ಅನಧಿಕೃತ ಬಾಡಿಗೆ ಮಾಡುವ ಖಾಸಗಿ ಕ್ವಾಲಿಸ್ ವಾಹನಗಳ ಮುಟ್ಟಗೋಲು.
Wednesday, October 6th, 2010ಮಂಗಳೂರು: ಖಾಸಗಿ ಕಂಪೆನಿಯೊಂದರ ಪ್ರಚಾರಕ್ಕಾಗಿ ತಿಂಗಳ ಬಾಡಿಗೆಗೆ ನೀಡಲಾಗಿದ್ದ ಸುಮಾರು ಹನ್ನೆರಡು ಖಾಸಗಿ ಕ್ವಾಲಿಸ್ ವಾಹನಗಳನ್ನು ಇಂದು ಬೆಳಿಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಮುಟ್ಟುಗೋಲು ಹಾಕಿದರು. ಮಂಗಳೂರಿನ ಫಳ್ನೀರಿನಲ್ಲಿ ಸದ್ಯದಲ್ಲೇ ಆರಂಭಗೊಳ್ಳಲಿರುವ ಜೋಯ್ ಆಲುಕಾಸ್ ಕಂಪೆನಿಯವರು ಸಂಸ್ಥೆಯ ಪ್ರಚಾರಕ್ಕಾಗಿ 20 ಕಾರುಗಳನ್ನು ನಿಗದಿಪಡಿಸಲಾಗಿದ್ದು ಅದರ ನಿರ್ವಹಣೆಯನ್ನು ಪ್ರಿಯಾ ಟ್ರಾವೆಲ್ಸ್ ನವರಿಗೆ ನೀಡಿದ್ದರು. ಕಾಂಟ್ರಾಕ್ಟುದಾರರಾದ ಪ್ರಿಯಾ ಟ್ರಾವೆಲ್ಸ್ ನ ಮಾಲಕರು ಕೆಲವೇ ಟೂರಿಸ್ಟ್ ಕಾರುಗಳನ್ನು ಗೊತ್ತು ಪಡಿಸಿ, ಇನ್ನುಳಿದ 12 ಕ್ವಾಲೀಸ್ ವಾಹನಗಳನ್ನು ಖಾಸಗಿಯವರಿಂದ […]