ಸದನದಲ್ಲಿ ಆಂಜನೇಯ, ನರೇಂದ್ರ ಸ್ವಾಮಿ ಜಟಾಪಟಿ

Friday, January 31st, 2014
assembly

ಬೆಂಗಳೂರು: ಕೊನೆಯ ದಿನವಾದ ಗುರುವಾರ ವಿಧಾನಸಭೆ ಕಲಾಪದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಮತ್ತು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಸರ್ಕಾರವನ್ನು ಮುಜುಗರ ಉಂಟುಮಾಡಿತು. ಗುರುವಾರದ ಕಲಾಪದಲ್ಲಿ ಮೀಸಲು ಕ್ಷೇತ್ರಗಳ ಶಾಸಕರ ಕುರಿತು ಸಚಿವ ಆಂಜನೇಯ ಅವರು ಆಡಿದ ಮಾತಿನಿಂದ ಅಸಮಾಧಾನಗೊಂಡ ನರೇಂದ್ರಸ್ವಾಮಿ, ಒಂದು ಹಂತದಲ್ಲಿ ಆಂಜನೇಯ ಅವರ ಮೇಲೆ ಏರಿ ಹೋಗುವ ಯತ್ನವನ್ನೂ ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸುಳಿವು ಅರಿತ ಇತರ ಸದಸ್ಯರು ಇಬ್ಬರನ್ನೂ ಸಮಾಧಾನಪಡಿಸಿದರು. ಪ್ರತಿಪಕ್ಷದ ನಾಯಕ ಜಗದೀಶ್‌ […]

ರಾಜ್ಯ ಸರ್ಕಾರದಿಂದ ಮಠಗಳ ನಿಯಂತ್ರಣ

Tuesday, January 28th, 2014
Matt

ಬೆಂಗಳೂರು : ಮಠಗಳ ಮೇಲೆ ನಿಯಂತ್ರಣ ಸಾಧಿಸುವ ಅಧಿಕಾರ ಪಡೆಯಲು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿಯಂತ್ರಣಕ್ಕೆ ಮಠಗಳನ್ನು ಒಳಪಡಿಸಲು ಕಾನೂನು ರೂಪಿಸುವ ಅಗತ್ಯವಿದೆ ಎಂಬ ನ್ಯಾಯಾಲಯದ ಸೂಚನೆಯನ್ನೇ ಮುಂದಿಟ್ಟುಕೊಂಡು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ಸರ್ಕಾರ ತರಲು ಹೊರಟಿದೆ. ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಗೆ ತಿದ್ದುಪಡಿ ಮಾಡಿ ಎಲ್ಲ ಮಠಗಳನ್ನು ಕಾಯ್ದೆಯಡಿ ತರುವ ಬಗ್ಗೆ ಚಿಂತನೆ ನಡೆಸಿದ್ದು, ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು […]

ಡಬ್ಬಿಂಗ್ ಬಗ್ಗೆ ಪುನೀತ್ ರಾಜ್ ಕುಮಾರ್ ಹೇಳಿದ್ದೇನು?

Tuesday, January 28th, 2014
Punith

ಬೆಂಗಳೂರು : ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಡಬ್ಬಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಡಾ.ರಾಜ್ ಕುಮಾರ್ ವೇದಿಕೆಯಲ್ಲಿ ಮಾತನಾಡುತ್ತಿದ್ದರು. ಡಬ್ಬಿಂಗ್ ಯಾಕೆ ಬೇಡ ಎಂಬುದನ್ನು ಅವರು ಬಹಳ ಸಂಯಮದಿಂದ ಹೇಳಿದರು. ಓವರ್ ಟು ಪುನೀತ್ ರಾಜ್ ಕುಮಾರ್… ನಾವು ಯಾರನ್ನೂ ದ್ವೇಷಿಸುತ್ತಿಲ್ಲ. ಯಾವ ಭಾಷೆಯನ್ನೂ ದ್ವೇಷಿಸುತ್ತಿಲ್ಲ. ನಮಗೆ ಎಲ್ಲರೂ ಬೇಕು. ಏಕೆಂದರೆ ಚಿತ್ರರಂಗ ಎಂದರೆ ಒಂದು ಕುಟುಂಬ ಇದ್ದಂತೆ. ಕಲಾವಿದರು ಇಲ್ಲಿರಬಹುದು, ತಮಿಳುನಾಡಿನಲ್ಲಿರಬಹುದು ಎಲ್ಲಿ ಬೇಕಾದರೂ ಇರಬಹುದು. ಇದು ಒಂದು ಕುಟುಂಬ. […]

