ಬಿಜೆಪಿ ಮಂಜೇಶ್ವರ ಮಂಡಲ ಬೂತ್ ಮಟ್ಟ ಕಾರ್ಯಕರ್ತರ ತರಬೇತಿ ಶಿಬಿರ

Wednesday, January 6th, 2016
BJP Mandala

ಉಪ್ಪಳ: ಕೇರಳದಲ್ಲಿ ಕಳೆದ 10 ವರ್ಷಗಳಲ್ಲಿ ಜನರ ಆಶೋತ್ತರಗಳನ್ನು ರಕ್ಷಣೆ ಮಾಡದವರು ಇದೀಗ ಚುನಾವಣೆಯ ಸನಿಹದಲ್ಲಿ ಮತ್ತೆ ೫ ವರ್ಷ ಕಾಲ ಅಧಿಕಾರಕ್ಕಾಗಿ ಕೇರಳ ರಕ್ಷಾ ಯಾತ್ರೆಯನ್ನು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯೆಂದು ಕೇರಳ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ , ರಾಜ್ಯ ಚುನಾವಣಾ ಉಸ್ತುವಾರಿಯ ವಿ.ಮುರಳೀಧರನ್ ಅಭಿಪ್ರಾಯಪಟ್ಟರು. ಮಂಗಲ್ಪಾಡಿ ಲಯನ್ಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಬಿಜೆಪಿ ಮಂಜೆಶ್ವರ ಮಂಡಲ ಬೂತ್ ಕಾರ್ಯಕರ್ತರ ನಾಯಕತ್ವ ತರಬೇತಿ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು. ಕೇರಳದ ಎಡ ಬಲ ರಂಗಗಳ ಆಡಳಿತ ವೈಫಲ್ಯ,ಅತಿಯಾದ […]

ಶಿಕ್ಷಕರು ಎನ್‌ಪಿಆರ್ ಸರ್ವೆಯಲ್ಲಿ ಬಿಝಿ, ಶಾಲೆಯಲ್ಲಿ ಹಳೆ ವಿದ್ಯಾರ್ಥಿ, ರಕ್ಷಕರಿಂದಲೇ ಪಾಠ, ಪ್ರವಚನ

Wednesday, January 6th, 2016
Shikshana

ಬದಿಯಡ್ಕ: ಗ್ರಾಮೀಣ ಪ್ರದೇಶಗಳ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚಿನ ಶಿಕ್ಷಕರು ಇದೀಗ ಎನ್‌ಪಿಆರ್ ಸರ್ವೇಯಲ್ಲಿ ಬಿಝಿಯಾಗಿದ್ದಾರೆ. ಉರಿ ಬಿಸಿಲು, ಕಾಲ್ನಿಡಿಗೆಯಿಂದ ರೋಸಿ ಹೋಗುತ್ತಿರುವ ಶಿಕ್ಷಕರ ಮಧ್ಯೆ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಜಾ ಉಡಾಯಿಸುತ್ತಿರುವ ಸನ್ನಿವೇಶಗಳು ಸರ್ವೇ ಸಾಮಾನ್ಯ. ಒಂದು ಬ್ಲಾಕಿನ ಸರ್ವೇಗೆ ಏಳು ದಿನಗಳು ಹಿಡಿಯುತ್ತದೆ. ಕೆಲವೊಮ್ಮೆ ಒಬ್ಬ ಶಿಕ್ಷನಿಗೆ ಎರಡು ಬ್ಲಾಕಿನ ಸರ್ವೇ ಜವಾಬ್ದಾರಿ ಇರುತ್ತದೆ. ಅಂತಹ ಸಂದರ್ಭ ಸುಮಾರು16 ದಿನಗಳ ಕಾಲ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಸಮಯವನ್ನು ಕಳೆಯುತ್ತಾರೆ. ಆದರೆ ಇದ್ಯಾವುದಕ್ಕೂ ಆಸ್ಪದ ಕೊಡದ ಬೇಳ ಸಂತ […]

