ಸೌಜನ್ಯಾ ಪ್ರಕರಣವನ್ನು ಹಿಡಿದು ಬೆಳ್ತಂಗಡಿ ತಾಲೂಕಿನ ಕೆಲವರು ಧರ್ಮಸ್ಥಳ ದೇವಾಲಯದ ಚಾರಿತ್ರ್ಯ ಹನನ ಮಾಡುತ್ತಿದ್ದಾರೆ

Wednesday, October 16th, 2013
Veerendra Hegde

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೆಲವರು ಸೇರಿಕೊಂಡು 2012 ರಲ್ಲಿ ನಡೆದ ಸೌಜನ್ಯಾ ಕೊಲೆ ಪ್ರಕರಣವನ್ನು ಟಿ.ವಿ. ಮಾಧ್ಯಮದಲ್ಲಿ ಹೇಳಿಕೊಂಡು ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯ ಮತ್ತು ಧರ್ಮಾಧಿಕಾರಿಯಾದ ನಮ್ಮ ಮೇಲೆ ಆರೋಪ ಹೊರಿಸುವ ಪ್ರಯತ್ನ ಮಾಡಿದ್ದಾರೆ. ಸೌಜನ್ಯಾ ಪ್ರಕರಣದಲ್ಲಿ ನಮ್ಮ ಕುಟುಂಬದ ಯಾರದ್ದೂ ಕೈವಾಡವಿಲ್ಲ. ನಾವು ಯಾವುದೇ ಆರೋಪಿಗಳನ್ನು ರಕ್ಷಿಸಿಲ್ಲ. ಯಾರೇ ಆರೋಪಿಗಳಿದ್ದರೂ ಅವರನ್ನು ತತ್‌ಕ್ಷಣ ಬಂಧಿಸಲು ನಮ್ಮ ಅಡ್ಡಿಯಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸ್ಪಷ್ಟಪಡಿಸಿದ್ದಾರೆ. […]

ಶ್ರೀ ಶಾರದಾ ಮಾತೆಯ ವಿಗ್ರಹದ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆ

Wednesday, October 16th, 2013
shobayathre

ಮಂಗಳೂರು: ನಗರದ ಆಚಾರ್ಯ ಮಠ ವಠಾರದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಳೆದ 91 ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಶಾರದಾ ಮಾತೆಯ ಭವ್ಯ ವಿಗ್ರಹದ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆ ಮಂಗಳವಾರ ಸಮಾಪನಗೊಂಡಿತು. ಸಂಜೆ ಶಾರದಾಮಾತೆಗೆ ಮಂಗಳೂರು ಮಲ್ಲಿಗೆಯ ಜಲ್ಲಿ ಮುಡಿಸಿ, ಭಕ್ತಾದಿಗಳ ದರ್ಶನಕ್ಕೆ ಇಡಲಾಯಿತು. ಬಳಿಕ ವರ್ಣರಂಜಿತ ವಿದ್ಯುದ್ದೀಪಾಲಂಕೃತ ಪ್ರಭಾವಳಿ ಮುಂಭಾಗದಲ್ಲಿ ಹೆಗಲು ಸೇವೆಯ ಮೂಲಕ ಶೋಭಾಯಾತ್ರೆ ಪ್ರಾರಂಭವಾಯಿತು. ಭಗವದ್ಭಕ್ತರು ಅರ್ಪಿಸಿದ ವಜ್ರ ವೈಡೂರ್ಯಗಳಿಂದ ವಿಶೇಷವಾಗಿ ಮಂಗಳೂರು ಮಲ್ಲಿಗೆಯ […]

