ತ್ಯಾಗ ಬಲಿದಾನದ ಹಬ್ಬವಾದ ಈದ್‌ -ಉಲ್‌- ಅದಾ ಆಚರಣೆ

Sunday, October 5th, 2014
eid-ul-ada

ಮಂಗಳೂರು : ಮುಸಲ್ಮಾನ ಬಾಂಧವರು ತ್ಯಾಗ ಬಲಿದಾನದ ಹಬ್ಬವಾದ ಈದ್‌ -ಉಲ್‌- ಅದಾ(ಬಕೀದ್) ವನ್ನು ಭಾನುವಾರ ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆಚರಿಸಿದರು. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಮುಸ್ಲಿಂ ಭಾಂಧವರು ಸಾಮೂಹಿಕ ನಮಾಜ್‌ ನಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಂಗಳೂರು ಕಾಜ್ಹಿ ತೋಕ ಅಹಮ್ಮದ್ ಮುಸ್ಲಿಯಾರ್ ಈದ್‌ -ಉಲ್‌- ಅದಾ ಸಂದೇಶವನ್ನು ನೀಡಿದರು. ಹಿಂದೆ ದೇವರ ಆಜ್ಞೆಯ ಮೇರೆಗೆ ಪ್ರವಾದಿ ಇಬ್ರಾಹಿಂ ರು ತನ್ನ ಮಗನನ್ನೇ ದೇವರಿಗೆ […]

ಕುದ್ರೋಳಿ ನವರಾತ್ರಿ ಸಂಬ್ರಮ`ಬೃಹತ್‌ ಮಂಗಳೂರು ದಸರಾ ಮೆರವಣಿಗೆ’ ಯಲ್ಲಿ ಸಮಾಪನ

Sunday, October 5th, 2014
ಕುದ್ರೋಳಿ ನವರಾತ್ರಿ ಸಂಬ್ರಮ`ಬೃಹತ್‌ ಮಂಗಳೂರು ದಸರಾ ಮೆರವಣಿಗೆ’ ಯಲ್ಲಿ ಸಮಾಪನ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮೆರವಣಿಗೆ ಶನಿವಾರ ಸಂಜೆ ಆರಂಭಗೊಂಡ ‘ಬೃಹತ್‌ ಮಂಗಳೂರು ದಸರಾ ಮೆರವಣಿಗೆ ರವಿವಾರ ಮುಂಜಾನೆ ಸಮಾಪನಗೊಂಡಿತು. ಶೋಭಾ ಯಾತ್ರೆಯಲ್ಲಿ ಶ್ರೀಶಾರದೆ, ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸ್ತಬ್ಧಚಿತ್ರಗಳು; ಕೇರಳದ ಚೆಂಡೆ ವಾದ್ಯ, ವಿವಿಧೆಡೆಯ ಜಾನಪದ ಕಲಾ ನೃತ್ಯ ತಂಡಗಳು, ಮಹಾರಾಷ್ಟ್ರದ ಡೋಲು, ಕರಾವಳಿ ಹುಲಿವೇಷ ಸಹಿತ ಪಾರಂಪರಿಕ ವೈವಿಧ್ಯ, ಆಂಧ್ರದ ಬಾಲಮುರಳೀಕೃಷ್ಣ ಕೋಲಾಟಂ, ಕಲ್ಲಡ್ಕದ ಶಿಲ್ಪ ಗೊಂಬೆ, ತ್ರಿಶ್ಯೂರಿನ ವರ್ಣದ ಕೊಡೆಗಳು, ವಾದ್ಯವೃಂದ, ಕರಾವಳಿಯ ಅನೇಕ […]