ಪೋಲೀಸ್ ಸಿಬ್ಬಂದಿಗಳಿಗೆ ಬಿ.ಸಿ.ರೋಡಿನಲ್ಲಿ ಸನ್ಮಾನ

Wednesday, January 6th, 2016
police

ಬಂಟ್ವಾಳ: ಇಲ್ಲಿನ ಪೋಲೀಸ್ ಇಲಾಖಾ ಆಶ್ರಯದಲ್ಲಿ ಸನ್ಮಾನ ಸಮಾರಂಭ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಹಾಗೂ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ಪಿಎಸ್‌ಐ ಚಂದ್ರಶೇಖರಯ್ಯ, ಎಎಸ್‌ಐ ಶೇಷಪ್ಪ ಪಿ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಹರೀಶ್ ಭಟ್, ವಾಸು, ಉಮೇಶ್, ಕಾನ್‌ಸ್ಟೇಬಲ್‌ಗಳಾದ ನವೀನ್, ಸೀತಾರಾಮ, ಧರ್ಮಪಾಲ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಹೋಟೆಲ್ ರಂಗೋಲಿ ಮಾಲಕ ಸದಾನಂದ ಶೆಟ್ಟಿಯವರನ್ನು ಗೌರವಿಸಲಾಯಿತು. ಎಎಸ್ಪಿ ರಾಹುಲ್ ಕುಮಾರ್ ಎಸ್.ಸಿ.ಸನ್ಮಾನಿಸಿ ಮಾತನಾಡಿ ಬಂಟ್ವಾಳದ ಪೋಲೀಸ್ ಇಲಾಖೆ ಉತ್ತಮವಾಗಿ ಕಾರ‍್ಯನಿರ್ವಹಿಸುತ್ತಿದೆ. ಇದರೊಂದಿಗೆ ವೃತ್ತಿ ಭಾಂದವರ […]

ರಾಜಕೀಯ ತಂತ್ರಗಳ ಮೂಲಕ ಜನರನ್ನು ಮರುಳುಗೊಳಿಸುತ್ತಿರುವ ಬಿಜೆಪಿ : ಉಮ್ಮನ್‌ಚಾಂಡಿ

Tuesday, January 5th, 2016
omanchandi

ಕುಂಬಳೆ: ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಹಾಗೂ ಮತ ನಿರಪೇಕ್ಷತೆಯನ್ನು ಉಳಿಸಿ ಬೆಳೆಸುವಲ್ಲಿ, ಜನಸಾಮಾನ್ಯರಿಗೆ ಸೌಖ್ಯ ಸಮಾಧಾನದಲ್ಲಿ ಬದುಕು ಸಾಗಿಸಲು ಅನುವು ಮಾಡಿಕೊಡುವ ಆಡಳಿತ ನೀಡಲು ಕಾಂಗ್ರೆಸ್ಸ್ ಪಕ್ಷದಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಯವರು ಪ್ರಧಾನಿಯಾದೊಡನೆ ಜನಸಾಮಾನ್ಯರು ಅವರ ಮೇಲಿರಿಸಿದ್ದ ನಂಬಿಕೆಗಳು ಇದೀಗ ಹುಸಿಯೆಂದು ಅನಿಸತೊಡಗಿದೆಯೆಂದು ರಾಜ್ಯದ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ವಿ.ಎಂ ಸುಧೀರನ್ ನೇತೃತ್ವದಲ್ಲಿ ಆರಂಭಿಸಲಾದ ಜನಪಕ್ಷ ಯಾತ್ರೆಯನ್ನು ಸೋಮವಾರ ಸಂಜೆ ಕುಂಬಳೆಯಲ್ಲಿ ಪಕ್ಷದ ಧ್ವಜವನ್ನು ಸುಧೀರನ್ ರವರಿಗೆ ಹಸ್ತಾಂತರಿಸುವ ಮೂಲಕ […]