ಮಂಗಳಾದೇವಿಯಲ್ಲಿ ವೈಭವದ ನವರಾತ್ರಿ ರಥೋತ್ಸವ

Tuesday, October 15th, 2013
mangaladevi-dasara

ಮಂಗಳೂರು : ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೋಮವಾರ ವಿಜಯ ದಶಮಿಯಂದು ವೈಭವದ ರಥೋತ್ಸವ ನಡೆಯಿತು. ವಿದ್ಯೆಯನ್ನು ಆರಂಭಿಸುವ ಮಕ್ಕಳಿಗೆ ವಿದ್ಯಾರಂಭ ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ.ಗಣೇಶ್ ನೇರವೇರಿಸಿದರು. ಮಧ್ಯಾಹ್ನ ರಥಾರೋಹಣಗೊಂಡು ರಥವನ್ನು ಅಲಂಕರಿಸಿ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಇಡಲಾಯಿತು. ರಥವನ್ನು ಹೂ, ಸಿಯಾಳ ಫಲವಸ್ತು ಮತ್ತು ವಿದ್ಯುದ್ದೀಪಗಳಿಂದ ಆಲಂಕರಿಸಿ ರಥವನ್ನು ಎಳೆಯಲಾಯಿತು. ಬಳಿಕ ಮಹಾಪೂಜೆ ನಡೆಯಿತು. ಸಂಜೆ ಅಂತರ್ ರಾಷ್ಟ್ರೀಯ ಖ್ಯಾತಿಯ ಪ್ರಶಸ್ತಿ ವಿಜೇತ ಮಚ್ಚೆಂದ್ರನಾಥ್ ಮತ್ತು ಬಳಗದವರಿಂದ ಸ್ಯಾಕ್ಸೋಫೊನ್ ವಾದನ ನಡೆಯಿತು. […]

ನವರಾತ್ರಿ ವೈಭವಕ್ಕೆ ರಂಗು ನೀಡಿದ ಬಜಿಲಕೇರಿ ಹುಲಿವೇಷ ತಂಡ

Monday, October 14th, 2013
pilivesha

ಮಂಗಳೂರು : ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಮುಂದೆ ಸಾಗುವಾಗ ಬಜಿಲಕೇರಿ ಸಿಗುತ್ತದೆ. ಇಲ್ಲಿ ಜೈನಬಸದಿ ಮತ್ತು ಕಾರಣೀಕ ಹನುಮಂತ ದೇವಸ್ಥಾನವಿದೆ.  ಸುಮಾರು 85 ವರ್ಷಗಳ ಹಿಂದೆ ಬಿ.ಕೃಷ್ಣಪ್ಪನವರು ಬಜಿಲಕೇರಿ ಹುಲಿವೇಷ ತಂಡವನ್ನು ಕಟ್ಟಿದರು. ಅವರು 1928 ರಲ್ಲಿ ಬಜಿಲಕೇರಿಯಲ್ಲಿ ಆರಂಭಿಸಿದ  ಹುಲಿವೇಷ ಇದುವರೆಗೂ ಮುಂದುವರಿದಿದೆ. ಬಿ. ಕೃಷ್ಣಪ್ಪನವರು ದಿವಂಗತರಾದ ಮೇಲೆ ಅವರ ಮಗ ಕಾರ್ಪೋರೇಟರ್ ಬಜಿಲಕೇರಿ ಕಮಲಾಕ್ಷನವರು ತಂದೆಯವರ  ಸ್ಮರಣಾರ್ಥ ಹುಲಿವೇಷ ತಂಡವನ್ನು ಮುಂದುವರಿಸಿಕೊಂಡು ಬಂದಿದ್ದಾರೆ . ಬಜಿಲಕೇರಿಯಲ್ಲಿರುವ ಜೈನ ಬಸದಿಯ ಪಕ್ಕ ಬಸ್ತಿ ಶಾಲೆಯಲ್ಲಿ ಕೇಸರಿ ಪ್ರೆಂಡ್ಸ್ […]

ಬಂಟ್ವಾಳ ಲೊರೆಟ್ಟೋ ಚರ್ಚ್‍ನ ಮೇರಿ ಮಾತಾ ಮೂರ್ತಿಯ ಗಾಜಿನ ಕವಚಕ್ಕೆ ಅಪರಿಚಿತ ದುಷ್ಕರ್ಮಿಗಳಿಂದ ಹಾನಿ

