ಉಸ್ತುವಾರಿ ಸಚಿವರಿಂದ ಮಂಗಳೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ

Thursday, August 18th, 2011
Krishna J. Palemar raids Taluk Office

ಮಂಗಳೂರು : ದ.ಕ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಮಂಗಳೂರು ತಾಲೂಕು ಕಚೇರಿಗೆ ಹಾಗೂ ವಿವಿಧ ಇಲಾಖೆಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡತಗಳು ವಿಲೇವಾರಿಯಾಗದೇ ಬಾಕಿ ಇರುವುದನ್ನು ಪರಿಶೀಲಿಸಿದ ಅವರು ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಂಡರು, ಯಾವುದೇ ಕಡತಗಳನ್ನು ಹೆಚ್ಚು ದಿನ ಕಚೇರಿಯಲ್ಲಿ ಉಳಿಸದೇ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು. ಡಿ.ವಿ. ಸದಾನಂದ ಗೌಡರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಮಂಗಳೂರಿನ ಮೊದಲ ಭೇಟಿಯಲ್ಲಿ ಸರಕಾರಿ ಕಚೇರಿಗಳಲ್ಲಿ ಯಾವುದೇ […]

ಅಣ್ಣಾ ಹಜಾರೆ ಸತ್ಯಾಗ್ರಹವನ್ನು ಬೆಂಬಲಿಸಿ ಬೀದಿಗಿಳಿದ ವಿದ್ಯಾರ್ಥಿಗಳು

Thursday, August 18th, 2011
Anna Hajare students suport/ವಿದ್ಯಾರ್ಥಿಗಳ ಬೆಂಬಲ

ಮಂಗಳೂರು : ಅಣ್ಣಾ ಹಜಾರೆ ಅವರು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ನಡೆಸುತ್ತಿರುವ ಸತ್ಯಾಗ್ರಹವನ್ನು ಬೆಂಬಲಿಸಿ ಹಾಗೂ ಅವರ ಬಂಧನವನ್ನು ಖಂಡಿಸಿ ಬುಧವಾರ ಮಂಗಳೂರಿನ ವಿವಿಧ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೃಹತ್‌ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮತ್ತು ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ, ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌, ಆಲ್‌ ಇಂಡಿಯಾ ಕ್ರಿಶ್ಚಿಯನ್‌ ಯೂನಿವರ್ಸಿಟಿ ಸ್ಟೂಡೆಂಟ್ಸ್‌ ಯೂನಿಯನ್‌ (ಎಐಸಿಯುಎಸ್‌) ಸೈಂಟ್‌ ಎಲೋಶಿಯಸ್‌ ಕಾಲೇಜು […]

ರಾಜ್ಯ ಸರಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ : ಮಂಜುನಾಥ್

Wednesday, August 17th, 2011
Congress SC ST Meet/ಪ. ಜಾತಿ ವಿಭಾಗದ ಸಭೆ

ಮಂಗಳೂರು : ಕಾಂಗ್ರೆಸ್‌ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಪ. ಜಾತಿ ವಿಭಾಗದ ಸಭೆ ಪ. ಜಾತಿ ಘಟಕದ ರಾಜ್ಯಾಧ್ಯಕ್ಷ ಎನ್‌. ಮಂಜುನಾಥ್‌ ನೇತೃತ್ವದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಮಂಜುನಾಥ್‌ ರಾಜ್ಯ ಸರಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ನೇತೃತ್ವದಲ್ಲಿ ಒಂದೇ ಒಂದು ಎಸ್‌ಸಿ/ಎಸ್‌ಟಿ ಜಾಗೃತಿ ಉಸ್ತುವಾರಿ ಸಮಿತಿಯ ಸಭೆ ನಡೆದಿಲ್ಲ ಎಂದು ಆರೋಪಿಸಿದರು. ಈಗಾಗಲೇ ಪರಿಶಿಷ್ಟ ಜಾತಿ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು 4,500 ಮಂದಿ ಸರಕಾರಿ […]

ಅಣ್ಣಾ ಹಜಾರೆ ಬೆಂಬಲಿಗರಿಂದ ಮೈಕಿಗಾಗಿ ಕಿತ್ತಾಟ

Wednesday, August 17th, 2011
Anna Hazare followers / ಅಣ್ಣಾ ಹಜಾರೆ ಬೆಂಬಲಿಗರು

ಮಂಗಳೂರು : ದೆಹಲಿಯಲ್ಲಿ ಅಣ್ಣಾ ಹಜಾರೆ ಕೇಂದ್ರ ಸರ್ಕಾರದ ವಿರುದ್ದ ಸಮರ ಸಾರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೆ, ಮಂಗಳೂರಲ್ಲಿ ಅಣ್ಣಾ ಹಜಾರೆ ಬೆಂಬಲಕ್ಕೆ ಬಂದಿದ್ದ ಎರಡು ಬಣಗಳು ಮೈಕಿಗಾಗಿ ಸೆಣಸಾಟ ನಡೆಸಿ ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡ ಘಟನೆ ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಯಿತು. ಭ್ರಷ್ಟಾಚಾರ ವಿರೋಧಿ ವೇದಿಕೆ ಮತ್ತು ಲೋಕಪಾಲ ಮಸೂದೆ ಪರ ಗುಂಪುಗಳು ಅಣ್ಣಾ ಹಜಾರೆ ಅವರಿಗೆ ಪ್ರತೇಕವಾಗಿ ಬೆಂಬಲ ನೀಡಲು ಮುಂದಾದವು. ಸಾರ್ವಜನಿಕ ಭಾಷಣ ಮಾಡಲು ಎರಡೂ ಬಣಗಳು ತುದಿಗಾಲಲ್ಲಿ ನಿಂತಿದ್ದವು. […]

