ಡಿ.ಸಿ. ಆಪೀಸ್ ಬಳಿ ಡಾ. ನರೇಂದ್ರ ದಾಬೊಲ್ಕರ್ ಹತ್ಯೆ ಖಂಡಿಸಿ ಪ್ರತಿಭಟನೆ

Tuesday, August 27th, 2013
Narenra Dabolkar Murder

ಮಂಗಳೂರು : ಡಾ. ನರೇಂದ್ರ ದಾಬೊಲ್ಕರ್ ಹಂತಕರನ್ನು ಶೀಘ್ರವಾಗಿ ಬಂಧಿಸಬೇಕೆಂದು ಮಂಗಳೂರಿನ ವಿಚಾರವಾದಿ ಸಂಘಟನೆಯ ವತಿಯಿಂದ ನಗರದ ಡಿ.ಸಿ. ಆಪೀಸ್ ಬಳಿ ಆಗಸ್ಟ್ 26ರಂದು ಪ್ರತಿಭಟನೆ ನಡೆಯಿತು. ವಿಚಾರವಾದಿ ಡಾ. ನರೇಂದ್ರ ದಾಬೊಲ್ಕರ್ ಅವರ ತೀವ್ರ ವಿಚಾರಗಳನ್ನು ಸಹಿಸದ ಕೆಲವು ವ್ಯಕ್ತಿಗಳು ಅವರನ್ನು ಮುಗಿಸಿದ್ದಾರೆ, ಆದರೆ ಅವರ ವಿಚಾರಗಳನ್ನು ಎಂದಿಗೂ ಹತ್ಯೆ ಮಾಡಲು ಸಾಧ್ಯವಿಲ್ಲ. ಜನರ ಮೂಡನಂಬಿಕೆಗಳು ತೊಲಗಬೇಕು, ವೈಜ್ಞಾನಿಕ ಮನೋಭಾವ ಬೆಳೆಯಬೇಕೆಂದು ವಿಚಾರವಾದಿ ಸಂಘಟನೆಯ ಮುಖಂಡರಾದ ನರೇಂದ್ರ ನಾಯಕ್ ತಿಳಿಸಿದರು. ನಮ್ಮ ಕೊನೆಯ ಶ್ವಾಸ ಇರುವವರೆಗೆ […]

ನಗರದ ಹೊಟೇಲ್‌ಗಳಲ್ಲಿ ವಿಪರೀತ ಬೆಲೆ ಏರಿಕೆ, ಜಿಲ್ಲಾ ದಿವೈಎಫ್ಐ ಸಮಿತಿ ವತಿಯಿಂದ ಪ್ರತಿಭಟನೆ

Monday, August 26th, 2013
dyfi protest

ಮಂಗಳೂರು : ದ.ಕ  ಜಿಲ್ಲಾ ದಿವೈಎಫ್ಐ ಸಮಿತಿ ವತಿಯಿಂದ  ಹೊಟೇಲ್‌ ಗಳಲ್ಲಿ ಆಹಾರ, ಪಾನೀಯಗಳ ಬೆಲೆಗಳ ಬೆಲೆ ನಿಯಂತ್ರಿಸಲು  ಏಕರೂಪದ ದರ ಪದ್ಧತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಸೋಮವಾರ  ನಗರದ ಜಿಲ್ಲಾಧಿಕಾರಿ ಕಚೇರಿಯ ಸಮೀಪದ ಹೊಟೇಲ್‌ಗಳ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ , ಹೊಟೇಲ್, ಉಪಹಾರ ಗೃಹಗಳಲ್ಲಿ  ಆಹಾರ, ಪಾನೀಯಗಳ ಬೆಲೆ ವಿಪರೀತ ಏರಿಕೆಯಿಂದಾಗಿ ಮದ್ಯಮ ವರ್ಗದ ಜನರು ಕಷ್ಟಪದುವಂತಾಗಿದೆ. ಜಿಲ್ಲಾಡಳಿತ  ಹೊಟೇಲ್, ಬೆಲೆಗಳನ್ನು  ನಿಯಂತ್ರಣ ಮಾಡಿ , ಏಕರೂಪದ […]

ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮ

Monday, August 26th, 2013
Sathya Narayana Pooja

ಸಿದ್ಧಕಟ್ಟೆ : ಕುಲಾಲ ಯಾನೆ ಕುಂಬಾರರ ಸಮಾಜ ಸೇವಾ ಸಂಘದ ವತಿಯಿಂದ ಆಗಸ್ಟ್ 25 ರಂದು ಸಿದ್ಧಕಟ್ಟೆ ಹೊಕ್ಕಾಡಿಗೋಳಿಯ ಶ್ರೀ ಕಟೀಲೇಶ್ವರೀ ಹೋಲೋ ಬ್ಲಾಕ್ನ ಸಭಾಂಗಣದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯು ಜರುಗಿತು. ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನಾ ಭಾಷಣವನ್ನು ಮಾಡಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಮೂಲ್ಯರ ಯಾನೆ  ಕುಲಾಲರ ಸಂಘದ ಅಧ್ಯಕ್ಷರಾದ ಗಜಾನಂದ ತಾರೆತೋಟ ನೆರವೇರಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕುಂಬಾರರ […]

15 ಹರೆಯದ ಬುದ್ಧಿ ಮಾಂಧ್ಯ ಯುವತಿಯ ಅತ್ಯಾಚಾರಗೈದ ಕೂಲಿ ಕಾರ್ಮಿಕ

Saturday, August 24th, 2013
moodabidire-rape-case

ಮೂಡುಬಿದರೆ: ಅಪ್ರಾಪ್ತ ಬುದ್ಧಿ ಮಾಂಧ್ಯ ಯುವತಿಯ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭವತಿಯನ್ನಾಗಿ ಮಾಢಿದ ಕೂಲಿ ಕಾರ್ಮಿಕನೊಬ್ಬನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕುಪ್ಪೆಪದವು ಗ್ರಾಮದ ಕಲ್ಲಾಡಿ ಜಾರಿಗೆಕಟ್ಟೆಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ. ಕುಪ್ಪೆಪದವು-ಇರುವೈಲು ಗಡಿಭಾಗದಲ್ಲಿರುವ ಕಲ್ಲಾಡಿ ಜಾರಿಗೆಕಟ್ಟೆಯ ನಿವಾಸಿ, ಕಲ್ಲಾಡಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷನಾಗಿದ್ದ ಕೂಲಿ ಕಾರ್ಮಿಕ ದಲಿತ ವ್ಯಕ್ತಿ ಸುಂದರ್(55) ಎಂಬಾತ ತನ್ನ ಪಕ್ಕದಮನೆಯ 15 ಹರೆಯದ ಬುದ್ಧಿಮಾಂದ್ಯ ಹುಡುಗಿಯನ್ನು ತನ್ನ ಲೈಂಗಿಕ ತೃಷೆಗೆ ಬಳಸಿದ್ದಾನೆ. ಆರೋಪಿಗೆ ಮೂವರು […]

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳು ಸುಸ್ಥಿತಿಯಲ್ಲಿ- ಎಂ.ಶಿವಣ್ಣ

Saturday, August 24th, 2013
dalit

ಮಂಗಳೂರು  :  ಇತರೆ ರಾಜ್ಯಗಳು ಹಾಗೂ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸುತ್ತಿರುವ ಹಾಸ್ಟೆಲ್ ಗಳು  ಅತ್ಯುತ್ತಮವಾಗಿವೆಯೆಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯರಾದ ಮಾನ್ಯ ಶ್ರೀ ಎಂ.ಶಿವಣ್ಣ ಅವರು ತಮ್ಮ ಅಭಿಪ್ರಾಯ ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಸಂವಿಧಾನಾತ್ಮಕವಾಗಿ ವಿವಿಧ ಇಲಾಖೆಗಳ ಮುಖೇನ ನೀಡಲಾಗಿರುವ ವಿವಿಧ ಸವಲತ್ತುಗಳ ಅನುಷ್ಟಾನ ಪ್ರಗತಿ ಪರಿಶೀಲನೆ ನಡೆಸಿ ತಮ್ಮ ಅಭಿಪ್ರಾಯ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 32 ವಿದ್ಯಾರ್ಥಿ ನಿಲಯಗಳು ಸಮಾಜ […]

