ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರಿಂದ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ

Friday, October 4th, 2013
nantoor

ಮಂಗಳೂರು : ಗುರುವಾರ ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರು ವರ್ಷಗಳು ಕಳೆದರೂ ತಾಂತ್ರಿಕ ದೋಷ ಪೂರಿತ ನಂತೂರು ವೃತ್ತದಲ್ಲಿನ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ  ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿದರು . ಸ್ಥಳೀಯ ನಾಗರಿಕರಾದ ಎ.ಜಿ.ಶರ್ಮ ಅವರು, ಪ್ರತಿಭಟನೆಯನ್ನುದ್ದೇಶಿಸಿ ನಂತೂರು ವೃತ್ತದ ದುಸ್ಥಿತಿ ಕೇಳುವವರಿಲ್ಲ. ಇಲ್ಲಿಯ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ, ರಾಷ್ಟ್ರೀಯ ಇಲಾಖೆಯ ಗಮನಕ್ಕೆ ತಂದರೂ ಈ ಬಗ್ಗೆ ಯಾರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಮಳೆಗಾಲದಲ್ಲಂತೂ ಕೆಸರು ನೀರುಗಳು ರಸ್ತೆಯ […]

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವಾ ಅರ್ಚಕಿಯರ ನೇಮಕ

Thursday, October 3rd, 2013
Two widows given right to perform puja at Kudroli Gokarnatheshwara Temple

ಮಂಗಳೂರು: ವೇದ ಪುರಾಣಗಳನ್ನು ಕಲಿಸಿ ಅ.6ರಂದು ವಿಧವೆಯರಿಂದ ಪೂಜಾವಿಧಾನ ನಡೆಸುವುದರೊಂದಿಗೆ ಅವರನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಅರ್ಚಕರಾಗಿ ನೇಮಕ ಮಾಡಲಾಗುವುದು ಎಂದು  ಬಿ.ಜನಾರ್ದನ ಪೂಜಾರಿ  ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಇಬ್ಬರು ಅರ್ಚಕಿಯರಿಗೆ ನಾಲ್ಕು ತಿಂಗಳಿನಿಂದ ವೇದ ಪುರಾಣಗಳ ತರಬೇತಿಯನ್ನು ನೀಡಲಾಗಿದೆ, ವಿಧವೆಯರನ್ನೂ ಸಮಾಜ ಕೀಳು ದೃಷ್ಟಿಯಿಂದ ಕಾಣುತ್ತಿದೆ ಈ ಭಾವನೆಯನ್ನು ಹೋಗಲಾಡಿಸಲು ವಿಧವೆಯರಿಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು. ಅ.5 ರಂದು ಬೆಳಿಗ್ಗೆ 11ಕ್ಕೆ ಶಾರದೆ ಮತ್ತು ನವದುರ್ಗೆಯರು, ಗಣಪತಿ, ಪ್ರತಿಷ್ಟೆ ನಡೆಯಲಿದೆ ಎಂದು ಹೇಳಿದರು. ಅ.12 ರಂದು ಕ್ಷೇತ್ರದ ಅಭೀವೃದ್ಧಿ ಸಮಿತಿ […]

ಬೇಕರಿಯಲ್ಲಿ ಕೆಲಸ ಮಾಡುತಿದ್ದ ಓರ್ವ ಹುಡುಗಿ ಹಾಗೂ ಇಬ್ಬರು ಗಂಡು ಮಕ್ಕಳ ವಶ

Thursday, October 3rd, 2013
Child Labor

ಮಂಗಳೂರು : ಸಿಹಿತಿಂಡಿ ಬೇಕರಿಯಲ್ಲಿ ಕೆಲಸ ಮಾಡುತಿದ್ದ ಓರ್ವ ಹುಡುಗಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಗೃಹ ಕಾರ್ಮಿಕ ಹಕ್ಕುಗಳ ಒಕ್ಕೂಟದ ದೂರಿನ ಮೇರೆಗೆ ಬಾಲಕಾರ್ಮಿಕ ಇಲಾಖೆ ಅಕ್ಟೋಬರ್ 3, ಗುರುವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಕೊಂಡಿದೆ. ಕೋಡಿಕಲ್ ಸುಂಕದಕಟ್ಟೆ ಎಂಬಲ್ಲಿ ಕೇರಳ ಮೂಲದ ರವಿ.ಟಿ. ಎಂಬವರು ನಡೆಸುತ್ತಿದ್ದ ಬೇಕರಿ ಯೊಂದರಲ್ಲಿ ಬಾಲಕಾರ್ಮಿಕರಾಗಿ ಈ ಮೂವರು ಮಕ್ಕಳು ದುಡಿಸುತ್ತಿದ್ದರು. ಗ್ರಹ ಕಾರ್ಮಿಕ ಹಕ್ಕುಗಳ ಒಕ್ಕೂಟದ ಆನಂದ ಮೂರ್ತಿಯವರಿಂದ ಮಾಹಿತಿ ಪಡೆದ ಬಾಲಕಾರ್ಮಿಕ ಇಲಾಖೆ ಇಂದು […]