ಬಿಎಸ್‌ವೈ ಮುನಿಸು: ರಾಜ್ಯ ಬಿಜೆಪಿ ಇಕ್ಕಟ್ಟಿನಲ್ಲಿ

Tuesday, January 28th, 2014
B-S-Yeddyurappa

ಬೆಂಗಳೂರು : ಬಿಜೆಪಿಯ ಜೊತೆ ಇತ್ತೀಚೆಗಷ್ಟೇ ಕೆಜೆಪಿಯನ್ನು ವಿಲೀನಗೊಳಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇದೀಗ ಬಿಜೆಪಿ ಯಲ್ಲಿ ಮೂಲೆ ಗುಂಪಾಗಿದ್ದು, ರಾಜ್ಯ ನಾಯಕರ ವರ್ತನೆಗೆ ಬೇಸತ್ತು ಅಧಿ ವೇಶನ ಸೇರಿದಂತೆ ಪಕ್ಷದ ಚಟುವಟಿಕೆ ಯಿಂದ ದೂರ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಮುಂಬರುವ ಲೋಕಸಭಾ ಚುನಾ ವಣೆಗೂ ಮುನ್ನವೇ ಬಿಜೆಪಿಯಲ್ಲಿ ಅಸ ಮಾಧಾನದ ಹೊಗೆ ಎದ್ದಿದೆ. ಮುನಿಸಿ ಕೊಂಡಿರುವ ಯಡಿಯೂರಪ್ಪರನ್ನು ಸಮಾಧಾನಪಡಿಸಲು ಬಿಜೆಪಿ ನಾಯಕ ರಾರೂ ಮುಂದಾಗುತ್ತಿಲ್ಲ. ಇದರಿಂದಾಗಿ […]

ಬಂಗಾಳ್ ಟೈಗರ್ಸ್ ವಿರುದ್ಧ ಬುಲ್ಡೋಜರ್ಸ್ ವಿರೋಚಿತ ಗೆಲುವು

Monday, January 27th, 2014
Karnataka-Bulldozers

ಬೆಂಗಳೂರು: ಇವರೆಲ್ಲಾ ಅಷ್ಟು ಪ್ರೊಫೆಷನಲ್ ಆಟಗಾರರಲ್ಲ ಬಿಡು ಕಣ್ಲಾ. ಸಿನಿಮಾ ತಾರೆಗಳಿಗೆ ಬ್ಯಾಟ್ ಹಿಡಿಯಕ್ಕೆ ಬರಲ್ಲ, ಕ್ರಿಕೆಟ್ ಬಗ್ಗೆ ಅವರಿಗೇನು ಗೊತ್ತು ಎಂದುಕೊಂಡಿದ್ದವರಿಗೆ ಭಾನುವಾರ (ಜ.26) ರಾತ್ರಿ ನಡೆದ ಹೊನಲು ಬೆಳಕಿನ ಪಂದ್ಯಾವಳಿ ಸೂಕ್ತ ಉತ್ತರ ಕೊಟ್ಟಿದೆ. ಯಾವ ಪ್ರೊಫೆಷನಲ್ ಆಟಗಾರರಿಗೂ ಕಮ್ಮಿ ಇಲ್ಲದಂತೆ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ನಾಲ್ಕನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಗೆಲುವು ದಾಖಲಿಸಿತು. ಸುದೀಪ್ ತಂಡದ ಆಟ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. ಮ್ಯಾನ್ ಆಫ್ ದಿ ಮ್ಯಾಚ್ ರಾಜೀವ್ […]

ನಮಗೆ ಡಬ್ಬಿಂಗ್ ಬೇಡ.. ಎಂದು ಸಿಡಿದೆದ್ದಿರುವ ಕನ್ನಡ ಚಿತ್ರೋದ್ಯಮದಿಂದ ಇಂದು -ಬಂದ್-ಬೃಹತ್ ಮೆರವಣಿಗೆ