ನಾರಾಯಣ ಗುರು ಕಾಲೇಜಿನಲ್ಲಿ ನಾರಾಯಣ ಗುರುಗಳ 159 ನೇ ಜನ್ಮದಿನಾಚರಣೆ

Thursday, August 22nd, 2013
Narayana Guru 159th birth anniversary

ಮಂಗಳೂರು : ನಾರಾಯಣ ಗುರುಗಳ 15೯ನೇ ಜನ್ಮದಿನಾಚರಣೆಯನ್ನು ನಗರದ ನಾರಾಯಣ ಗುರು ಕಾಲೇಜಿನ ಸಭಾಂಗಣದಲ್ಲಿ ಅಖಿಲ ಬಾರತ ಬಿಲ್ಲವರ ಒಕ್ಕೂಟ ಮತ್ತು ನಾರಾಯಣ ಗುರು ಶೈಕ್ಷಣಿಕ ಸಂಸ್ಥೆಯ ಸಹಯೋಗದೊಂದಿಗೆ ಗುರುವಾರ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಜೆ.ಆರ್.ಲೊಬೋ ದೀಪಬೆಳಗಿಸುವ ಮೂಲಕ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲಾ ವರ್ಗದವರು ದೇವಸ್ಥಾನದ ಮೆಟ್ಟಲೇರುವಂತೆ ಮಾಡಿದವರು ನಾರಾಯಣ ಗುರುಗಳು. ಸಾಮಾದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಸಾಮಾಜಿಕವಾಗಿ ಅನೇಕ ಕಾರ್ಯವನ್ನು ಮಾಡಿದ್ದಾರೆ. ಅವರು ಮಾನವಕುಲಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ಜನರು […]

`ನಿರ್ಮಲ ಮಂಗಳೂರು ಅಭಿಯಾನಕ್ಕೆ’ ಶಾಸಕ ಜೆ.ಆರ್.ಲೊಬೋ ಅವರಿಂದ ಚಾಲನೆ

Thursday, August 22nd, 2013
Green Mangalore

ಮಂಗಳೂರು : ಶಿವಭಾಗ್ ಪಬ್ಲಿಕ್ ವೆಲ್ಫೆರ್ ಸೊಸೈಟಿ ವತಿಯಿಂದ ಮಂಗಳೂರು ಕ್ಲೀನ್ ಆಂಡ್ ಗ್ರೀನ್ ಕ್ಯಾಂಪೇನ್ ಕಾರ್ಯಕ್ರಮವಾದ `ನಿರ್ಮಲ ಮಂಗಳೂರು ಅಭಿಯಾನಕ್ಕೆ ಗುರುವಾರ ಶಾಸಕ ಜೆ.ಆರ್.ಲೊಬೋ ಚಾಲನೆ ನೀಡಿದರು. ಬಳಿಕ ಮಾತನಾಡಿದ ಲೊಬೋ ಮನೆ, ಅಂಗಳ ಹಾಗೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳಬೇಕು. ಪ್ಲಾಸ್ಟಿಕ್ ಅಂತಹ ತಾಜ್ಯಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಜೈವಿಕ ತಾಜ್ಯಗಳನ್ನು ರಸಗೊಬ್ಬರಗಳಾಗಿ ಪರಿವರ್ತಿಸಬಹುದು. ಇದರಿಂದ ಪಚ್ಚನಾಡಿಯಲ್ಲಿ ಶೇಖರಣೆಯಾಗುವ ಕಸಗಳ ರಾಶಿಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಮಾಡಬಹುದು. ಸಾರ್ವಜನಿಕರ ಸಹಕಾರದಿಂದ ಮಾತ್ರ ನಗರವನ್ನು […]

