ಎಸಿಪಿ ಟಿ. ಆರ್‌. ಜಗನ್ನಾಥ್‌ ನೇತೃತ್ವದಲ್ಲಿ ಪ್ರಶಾಂತ್‌ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ

Saturday, April 13th, 2013
Prashanth murder 4 killers arrested

ಮಂಗಳೂರು : ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಟಿ. ಆರ್‌. ಜಗನ್ನಾಥ್‌ ನೇತೃತ್ವದ ಪಾಂಡೇಶ್ವರ ಪೊಲೀಸ್‌ ಠಾಣೆ ಮತ್ತು ಸಿಸಿಬಿ ಘಟಕದ ಇನ್ಸ್‌ಪೆಕ್ಟರ್‌ಗಳು ನಡೆಸಿದ  ಜಂಟಿ ಕಾರ್ಯಾಚರಣೆಯಲ್ಲಿ ಪ್ರಶಾಂತ್‌ (36) ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆದಿನಾಥೇಶ್ವರ ಟ್ರಾನ್ಸ್‌ಪೊರ್ಟ್‌ ಕಂಪೆನಿಯ ಮ್ಯಾನೇಜರ್‌ ಕುಂಜತ್ತಬೈಲ್‌ನ ಪ್ರಶಾಂತ್‌ ನನ್ನು ಆರೋಪಿಗಳು ಎಪ್ರಿಲ್ 7 ರಂದು ರಾತ್ರಿ 11.25 ರ ವೇಳೆಗೆ ನಗರದ ವೆಲೆನ್ಸಿಯಾದ ಮಂಗಳಾ ಬಾರ್‌ ಬಳಿ ಮಾರಕಾಯುಧಗಳಿಂದ ಕಡಿದು ಕೊಲೆ ಮಾದಿದ್ದರು. ಆರೋಪಿಗಳಾದ ಜಪ್ಪಿನ ಮೊಗರು […]

ಏಪ್ರಿಲ್ 14, ತೌಡುಗೋಳಿಯಲ್ಲಿ, ವಿಷು ಪೂಜೆ, ಧಾರ್ಮಿಕ ಸಭೆ

Friday, April 12th, 2013
Durgadevi Temple Toudugoli

ತೌಡುಗೋಳಿ : ಶ್ರೀ ದುರ್ಗಾದೇವಿ ದೇವಸ್ಥಾನ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ತಾ 14-04-2013 ರಂದು ಸೌರಯುಗಾದಿಯ ವಿಷು ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ವಿಷು ಪೂಜೆ, ಧಾರ್ಮಿಕ ಪ್ರವಚನ, ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು. ಇದರ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ  ಹರಿಕೃಷ್ಣ ಪುನರೂರು ವಹಿಸಲಿರುವರು. ಧಾರ್ಮಿಕ ಉಪನ್ಯಾಸವನ್ನು ವಿಶ್ವ ಹಿಂದೂ ಪರಿಷತ್, ಮಂಗಳೂರು. ಇದರ ಕಾರ್ಯಧ್ಯಕ್ಷರಾದ ಜಗದೀಶ ಶೇಣವ ನೀಡಲಿರುವರು. […]

ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Friday, April 12th, 2013
Karinja temple pond