Monday, January 27th, 2014
Strike

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಮತ್ತೆ ತಲ್ಲಣದ ಬಿರುಗಾಳಿ ಎದ್ದಿದೆ. ಈಗ ಮತ್ತೆ ಡಬ್ಬಿಂಗ್ ಬಗ್ಗೆ ಆಕ್ರೋಶ ಗರಿಗೆದರಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಬ್ಬಿಂಗ್ ವಿರೋಧಿಸಿ ರಾಜ್ಯಾದ್ಯಂತ ಕನ್ನಡ ಚಿತ್ರರಂಗ ಇಂದು ಬಂದ್ ಘೋಷಣೆ ಮಾಡಿದೆ. ಕನ್ನಡ ಚಿತ್ರಗಳಿಗೆ ಥಿಯೇಟರ್ಸ್ ಗಳೇ ಸಿಗುತ್ತಿಲ್ಲ, ಅಂತಹುದರಲ್ಲಿ ಮತ್ಯಾರದೋ ಸ್ವಾರ್ಥ ಸಾಧನೆಗಾಗಿ ಈಗ ಡಬ್ಬಿಂಗ್ ಬಗ್ಗೆ ಕಾಳಜಿ ತೋರುತ್ತಿರುವುದು ಅತ್ಯಂತ ಖೇದಕರ ಎಂದಿದ್ದಾರೆ ನಟ ರವಿಚಂದ್ರನ್. ಈ ಹೋರಾಟದ ಸಾರಥ್ಯವನ್ನು ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ವಹಿಸಿಕೊಂಡಿದ್ದಾರೆ. […]

‘ರಿಯಾಲಿಟಿ ಷೊ’ಹಾಡಿಯ ಹೈದ ರಾಜೇಶನ ಕುಟುಂಬದ ಅರಣ್ಯರೋದನ

Friday, January 24th, 2014
Rajesh-Family

ಮೈಸೂರು: ‘ರಿಯಾಲಿಟಿ ಷೊ’ ಮೂಲಕ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿ ಸಿನಿಮಾ ನಾಯಕ ನಟನೂ ಆಗಿ ದುರಂತ ಅಂತ್ಯ ಕಂಡ ‘ಜಂಗಲ್‌ ಜಾಕಿ’ ರಾಜೇಶನ ಕುಟುಂಬ ಅತ್ತ ಹಾಡಿಗೂ ಹೋಗ­ಲಾಗದೆ ಇತ್ತ ಮೈಸೂರಿ­ನಲ್ಲಿ­ಯೂ ನೆಲೆ ಕಂಡುಕೊಳ್ಳಲಾಗದೆ ಅಕ್ಷ­ರಶಃ ತ್ರಿಶಂಕು ಸ್ಥಿತಿ ಎದುರಿಸುತ್ತಿದೆ. ರಾಜೇಶನ ಜನಪ್ರಿಯತೆಯನ್ನೇ ಕಾಸಾ­ಗಿಸಿಕೊಳ್ಳಲು ಸಿನಿಮಾ ನಿರ್ಮಿಸಿ ಆತ­ನನ್ನು ನಾಯಕ ನಟನಾಗಿ ದುಡಿಸಿದ ನಿರ್ಮಾಪಕರು ನೀಡಿದ ಸಂಭಾವನೆಯ ಚೆಕ್‌ಗಳು ಬೌನ್ಸ್‌ ಆಗಿರುವ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬ ದಿನದ ತುತ್ತಿಗೂ ಪರದಾಡು­ವಂತಾಗಿದೆ. ಹಾಡಿಗೆ ಹೋದರೆ […]

ಹೈಫೈ ಎಂಜಿ, ಬ್ರಿಗೇಡ್ ರಸ್ತೆಯಲ್ಲಿ ಉಚಿತ ವೈಫೈ!