Monday, October 14th, 2013
Mary-at-Loretto-Church

ಬಂಟ್ವಾಳ : ಬಂಟ್ವಾಳ ಲೊರೆಟ್ಟೋ ಚರ್ಚ್‍ನ ಮೇರಿ ಮಾತಾ ಮೂರ್ತಿಯ ಗಾಜಿನ ಕವಚವನ್ನು ಅಪರಿಚಿತ ದುಷ್ಕರ್ಮಿಗಳು ಸೋಡಾ ಬಾಟಲಿಯಿಂದ ಹೊಡೆದು ಹಾಕಿದ ಘಟನೆ ನಡೆದಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ನಿನ್ನೆ ಚರ್ಚ್ ಎದುರು ಕ್ರೈಸ್ತ ಬಾಂಧವರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಬಂಟ್ವಾಳ ತಾಲೂಕಿನ ಲೊರೆಟ್ಟೊ ಚರ್ಚ್‍ನ ಆವರಣ ಗೋಡೆಯಲ್ಲಿರುವ ಮೇರಿ ಮಾತಾ ಮೂರ್ತಿಯ ಗಾಜಿನ ಕವಚವನ್ನು ರಾತ್ರಿ ಯಾರೋ ದುಷ್ಕರ್ಮಿಗಳು ಸೋಡಾ ಬಾಟಲಿಯಿಂದ ಒಡೆದು ಹಾಕಿರುವುದು ಇಲ್ಲಿನ ಧಾರ್ಮಿಕ ಭಾವನೆಗಳಿಗೆ ಕೆಡುಕುಂಟು ಮಾಡುವ ಹುನ್ನಾರವಾಗಿದೆ ಎಂದು […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಶಿರ್ಡಿ ಸಾಯಿಬಾಬಾ ಮಂದಿರದ ಉದ್ಘಾಟನೆ

Saturday, October 12th, 2013
temple

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಶಿರ್ಡಿ ಸಾಯಿಬಾಬಾ ಮಂದಿರದ ಉದ್ಘಾಟನೆಯನ್ನು ಜನಾರ್ದನ ಪೂಜಾರಿ ಅವರ ಅತ್ತೆ ಬೆಳ್ತಂಗಡಿಯ ದಿ| ಸಂಜೀವ ಕಾರಂದೂರು ಅವರ ಪತ್ನಿ ಪುಷ್ಪಾವತಿ ಅವರು ಶುಕ್ರವಾರ ಸಂಜೆ ನೆರವೇರಿಸಿದರು. ನೂತನ ಮಂದಿರದ ಸಂಪೂರ್ಣ ವೆಚ್ಚವನ್ನು ಜನಾರ್ದನ ಪೂಜಾರಿ ಅವರ ಪುತ್ರ ಸಂತೋಷ್‌ ಕುಮಾರ್‌ ಪೂಜಾರಿ ದಂಪತಿ ಭರಿಸಿದ್ದಾರೆ. ಚೆಂಡೆ ವಾದ್ಯಗಳ ಸಮೇತ ಪುಷ್ಪಾವತಿ ಅವರನ್ನು ಕುದ್ರೋಳಿ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ದೇವಸ್ಥಾನದಲ್ಲಿ ಪೂಜೆ ನಡೆದ ಬಳಿಕ ನವದುರ್ಗೆಯರ ಪೂಜೆಯಲ್ಲಿ ಭಾಗವಹಿಸಿದ ಅವರು […]

ಸೌಜನ್ಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸರಕಾರ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು : ಹಿಂದೂ ನಾಯಕ ಮಹೇಶ ಶೆಟ್ಟಿ ತಿಮರೋಡಿ

Friday, October 11th, 2013
mafiya

ಮಂಗಳೂರು : ಸೌಜನ್ಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸರಕಾರ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್‌ ಆಂದೋಲನ ನಡೆಸಲಾಗುವುದು ಎಂದು ಹಿಂದೂ ನಾಯಕ ಮಹೇಶ ಶೆಟ್ಟಿ ತಿಮರೋಡಿ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿ ಒಂದು ವರ್ಷ ಕಳೆದಿದೆ. ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವನನ್ನು ಆರೋಪಿ ಎಂದು ಬಿಂಬಿಸಲಾಗಿದೆ. ಆದರೆ ಆತನ ಮೇಲೆ ಯಾವುದೇ ಆಪಾದನೆಗಳಿಲ್ಲ. ಪೊಲೀಸ್‌ ಇಲಾಖೆ ಮೇಲೆ ಒತ್ತಡ ಹೇರಿ ಪ್ರಕರಣದ […]