ವಿಗ್ರಹ ಕಳವು ಪ್ರಕರಣವನ್ನು ಸಿಬಿಐಗೆ ಕೊಡಲು ಒಪ್ಪಿದ ಸಿಎಂ

Thursday, October 3rd, 2013
basidi

ಮೂಡುಬಿದರೆ : ಸಿದ್ಧಾಂತ ಮಂದಿರ ವಿಗ್ರಹ ಕಳವು ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ನಿನ್ನೆ ಸಾವಿರಕಂಬ ಬಸದಿ ವಠಾರದಲ್ಲಿ ನಿರಶನ ನಡೆಯಿತು. ಇಲ್ಲಿಗೆ ಆಗಮಿಸಿದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ. ಸ್ವಾಮೀಜಿ ಜೊತೆ ಮಾತುಕತೆ ನಡೆಸಿ, ನೇರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ದೂರವಾಣಿ ಮುಖಾಂತರ ಸಂಪ ರ್ಕಿಸಿ, ಬಸದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಸ್ಯೆಯನ್ನು ವಿವರಿಸಿ ಸಿಬಿಐ ತನಿಖೆಯ ಭರವಸೆ ಪಡೆದಿದ್ದಾರೆ. ಸಿದ್ಧರಾಮಯ್ಯ ‘ಸಿ.ಬಿ.ಐ ತನಿಖೆ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ […]

ನಗರದ ಪುರಭವನದಲ್ಲಿ ಗಾಂಧಿಜಯಂತಿ ಆಚರಣೆ

Wednesday, October 2nd, 2013
Gandhi Jayanthi

ಮಂಗಳೂರು : ಭಾರತ ಸೇವಾದಳ ದ.ಕ ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ನಗರದ ಪುರಭವನದಲ್ಲಿ ಗಾಂಧಿಜಯಂತಿಯನ್ನು ಆಚರಿಸಲಾಯಿತು. ಭಾರತ ಸೇವಾದಳದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಗಾಂಧೀಜಿ ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಗಾಂಧಿ ಕೇವಲ ಭಾರತದ ಪಿತಾಮಹ ಮಾತ್ರವಲ್ಲ, ಅವರು ವಿಶ್ವದ ಪಿತಾಮಹ ಎಂದೆನಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಬ್ಯಾರಿಸ್ಟರ್ ಪದವಿಯನ್ನು ಪಡೆದ ಗಾಂಧೀ ಸ್ವಾತಂತ್ರ್ಯ ಹೋರಾಟದ ನೆಲೆಯಲ್ಲಿ ಯುವಕರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು. ವೈಯಕ್ತಿಕ ಸಾಧನೆಯ ಜೊತೆಗೆ ನಮ್ಮ ನಾಡಿನ […]

ಗಾಂಧೀಜಿ ಪ್ರಪಂಚದಾದ್ಯಂತ ಇನ್ನೂ ಜೀವಂತವಾಗಿದ್ದಾರೆ : ಬಿ‌ಎ.ಮೊಯ್ದಿನ್

Wednesday, October 2nd, 2013
Congress Office Gandhi Jayanti

ಮಂಗಳೂರು : ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ( ಅ. 2) ಬುಧವಾರ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ಮಾಜಿ ಸಚಿವ ಬಿ‌ಎ.ಮೊಯ್ದಿನ್  ಮಾತನಾಡಿ  ಯುವಕರಿಗೆ ಗಾಂಧೀಜಿ ತತ್ವಗಳನ್ನು ತಿಳಿಸುವುದರ ಮೂಲಕ ದೇಶ ಪ್ರೇಮವನ್ನು ಬೆಳೆಸಬೇಕು. ಯುವಕರಲ್ಲಿ ಸಹನಾಶೀಲತೆ ಸೃಷ್ಟಿಸುವಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ.  ಸ್ವದೇಶಿ ಕಾರ್ಯಕ್ರಮದ ಆಂದೋಲನದ ಮೂಲಕ ಅಹಿಂಸೆಯನ್ನು ಭೋಧಿಸಿದ್ದರೂ ಹಾಗಾಗಿ ಗಾಂಧಿ ತತ್ವಗಳು ಇಂದಿಗೂ ಅಮರವಾಗಿದೆ ಎಂದು ಅವರು ಹೇಳಿದರು. ಗಾಂಧಿ ಬ್ರಿಟಿಷರ […]

