ಈರುಳ್ಳಿ ಬೆಲೆ ಏರಿಕೆಗೆ ಅಕ್ರಮ ದಾಸ್ತಾನು ಕಾರಣ: ಪವಾರ್

Wednesday, October 23rd, 2013
pavar

ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಲು ಅಕ್ರಮ ದಾಸ್ತಾನು ಕಾರಣ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಬುಧವಾರ ಹೇಳಿದ್ದಾರೆ. ಇಂದು ನಗರದಲ್ಲಿ ನಡೆದ 8ನೇ ರಾಷ್ಟ್ರೀಯ ಕೃಷಿ ವಿಜ್ಞಾನ ಸಮ್ಮೇಳನದಲ್ಲಿ ಮಾತನಾಡಿಡ ಪವಾರ್, ಅಕ್ರಮ ದಾಸ್ತಾನು ಈರುಳ್ಳಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಮುಂದಿನ ಎರಡು, ಮೂರು ವಾರಗಳಲ್ಲಿ ಈರುಳ್ಳಿ ಬೆಲೆ ಇಳಿಕೆಯಾಗಲಿದೆ ಎಂದು […]

ಅಲ್ಟ್ರಾಮೆಗಾ ಪವರ್‌ ಪ್ರಾಜೆಕ್ಟ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಾಹನ ಜಾಥಾ ನಡೆಯಿತು

Wednesday, October 23rd, 2013
niddody

ಮೂಡಬಿದಿರೆ : ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 4 ಸಾವಿರ ಮೆಗಾವ್ಯಾಟ್‌ ಸಾಮರ್ಥ್ಯದ  ಅಲ್ಟ್ರಾಮೆಗಾ ಪವರ್‌ ಪ್ರಾಜೆಕ್ಟ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ವಾಹನ ಜಾಥಾ ನಡೆಯಿತು ಕಿನ್ನಿಗೋಳಿ ಸಾರ್ವಜನಿಕ ಗಣೇಶ ಮಂಟಪ ಬಳಿಯಿಂದ ಹೊರಟ ವಾಹನ ಜಾಥಾಕ್ಕೆ ಕಟೀಲು ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಚಾಲನೆ ನೀಡಿದರು. ಕಿನ್ನಿಗೋಳಿ ವಲಯ ಇಗರ್ಜಿ ಧರ್ಮಗುರು ವಂ. ಆಲ್ಪ್ರೇಡ್‌ ಪಿಂಟೊ, ಫಾ. ವಿನೋದ್‌ ಮೊದಲಾದವರು ಇದ್ದರು. ಮೂಡುಬಿದಿರೆ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. […]

ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಸ್ವದಖತುಲ್ಲಾ ಫೈಝಿ

Tuesday, October 22nd, 2013
muslim

ಮಂಗಳೂರು : ಇತ್ತೀಚೆಗೆ ಉಳ್ಳಾಲದ ಮೇಲಂಗಡಿ ಮುಹ್ಯುದ್ದೀನ್ ಮಸೀದಿಗೆ ಅಕ್ರಮವಾಗಿ ಪ್ರವೇಶಿಸಿ ಧಾಂದಲೆ ನಡೆಸಿದ ಘಟನೆಯನ್ನು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತಿರುವುದಾಗಿ ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಸ್ವದಖತುಲ್ಲಾ ಫೈಝಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾರ್ಥನೆ ಮಾಡುತ್ತಿದ್ದವರನ್ನು ಇರಿದು, ಕಲ್ಲು ತೂರಾಟ ನಡೆಸಿದ ತಪ್ಪಿತಸ್ಥರನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಿದರು. ಲೋಕಸಭಾ ಚುನಾ ವಣೆ ಸಮೀಪಿಸುತ್ತಿದ್ದಂತೆ ಕೆಲವು ಶಕ್ತಿಗಳಿಂದ ಸಮಾಜ ಒಡೆಯುವ, ಕೋಮು ಭಾವನೆ ಕೆರಳಿಸುವ ಘಟನೆ ಗಳು ನಡೆಯುತ್ತಿದೆ. ಸರಕಾರ ಈ […]