ಬಂಟ್ವಾಳ : ಕಾರಿಂಜೇಶ್ವರ ದೇವಸ್ಥಾನದ ಕೆರೆಯಲ್ಲಿ ಈಜಲೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲದ ಘಟನೆ ಗುರುವಾರ ಮಧ್ಯಾಹ್ನನದ ವೇಳೆ ಸಂಭವಿಸಿದೆ.  ಫಾರ್ಲ ನಿವಾಸಿಗಳಾದ ಥಾಮಸ್ ಮತ್ತು ಅರ್ಸಿಲ್ಲಾ ಡಿ ಮೆಲ್ಲೋ ದಂಪತಿ ಪುತ್ರ ಅಥ್ವಿನ್ ಡಿ ಮೆಲ್ಲೋ (20) ಮತ್ತು ಜಾನ್ ಹಾಗೂ ಲೀನಾ ಲಸ್ರಾದೊ ದಂಪತಿ ಪುತ್ರ ರೋಷನ್ ಲಸ್ರಾದೋ(17) ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ. ಮಧ್ಯಾಹ್ನದ ವೇಳೆ ಕಾರಿಂಜೇಶ್ವರ ದೇವಸ್ಥಾನದ ಕೆರೆಗೆ ಈಜಲೆಂದು ಅಥ್ವಿನ್ ಡಿ ಮೆಲ್ಲೋ, ರೋಷನ್ ಲಸ್ರಾದೋ ಹಾಗು ಪ್ರಕಾಶ್ ವೇಗಸ್ ಈ ಮೂವರು […]

ಪೆರ್ನೆ ಅನಿಲ ದುರಂತ, ಜಿಲ್ಲಧಿಕಾರಿ ಹರ್ಷ ಗುಪ್ತ ರಿಂದ ಕಂಪನಿಯ ಅಧಿಕಾರಿಗಳಿಗೆ ಎಚ್ಚರಿಕೆ

Thursday, April 11th, 2013
Harsh Gupta

ಮಂಗಳೂರು : ಉಪ್ಪಿನಂಗಡಿಯ ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಅನಿಲ ಟ್ಯಾಂಕರ್‌ ದುರಂತವು ೮ ಜೀವಗಳನ್ನು ಬಲಿತೆಗೆದುಕೊಂಡಿತಲ್ಲದೆ ಸಾವಿರಾರು ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಯನ್ನು ನಾಶಪಡಿಸಿದೆ. ಇಷ್ಟಾದರು ಇದಕ್ಕೆ ಕಾರಣವಾದ ಕಂಪೆನಿಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಈ ನಿರ್ಲಕ್ಶ್ಯ ಮುಂದುವರಿದಲ್ಲಿ  ಈ ದುರ್ಘಟನೆಗೆ ಕಾನೂನು ಪ್ರಕಾರ ಕಂಪೆನಿಯನ್ನೆ ಹೊಣೆಯನ್ನಾಗಿ ಮಾಡಬೇಕಾದೀತು ಎಂದು ಜಿಲ್ಲಧಿಕಾರಿ ಹರ್ಷ ಗುಪ್ತ ಎಚ್ಚರಿಸಿದ್ದಾರೆ. ಅವರು ಈ ಸಂಬಂಧ  ಬುಧವಾರ ತಮ್ಮ ಕಚೇರಿಯಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲೂ ಕಂಪನಿಗಳು ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿಸದಿರುವ ಬಗ್ಗೆ ಆಸಮಧಾನ […]

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡ ಎಸ್ ಡಿಎಂ ಕಾಲೇಜು

Wednesday, April 10th, 2013
SDM College Ujire

ಮಂಗಳೂರು : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಸಭಾಂಗಣದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಉಜಿರೆಯ ಎಸ್ ಡಿಎಂ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯ ವಿಭಾಗವು ಎಪ್ರಿಲ್ 5, 6 ರಂದು ಏರ್ಪಡಿಸಿದ್ದ ಒಟ್ಟು 10 ಸ್ಪರ್ಧೆಗಳಲ್ಲಿ 7 ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಎಸ್ ಡಿಎಂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. […]

ಬಂದ್ಯೋಡು ವಸತಿ ಗೃಹವೊಂದರ ಮೇಲೆ ದಾಳಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶ

