ನಗರದ ಹಂಪನಕಟ್ಟೆಯ ಕಟ್ಟಡ ಕುಸಿತ ಇಬ್ಬರಿಗೆ ಗಾಯ

Tuesday, June 4th, 2013
Building collapses at hampanka

ಮಂಗಳೂರು : ರವಿವಾರ ಒಂದೇ ಸಮನೆ ಸುರಿದ ಮಳೆಯಿಂದಾಗಿ ಶಿಥಿಲಗೊಂಡ ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿಯಿರುವ ಕಟ್ಟಡದ ಮೇಲಂತಸ್ಥಿನ ಮಳಿಗೆಯ ಮುಂಭಾಗ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ. ಸೋಮವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು ಘಟನೆಯಿಂದ ಜಾನ್(62) ಹಾಗು ಪವನ್ ಕುಮಾರ್ ಎಂಬಿಬ್ಬರು ಗಾಯಗೊಂಡಿದ್ದು, ಇವರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದಾಗಿ ಜಾನ್ ರ ಕಾಲಿನ ಮೂಳೆ ಮುರಿದಿದ್ದು, ಪವನ್ ಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಸಿದ ಕಟ್ಟಡವು ಬಹಳಷ್ಟು ಹಳೆಯದಾಗಿದ್ದು, […]

ಸುಳ್ಯ : ಆಲೆಟ್ಟಿ ಸರ್ಕಾರಿ ಪ್ರೌಢಶಾಲೆಯ ಆರು ಮಂದಿ ಶಿಕ್ಷಕಕರ ಅಮಾನತು

Tuesday, June 4th, 2013
teachers suspended Sullia

ಸುಳ್ಯ : ಸುಳ್ಯ ತಾಲೂಕಿನ ಆಲೆಟ್ಟಿ ಸರ್ಕಾರಿ ಪ್ರೌಢಶಾಲೆಯ ಆರು ಮಂದಿ ಶಿಕ್ಷಕಕರು ಹಾಗು ಶಾಲೆಯ ದ್ವಿತೀಯ ದರ್ಜೆ ಸಹಾಯಕರು  ಸೇರಿದಂತೆ  ಒಟ್ಟು ಏಳು ಮಂದಿಯನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ ಅಮಾನತು ಮಾಡುವ  ಆದೇಶ ಹೊರಡಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಕೆ.ಸಂಧ್ಯಾ, ಸಹಶಿಕ್ಷಕರುಗಳಾದ ಕೆ.ಎಸ್.ಚಂದ್ರಶೇಖರ, ಕೆ.ಹರಿಪ್ರಸಾದ, ವಿ.ಸುಬ್ರಹ್ಮಣ್ಯ, ಎನ್.ಶಿವಕುಮಾರ್, ಕೆ. ಚಂದ್ರಮತಿ ಹಾಗು ದ್ವಿತೀಯ ದರ್ಜೆ ಸಹಾಯಕ ಯೋಗೀಶ್ ಭರತ್ ಅಮಾನತುಗೊಂಡವರಾಗಿದ್ದಾರೆ. ಈ ಹಿಂದೆಯೇ ವಿದ್ಯಾರ್ಥಿ ಪೋಷಕರು ಸೇರಿದಂತೆ ಸಾರ್ವಜನಿಕರಿಂದ ಶಾಲೆಯಲ್ಲಿನ ಕರ್ತವ್ಯಲೋಪ, ಹಣಕಾಸು […]

ಪುತ್ತೂರು : ಬಸ್ ಜೀಪ್ ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ

Monday, June 3rd, 2013
puttur Accident

ಪುತ್ತೂರು : ರವಿವಾರ ಸಂಜೆ ಪುತ್ತೂರು ಸುಳ್ಯ ಹೆದ್ದಾರಿಯ ಸಂಟ್ಯಾರು ಎಂಬಲ್ಲಿ ಕೆ ಎಸ್ ಆರ್ ಟಿಸಿ ಮತ್ತು ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಂಟುಂಬದ ನಾಲ್ವರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಪುತ್ತೂರಿನ ಬೈಪಾಸ್ ತೆಂಕಿಲ ನಿವಾಸಿ ಹಾಗೂ ಪುರಸಭಾ ಸದಸ್ಯೆ ಲೀನಾ ಮಸ್ಕರೇನ್ಜಸ್(46), ಆಕೆಯ ಪತಿ ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯ ಸಿಬ್ಬಂಧಿ ಪೀಟರ್ ಮಸ್ಕರೇನ್ಜಸ್(50), ಪುತ್ರ ಪ್ರಿತೇಶ್ ಮಸ್ಕರೇನ್ಜಸ್ (13) ಮತ್ತು ಪೀಟರ್ ಮಸ್ಕರೇನ್ಜಸ್ ರ ಸಹೋದರ […]