ಪೊಲೀಸ್ ಹುತಾತ್ಮರ ದಿನಾಚರಣೆ

Tuesday, October 22nd, 2013
mandya

ಚನ್ನಪಟ್ಟಣ : ಮಾನವ ಮತ್ತು ಸಮಾಜದ ನಡುವೆ ದಿನದಿಂದ ದಿನಕ್ಕೆ ಸಂಘರ್ಷ ಹೆಚ್ಚುತ್ತಿದ್ದು, ಕರ್ತವ್ಯ ನಿರತ ಪೊಲೀಸ್ ಹುತಾತ್ಮರ ಸಂಖ್ಯೆಯೂ ಕೂಡ ಪ್ರತಿವರ್ಷ ದುಪ್ಪಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಆತಂಕ ವ್ಯಕ್ತಪಡಿಸಿದರು. ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಚನ್ನಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಸರ್ಕಾರಿ ಅಧಿಕಾರಿಗಳು ಹುದ್ದೆಗೆ ಬಂದಾಗ ಹುದ್ದೆಯ ನೆರಳಿನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ದೇಶ ರಕ್ಷಕರು ತಮ್ಮ ಕರ್ತವ್ಯದಲ್ಲಿ ತೊಡಗಿ […]

ಗೊಮ್ಮಟೇಶ್ವರ ಮೂರ್ತಿಗೆ 64ನೇ ಮಸ್ತಕಾಭಿಷೇಕ

Monday, October 21st, 2013
gommateshwara

ಮೈಸೂರು : ಹುಣಸೂರು ತಾಲ್ಲೂಕಿನ ಗೊಮ್ಮಟಗಿರಿ ಕ್ಷೇತ್ರದ ಗೊಮ್ಮಟೇಶ್ವರ ಮೂರ್ತಿಗೆ ಭಾನುವಾರ 64ನೇ ಮಸ್ತಕಾಭಿಷೇಕ ನೆರವೇರಿತು. ಅರಬ್ಬಿತಿಟ್ಟು ಅರಣ್ಯಕ್ಕೆ ಹೊಂದಿಕೊಂಡಿರುವ ಬೆಟ್ಟದೂರು ಸಮೀಪ ವಿರಾಜಮಾನವಾಗಿರುವ ಬಾಹುಬಲಿಯನ್ನು ಭಕ್ತಿಯಿಂದ ಪೂಜಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. 200 ಅಡಿ ಎತ್ತರದ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿರುವ 16 ಅಡಿಯ ಮೂರ್ತಿಗೆ ಬೆಳಿಗ್ಗೆ 9.30ರಿಂದ 11.30ರವರೆಗೆ 108 ಕಳಶಾಭಿಷೇಕ ನೆರವೇರಿತು. ಮಧ್ಯಾಹ್ನ 12.30ರಿಂದ ಆರಂಭವಾದ ಮಸ್ತಕಾಭಿಷೇಕ 40 ನಿಮಿಷಗಳ ಕಾಲ […]

