ನಿಡ್ಡೋಡಿಯಲ್ಲಿ ಕಾಂಗ್ರೆಸ್ ನ ಪ್ರತಿನಿಧಿಗಳನ್ನು ಚಪ್ಪಲಿ ಹಾಗೂ ಹಿಡಿಸೂಡಿ ಹಿಡಿದು ಓಡಿಸಿದ ಸ್ಟಳೀಯರು

Tuesday, July 30th, 2013
Niddodi villagers

ಮಂಗಳೂರು: ನಿಡ್ಡೋಡಿಯಲ್ಲಿ ಬೃಹತ್ ಮಟ್ಟದ ಉಷ್ಣವಿದ್ಯುತ್ ಸ್ಥಾವರದ ಉದ್ದೇಶಿತ  ಪ್ರದೇಶಕ್ಕೆ ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರು ಸೋಮವಾರ ಬೆಳಿಗ್ಗೆ  ಹೋಗಿದ್ದರು. ಸ್ಥಾವರ ಸ್ಥಾಪನೆಯ ಬಗ್ಗೆ ಜನರಿಗೆ ವಿವರಿಸಲು ಹೋಗಿದ್ದ ಕಾಂಗ್ರೆಸ್ ನ ಪ್ರತಿನಿಧಿಗಳನ್ನು  ಚಪ್ಪಲಿ ಹಾಗೂ ಹಿಡಿಸೂಡಿಯನ್ನು ಹಿಡಿದು ಹಿಂದಕ್ಕೆ ಓಡಿಸಿದ ಘಟನೆ ಸೋಮವಾರ ನಡೆಯಿತು. 500ಕ್ಕೂ ಹೆಚ್ಚು ಸ್ಥಳೀಯರು ಸೇರಿ ಬಂದು ಕಾಂಗ್ರೆಸ್ ಪ್ರತಿನಿಧಿಗಳಿಗೆ ದಿಗ್ಭಂದನ ಹಾಕಿ ಘೇರಾವ್ ಹಾಕಿದರು. ಯಾವುದೇ ಪ್ರತಿನಿಧಿಗಳು ಇಲ್ಲಿಗೆ ಬಂದು ವಿವರಣೆ ನೀಡುವುದನ್ನು ನಾವು ಬಯಸುವುದಿಲ್ಲ. ನಿಮ್ಮ ನಾಯಕ ಅಥವಾ ಶಾಸಕನನ್ನು ಇಲ್ಲಿಗೆ ಕಳುಹಿಸಿ. ಅವರಿಗೆ ನಮ್ಮ ಸಮಸ್ಯೆಗಳನ್ನು […]

ಉಡುಪಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ, ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

Tuesday, July 30th, 2013
udupi rape accused

ಉಡುಪಿ : ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಯೋಗೇಶ, ಹರಿಪ್ರಸಾದ್ ಮತ್ತು ಆನಂದನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಿಗೆ ನ್ಯಾಯಾಧೀಶರು ಆಗಸ್ಟ್ 12 ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ. ಈ ಮೂವರೂ ಆರೋಪಿಗಳನ್ನು  ಜುಲೈ 15 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲಿ ನ್ಯಾಯಾಧೀಶರ ತೀರ್ಪಿನಂತೆ ಜುಲೈ 29 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು . ಕಾನೂನಿನಂತೆ ಆರೋಪಿಗಳನ್ನು ಪ್ರತೀ 15 ದಿವಸಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ನ್ಯಾಯಾಧೀಶರು ಸೂಚಿಸುತ್ತಾರೆ. ಅವರನ್ನು ಇಂದು ಈ […]