ನಾಟೆಕಲ್ ಬಳಿ ಉರುಳಿ ಬಿದ್ದ ಸಿಮೆಂಟ್ ಮಿಕ್ಸರ್ ವಾಹನ, ಅಪಾಯದಿಂದ ಪಾರಾದ ಚಾಲಕ

Thursday, May 30th, 2013
Cement mixer truck accident near Natikal

ಮಂಗಳೂರು : ಗುರುವಾರ ಬೆಳಗಿನ ಜಾವ ಮಂಗಳೂರಿನಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ನಗರದ ಹೊರವಲಯದ ನಾಟೆಕಲ್ ಬಳಿ ಸಂಭವಿಸಿದೆ. ಗುರುವಾರ ಬೆಳಗ್ಗೆ ಸುಮಾರು 2.30 ರ ವೇಳೆಗೆ ಕಾಂಕ್ರೀಟ್ ಮಿಕ್ಸರ್ ವಾಹನವು ಮಂಗಳೂರಿನಿಂದ ಮುಡಿಪು ಬಳಿ ಇರುವ ಇನ್ಫೋಸಿಸ್ ಕಡೆಗೆ ತೆರಳುತ್ತಿದ್ದಾಗ ನಾಟೆಕಲ್ ಬಳಿ ಇರುವ ಅಪಾಯಕಾರಿ ತಿರುವಿನಲ್ಲಿ ಚಾಲಕನ  ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಉರುಳಿ ಬಿದ್ದಿದೆ. ಘಟನೆಯಿಂದ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ  […]

ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಆರೋಪಿ, ಸೆರೆ

Thursday, May 30th, 2013
CP Abdul Latif

ಕಾಸರಗೋಡು : ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾದ ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಹೋಗುವಾಗ, ಪೊಲೀಸರ ಕಣ್ತಪ್ಪಿಸಿ ಪರಾರಿಯಾದಾತನನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಚಟ್ಟಂಚಾಲ್ ತೆಕ್ಕಿಲ್ ನ ಸಿ.ಎ.ಅಬ್ದುಲ್ ಲತೀಫ್ (43) ಪರಾರಿಯಾದ ಆರೋಪಿಯಾಗಿದ್ದಾನೆ. ಕಳವು ಪ್ರಕರಣದ ಹಿನ್ನಲೆಯಲ್ಲಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಲತೀಫ್ ನನ್ನು ಪೊಲೀಸರು ಸೋಮವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ವಾಪಾಸ್ ಕಣ್ಣೂರಿಗೆ ಕರೆದುಕೊಂಡು ಹೋಗುವಾಗ ವಿದ್ಯಾನಗರ ಬಸ್ ನಿಲ್ದಾಣದ ಬಳಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು. ಈ ವೇಳೆ ಪರಾರಿಯಾದ […]

ಕೊಟ್ಟಾರ ಸಮೀಪ ಬಂಗ್ರಕೂಳೂರು ಬಳಿ ಸೇತುವೆಗೆ ಡಿಕ್ಕಿ ಹೊಡೆದ ಬಸ್, ತಪ್ಪಿದ ಅನಾಹುತ

Tuesday, May 28th, 2013
bus skids Bangrakulur

ಮಂಗಳೂರು : ಮಂಗಳವಾರ ಹುಬ್ಬಳ್ಳಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕೊಟ್ಟಾರ ಸಮೀಪದ ಬಂಗ್ರಕೂಳೂರು ಬಳಿಯ ಕಿರು ಸೇತುವೆಯ ತಡೆಗೋಡೆಗೆ ಹೊಡೆದು ನಿಂತ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಹೊರಟ ಕೆ.ಎಸ್.ಆರ್.ಟಿ.ಸಿ ಬಸ್ ಮಂಗಳೂರಿನ ಕೂಳೂರು ಸಮೀಪಿಸುತ್ತಿದ್ದಂತೆ ಬಸ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು, ಬಸ್ ನ ಸ್ಟೀರಿಂಗ್ ವ್ಹೀಲ್ ತುಂಡಾಗಿದೆ. ಚಾಲಕ ಬಸ್ ನ್ನು ನಿಧಾನವಾಗಿ ಚಲಾಯಿಸಿಕೊಂಡು ಬಂದರೂ ಬಂಗ್ರಕೂಳೂರು ಸಮೀಪ  ಸುರಿದ ಮಳೆಯಿಂದಾಗಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್  ಕಿರು […]

