ಎಂಆರ್‌ಪಿಎಲ್ ಸಲ್ಫರ್, ಕೋಕ್ ಘಟಕಗಳನ್ನು ಮುಚ್ಚಲು ಜೋಕಟ್ಟೆ ನಾಗರಿಕರ ಪ್ರತಿಭಟನೆ

Friday, October 10th, 2014
Jokatte Protest

ಮಂಗಳೂರು: ಎಂಆರ್‌ಪಿಎಲ್ ಕಂಪೆನಿಯ ಸರ್ವಾಧಿಕಾರಿ ಧೋರಣೆ ವಿರುದ್ಧ, ಸಲ್ಫರ್, ಕೋಕ್ ಘಟಕಗಳನ್ನು ಮುಚ್ಚಲು ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಅ1o ರಂದು ಪ್ರತಿಭಟನೆ ನಡೆಸಿತು. ಕ್ಲಾಕ್ ಟವರ್ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ಬಂದ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಎಂಆರ್‌ಪಿಎಲ್ ಕಂಪೆನಿಯ ಮೂರನೇ ಹಂತದ ಸ್ಥಾವರ ಸ್ಥಾಪನೆಯಾದ ನಂತರ ಗಂಭೀರ ಸಮಸ್ಯೆಗಳು ಆರಂಭವಾಗಿದೆ. ಎಂಆರ್‌ಪಿಎಲ್ ನಮ್ಮ […]

ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಿಸಲು ಬೆಳ್ತಂಗಡಿಯಲ್ಲಿ ‘ನವಚಂಡಿಕಯಾಗ’

Friday, October 10th, 2014
Nava Chandi Yaga

ಬೆಳ್ತಂಗಡಿ : ಪ್ರಜಾಪ್ರಭುತ್ವ ವೇದಿಕೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಮತ್ತು ನವಚಂಡಿಕಾ ಯಾಗ ಸಮಿತಿಯ ವತಿಯಿಂದ ಬೆಳ್ತಂಗಡಿಯ ತಾಲೂಕು ಮೈದಾನದಲ್ಲಿ ಶುಕ್ರವಾರ ಮಹಿಳೆಯರು ಐತಿಹಾಸಿಕ ನವಚಂಡಿಕಯಾಗ ನಡೆಸಿದರು. ಯಾಗದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಯಾಗದ ನೇತೃತ್ವ, ಮಾರ್ಗದರ್ಶನವನ್ನು ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಕೆ. ಎಸ್‌. ನಿತ್ಯಾನಂದ ಅವರು ವಹಿಸಿದರೆ ಮಹಿಳೆಯರೇ ಯಾಗ ನೆರವೇರಿಸಿದರು. ಏಕಕಾಲದಲ್ಲಿ 11 ಯಾಗ ಕುಂಡಗಳಲ್ಲಿ 1008 ಮಹಿಳೆಯರು ಆಹುತಿ ನೀಡಿದರು. ತುಪ್ಪ ಹಾಗೂ ಮೂರು ಬಗೆಯ ಪಾಯಸವನ್ನು ಆಹುತಿಯಾಗಿ […]

ರಾಘವೇಶ್ವರ ಶ್ರೀಗಳಿಗೆ ನಿರೀಕ್ಷಣಾ ಜಾಮೀನು

Thursday, October 9th, 2014
Raghaweshwara Swami

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ಮಠಾಧೀಶ ರಾಘವೇಶ್ವರ ಶ್ರೀಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಮಠದ ಕಲಾವಿದರು ನೀಡಿದ್ದ ಅತ್ಯಾಚಾರ ದೂರಿನಿಂದಾಗಿ ಬಂಧನ ಭೀತಿ ಎದುರಿಸುತ್ತಿದ್ದ ರಾಮಚಂದ್ರಾಪುರ ಮಠದ ಮಠಾಧೀಶ ರಾಘವೇಶ್ವರ ಶ್ರೀಗಳಿಗೆ ಬೆಂಗಳೂರು ಸೆಷನ್ಸ್ ನ್ಯಾಯಾಲಯದ ತೀರ್ಪು ತಾತ್ಕಾಲಿಕ ನೆಮ್ಮದಿ ನೀಡಿದ್ದು, 30 ದಿನಗಳ ಅವಧಿಗಾಗಿ ಶ್ರೀಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ, 2 ಲಕ್ಷ ರು. […]