ಗೋಸಂರಕ್ಷಣೆಯ ಬಗ್ಗೆ ಇಸ್ಲಾಂ ಧರ್ಮದ ಖುರಾನ್‌ನಲ್ಲಿ ಉಲ್ಲೇಖಿಸಲಾಗಿದೆ : ಮೊಹಮ್ಮದ್ ಪೈಜ್ ಖಾನ್

Tuesday, January 5th, 2016
Kuran

ಬದಿಯಡ್ಕ: ಪೂಜನೀಯ ಗೋಮಾತೆ ಮತ-ಧರ್ಮಗಳನ್ನು ಪರಸ್ಪರ ಒಂದುಗೂಡಿಸುವಂತಹ ಶಕ್ತಿ. ಗೋಸಂರಕ್ಷಣೆಯ ಬಗ್ಗೆ ಇಸ್ಲಾಂ ಧರ್ಮದಲ್ಲೂ ಪೂಜನೀಯತೆಯ ಸ್ಥಾನವನ್ನು ನೀಡಬೇಕೆಂದು ಪವಿತ್ರ ಖುರಾನ್‌ನಲ್ಲಿ ಉಲ್ಲೇಖಿಸಲಾಗಿದೆ. ಯಾವ ದೇಶದಲ್ಲಿ ಇಸ್ಲಾಂ ಮತಾನುಯಾಯಿ ಬದುಕುತ್ತಾನೋ ಅಲ್ಲಿ ಆ ದೇಶದ ನಂಬಿಕೆಯನ್ನು ಗೌರವಿಸಬೇಕೆಂದು ಪೈಗಂಬರರು ಸಾರಿದ್ದಾರೆಂದು ಖ್ಯಾತ ಗೋ ಕಥನಕಾರ ಮೊಹಮ್ಮದ್ ಪೈಜ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು. ಯುವ ಬ್ರಿಗೇಡ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಬದಿಯಡ್ಕದ ಗಣೇಶ ಮಂದಿರದಲ್ಲಿ ಆಯೋಜಿಸಲಾದ ಗೋ ಕಥೆ ಅಂಬೆಯ ಕೂಗು ವಿಶೇಷೋಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು. […]

ಶಂಕಾಸ್ಪದ ರೀತಿಯಲ್ಲಿ ಕಾರು ಪತ್ತೆ, ತನಿಖೆಗೆ ಚಾಲನೆ

Tuesday, January 5th, 2016
car found

ಕುಂಬಳೆ: ಕುಂಬಳೆಯಲ್ಲಿ ಸೋಮವಾರ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅವರು ಸೇರಿದಂತೆ ಕೆಪಿಸಿಸಿ ಯ ಸಚಿವರುಗಳು, ಮುಖಂಡರು ಭಾಗವಹಿಸಿದ್ದ ಜನ ರಕ್ಷಾ ಯಾತ್ರೆಯ ಉದ್ಘಾಟನಾ ವೇದಿಕೆ ಬಳಿಯಲ್ಲಿಯೇ ಅನುಮಾಸ್ಪದವಾದ ರೀತಿಯಲ್ಲಿ ಕಾರೊಂದು ಪತ್ತೆಯಾಗಿದ್ದು, ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಈ ಕಾರನ್ನು ಪೋಲಿಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಸಮಗ್ರ ತನಿಖೆಯನ್ನು ಆರಂಭಿಸಿದ್ದಾರೆ. ಕಾರಿನ ನಂಬರ್ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿಯೇ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಪೋಲಿಸರು ಕೇಸು ದಾಖಲಿಸಿ, ಗುಪ್ತಚರ ಇಲಾಖೆಯ ಸಹಾಯದೊಂದಿಗೆ ತನಿಖೆ ನಡೆಸುತ್ತಿದ್ದಾರೆ. ಕೆಪಿಸಿಸಿ […]

ಸಂಪತ್ತು ದೈವೀ ಸಂಪತ್ತಾದಾಗ ಮೌಲ್ಯ ಉಂಟಾಗುತ್ತದೆ.