Friday, January 24th, 2014
Mohandas-Pai

ಬೆಂಗಳೂರು : ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಸಿಹಿ ಸುದ್ದಿ ಕಾದಿದೆ, ಜ.24ರಿಂದ ಎರಡು ರಸ್ತೆಗಳಲ್ಲಿ ಉಚಿತ ವೈಫೈ ಸೇವೆ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಬಜೆಟ್ ಘೋಷಿಸಿದ್ದ ಈ ಯೋಜನೆ ಸದ್ಯ ಕಾರ್ಯರೂಪಕ್ಕೆ ಬರುತ್ತಿದೆ. `ನಮ್ಮ ವೈಫೈ` ಹೆಸರಿನಲ್ಲಿ ಈ ಸೇವೆ ಆರಂಭವಾಲಿದೆ. ಈ ಮಹತ್ವದ ಯೋಜನೆಗಾಗಿ ಸರ್ಕಾರ ಡಿ-ವಿಯೋಸ್ ಎಂಬ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಹಂತದಲ್ಲಿ ಶಾಂತಿನಗರ, ಯಶವಂತಪುರ, ಕೋರಮಂಗಲ ಮುಂತಾದ ಬಿಎಂಟಿಸಿಯ ಟಿಟಿಎಂಸಿಯಲ್ಲಿಯೂ ವೈಫೈ ಯೋಜನೆ […]

ಹ್ಯಾಪಿ ಬರ್ತಡೇ ಅಜಯ್ ರಾವ್

Friday, January 24th, 2014
Ajay-Rao

ಬೆಂಗಳೂರುಃ  ಇಂದು ನಟ ಅಜಯ್ ರಾವ್ ಹುಟ್ಟು ಹಬ್ಬ.ಸ್ಯಾಂಡಲ್ ವುಡ್ ನ ಅತ್ಯಂತ ಮುದ್ದಾದ ನಟರಲ್ಲಿ ಅಜಯ್ ಕೃಷ್ಣ ರಾವ್ ಒಬ್ಬರು. ಹೆಚ್ಚಾಗಿ ಜನಕ್ಕೆ ತಿಳಿದಿರುವುದು ಅಜಯ್ ರಾವ್ ಹೆಸರಲ್ಲಿ.ಇವರು ತಮ್ಮ ಹೋಂಬ್ಯಾನರ್ ಆರಂಭ ಮಾಡುತ್ತಿದ್ದಾರೆ. ಅದನ್ನು ಇಂದು ಕನ್ನಡದ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಲಾಂಚ್ ಮಾಡುತ್ತಿದ್ದಾರೆ. ಈ ಬ್ಯಾನರಿನ ಅಡಿಯಲ್ಲಿ ನಿರ್ಮಿತವಾಗುವ ಚಿತ್ರಗಳ ಬಗ್ಗೆ ತಿಳಿಸುತ್ತಾರೆ. ಜನವರಿ 24 ಅಂದರೆ ಇಂದು ಅವರ ಜನ್ಮದಿನ. ಅಜಯ್ ಬಹು ನಿರೀಕ್ಷಿತ,ಬೃಹತ್ ಕನಸಾದ ಶ್ರೀ […]

2005ಕ್ಕಿಂತ ಹಳೆಯ ನೋಟುಗಳನ್ನು ಮರಳಿ ಪಡೆಯುತ್ತಿರುವ ಆರ್‌ಬಿಐ

Friday, January 24th, 2014
500-1000-notes

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ 2005ರ ಮಾರ್ಚ್ 31 ರಿಂದ ಹಳೆಯ ನೋಟುಗಳನ್ನು ಮರಳಿ ಪಡೆಯುವ ನಿರ್ಧಾರ ಕೈಗೊಂಡಿದೆ. ಮಾರ್ಚ 2014ರವರೆಗಿನ ಎಲ್ಲಾ ಹಳೆಯ ನೋಟುಗಳನ್ನು ಮರಳಿ ಪಡೆಯಲು ಆರ್‌‌ಬಿಐ ನಿರ್ಧರಿಸಿದೆ. ಎಪ್ರಿಲ್‌ ತಿಂಗಳಲ್ಲಿ ಜನರು ತಮ್ಮ ಹತ್ತಿರವಿರುವ ಹಳೆಯ ನೋಟುಗಳನ್ನು ಬ್ಯಾಂಕ್‌ಗಳಿಗೆ ನೀಡಿ ಹೊಸ ನೋಟುಗಳನ್ನು ಪಡೆಯಬಹುದು ಎಂದು ಆರ್‌‌ಬಿಐ ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ 2005ಕ್ಕಿಂತ ಹಳೆಯ ನೋಟುಗಳು ಚಲಾವಣೆಗೆ ಅವಕಾಶ ನೀಡುವುದಿಲ್ಲ ಎಂದರ್ಥವಲ್ಲ. ಜುಲೈ 2014ರ ನಂತರ ನಿಮ್ಮ ಹತ್ತಿರ 2005ಕ್ಕಿಂತ ಹಳೆಯ […]