನದಿಯಲ್ಲಿ ‌ಕಿರಣ್ ಮೃತ ದೇಹ ತೇಲಿ ಬಂದಿದೆ. ಭದ್ರಾನದಿಯಲ್ಲಿ ಸೆಲ್ಫಿ ಸಾವು ಪ್ರಕರಣ… ಇನ್ನೂ ಪತ್ತೆಯಾಗದ ಪ್ರವಾಸಿಯ ದೇಹ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ […]

ಶ್ರೀ ರಾಘವೇಂದ್ರ ಮಠದಲ್ಲಿ ವೃದ್ಧ ತಂದೆ ಮೇಲೆ ಹಲ್ಲೆ ಮಾಡಿ ಕ್ಷಮೆ ಕೇಳಿದ ಮಗ..!

Thursday, August 9th, 2018
raghavendra

ಮಂಗಳೂರು: ಮಂಗಳೂರು ಸುರತ್ಕಲ್ನ ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದಲ್ಲಿ ವೃದ್ಧ ತಂದೆ ಮೇಲೆ ಹಲ್ಲೆ ಮಾಡಿ ಅವರ ಪೆಟ್ಟಿಗೆ ಕಸಿದುಕೊಂಡು ಹೋಗುವ ದೃಶ್ಯವೊಂದು ವೈರಲ್ ಆದ ಬೆನ್ನಲ್ಲೇ ಮಗ ತಂದೆಯ ಬಳಿ ಬಂದು ಕ್ಷಮೆ ಕೋರಿದ್ದಾನೆ. ಶ್ರೀ ರಾಘವೇಂದ್ರ ಮಠದಲ್ಲಿ ತೀರ್ಥ ಪ್ರಸಾದ ಕೊಡುವ ಸೇವೆ ಮಾಡುತ್ತಿದ್ದ ಯೋಗೀಶ ಭಟ್ಟ (88) ರಿಗೆ, ಅವರ ಮಗ ಸುರೇಶ್ ಭಟ್ಟ (38) ಸುಮಾರು 8 ವರ್ಷದಿಂದ ದುಡ್ಡಿಗಾಗಿ ಹಿಂಸೆ ನೀಡುತ್ತಿದ್ದ. ಈತ ಮಠಕ್ಕೆ ಬಂದು ಅಪ್ಪನಿಗೆ ಹೊಡೆದು ಪೆಟ್ಟಿಗೆ […]

ಬೆಳ್ತಂಗಡಿ, ಸುಳ್ಯದಲ್ಲಿ ಭಾರಿ ಮಳೆ..!

Thursday, August 9th, 2018
belthangady

ಮಂಗಳೂರು: ಪಶ್ಚಿಮಘಟ್ಟದಲ್ಲಿ ಬುಧವಾರದಿಂದ ಮಳೆ ಸುರಿಯುತ್ತಿದ್ದು ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಬೆಳ್ತಂಗಡಿ, ಸುಳ್ಯದಲ್ಲಿಯೂ ವರುಣನ ಆರ್ಭಟ ಜೋರಾಗಿದೆ. ಭಾರಿ ಮಳೆಯ ಪರಿಣಾಮ ಕುಮಾರಧಾರ, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಮಳೆಯ ಪರಿಣಾಮ ಪುತ್ತೂರು ತಾಲೂಕಿನ ಗುಂಡ್ಯಾ ಸಮೀಪದ ಉದನೆಯಲ್ಲಿ ಸೇತುವೆಯ ಮೇಲೆ ನೀರು ಹರಿಯುತ್ತಿದೆ. ಶಿರಾಡಿ ಗ್ರಾಮದ ಹಲವು ‌ಮನೆಗಳು ಜಲಾವೃತವಾಗಿದ್ದು, ಉಪ್ಪಿನಂಗಡಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ‌ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆಯೂ ಮುಳುಗಡೆಯಾಗಿದೆ.