Tuesday, January 5th, 2016
Kolyuru temple

ಮಂಜೇಶ್ವರ : ಲೌಕಿಕ ಲೋಕ ವ್ಯವಹಾರ ಕೊಂಡುಕೊಳ್ಳುವಿಕೆಯಿಂದ ಕೂಡಿರುವಂತದ್ದು.ಆಧ್ಯಾತ್ಮಿಕತೆಯಲ್ಲಾದರೆ ಭಗವಂತ ಅನುಗ್ರಹದ ಮೂಲಕ ಕೊಡುತ್ತಾನೆ,ನಾವದನ್ನು ಮತ್ತೆ ಭಗವಂತನಿಗೆ ಸಮರ್ಪಿಸುತ್ತೇವೆ.ಭಗವಂತ ಪ್ರಸಾದ ಹಾಗೂ ಅನುಗ್ರಹದ ಮೂಲಕ ಬೇಡಿದ್ದನ್ನು ಅರ್ಹತೆಗನುಸಾರ ನೀಡುತ್ತಾನೆಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು ಕೋಳ್ಯೂರು ಶ್ರೀಶಂಕರನಾರಾಯಣ ದೇವಾಲಯದ ನೂತನ ಪ್ರಸಾದ ಮಂದಿರವನ್ನು ದೀಪ ಬೆಳಗಿಸಿ,ಲೋಕಾರ್ಪಣೆಗೊಳಿಸಿ ಸೋಮವಾರ ಅನುಗ್ರಹ ಭಾಷಣ ಮಾಡಿ ಮಾತನಾಡುತ್ತಿದ್ದರು. ಹೆತ್ತ ತಾಯಿಯ ವಾತ್ಸಲ್ಯದಂತೆ ಪರಮಾತ್ಮ ನಮ್ಮನ್ನು ಪೊರೆಯುತ್ತಾನೆ.ನಮ್ಮಲ್ಲಿ ಎಷ್ಟು ಸಂಪತ್ತಿದ್ದರೂ ಅದರ ಮೌಲ್ಯವುಂಟಾಗುವುದು ದೈವೀ ಸಂಪತ್ತಾದಾಗ ಮಾತ್ರ.ದಾನ,ಧರ್ಮ,ಭಗವದೋಪಾಸನೆ,ಸತ್ಕಾರ್ಯಗಳ […]

ಕಾರ್ಯಕರ್ತರಿಗೆ ಅಭಿನಂದನೆ – ಕೋಟ ಶ್ರೀನಿವಾಸ ಪೂಜಾರಿ

Wednesday, December 30th, 2015
kota

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣೆಯ ಫಲಿತಾಂಶದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಜಗನ್ನಾಥರಾವ್ ಜೋಷಿ ಸೌಧದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಭಿನಂದನಾ ಸಭೆ ಜರುಗಿತು. ಈ ಸಭೆಯಲ್ಲಿ ಎಲ್ಲಾ ಕಾರ್ಯಕರ್ತರು ಮತ್ತು ಮತದಾರರಿಗೆ ಕೋಟ ಶ್ರೀನಿವಾಸ ಪೂಜಾರಿಯವರು ಅಭಿನಂದನೆ ಸಲ್ಲಿಸಿದರು. ಜಿಲ್ಲಾಧ್ಯಕ್ಷರಾದ ಕೆ.ಪ್ರತಾಪ್‌ಸಿಂಹ ನಾಯಕ್, ಜಿಲ್ಲಾ ಪ್ರಭಾರಿ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಕ್ಯಾ|ಗಣೇಶ್ ಕಾರ್ಣಿಕ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಮಾಜಿ ವಿ.ಪ.ಸದಸ್ಯ ಕೆ.ಮೋನಪ್ಪ […]

ಗೆಲ್ಲುವುದು ಗ್ಯಾರಂಟಿ, ದಾಖಲೆಯ ಪ್ರಮಾಣ ಎಷ್ಟು ಎನ್ನುವುದು ಮಾತ್ರ ಈಗ ಉಳಿದಿರುವ ಸಂಗತಿ….