Wednesday, April 10th, 2013
drugs mafia

ಕಾಸರಗೋಡು : ಜಿಲ್ಲೆಯಲ್ಲಿ ಗಾಂಜಾ ಸಾಗಾಣಿಕೆಯ ವಿರುದ್ದ ಪೊಲೀಸ್ ಕಾರ್ಯಾಚರಣೆ ಮುಂದುವರಿದಿದ್ದು ಬಂದ್ಯೋಡು ಬಳಿಯ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಅಬ್ದುಲ್ ಅಜೀಝ್ ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ಆತನ ನೆರೆಮನೆಯ ರಿಕ್ಷಾ ಚಾಲಕ ಅಬ್ಬಾಸ್ (35) ಎಂಬಾತನ ಮನೆ ಮೇಲೆ  ದಾಳಿ ನಡೆಸಿದ ಪೊಲೀಸರು ಮನೆಯಲ್ಲಿ 3 ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಗಾಂಜಾವನ್ನು ಪತ್ತೆ ಹಚ್ಚಿ ಮನೆಯಲ್ಲಿದ್ದ ಆತನ ಪತ್ನಿ ಸೆಮೀರಾ ಯಾನೆ ಸೆಮೀಮಾ(26) ಎಂಬಾಕೆಯನ್ನು ಬಂಧಿಸಿದ್ದಾರೆ. ಬಳಿಕ ಬಂಧಿತರು ನೀಡಿದ ಮಾಹಿತಿ ಮೇರೆಗೆ […]

ಉಪ್ಪಿನಂಗಡಿ ಬಳಿಯ ಪೆರ್ನೆ ಅಗ್ನಿ ದುರಂತ ಮಡಿದವರಿಗೆ ತಲಾ 1ಲಕ್ಷ ರೂಪಾಯಿ ಪರಿಹಾರ ಘೋಷಣೆ

Wednesday, April 10th, 2013
DC Harsha Gupta

ಮಂಗಳೂರು : ಉಪ್ಪಿನಂಗಡಿ ಸಮೀಪದ ಪೆರ್ನೆ, ರಾಷ್ಟೀಯ ಹೆದ್ದಾರಿ 75ರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅನಿಲ ಟ್ಯಾಂಕರ್ ದುರಂತದಲ್ಲಿ ಮಡಿದವರಿಗೆ ತಲಾ 1ಲಕ್ಷ ರೂಪಾಯಿಗಳ ಪರಿಹಾರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಹರ್ಷ ಗುಪ್ತ ಅವರು ಘೋಷಿಸಿದ್ದಾರೆ. ಶೇ.50 ಕ್ಕಿಂತಲೂ ಹೆಚ್ಚು ಸುಟ್ಟು ಗಾಯಗೊಂಡ ವ್ಯಕ್ತಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಹಾಗೂ ಶೇ.50ಕ್ಕಿಂತಲೂ ಕಡಿಮೆ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ತಕ್ಷಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮತ್ತು ಸಂಬಂಧಪಟ್ಟ ಅನಿಲ ಸರಬರಾಜು […]

ಮಂಗಳೂರು ಉತ್ತರ ಕ್ಷೇತ್ರ ಜಾತ್ಯಾತೀತ ಜನತಾದಳದಲ್ಲಿ ಯಾವುದೇ ಒಡಕಿಲ್ಲ : ಸುದರ್ಶನ್ ಶೆಟ್ಟಿ.ಪೆರ್ಮಂಕಿ