ಚಲ್ಲಾಪಿಲ್ಲಿ ಚಿತ್ರದ 25ನೇ ದಿನ: ರೋಡ್ ಶೋ ನಲ್ಲಿ ವಿಜಯ ರಾಘವೇಂದ್ರ, ಐಶ್ವರ್ಯನಾಗ್

Tuesday, July 30th, 2013
Chellapilli 25th day

ಮಂಗಳೂರು :  ಮಂಗಳೂರಿನ ಮಂಗಳ ಕ್ರಿಡಾಂಗಣದಿಂದ ಜ್ಯೊತಿ ಟಾಕೀಸ್ ತನಕ ಚಲ್ಲಾಪಿಲ್ಲಿ ಚಿತ್ರದ 25ನೇ ದಿನದ ರೋಡ್ ಶೋ ಜುಲೈ 29 ಸೋಮವಾರ ನಡೆಯಿತು. ಈ ರೋಡ್ ಶೋನಲ್ಲಿ ನಾಯಕ ನಟ ವಿಜಯ ರಾಘವೇಂದ್ರ ಮತ್ತು ನಟಿ ಐಶ್ವರ್ಯನಾಗ್ ಸಹಿತ ಚಿತ್ರ ತಂಡದ ನಟರು ಭಾಗವಹಿಸಿದರು. ರೋಡ್ ಶೋನಲ್ಲಿ ಅಭಿಮಾನಿಗಳ ಮಹಾಪುರವೇ ನೆರೆದಿತ್ತು, ಉತ್ಸಾಹಿ ಅಭಿಮಾನಿಗಳು ಬೈಕ್ ಮೂಲಕ ರ್ರ್ಯಾಲಿ ನಡೆಸಿದರು. ನಂತರ ನಟ ವಿಜಯ ರಾಘವೇಂದ್ರ ಮತ್ತು ನಟಿ ಐಶ್ವರ್ಯನಾಗ್ ಜ್ಯೊತಿ ಟಾಕೀಸ್ ನಲ್ಲಿ ಅಭಿಮಾನಿಗಳೊಂದಿಗೆ ಚಿತ್ರ […]

ತಣ್ಣೀರು ಬಾವಿ ಪ್ರದೇಶದ ಬಡ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಪ್ರತಿಭಟನೆ

Monday, July 29th, 2013
CPIM Dalita Samiti

ಮಂಗಳೂರು : ತಣ್ಣೀರು ಬಾವಿ ಪ್ರದೇಶದ ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮತ್ತು ವಲಯ ವಿಂಗಡನೆಯ ಸರ್ವೇ ಇದುವರೆಗೆ ಮಾಡದಿರುವುದನ್ನು ವಿರೋಧಿಸಿ ಇಂದು ಬೆಳಿಗ್ಗೆ ದಲಿತ ಹಕ್ಕುಗಳ ಸಮಿತಿ ದ.ಕ.ಜಿಲ್ಲೆ ಇದರ ವತಿಯಿಂದ ಜಿಲ್ಲಾಧಿಕಾರಿ ಕಛೇರಿಯ ಗೇಟಿನ ಬಳಿ ಜುಲೈ 29 ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣಪ್ಪ ಕೊಂಚಾಡಿ ಅವರು ಕಳೆದ 80 ವರ್ಷಗಳಿಂದ ವಾಸವಾಗಿರುವ ತಣ್ಣೀರು ಬಾವಿಯ ಪ್ರದೇಶದ 300 ಬಡ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡುವರೇ ದಲಿತ […]

ನಗರದ ಪುರಭವನದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಜಾಗೃತಿ ಕಾರ್ಯಕ್ರಮ

Monday, July 29th, 2013
Maleria Dengue

ಮಂಗಳೂರು : ಹೆಲ್ತ್  ಕನ್ಸೆರ್ನ್ ಪೌಂಡೇಶನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮವು ಜುಲೈ17 ರಂದು ಪುರಭವನದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಎಂಎಲ್ ಸಿ ಗಣೇಶ್ ಕಾರ್ಣಿಕ್ ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಕಾರ್ಣಿಕ್ ಅವರು ರೋಗಗಳ ಬಗ್ಗೆ ಜನರಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಬಗ್ಗೆ ಅರಿವು ಮೂಡಿಸಬೇಕು. ನಗರಗಳಲ್ಲಿ ಚರಂಡಿ ಮತ್ತು ಮನೆಯ ಆವರಣದಲ್ಲಿ ಕೊಳಕು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಮಲೇರಿಯಾ ಮತ್ತು ಡೆಂಗ್ಯೂವಿನಂತಹ ರೋಗಗಳ […]