Saturday, December 26th, 2015
Kota srinivas poojar

ಮಂಗಳೂರು : ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಎರಡು ಬಾರಿ ಆಯ್ಕೆಗೊಂಡು ಕಳೆದ ಎಂಟು ವರ್ಷಗಳಿಂದ ಪಂಚಾಯತ್‌ಗಳ ಸಬಲೀಕರಣಕ್ಕೆ ಸದನದ ಒಳಗೆ ಮತ್ತು ಹೊರಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ಪ್ರತಿ ಗ್ರಾಮ ಪಂಚಾಯತ್ ಕೂಡ ಸರಕಾರದಂತೆ ಧೃಡವಾಗಿ ಶ್ರಮಿಸಬೇಕು ಎಂದು ಶ್ರಮಿಸಿದವರು ಕೋಟಾ ಶ್ರೀನಿವಾಸ ಪೂಜಾರಿ. ಕೂಲಿ ಮಾಡುವವರ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀನಿವಾಸ ಪೂಜಾರಿಯವರು ಭಾರತೀಯ ಜನತಾ ಪಕ್ಷದ ಮೂಲಕ 1993 ರಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಸದಸ್ಯರಾದರು. 1995 ರಲ್ಲಿ ತಾಲೂಕು ಪಂಚಾಯತ್ […]

ಮೇಲ್ಮನೆ ಇರುವುದೇ ಜಯಪ್ರಕಾಶ್ ಹೆಗ್ಡೆಯಂತವರ ಸೇವೆ ಪಡೆಯಲು ಎನ್ನುವುದು ಅಕ್ಷರಶ: ಸತ್ಯ….

Saturday, December 26th, 2015
jayaprakash hegde

ಮಂಗಳೂರು : ರಾಜ್ಯ ಕಂಡ ಸಂಭಾವಿತ ರಾಜಕಾರಣಿಗಳಲ್ಲಿ ಮುಂಚೂಣಿಯಲ್ಲಿ ಇರುವವರು ಕೆ.ಜಯಪ್ರಕಾಶ್ ಹೆಗ್ಡೆ. ಅವರು ಯಾವುದೇ ಪಕ್ಷದಲ್ಲಿ ಇರಲಿ, ಆ ಪಕ್ಷಕ್ಕೊಂದು ಘನತೆ ತಂದುಕೊಡುವವರು. ಜನತಾ ಪರಿವಾರದಲ್ಲಿ ಇದ್ದಷ್ಟು ಸಮಯ ಆ ಪಕ್ಷದ ಆಸ್ತಿಯಂತೆ ಕೆಲಸ ಮಾಡಿದರು. ಅದನ್ನು ಬಿಟ್ಟ ಬಳಿಕ ಯಾವುದೇ ಪಕ್ಷದ ರಗಳೆಯೇ ಬೇಡವೆಂದು ಪಕ್ಷೇತರರಾಗಿ ಇದ್ದರು. ಆಗಲೂ ಗೆದ್ದು ಜನಸೇವೆ ಮಾಡಿದರು. ಮತ್ತೆ ಕಾಂಗ್ರೆಸ್ ಸೇರಿದರು. ಆಗಲೂ ಗೆದ್ದರು. ಸಂಸತ್ತಿನಲ್ಲಿ ಧ್ವನಿ ಮೊಳಗಿಸಿದರು. ಬಳಿಕ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಸೋತು ಹೋದರು. ಕಾಂಗ್ರೆಸ್ಸಿನ […]