ಹಿರಿಯ ಪತ್ರಕರ್ತ ಎಂ.ವಿ ಕಾಮತ್ ನಿಧನ

Thursday, October 9th, 2014
mv Kamath

ಉಡುಪಿ : ನಾಲ್ಕು ದಶಕಗಳ ಸುದೀರ್ಘ‌ ಕಾಲ ಭಾರತೀಯ ಪತ್ರಿಕಾರಂಗಕ್ಕೆ ಅನುಪಮ ಸೇವೆ ಸಲ್ಲಿಸಿರುವ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಮಾಧವ ವಿಟ್ಟಲ ಕಾಮತ್‌ (ಎಂ. ವಿ. ಕಾಮತ್‌‌) ಅವರು ಗುರುವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಲವು ದಿನಗಳ ಹಿಂದೆ ವಾರ್ಧಕ್ಯದ ಕೆಲವು ತೊಂದರೆಗಳಿಂದಾಗಿ ಕಾಮತ್‌ ಅವರನ್ನು ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೂಲತಃ ಉಡುಪಿಯವರಾದ ಎಂ. ವಿ. ಕಾಮತ್‌ ಅವರ ಅಂತ್ಯಕ್ರಿಯೆಯು ಗುರುವಾರ ನಡೆಯಲಿದೆ ಎಂದು ಅವರ ಸೋದರ ಸಂಬಂಧಿ ಜಯರಾಮ ಕಾಮತ್‌ ತಿಳಿಸಿದ್ದಾರೆ. ಟೈಮ್ಸ್‌ ಆಫ್ […]

ಆಳ್ವಾಸ್ ನುಡಿಸಿರಿ – 2014- ನವೆಂಬರ್ 14, 15 ಮತ್ತು 16

Wednesday, October 8th, 2014
Mohan Alva

ಮಂಗಳೂರು : ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ವು ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನೂ, ಸಂಸ್ಕೃತಿಯ ಪ್ರೀತಿ, ಗೌರವಗಳನ್ನೂ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷವಂತೂ ಆಳ್ವಾಸ್ ನುಡಿಸಿರಿಗೆ ದಶಮಾನೋತ್ಸವದ ಸಂಭ್ರಮ. ಈ ಸಂಭ್ರಮವನ್ನು ‘ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ 2013’ ರೆಂದು ಆಚರಿಸಿ ಕನ್ನಡದ ಖ್ಯಾತಿಯನ್ನು ಜಗದಗಲಕ್ಕೆ ಪಸರಿಸುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ […]

“ಚಾಲಿಪೋಲಿಲು” ತುಳು ಚಿತ್ರದ ಧ್ವನಿಸುರುಳಿ ಬಿಡುಗಡೆ

Wednesday, October 8th, 2014
Chali Polilu

ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದ ಚೊಚ್ಚಲ ಸಿನಿಮಾ, ಚಾಲಿಪೋಲಿಲು ತುಳು ಚಿತ್ರದ ಹಾಡಿನ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಬುಧವಾರ (ಅ .8) ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಧ್ವನಿಸುರುಳಿಯನ್ನು ಬಿಡುಗಡೆಗೊಳಿದಸಿರು. ರಂಗಭೂಮಿಯ ಖ್ಯಾತ ನಟ ನಿರ್ದೇಶಕ ದೇವದಾಸ್ ಕಾಪಿಕಾಡ್, ಕುಸಲ್ದರಸೆ ನವೀನ್ ಪಡೀಲ್, ಭೋಜರಾಜ್ ವಾಮಂಜೂರು ಉಪಸ್ಥಿತರಿದ್ದರು. ಚಿತ್ರದ ನಿರ್ಮಾಕ ಪ್ರಕಾಶ್ ಪಾಂಡೇಶ್ವರ್ ಉಪಸ್ಥಿತರಿದ್ದರು. ಕಾರ್ಯಕಾರಿ ನಿರ್ಮಾಕಪ ಜಗನ್ನಾಥ್ ಶೆಟ್ಟಿ ಬಾಳಾ ಸ್ವಾಗತಿಸಿದರು. ನವನೀತ್ […]

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂವಮ್ಮನಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