ಸಚಿವ ಯು.ಟಿ. ಖಾದರ್‌ ಲೇಡಿಗೋಷನ್‌ ಆಸ್ಪತ್ರೆಗೆ ಭೇಟಿ

Sunday, July 28th, 2013
Ut khader

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಶನಿವಾರ ಲೇಡಿಗೋಷನ್‌ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಲೇಡಿಗೋಶನ್‌ ಸರಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ 260 ಹಾಸಿಗೆಗಳಿದ್ದು, ಅದಕ್ಕೆ 100 ಹಾಸಿಗೆಗಳನ್ನು ಸೇರಿಸಲಾಗುವುದು, ಈ ಯೋಜನೆಗಾಗಿ ಎನ್‌ಆರ್‌ಎಚ್‌ಎಂ ಯೋಜನೆಯಲ್ಲಿ ಕೆಎಚ್‌ಎಸ್‌ಡಿಆರ್‌ಪಿ ಅಡಿಯಲ್ಲಿ 10.46 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಮುಂದಿನ ಹಂತದಲ್ಲಿ ಇದನ್ನು 500 ಹಾಸಿಗೆಗ‌ಳ ಸುಸಜ್ಜಿತ ಮಾದರಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಎಂಆರ್‌ಪಿಎಲ್‌ ವತಿಯಿಂದ ಹಮ್ಮಿಕೊಂಡಿರುವ ಕಾಮಗಾರಿಯ […]

ಪಡೀಲ್‌ ಹೋಂ ಸ್ಟೇ ದಾಳಿ ಪ್ರಕರಣಕ್ಕೆ 1 ವರ್ಷ,ಒಟ್ಟು 35 ಮಂದಿ ಜಾಮೀನಿನಲ್ಲಿ ಬಿಡುಗಡೆ

Sunday, July 28th, 2013
Homestay one year

ಮಂಗಳೂರು: ಪಡೀಲ್‌ ಹೋಂ ಸ್ಟೇ ದಾಳಿ ಪ್ರಕರಣಕ್ಕೆ 1 ವರ್ಷವಾಗಿದ್ದು, 2012 ಜುಲೈ 28 ರಂದು ಶನಿವಾರ ಮಧ್ಯಾಹ್ನ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ ಅಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣದಲ್ಲಿ 44 ಮಂದಿ ಆರೋಪಿಗಳ ಪೈಕಿ 38 ಮಂದಿಯನ್ನು ಬಂಧಿಸಲಾಗಿದ್ದು, 6 ಮಂದಿ ಇನ್ನೂ ತಲೆ ಮರೆಸಿಕೊಂಡಿದ್ದಾರೆ. ಬಂಧಿತ 38 ಮಂದಿಯಲ್ಲಿ ಮೂವರನ್ನು ಹೊರತು ಪಡಿಸಿ ಉಳಿದ 35 ಮಂದಿ ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದಾರೆ. ಇದೇ ಜು. 21 […]

ಯುವ ನ್ಯಾಯವಾದಿ, ಕಮ್ಯೂನಿಸ್ಟ್ ಮುಖಂಡ ಸತೀಶ್ ಕುಮಾರ್ ಬಂಟ್ವಾಳ್ ನಿಧನ

Sunday, July 28th, 2013
satish bantwal

ಬಂಟ್ವಾಳ :  ಯುವ ನ್ಯಾಯವಾದಿ, ಕಮ್ಯೂನಿಸ್ಟ್ ಮುಖಂಡ ಸತೀಶ್ ಕುಮಾರ್ ಬಂಟ್ವಾಳ್ (35) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ನಿಧನ ಹೊಂದಿದರು. ಕೆಲವು ದಿನಗಳ ಹಿಂದೆ ಮೆದುಳಿನ ರಕ್ತಸ್ರಾವ ಕ್ಕೆ ತುತ್ತಾಗಿದ್ದ ಸತೀಶ್ ಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.  ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮೃತರು ಎಐಟಿಯುಸಿ ಜಿಲ್ಲಾಧ್ಯಕ್ಷ ಪಿ.ಸಂಜೀವ ಅವರ ಪುತ್ರರಾಗಿದ್ದು, ತಂದೆ, ತಾಯಿ, ಪತ್ನಿ, ಮಗು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. […]