ಅಕ್ರಮ ಗ್ಯಾಸ್ ತುಂಬಿಸುವ ಮನೆ ಪತ್ತೆ.17 ಗ್ಯಾಸ್ ಸಿಲಿಂಡರ್‌ ವಶ

Thursday, August 22nd, 2013
Gas house

ಮಂಗಳೂರು : ಮಂಗಳೂರು ತಹಶೀಲ್ದಾರ್ ಲಂಬಾಣಿ ನೇತೃತ್ವದಲ್ಲಿ ಕಂಕನಾಡಿ ಕುದ್ಕೋರಿಗುಡ್ಡೆಯ ಮನೆಯೊಂದಕ್ಕೆ ದಾಳಿ ನಡೆಸಿ ಅಕ್ರಮ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ 17 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕುದ್ಕೋರಿಗುಡ್ಡೆಯ ರಾಧಾಕೃಷ್ಣ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್ ದಾಳಿ ನಡೆಸದಾಗ ಆತನ ಮನೆಯಲ್ಲಿ 3 ಗೃಹ ಬಳಕೆಯ ಸಿಲಿಂಡರ್, 4 ವಾಣಿಜ್ಯ ಬಳಕೆಯ ಸಿಲಿಂಡರ್ ಮತ್ತು 10 ಕಿಟ್‌ಗಳನ್ನು ಪತ್ತೆ ಪತ್ತೆಯಾಗಿದೆ. ಈತ ತನ್ನ ಮನೆಯಲ್ಲಿ ಅಕ್ರಮವಾಗಿ ಆಟೋ ಸಿಲಿಂಡರ್‌ಗಳಿಗೆ ಗ್ಯಾಸ್‌ನ್ನು […]

ರೈತರ ಸಮಸ್ಯೆಗಳನ್ನು ಅವಲೋಕನ ಮಾಡಲು ಸೆ.25ರಂದು ಶಿವಮೊಗ್ಗದಲ್ಲಿ ಸಭೆ

Thursday, August 22nd, 2013
Nagaraja shetty

ಮಂಗಳೂರು :  ರಾಜ್ಯದಲ್ಲಿ ನಿರಂತರವಾಗಿ  ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೃಷಿಗೆ ಮದ್ದು ಸಿಂಪಡಿಸಲು ಸಾಧ್ಯವಾಗದೇ ಇದ್ದು ಸುಮಾರು ೫೦% ರಷ್ಟು ಕೊಳೆರೋಗ ತಗುಲಿದ್ದು, ಬೆಳೆದ ಅಡಿಕೆಗಳು ಉದುರಿ ಹೊಗಿವೆ. ಕೃಷಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು ಕೋಟಿಗಟ್ಟಲೆ ನಷ್ಟ ಅನುಭವಿಸಿದ್ದಾರೆ. ರೈತರ ನಷ್ಟಕ್ಕೆ ಸರಕಾರದ ಸಹಕಾರ ಅಗತ್ಯವಾಗಿದೆ ಎಂದು ಬಿಜೆಪಿ ಚುನಾವಣೆ ಸಮಿತಿ ಅಧ್ಯಕ್ಷ ನಾಗರಾಜ್ ಶೆಟ್ಟಿ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಮಾಜಿ ಮುಖ್ಯ ಮಂತ್ರಿ ಸದಾನಂದ ಗೌಡ, ಈಶ್ವರಪ್ಪ, ಹಾಗೂ […]

ದೇಶದಲ್ಲೆಡೆ ಸಹೋದರ ಭಾಂಧವ್ಯದ ರಕ್ಷಾ ಬಂಧನ ಆಚರಣೆ

Tuesday, August 20th, 2013
raksha-bandhan

ಮಂಗಳೂರು ;  ಅಕ್ಕತಂಗಿಯರು ತಮ್ಮ ನೆಚ್ಚಿನ ಅಣ್ಣ ತಮ್ಮಂದಿರುಗಳ ಕೈಗೆ ರಕ್ಷಾ ಬಂಧನ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಪ್ರತಿವರ್ಷ ನೂಲು ಹುಣ್ಣಿಮೆಯಂದು ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳು ತವರಿಗೆ ಬಂದು ತಮ್ಮ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. ಬಲಗೈಗೆ ರಾಖಿ ಕಟ್ಟಿ ಆರತಿ ಬೆಳಗುತ್ತಾರೆ. ಹಳ್ಳಿ ಸಂಪ್ರದಾಯದಂತೆ ಒಂದು ಕಟ್ಟಿಗೆಯ ಮಣೆಯ ಮೇಲೆ ಸಹೋದರರನ್ನು ಕುಳ್ಳರಿಸುತ್ತಾರೆ. ನಂತರ ಹಣೆ ತೊಳೆದು ವಿಭೂತಿ, ಕುಂಕುಮದ ತಿಲಕವನ್ನಿಡುತ್ತಾರೆ. ನಮ್ಮನ್ನು ಕಷ್ಟದಲ್ಲಿ ಪೊರೆಯುತ್ತಾ ಬಂದ ಸಹೋದರರು ಬಾಳೆಲ್ಲಾ ನಗುನಗುತಿರಲಿ ಎಂದು […]