ಅಕ್ಕಿಪೇಟೆಯ ಜೈನ ದೇಗುಲದಲ್ಲಿ 25 ಲಕ್ಷ ಲೂಟಿ

Monday, October 21st, 2013
jain

ಬೆಂಗಳೂರು : ನಗರದ ಜೈನ ದೇವಾಲಯವೊಂದರಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸಿ, ಭದ್ರತಾ ಸಿಬ್ಬಂದಿ ಪ್ರಜ್ಞೆ ತಪ್ಪಿಸಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಹುಂಡಿ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಅಕ್ಕಿಪೇಟೆಯ ಜೈನ ದೇವಾಲಯಕ್ಕೆ ನುಗ್ಗಿದ ದುಷ್ಕರ್ಮಿಗಳು, ಅಲ್ಲಿದ್ದ ಏಳು ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸಿದ್ದಾರೆ . ಐವರು ಭದ್ರತಾ ಸಿಬ್ಬಂದಿ ಪ್ರಜ್ಞೆ ತಪ್ಪಿಸಿ, ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ. ದೇವಾಲಯಕ್ಕೆ ನುಗ್ಗಿದ ಕಳ್ಳರ ಗುಂಪು, ಭದ್ರತಾ ಸಿಬ್ಬಂದಿ ಮುಖಕ್ಕೆ ಕ್ಲೋರೋಫಾರ್ಮ್ ಹಿಡಿದು ಪ್ರಜ್ಞೆ ತಪ್ಪಿಸಿದ್ದಾರೆ. […]

ಅಂಬಿಕಾರೋಡಿನಿಂದ ತಲಪಾಡಿ ವರೆಗೆ ಕೋಟೆಕಾರು ಗ್ರಾಮ ಸಮಿತಿ ಆಯೋಜಿಸಿದ್ದ “ಜೈ ನರೇಂದ್ರ ಮೋದಿ” ಬೃಹತ್ ವಾಹನ ಜಾಥಾ

Monday, October 21st, 2013
nalin

ಮಂಗಳೂರು : ಅಂಬಿಕಾರೋಡಿನಿಂದ ತಲಪಾಡಿ ವರೆಗೆ ಕೋಟೆಕಾರು ಗ್ರಾಮ ಸಮಿತಿ ಆಯೋಜಿಸಿದ್ದ ಜೈ ನರೇಂದ್ರ ಮೋದಿ ಬೃಹತ್ ವಾಹನ ಜಾಥಾವನ್ನು ಭಾನುವಾರ  ಸಂಸದ ನಳಿನ್‍ ಕುಮಾರ್ ಕಟೀಲ್  ಉದ್ಘಾಟಿಸಿದರು. ಸಂಸದ ನಳಿನ್‍ ಕುಮಾರ್  ಕಟೀಲ್  ಜೈ ನರೇಂದ್ರ ಮೋದಿ ಬೃಹತ್ ವಾಹನ ಜಾಥಾವನ್ನು ಉದ್ದೇ ಶಿಸಿ ಮಾತನಾಡಿದ ಅವರು ದೇಶವನ್ನು ಕಸಿ ಯಲು ಬಂದ ಮೊಘಲರನ್ನು ಶಿವಾಜಿ ಮಹಾರಾಜ ಒದ್ದೋಡಿಸಿದ್ದರೆ, ಇದೀಗ ದೇಶವನ್ನು ಛಿದ್ರಗೊಳಿಸಲು ಹೊರಟಿ ರುವ ಯುಪಿಎ ಸರಕಾರವನ್ನು ಓಡಿ ಸಲು ಮೋದಿ ಇನ್ನೊಂದು ಶಿವಾಜಿಯ […]

ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ : ಶ್ರೀರಾಮ ಸೇನೆ

Saturday, October 19th, 2013
shri-ram-sena

ಮಂಗಳೂರು: ಸೌಜನ್ಯ ಹತ್ಯೆ ಪ್ರಕರಣವಾಗಿ ಧರ್ಮಸ್ಥಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನಕಾರಿ ಮಾತುಗಳು ಕೇಳಿಬರುತ್ತಿದೆ. ಇದನ್ನು ಶ್ರೀರಾಮಸೇನೆ ಸಹಿಸುವುದಿಲ್ಲ, ಅದಕ್ಕಾಗಿ ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಶ್ರೀರಾಮ ಸೇನೆ ರಾಜ್ಯ ಉಪಾ ಧ್ಯಕ್ಷ ಕುಮಾರ್ ಮಾಲೆಮಾರ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಉಪಾಧ್ಯಕ್ಷ ಕುಮಾರ್ ಮಾಲೆಮಾರ್ ಅವರು, ಸೌಜನ್ಯ ಸಾವಿನ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಧ್ವನಿ ಎತ್ತಿದ್ದಾರೆ. ಆದರೆ ಇದನ್ನು ಖಂಡಿಸುವವರು ತುಂಬಾ […]