ಬಿಎಸ್ಸ್ ಡಬ್ಲ್ಯೂನಲ್ಲಿ ಕಲಿಯುತ್ತಿರುವ ದಲಿತ ವಿದ್ಯಾರ್ಥಿನಿಯನ್ನು ಕಾಡೋಂಮ್ ಹಾಕಿ ರೇಪ್ ಮಾಡಿದ ಕಾರು ಚಾಲಕ

Saturday, July 27th, 2013
Prasanth Shetty

ಮಂಗಳೂರು: ಕಾರ್ ಡ್ರೈವರ್ ಒಬ್ಬ ರೋಶನಿ ನಿಲಯದ ಬಿಎಸ್ಸ್ ಡಬ್ಲ್ಯೂನಲ್ಲಿ ಕಲಿಯುತ್ತಿರುವ ದಲಿತ ವಿದ್ಯಾರ್ಥಿನಿಯೋರ್ವಳನ್ನು ತನ್ನ ಮನೆಗೆ ಕರೆಸಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ ಹಾಕಿದ ಘಟನೆ ನೀರುಮಾರ್ಗದ ಪಾಲ್ದಾನೆಯಲ್ಲಿ ನಡೆದಿದೆ. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ತನಗಾದ ನೋವನ್ನು ತನ್ನ ತಾಯಿಯಲ್ಲಿ ಹೇಳಿದ್ದಳು. ತಾಯಿ ತನ್ನ ಮಗಳೊಂದಿಗೆ ಕಂಕನಾಡಿ ಗ್ರಾಮಾಂತರ ಠಾಣೆಗೆ ಜುಲೈ 25ರಂದು ಘಟನೆಯ ಬಗ್ಗೆ ದೂರು ನೀಡಿದರು. ಪ್ರಶಾಂತ್ ಶೆಟ್ಟಿ (30)ಅತ್ಯಾಚಾರ ನಡೆಸಿದ ವ್ಯಕ್ತಿ. ಎರಡು ತಿಂಗಳುಗಳಿಂದ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ, ಈತನಿಗೆ ಮದುವೆಯಾಗಿದ್ದು, 2 […]

ಗರೋಡಿಯ ಮನೆಯೊಂದರಲ್ಲಿ ಅಕ್ರಮವಾಗಿ ಗ್ಯಾಸ್ ತುಂಬುವ ಘಟಕ ಪತ್ತೆ

Friday, July 26th, 2013
Illigal Gas Fill

ಮಂಗಳೂರು: ಗರೋಡಿಯಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದ ತಹಶೀಲ್ದಾರ್ ಮತ್ತು ಗ್ರಾಮಾಂತರ ಪೊಲೀಸರು, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ತುಂಬಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ತಾರನಾಥ(50) ಬಂಧಿತ ವ್ಯಕ್ತಿಯಾಗಿದ್ದು ಈತ ಗ್ಯಾಸ್ ಸಿಲಿಂಡರ್ ಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದ ಎಂದು  ಪೊಲೀಸರು ತಿಳಿಸಿದ್ದಾರೆ. ಆತನ ಮನೆಯಿಂದ 15.6 ಕೆ.ಜಿ.ಯ 16 ಸಿಲಿಂಡರ್ ಮತ್ತು 14.2 ಕೆ.ಜಿಯ 22 ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರು ಎಚ್ ಪಿ ಮೋಟರ್, ತೂಕಯಂತ್ರ ಮತ್ತು ಐದು ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ. […]