Wednesday, April 10th, 2013
Sudarshan Shetty Permanki

ಮಂಗಳೂರು : ಮಂಗಳೂರು ಉತ್ತರ ಕ್ಷೇತ್ರ ಜಾತ್ಯಾತೀತ ಜನತಾದಳದ ಅಧ್ಯಕ್ಷ ಸುದರ್ಶನ್ ಶೆಟ್ಟಿ.ಪೆರ್ಮಂಕಿ ಹಾಗುಇತರೆ ಸದಸ್ಯರು ಪಕ್ಷಕ್ಕೆ ರಾಜಿನಾಮೆ ನೀಡುತ್ತಾರೆ ಎಂಬ ಸುದ್ದಿಯ ಹಿನ್ನಲೆಯಲ್ಲಿ, ಇದಕ್ಕೆ ಉತ್ತರಿಸುವ ನಿಟ್ಟಿನಲ್ಲಿ ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಸುದರ್ಶನ್ ಶೆಟ್ಟಿ.ಪೆರ್ಮಂಕಿ ರವರ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಪತ್ರಿಕಾಘೋಷ್ಟಿಯಲ್ಲಿ ಮಾತನಾಡಿದ ಅವರು ಜೆಡಿಎಸ್‌ನಲ್ಲಿ ಏನೇ ಆಂತರಿಕ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿದ್ದರೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಜಾತ್ಯತೀತ ಜನತಾದಳದಲ್ಲಿ ಯಾವುದೇ ಒಡಕು ಮೂಡಿಲ್ಲ ನಾವಾಗಲಿ, ಇತರೆ ಸದಸ್ಯರಾಗಲಿ ಪಕ್ಷ ಬಿಡುವ ಯೋಚನೆ ಇಲ್ಲ […]

ಮುಂಡ್ಕೂರಿನ ಬೆಳ್ಮಣ್ ಬಳಿ ಟಿಪ್ಪರ್ ಪಲ್ಟಿ, ಓರ್ವನ ಸಾವು

Tuesday, April 9th, 2013
Truck overturns at Karkala

ಕಾರ್ಕಳ : ಸೋಮವಾರ ಸಂಜೆ 4.30ರ ಸುಮಾರಿಗೆ ಕಾರ್ಕಳದಿಂದ ಮುಂಡ್ಕೂರಿಗೆ ಇಂಟರ್‌ಲಾಕ್‌ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ವೊಂದು ಬೆಳ್ಮಣ್ ಇಂದಾರು ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೆ ಮೃತಪಟ್ಟರೆ ಚಾಲಕನ ಸಹಿತ ೪ ಮಂದಿ ಗಾಯಗೊಂಡಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟವರು ಯಾದಗಿರಿ ಮೂಲದವರಾಗಿದ್ದು, ಇತರರ ವಿವರ ತಿಳಿದು ಬಂದಿಲ್ಲ. ಅಪಘಾತ ನಡೆದ ಸ್ಥಳದಲ್ಲಿ ರಬ್ಬರ್‌ ಮೌಲ್ಡಿಂಗ್‌ ಚೆಲ್ಲಾ ಪಿಲ್ಲಿಯಾಗಿದ್ದು ಗಾಯಗೊಂಡವರ ಪೈಕಿ ಓರ್ವನ ಕಾಲು, ತಲೆಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮಣಿಪಾಲ […]

ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್

Tuesday, April 9th, 2013
Gas tanker accident near Uppinangady

ಮಂಗಳೂರು : ಸುಮಾರು 16 ಸಾವಿರ ಲೀಟರ್ ಅನಿಲವನ್ನು ತುಂಬಿಕೊಂಡ ಟ್ಯಾಂಕರ್ ವೊಂದು  ಮಂಗಳೂರಿನನಿಂದ ಬೆಂಗಳೂರಿಗೆ ಸಾಗುತ್ತಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಇಂದು ಬೆಳಗ್ಗೆ ೯ ಗಂಟೆಗೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಪೆರ್ನೆ ಬಳಿ ನಡೆದಿದೆ. ಟ್ಯಾಂಕರ್ ಉರುಳಿಬಿದ್ದ ಪರಿಣಾಮ ಅನಿಲ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿಕೊಂಡು ಟ್ಯಾಂಕರ್‌ನಲ್ಲಿದ್ದ ಚಾಲಕ ಹಾಗೂ ಕ್ಲಿನರ್ ಬೆಂಕಿಗಾಹುತಿಯಾಗಿದ್ದಾರೆ. ಮಾತ್ರವಲ್ಲದೆ ಬೆಂಕಿ ರಾಷ್ಟ್ರೀಯ ಹೆದ್ದಾರಿ 75 ರ ಸುಮಾರು 20 ಕ್ಕೂ ಹೆಚ್ಚಿನ ಮನೆಗಳಿಗೆ […]