ನವವಿವಾಹಿತೆಯ ಶವ ಮನೆಯ ಬಾವಿಯಲ್ಲಿ ಪತ್ತೆ

Saturday, October 4th, 2014
Safida

ಕಾಸರಗೋಡು : ನವವಿವಾಹಿತೆಯ ಶವ ಕಾಸರಗೋಡು ಜಿಲ್ಲೆಯ ಅಂಬಲಟ್ಟರ ಎಂಬಲ್ಲಿ ಬಾವಿಯಲ್ಲಿ ಪತ್ತೆಯಾದ ಬಗ್ಗೆ ಶುಕ್ರವಾರ ವರದಿಯಾಗಿದೆ. ಮೃತ ವಿವಾಹಿತ ಯುವತಿಯನ್ನು ಸಫೀದಾ (19) ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಸಫೀದಾ ನಾಪತ್ತೆಯಾಗಿದ್ದರು. ಮನೆಯವರು ಸಫೀದಾಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಬಾವಿಯಲ್ಲಿ ಶವ ಪತ್ತೆಯಾಗಿದೆ. ಅಗ್ನಿ ಶಾಮುಕ ದಳದ ಸಿಬ್ಬಂದಿ ಶವವನ್ನು ಮೇಲಕ್ಕೆತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರ ಪಕ್ಷಿ ನವಿಲನ್ನು ಕೊಂದು ಗರಿಗಳನ್ನು ಮಂಗಳೂರು ನಗರದಲ್ಲಿ ಮಾರಾಟ

Thursday, October 2nd, 2014
ರಾಷ್ಟ್ರ ಪಕ್ಷಿ ನವಿಲನ್ನು ಕೊಂದು ಗರಿಗಳನ್ನು ಮಂಗಳೂರು ನಗರದಲ್ಲಿ ಮಾರಾಟ

ಮಂಗಳೂರು : ರಾಜಸ್ಥಾನ ಮೂಲದ ಕೆಲವೊಂದು ವ್ಯಕ್ತಿಗಳು ಅಲ್ಲಿ ಯಥೇಚ್ಛವಾಗಿ ಸಿಗುವ ನವಿಲುಗಳ ಆಹಾರದಲ್ಲಿ ಅಮಲು ಪದಾರ್ಥಗಳನ್ನು ಬೆರೆಸಿ ಅವುಗಳನ್ನು ಹಿಡಿದು ಕೊಂದು ತಿಂದು ಅವುಗಳ ಗರಿಗಳನ್ನು ದೇಶಾದ್ಯಂತ ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಪರಿಸರ ಸಂರಕ್ಷಣಾ ಒಕ್ಕೂಟ ತಿಳಿಸಿದೆ. ಮಂಗಳೂರು ನಗರದಲ್ಲಿ ಈಗ ಜಾತ್ರಾ ಸಮಯ ಆದುದರಿಂದ ಈ ರಾಜಸ್ಥಾನದ ಜನರು ಹೊರೆಗಟ್ಟಲೆ ನವಿಲು ಗರಿಗಳನ್ನು ತಂದು ಸಾರ್ವಜನಿಕವಾಗಿ ಮಾರಾಟ ಮಾಡುತ್ತಿದ್ದಾರೆ. ಅವರನ್ನು ವಿಚಾರಿಸಿದರೆ ತಾವುಗಳು ಬಿದ್ದ ಗರಿಗಳನ್ನು ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸುತ್ತಾರೆ. ಇದು […]

ಪುತ್ತೂರು ಪುರಸಭಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಆಯ್ಕೆ

Wednesday, October 1st, 2014
ಪುತ್ತೂರು ಪುರಸಭಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಆಯ್ಕೆ

ಪುತ್ತೂರು: ಪುತ್ತೂರು ಪುರಸಭೆಗೆ ಮಂಗಳವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಚ್‌. ಮಹಮ್ಮದಾಲಿ ಅವರನ್ನು ಸೋಲಿಸುವ ಮೂಲಕ ಬಂಡಾಯ ಅಭ್ಯರ್ಥಿ ಕಾಂಗ್ರೆಸ್‌ನ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಪುರಸಭಾ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಅವರು 18 ಮತಗಳನ್ನು ಪಡೆದು ಎಚ್‌. ಮಹಮ್ಮದಾಲಿ ಅವರನ್ನು ಸೋಲಿಸಿದರು. ಮಂಗಳವಾರ ಬೆಳಗ್ಗೆ ಕಾಂಗ್ರೆಸ್‌ನಿಂದ ಎಚ್‌. ಮಹಮ್ಮದಾಲಿ ಮತ್ತು ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಹಾಗೂ ಬಿಜೆಪಿಯಿಂದ ವಿಶ್ವನಾಥ ಗೌಡ ನಾಮಪತ್ರ ಸಲ್ಲಿಸಿದ್ದರು. ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ನಾಮಪತ್ರವನ್ನು ಹಿಂದೆ ತೆಗೆದುಕೊಳ್ಳದೇ ಚುನಾವಣಾ ಕಣದಲ್ಲಿ […]