ಗುಡಿಸಲು ಮುಕ್ತ ರಾಜ್ಯವನ್ನಾಗಿ ಪರಿವರ್ತಿಸಲು ಕ್ರಾಂತಿಕಾರಿ ಹೆಜ್ಜೆ : ಪಾಲೆಮಾರ್‌

Tuesday, August 16th, 2011
Independence Day/ಸ್ವಾತಂತ್ರೋತ್ಸವ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನೆಹರೂ ಮೈದಾನದಲ್ಲಿ ಜರಗಿದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ರಾಜ್ಯ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೃಷ್ಣ ಜೆ. ಪಾಲೆಮಾರ್‌ ನೆರವೇರಿಸಿದರು. ತೆರೆದ ಜೀಪಿನಲ್ಲಿ ಪರೇಡ್‌ ವೀಕ್ಷಿಸಿದ ಅನಂತರ ಅವರು ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಕಳೆದ ಮೂರು ವರ್ಷ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಮೂಲಕ ಒಟ್ಟು 1,712.06 ಕೋಟಿ ರೂ. ಮಿಕ್ಕಿದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಗ್ರಾಮೀಣ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 47.51 […]

ಹುಟ್ಟು ಹಬ್ಬದ ಹೆಸರಿನಲ್ಲಿ ಗಾಂಜಾ ಪಾರ್ಟಿ ನಡೆಸುತ್ತಿರುವ ರೆಸಾರ್ಟ್

Monday, August 15th, 2011
Resort/ ರೆಸಾರ್ಟ್

ಉಳ್ಳಾಲ : ಉಚ್ಚಿಲದ ಬೀಚ್‌ ರಸ್ತೆಯ ಮಹಾರಾಣಿ ಫಾರ್ಮ್ ನಲ್ಲಿ ರೇವ್‌ ಪಾರ್ಟಿಯನ್ನು ನಡೆಸುತ್ತಿದ್ದ ಯುವಕರಿಗೆ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿ ರೆಸಾರ್ಟ್‌ನ ಸೊತ್ತುಗಳನ್ನು ದ್ವಂಸ ಮಾಡಿದ್ದಾರೆ. ಪಾರ್ಟಿ ಹೆಸರಿನಲ್ಲಿ ಮಾದಕವಸ್ತು ಸೇವಿಸಿ ತಡರಾತ್ರಿವರೆಗೆ ಯುವಕರ ಗುಂಪೊಂದು ಮೋಜು ನಡೆಸುತ್ತಿತ್ತು. ಸ್ಥಳೀಯ ಬಜರಂಗದಳದ ಸುಮಾರು 30ಕ್ಕೂ ಅಧಿಕ ಸದಸ್ಯರ ತಂಡ ರೆಸಾರ್ಟ್‌ಗೆ ಬಂದು ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಪಾರ್ಟಿಯಲ್ಲಿದ್ದ ಯುವಕರು ಉಡಾಫೆಯಾಗಿ ವರ್ತಿಸಿದ್ದು, ಇದರಿಂದ ಕೆರಳಿದ ಬಜರಂಗ ದಳದ ಕಾರ್ಯಕರ್ತರು ಪಾರ್ಟಿಯಲ್ಲಿ ನಿರತರಾಗಿದ್ದ ಯುವಕರ […]

ನೂತನ ಮುಖ್ಯ ಮಂತ್ರಿಯವರಿಂದ ತವರು ಜಿಲ್ಲೆಗೆ ಮೊದಲ ಭೇಟಿ

Saturday, August 13th, 2011
DV Sadananda Gowda/ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ

ಮಂಗಳೂರು : ಕರ್ನಾಟಕ ರಾಜ್ಯದ ನೂತನ ಮುಖ್ಯ ಮಂತ್ರಿ ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ದೇವರಗುಂಡದ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಅಯ್ಕೆಯಾದ ಬಳಿಕ ಪ್ರಥಮ ಬಾರಿಗೆ ತವರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಬಜಪೆ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ 8:30ಕ್ಕೆ ಬಂದಿಳಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಜಿಲ್ಲಾಡಳಿತದ ಆಧಿಕಾರಿಗಳು ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಈ ಹಿಂದೆ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದ ಅವರು, […]