ಸುಳ್ಯ: ಬೊಳುಬೈಲು ಸಮೀಪ ಟ್ಯಾಂಕರ್ ಪಲ್ಟಿ ತಪ್ಪಿದ ಅನಾಹುತ

Tuesday, May 28th, 2013
Sullia Tanker Mishap

ಸುಳ್ಯ : ಉರುಳಿಬಿದ್ದ ಟ್ಯಾಂಕರ್ ನಿಂದ ಆಗಬಹುದಾದ ಅನಾಹುತವನ್ನು ಲೆಕ್ಕಿಸದೆ ಸೋರಿಕೆಯಾದ ತೈಲವನ್ನು ತುಂಬಿಸಿಕೊಳ್ಳಲು ಜನರು ಮುಗಿಬಿದ್ದ ಘಟನೆ ಸೋಮವಾರ ಬೊಳುಬೈಲು ಸಮೀಪ ಸಂಭವಿಸಿದೆ. ಮಂಗಳೂರಿನಿಂದ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಿಕೊಂಡು ತೆರಳುತ್ತಿದ್ದ ಟ್ಯಾಂಕರ್ ವೊಂದು ಸುಳ್ಯ ಸಮೀಪದ ಬೊಳುಬೈಲು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿತ್ತು. ಈ ವೇಳೆ ಟ್ಯಾಂಕರ್ ನಿಂದ ತೈಲ ಸೋರಿಕೆಯಾಗತೊಡಗಿದ್ದು ಇದನ್ನು ಗಮನಿಸಿದ ಸ್ಥಳೀಯರು ಹಾಗು ಆ ದಾರಿಯಲ್ಲಿ ಸಾಗುತ್ತಿದ್ದ ವಾಹನಸವಾರರು ಕ್ಯಾನ್ಗಳಲ್ಲಿ ಡೀಸೆಲ್, ಪೆಟ್ರೋಲ್ ನ್ನು ತುಂಬಿಸಿಕೊಳ್ಳುವಲ್ಲಿ ನಿರತರಾಗಿದ್ದರು. ಈ […]

ಶಾಲಾ ಸಹಶಿಕ್ಷಕನಿಂದ ಮುಖ್ಯ ಶಿಕ್ಷಕಿಗೆ ಜಾತಿ ನಿಂದನೆ, ಸೂಕ್ತ ಕ್ರಮಕ್ಕೆ ಆಗ್ರಹ

Monday, May 27th, 2013
Manish Kharbikar

ಮಂಗಳೂರು : ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಪಾಣೇಲಬರಿಕೆಯ ಶಾಲಾ ಮುಖ್ಯ ಶಿಕ್ಷಕಿ ಕಮಾಲಾಕ್ಷಿ ಎಂಬುವವರು ಶಾಲೆಯ ಸಹಶಿಕ್ಷಕ ರಾಮಕೃಷ್ಣ ಎಂಬುವವರು ಜಾತಿ ನಿಂದನೆಯ ಮೂಲಕ ತಮಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರ‍ೋಪಿಸಿ ಭಾನುವಾರ ನಡೆದ ಮಾಸಿಕ ದಲಿತ ಕುಂದುಕೊರತೆ ಸಭೆಯಲ್ಲಿ ಆರೋಪಿಸಿದರು. ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಪಾಣೇಲಬರಿಕೆ ಶಾಲೆಯಲ್ಲಿ  ಕಮಲಾಕ್ಷಿ  2007-2008 ರಿಂದ ಮುಖ್ಯ ಶಿಕ್ಷಕಿ ಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮಕೃಷ್ಣ ಜಿ ಎಂಬುವವರು ಜಾತಿನಿಂದನೆಯ ಮೂಲಕ ಮಾನಸಿಕ ಹಿಂಸೆಯನ್ನು […]

ಎಸ್.ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು-ಘರ್ಷಣೆ, ಪೊಲೀಸರಿಂದ ಲಘು ಲಾಠಿ ಪ್ರಹಾರ

Monday, May 27th, 2013
Kaikamba

ಬಂಟ್ವಾಳ : ಭಾನುವಾರ ಸಂಜೆ ಬಿ.ಸಿ ರೋಡ್ ಸಮೀಪದ ಕೈಕಂಬದಲ್ಲಿ ಎಸ್.ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ಏರ್ಪಟ್ಟ ಪರಿಣಾಮ ಕೈಕಂಬದಲ್ಲಿ ಕೆಲ ಸಮಯ ಉದ್ವಿಗ್ನ ವಾತವರಣ ಕಂಡುಬಂದಿತು. ಕಲ್ಲಡ್ಕ ಪರಿಸರದಿಂದ ಬಂದ ಎಸ್ ಡಿಪಿಐ ಪಕ್ಷದ ತಂಡವೊಂದು ಭಾನುವಾರ ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಕೈಕಂಬದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರೊಡನೆ ಮಾತಿಗಿಳಿದಿದ್ದು, ಕೆಲ ಅವಧಿಯಲ್ಲಿಯೇ ಎರಡು ತಂಡಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟು ನಂತರ ಪರಸ್ಪರರ ನಡುವೆ ಹೊಡೆದಾಟ ಪ್ರಾರಂಭವಾಗಿದೆ. ಇನ್ನೊಂದೆಡೆ ಎರಡೂ […]

ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು : ಆರೋಗ್ಯ ಸಚಿವ ಯು.ಟಿ.ಖಾದರ್

Saturday, May 25th, 2013
UT Khader pressmeet at circute house

ಮಂಗಳೂರು : ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಬಡ ಜನರ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಸರ್ಕಾರ ಭರಿಸಲಿದ್ದು, ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎರಡು ದಿನಗಳೊಳಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗುವುದು ಮತ್ತು ಆರೋಗ್ಯ ಜಾಗೃತಿಯ ಬಗ್ಗೆ ಜಿಲ್ಲಾವಾರು ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೈಸೂರಿನಲ್ಲಿ […]