ಗಾಂಧೀಜಿ ಕಂಡ ಪಾನಮುಕ್ತ ಭಾರತದ ಕನಸನ್ನು ಸಕಾರಗೊಳಿಸೋಣ : ಮೊಯ್ದಿನ್ ಬಾವ

Wednesday, October 2nd, 2013
vidhyabhavana

ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.ರಿ, ಮಂಗಳೂರು ತಾಲೂಕು ಜನಜಾಗೃತಿ ವೇದಿಕೆ ಮಂಗಳೂರು ನಗರ ಮತ್ತು ಗ್ರಾಮಂತರ ಇವರ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಪಾನಮುಕ್ತಬಂಧು ಕುಟುಂಬಗಳ ಸಮಾವೇಶ ” ಉಚಿತ ವೈದ್ಯಕೀಯ ಶಿಬಿರ ಹಾಗೂ ಸಾಂಸ್ಕೃತಿಕ ವೈಭವ”ವು ದಿನಾಂಕ 02-10-2013ರ ಬುಧವಾರ ಭಾರತೀಯ ವಿದ್ಯಾಭವನ, ಪಾಂಡೇಶ್ವರ ಎ.ಬಿ.ಶೆಟ್ಟಿ ಸರ್ಕಲ್ ಹತ್ತಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ| ಆರ್. ಪ್ರಶಾಂತ್ ಕೆ.ಎ.ಎಸ್. ಸಹಾಯಕ ಆಯುಕ್ತರು ಮಂಗಳೂರು , ಉಪವಿಭಾಗ ಇವರು ನೇರವೇರಿಸಿದರು. ವಿಶೇಷ […]

ಹಿರಿಯರನ್ನು ಗೌರವಿಸಿ: ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ

Wednesday, October 2nd, 2013
Senior Citizens day

ಮಂಗಳೂರು : ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸದೆ ಗೌರವಿಸಿ ಕುಟುಂಬದೊಂದಿರಿಸಿ ಪೋಷಿಸಬೇಕು. ಆದರೆ ಇಂದಿನ ದಿನಗಳಲ್ಲಿ ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸತ್ತಿರುವುದು   ದುರ್ದೈವ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಬಿ. ರಮಾನಾಥ ರೈ ಬೇಸರ ವ್ಯಕ್ತಪಡಿಸಿದ್ದಾರೆ. ನಗರದ ಬಜ್ಜೋಡಿಯ  ಲಿಟ್ಲ್ ಸಿಸ್ಟರ್ ಆಫ್ ದಿ ಪುವರ್ ಸಂಸ್ಥೆಯಲ್ಲಿ  ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ-2013 ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಂದು […]

ಕದ್ರಿ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ.

Tuesday, October 1st, 2013
park-lobo

ಮಂಗಳೂರು: ಸಾಮಾಜಿಕ ಕಾರ್ಯಕರ್ತ ಡಾ.ಕೆ.ಆರ್.ಶೆಟ್ಟಿ ಹಾಗೂ ಇತರರಿಂದ ನಗರದ ಕದ್ರಿ ಪಾರ್ಕ್ ನ ಅಭಿವೃದ್ದಿ ಕಾರ್ಯಕ್ರಮಗಳು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸುವಂತೆ ನೀಡಿರುವ ಮನವಿಗೆ ಸ್ಪಂದಿಸಿದ ಶಾಸಕ ಜೆ.ಆರ್.ಲೋಬೊ ಪಾರ್ಕ್ ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜತೆ ಪಾರ್ಕ್ ಗೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗೆಗೆ ಹಾಗೂ ಅಭಿವೃದ್ದಿ ಕಾರ್ಯಗಳ ಬಗೆಗೆ ಮಂಗಳವಾರ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಡಾ.ಕೆ.ಆರ್.ಶೆಟ್ಟಿ ಇತರ ಸ್ನೇಹಿತರೊಂದಿಗೆ ಸೇರಿಕೊಂಡು ಕದ್ರಿ ಪಾರ್ಕ್ ನ ಅಭಿವೃದ್ದಿ ಕಾರ್ಯಗಳ ಬಗೆಗೆ […]

ನೌಶಿದಾ ಅಪಹರಣ ಕಟ್ಟುಕಥೆ : ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ

Tuesday, October 1st, 2013
Noushida Kidnap

ಪುತ್ತೂರು : ಮಾಡಾವು ಕೈಕಂಬ ನಿವಾಸಿ ನೌಶಿದಾಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿದ್ದೇನೆ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ. ಅಪಹರಣದ ನಾಟಕ ಮಾಡುವ ಮೂಲಕ ಸಮಾಜದಲ್ಲಿ ಗೊಂದಲ ಉಂಟುಮಾಡಿ ಪುತ್ತೂರಿನಲ್ಲಿ ಕೋಮು ದ್ವೆಶದ ಪರಿಸ್ಥಿತಿ ಉಂಟಾಗಿತ್ತು ಎಂದು ಅವರು ಹೇಳಿದರು. ನೌಶಿದಾ ತನ್ನನ್ನು ಅಪಹರಣ ಮಾಡಲಾಗಿದೆ ಎಂಬ ಕಟ್ಟುಕಥೆಯಿಂದ ಪುತ್ತೂರಿನಲ್ಲಿ ಶಾಂತಿಯನ್ನು ಕದಡುವ ಪ್ರಯತ್ನ ನಡೆದಿತ್ತು. ಮುಂದೆ ಇಂತಹ ನಕಲಿ ಪ್ರಕರಣಗಳು ನಡೆಯಬಾರದು. ಈ ರೀತಿಯ ಮೋಸಗಳನ್ನು […]