ಲಂಚ ಸ್ವೀಕರಿಸಿದ ಇಬ್ಬರು ಅಧಿಕಾರಿಗಳಿಗೆ ನ್ಯಾಯಾಂಗ ಬಂಧನ

Saturday, August 13th, 2011
bribe officers/ ಲಂಚಾಧಿಕಾರಿ

ಮಂಗಳೂರು: ಅದಿರು ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಅಧಿಕಾರಿ ವೀರಣ್ಣ ನಾಯಕ್‌ ಮತ್ತು ಲೆಕ್ಕ ಪರಿಶೋಧಕ ನರಸಿಂಹ ಅವರನ್ನು ಶುಕ್ರವಾರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆ. 26 ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ. ಗುರುವಾರ ಸಂಜೆ ಅದಿರು ವ್ಯಾಪಾರಿ ಅತ್ತಾವರದ ಮಹಮದ್‌ ಅವರ ದಾಖಲೆ ಪತ್ರಗಳ ಕ್ಲಿಯರೆನ್ಸ್‌ಗೆ 1.5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ವೀರಣ್ಣ ನಾಯಕ್‌ ಮತ್ತು ನರಸಿಂಹ ಅವರನ್ನು ಲೋಕಾಯುಕ್ತ […]

ಮೂಡಿಗೆರೆಯಲ್ಲಿ ಬೈಕ್‌ ಹಾಗೂ ಬಸ್‌ ನಡುವೆ ಢಿಕ್ಕಿ, ಒಂದು ಸಾವು, ಬಸ್ ಬಸ್ಮ

Thursday, August 11th, 2011
Bus-Accident/ಬೈಕ್‌ ಹಾಗೂ ಬಸ್‌ ಢಿಕ್ಕಿ

ಚಿಕ್ಕಮಗಳೂರು : ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ದಿಣ್ಣೆಕೆರೆ -ಮಾವಿನಹಳ್ಳಿಯ ತಿರುವಿನಲ್ಲಿ ಬುಧವಾರ ಸಂಜೆ ಬೈಕ್‌ ಹಾಗೂ ಬಸ್‌ ನಡುವೆ ಢಿಕ್ಕಿ ಸಂಭವಿಸಿ ಬೈಕ್‌ ಸವಾರ ಮೃತಪಟ್ಟಿದ್ದು , ಖಾಸಗಿ ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಸ್‌ನಲ್ಲಿದ್ದ 70 ಕ್ಕೂ ಅಧಿಕ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಅನಿತಾ -ಜಗದೀಶ್‌ ಮದುವೆಗೆ ಭದ್ರಾವತಿಯಿಂದ ಖಾಸಗಿ ಬಸ್ಸಿನಲ್ಲಿ 70ಕ್ಕೂ ಅಧಿಕ ಮಂದಿ ಹೋಗಿದ್ದರು. ಇನ್ನೊಂದೆಡೆ ಶಿವಮೊಗ್ಗದ ವೀರಭದ್ರ ಕಾಲನಿಯ ನಂದೀಶ್‌ ಹಾಗು ಭೈರೇಶ್‌ ಬೈಕಿನಲ್ಲಿ ವಿಹಾರಾರ್ಥ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಬಸ್ […]

ಕಾಪು ಕಡಲ ಕಿನಾರೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲು

Thursday, August 11th, 2011
Abhijit Singh, Janakish / ಅಭಿಜಿತ್‌ ಸಿಂಗ್‌, ಜಾನಾ ಕಿಶ್‌

ಮಂಗಳೂರು : ಮಣಿಪಾಲ ಎಂ.ಐ.ಟಿಯ ಇಬ್ಬರು ವಿದ್ಯಾರ್ಥಿಗಳು ಅಲೆಗಳ ಸೆಳೆತಕ್ಕೆ ಸಮುದ್ರಪಾಲದ ಘಟನೆ ಬುಧವಾರ ಸಂಜೆ ಕಾಪು ಕಡಲ ಕಿನಾರೆಯಲ್ಲಿ ಸಂಭವಿಸಿದೆ. ನಾಲ್ವರು ವಿದೇಶಿಯರು ಮತ್ತು ಓರ್ವ ಭಾರತೀಯ ಸೇರಿದಂತೆ ಐದು ಮಂದಿ ವಿದ್ಯಾರ್ಥಿಗಳೂ ಕಾಪು ಕಡಲ ಕಿನಾರೆಗೆ ಆಗಮಿಸಿದ್ದರು. ಲೈಟ್‌ ಹೌಸ್‌ನ ಮುಂಭಾಗದಲ್ಲಿ ಕಡಲು ಸಂಪೂರ್ಣವಾಗಿ ವಿಸ್ತರಿಸಿಕೊಂಡಿರುವುದರಿಂದ ಐವರು ಕೂಡಾ ಕಡಲಿಗೆ ಇಳಿದಿದ್ದರು. ಆದರೆ ಸಮುದ್ರದ ಅಲೆಗಳ ರಭಸಕ್ಕೆ ಅಂಜಿದ ಮೂವರು ದಡದಲ್ಲೇ ಕುಳಿತರೆ, ಅಭಿಜಿತ್‌ ಸಿಂಗ್‌ (18)ಮತ್ತು ಜಾನಾ ಕಿಶ್‌ (೨೧ ಈಜುವ ಉದ್ದೇಶದಿಂದ […]