ಮೋಹನ್ ರಾಣ್ಯ ಎಂಬವರನ್ನು ಹತೈಗೈದ ಆರೋಪಿ ಮೊಹಮ್ಮದ್ ಆಸೀಫ್ ಚಿಕ್ಕಮಗಳೂರು ಬಳಿ ಸೆರೆ

Saturday, October 19th, 2013
Mohammed-Asif

ಮೂಲ್ಕಿ: ಕಿನ್ನಿಗೋಳಿ ಮೂರು ಕಾವೇರಿ ಬಳಿಯ ನಿವಾಸಿ ಮೋಹನ್ ರಾಣ್ಯ ಎಂಬವರನ್ನು ಹತೈಗೈದ ಆರೋ ಪಿಯನ್ನು ಮೂಲ್ಕಿ ಪೊಲೀಸರು ಚಿಕ್ಕಮಗಳೂರು ಬಳಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಬಜ್ಪೆ ನಿವಾಸಿ ಯಾಗಿರುವ ಮೊಹಮ್ಮದ್ ಆಸೀಫ್(26) ಬಂಧಿತ ಆರೋಪಿಯಾಗಿದ್ದಾನೆ. 2009ರ ಸುರತ್ಕಲ್ ಕೋಮುಗಲಭೆಯ ಸಂದರ್ಭ ಕಿನ್ನಿಗೋಳಿ ಮೂರುಕಾವೇ ರಿಯ ಬಳಿ ರಾತ್ರಿ ಮನೆಗೆ ತೆರಳುತ್ತಿದ್ದ ಮೋಹನ್ ರಾಣ್ಯ ಎಂಬವರನ್ನು ಮಾರಕಾಯುಧದಿಂದ ಹೊಡೆದು ಕೊಲೆಗೈಯಲಾಗಿತ್ತು. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖ ಲಾಗಿ ತನಿಖೆ ನಡೆಯುತ್ತಿತ್ತು. ಪರಿಶಿಷ್ಟ ಜಾತಿಯ ಬಡ ಕುಟುಂಬದ […]

ಸರ್ವಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಸೌಜನ್ಯ ಕೊಲೆ ಪ್ರಕರಣ ಸಿಬಿಐಗೆ ನೀಡುವಂತೆ ಅಗ್ರಹಿಸಿ ಪ್ರತಿಭಟನೆ

Saturday, October 19th, 2013
Sowjanya's-birthday

ಮಂಗಳೂರು : ಸೌಜನ್ಯ ಜನ್ಮ ದಿನದ ಹಿನ್ನೆಲೆಯಲ್ಲಿ ಆಕೆಯ ಸಾವಿಗೆ ನ್ಯಾಯ ಅಗ್ರಹಿಸಿ, ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿ ಮತ್ತು ಆಕೆಯ ಕುಟುಂಬಕ್ಕೆ ರೂ.ಐದು ಲಕ್ಷ ಪರಿಹಾರ ನೀಡುವಂತೆ ಅಗ್ರಹಿಸಿ ಸರ್ವಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಕ್ಯಾಂಡಲ್ ಪ್ರತಿಭಟನೆಯು ಶುಕ್ರವಾರ ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ನಡೆಯಿತು. ಸರ್ವಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ದಿನಕರ್ ಶೆಟ್ಟಿ ಕ್ಯಾಂಡಲ್ ಪ್ರತಿಭಟನೆಯನ್ನು ಉದ್ದೇಶಿಸಿ ಕಾಮುಕರ ದುಷ್ಟತನಕ್ಕೆ ಬಲಿಯಾದ ಸೌಜನ್ಯ ಮರಳಿ ಈ ಭೂಮಿಗೆ ಬರುವುದು ಅಸಾಧ್ಯವಾದರೂ ಕೊಲೆ ಆರೋಪಿ […]