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ – ಮಂಗಳೂರು ಒನ್‌ ತನಿಖೆಗೆ ಸದನ ಸಮಿತಿ

Tuesday, September 30th, 2014
MCC

ಮಂಗಳೂರು: ಮಂಗಳೂರು ಒನ್‌ ಸೇವಾ ಕೇಂದ್ರಗಳು ಜನರಿಂದ ಸಂಗ್ರಹಿಸಿದ ಆಸ್ತಿ ತೆರಿಗೆಯನ್ನು ಕ್ಲಪ್ತ ಸಮಯದಲ್ಲಿ ಪಾಲಿಕೆಯ ಖಾತೆಗೆ ಪಾವತಿಸುತ್ತಿಲ್ಲ. ಪಾಲಿಕೆಗೆ ಸಂದಾಯ­ವಾದ ಮೊತ್ತ ಹಾಗೂ ಸೇವಾ ಕೇಂದ್ರಗಳು ಸಂಗ್ರಹಿಸಿರುವ ಮೊತ್ತದಲ್ಲಿ ₨ 2.5 ಕೋಟಿ­ಯಷ್ಟು ವ್ಯತ್ಯಯ ಕಂಡುಬಂದಿದೆ’ ಎಂದು  ಪಾಲಿಕೆ ಸದಸ್ಯ ವಿಜಯ ಕುಮಾರ್‌ ಶೆಟ್ಟಿ ಆರೋಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್‌ ಮಹಾಬಲ ಮಾರ್ಲ ಅವರು, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಸದನ ಸಮಿತಿಯನ್ನು ನೇಮಿಸಿದರು. ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ […]

ಪಾಕಿಸ್ಥಾನಃ ಗಡಿ ಉಲ್ಲಂಘನೆ ಮಾಡಿದ ಆರೋಪ ೨೫ ಮೀನುಗಾರರ ಬಂಧನ

Tuesday, September 30th, 2014
Fishermen

ಇಸ್ಲಮಾಬಾದ್‌ : ಭಾನುವಾರ ಸಂಜೆ ಮೀನು ಹಿಡಿಯಲು ತೆರಳಿದ 25 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಬಂದರು ರಕ್ಷಣಾ ಪಡೆ ಭಂದಿಸಿದೆ. ಗಡಿ ಉಲ್ಲಂಘನೆ ಮಾಡಿದ ಆರೋಪ ಎದುರಿಸಿತ್ತುರುವ  ಎಲ್ಲಾ ಮೀನುಗಾರರನ್ನು ಕರಾಚಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇವರೆಲ್ಲರಿಗೂ ಕನಿಷ್ಠ 1 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.