ಮಂಗಳೂರು ದಸರಾ – 2013 ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ 101ನೇ ವಾರ್ಷಿಕ ಉತ್ಸವವನ್ನು ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

Friday, October 11th, 2013
virendra-hegde

ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು ಇದರ ವತಿಯಿಂದ ನಡೆಯುವ ವಿಶ್ವ ವಿಖ್ಯಾತ ವರ್ಣರಂಜಿತ, ಮಂಗಳೂರು ದಸರಾ – 2013 ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ 101ನೇ ವಾರ್ಷಿಕ ಉತ್ಸವವನ್ನು ಗುರುವಾರ ಪದ್ಮಭೂಷಣ, ರಾಜರ್ಷಿ, ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ಧರ್ಮಸ್ಥಳದ ಧರ್ಮಧರ್ಶಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ಮಂಗಳೂರು ನಗರಕ್ಕೆ ಬಹಳ ಮಹತ್ತರವಾದ ಕೊಡುಗರಯನ್ನು ನೀಡಿದೆ. ಹಾಗಾಗಿ ನಗರಕ್ಕೆ ಯಾರೇ ಬಂದರೂ ಒಮ್ಮೆ ಅವರು ಈ ದೇವಾಲಯ ನೋಡಲೇ ಬೇಕು. ಹಿಂದಿನ […]

ಉಡುಪಿ ಮಾಜಿ ಶಾಸಕ ರಘುಪತಿ ಭಟ್ನ್ ನ ಎರಡನೇ ಮದುವೆ !

Thursday, October 10th, 2013
Raghupathi

ಉಡುಪಿ: ಉಡುಪಿ ಮಾಜಿ ಶಾಸಕ ರಘುಪತಿ ಭಟ್ ನಿನ್ನೆ ಎರಡನೇ ಮದುವೆಯಾಗುವುದರ ಮೂಲಕ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಘುಪತಿ ಭಟ್ ಅವರ ಮೊದಲ ಪತ್ನಿ ಪದ್ಮಪ್ರಿಯ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇದರಿಂದ ದಾಂಪತ್ಯ ಜೀವನವನ್ನು ಮಿಸ್ ಮಾಡಿ ಕೊಂಡಿದ್ದ ರಘುಪತಿ ಭಟ್ ಇದೀಗ ಶಿಲ್ಪಾ ಶಾಸ್ತ್ರಿ ಎಂಬವರ ಜೊತೆ ಸಪ್ತಪದಿ ತುಳಿದಿದ್ದಾರೆ. ಪದ್ಮಪ್ರಿಯ 2008ರಲ್ಲಿ ದೆಹಲಿಯ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಈ ಆತ್ಮಹತ್ಯೆಯಿಂದಾಗಿ ಅನೇಕ ಅನುಮಾನದ ಹುತ್ತಗಳು ಬೆಳೆದಿ ದ್ದವು. ಹೀಗಾಗಿ […]

ದ.ಕ ಜಿಲ್ಲೆಯಲ್ಲಾದ ಮಹಿಳೆಯರ ಅಸಹಜ ಸಾವುಗಳ ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Thursday, October 10th, 2013
Protest

ಮಂಗಳೂರು : ದ.ಕ ಜಿಲ್ಲೆಯಲ್ಲಾದ ಮಹಿಳೆಯರ ಅಸಹಜ ಸಾವುಗಳ ಸಮಗ್ರ ತನಿಖೆಗೆ ಆಗ್ರಹಿಸಿ ಹಾಗೂ ಉಜಿರೆಯ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿ‌ಐ ತನಿಖೆಗೆ ಒತ್ತಾಯಿಸುವಂತೆ ವಿವಿಧ ಸಂಘಟನೆಗಳ ವತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಟಿ.ಎನ್.ಸೀಮಾ ಅವರು ಪ್ರತಿಭಟನೆಯನ್ನುದ್ದೇಶಿಸಿ ,  ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿಯಾದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೊಳಗಾಗಿ ಒಂದು ವರ್ಷವಾಗಿದೆ. ಇಲ್ಲಿಯವರೆಗೂ ನಿಜವಾದ ಅಪರಾಧಿಗಳನ್ನು ಬಂಧಿಸಲು […]