Tuesday, October 7th, 2014
puvamma

ಮಂಗಳೂರು : ದಕ್ಷಿಣ ಕೊರಿಯಾದ ಇಂಚಿಯಾನದಲ್ಲಿ ನಡೆದ ಏಷ್ಯನ್ ಗೇಮ್ಸ್ ನ ರಿಲೇಯಲ್ಲಿ ಚಿನ್ನ ಹಾಗೂ 400 ಮೀ.ನಲ್ಲಿ ಕಂಚಿನ ಪದಕ ಗೆದ್ದ ಎಂ.ಆರ್.ಪೂವಮ್ಮ ಮಂಗಳವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾಡಳಿತ ಹಾಗೂ ದ.ಕ. ಜಿಲ್ಲಾ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಪೂವಮ್ಮಗೆ ಅದ್ದೂರಿ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪೂವಮ್ಮ, ಕ್ರಿಡಾಪಟು ತನ್ನೊಳಗಿರುವ ಪ್ರತಿಭೆಯನ್ನು ಹೊರ ಹಾಕಬೇಕಾದರೆ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮತ್ತು ತರಬೇತಿ ಅವಕಾಶ ಸಿಗಬೇಕು. ಇಲ್ಲವಾದಲ್ಲಿ […]

ಡಿ.ವಿ.ಸದಾನಂದ ಗೌಡ ಅವರ ಸಹೋದರಿ ನಿಧನ

Tuesday, October 7th, 2014
ಡಿ.ವಿ.ಸದಾನಂದ ಗೌಡ ಅವರ ಸಹೋದರಿ ನಿಧನ

ಮಂಗಳೂರು : ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ ಅವರ ಸಹೋದರಿ ಯಳಂದೂರು ಜಿಲ್ಲಾ ಪಂಚಾಯತ್‌ ಸದಸ್ಯೆ ಸಾವಿತ್ರಿ ಶಿವರಾಂ ಅವರು ಮಂಗಳವಾರ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸಾವಿತ್ರಿ ಅವರಿಗೆ 55 ವರ್ಷ ಪ್ರಾಯವಾಗಿದ್ದು, ಕೆಲ ಸಮಯಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಸಾವಿತ್ರಿ ಶಿವರಾಂ ಅವರು ಸುಳ್ಯ ತಾಲೂಕಿನ ಪೆರಾಜೆಯವರಾಗಿದ್ದು 2009 ರಿಂದ 2011 ರ ವ್ರೆಗೆ ಪುತ್ತೂರು ತಾಲೂಕು ಪಂಚಾಯತ್ ನ ಅಧ್ಯಕ್ಷರಾಗಿದ್ದರು. ಮೃತ ಸಾವಿತ್ರಿ ಅವರು ಪತಿ ಶಿವರಾಂ, […]

ಮೆಸ್ಕಾಂನ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೊಲೆ ಆರೋಪಿಗಳ ಬಂಧನ

Monday, October 6th, 2014
Mescom engineer Killers

ಮಂಗಳೂರು: ಬಿಜೈ ನಿವಾಸಿ ಮೆಸ್ಕಾಂನ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಗದೀಶ್ ರಾವ್(56) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಉರ್ವಾ ಠಾಣಾ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಹಿತೇಂದ್ರ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ನಿವಾಸಿ ಸಿದ್ದಪ್ಪ ಯಾನೆ ಸಿದ್ದು(22), ದಾವಣಗೆರೆಯ ನಿಟ್ಟೋಳಿ ಸೈಯದ್ ಫೀರ್ ಬಡಾವಣೆ ನಿವಾಸಿ ಮುರ್ತುಜ ಖಾದ್ರಿ ಯಾನೆ ರಫೀಕ್(27) ಎಂಬವರು ನಗರದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಉರ್ವಾ ಠಾಣಾ ಪೊಲೀಸರು ವಶಕ್ಕೆ ಪಡೆದು […]

ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ಜೊತೆ ತಿರುಪತಿ ದರ್ಶನ

Sunday, October 5th, 2014
DVS Tirupati

ಬೆಂಗಳೂರು : ಮೈತ್ರಿ ಪ್ರಕರಣ ಜಟಿಲವಾದ ಹಿನ್ನಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು ಸಂಸಾರ ಸಮೇತರಾಗಿ ಭಾನುವಾರ ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಡಿವಿ ಸದಾನಂದ ಗೌಡ, ಕಾರ್ತಿಕ್ ಗೌಡ ಹಾಗೂ ಡಾಟಿ ಸದಾನಂದ ಗೌಡ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂನ ಜಂಟಿ ಕಾರ್ಯಕಾರಿ ಅಧಿಕಾರಿ ಕೆಎಸ್ ಶ್ರೀನಿವಾಸ್ ರಾಜು ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. ಸದಾನಂದ ಗೌಡ ಅವರ ಕುಟುಂಬದ ಜೊತೆಗೆ ಆಂಧ್ರಪ್ರದೇಶದ ಮುಜರಾಯಿ ಇಲಾಖೆ ಸಚಿವ ಮಾಣಿಕ್ಯಾಲ ರಾವ್ […]