ತಮಿಳು ನಾಡು: ಹೊಸ ಸಿ.ಎಂ. ಆಗಿ ಹಣ­ಕಾಸು ಸಚಿವ ಪನ್ನೀರ್‌ಸೆಲ್ವಂ ಆಯ್ಕೆ

Monday, September 29th, 2014
O.Panneerselvam

ಚೆನ್ನೈ:  ತಮಿಳುನಾಡು ಮುಖ್ಯ­ಮಂತ್ರಿ ಜೆ.ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ ಕಾರಣ ತೆರವಾದ ಮುಖ್ಯ ಮಂತ್ರಿ ಸ್ಟಾನಕ್ಕೆ ಹಣಕಾಸುಸಚಿವ ಎಂ.ಪನ್ನೀರ್‌ಸೆಲ್ವಂ ಅವರನ್ನು ಆಯ್ಕೆ ಮಾಡಲಾಗಿದೆ. ಎಐಎಡಿಎಂಕೆ ಪ್ರಧಾನ ಕಚೇರಿ­ಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾ­ಯಿತು. ಈ ಹಿಂದೆ ೨೦೦೧ರಲ್ಲಿ ತಾನ್ಸಿ ಭೂಹಗರಣ­ದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿ­ನಿಂದಾಗಿ ಜಯಲಲಿತಾ ಅವರು ರಾಜೀನಾಮೆ ನೀಡ­ಬೇಕಾಗಿ ಬಂದಿದ್ದಾಗ ಪನ್ನೀರ್‌ಸೆಲ್ವಂ ಅವರು ಕೇವಲ  ಆರು ತಿಂಗಳ ಕಾಲ ಜಯಾ ಉತ್ತರಾ­ಧಿಕಾರಿ­ಯಾಗಿ ೨೦೦೧ರ ಸೆ.೨೧ರಿಂದ ೨೦೦೨ರ ಮಾರ್ಚ್‌ ೧ರವರೆಗೆ  ಅವರು ಮುಖ್ಯಮಂತ್ರಿಯಾಗಿ ಆಡಳಿತ […]

ವಿಶ್ವ ಹೃದಯ ದಿನದ ಓಟ: ಕೆಎಂಸಿ ಆಸ್ಪತ್ರೆಗೆ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ

Monday, September 29th, 2014
World-Heat-Day

ಮಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಹಮ್ಮಿಕೊಂಡಿದ್ದ ‘ವಿಶ್ವ ಹೃದಯ ದಿನದ ಓಟ’ದಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸಿದರು. ಕೈಗಳನ್ನು ತೊಡೆಗೆ ಬಡಿ­ಯುತ್ತಾ ಹೃದಯ ಮಾಡುವ ಸದ್ದಿನ ಪ್ರತಿಧ್ವನಿ­ಯನ್ನು 5 ನಿಮಿಷಗಳ ಕಾಲ ಬಾಯಲ್ಲಿ ಮೂಡಿಸಿ ಏಕಕಾಲದಲ್ಲಿ ಇಷ್ಟು ಸಂಖ್ಯೆಯ ಜನ 5 ನಿಮಿಷ ನಿರಂತರವಾಗಿ ಸದ್ದು ಮಾಡಿ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದರು. ಒಟ್ಟು 2500 ಮಂದಿ ನೋಂದಣಿ ಮಾಡಿಸಿ ಕೊಂಡಿದ್ದರು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನ ಪ್ರತಿನಿಧಿಯಾಗಿ ಆಗಮಿಸಿದ […]

ಚೂಡಿದಾರದ ಶಾಲು ರೈಲು ಹಳಿಗೆ ಸಿಲುಕಿ ವಿದ್ಯಾರ್ಥಿನಿ ಬಲಿ

Monday, September 29th, 2014
Varsha Alva

ಪುತ್ತೂರು : ಕಂಪ್ಯೂಟರ್‌ ಸೈನ್ಸ್‌ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿಯೊಬ್ಬಳು ರೈಲ್ವೇ ಹಳಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸುವಾಗ ರೈಲಿನಡಿಗೆ ಬಿದ್ದು ದಾರುಣವಾಗಿ ಮೃತ ಪಟ್ಟ ಘಟನೆ  ನಗರದ ಹೊರವಲಯದ  ನೆಹರೂ ನಗರದಲ್ಲಿ ರವಿವಾರ ನಡೆದಿದೆ. ಮಂಗಳೂರಿನ ದೇರೆಬೈಲ್‌ ಕೊಂಚಾಡಿ ನಿವಾಸಿ ವರ್ಷಾ (20) ಮೃತಪಟ್ಟ ವಿದ್ಯಾರ್ಥಿನಿ. ಈಶ್ವರಮಂಗಳ ನಿವಾಸಿ ರಚನಾ (20) ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ. ನಗರದ ಎಂಜಿನಿಯರಿಂಗ್‌ ಕಾಲೇಜೊಂದರ ವರ್ಷಾ, ರಚನಾ ಹಾಗೂ ಇತರ ಕೆಲವು ವಿದ್ಯಾರ್ಥಿಗಳು ಕಾಲೇಜು ಸಮೀಪದ ನೆಹರೂನಗರದ ರೈಲ್ವೇ ಹಳಿ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ರೈಲ್ವೇ […]