ಬಂಟರ ಗುದ್ದಾಟ : ಕೈಯಲ್ಲಿ ಮತ್ತೇ ತಳಮಳ

Monday, March 25th, 2013
Kripa Alva Shakuntala Shetty

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಇಬ್ಬರು ಬಂಟ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದು ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ. ಕಳೆದ ಅವಧಿಯಲ್ಲಿ ಸುರತ್ಕಲ್ ನಲ್ಲಿ ಅವಕಾಶ ತಪ್ಪಿದ್ದು ಗೊಂದಲಕ್ಕೆ ಕಾರಣವಾಗಿದ್ದು, ಈಗ ಮತ್ತೆ ಅದೇ ಗೊಂದಲ ಮುಂದುವರಿದಿದೆ. ಬಂಟರಿಗೆ ಅವಕಾಶ ಕೊಡಬೇಕು ಎಂಬ ಆಗ್ರಹ ಜೋರಾಗಿದೆ. ಆದರೆ ಎಲ್ಲಿ ಎಂಬ ಪ್ರಶ್ನೆಯೂ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಮಹಿಳೆಯರು ತಮಗೆ ಅವಕಾಶ ಕೊಡಲೇಬೇಕು ಎಂದು ರಾಜ್ಯ ಮಟ್ಟದಲ್ಲಿ ಹೋರಾಟಕ್ಕಿಳಿದಿದ್ದಾರೆ. ಈ ಬೆಳವಣಿಗೆ ಕೂಡ […]

ಕರಾವಳಿಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಯಾರು ಹೊಣೆ

Monday, March 25th, 2013
Monappa Palemar

ಮಂಗಳೂರು : ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಉಸ್ತುವಾರಿಯನ್ನು ಎಂಎಲ್ ಸಿ ಮೋನಪ್ಪ ಭಂಡಾರಿ ಅವರಿಗೆ ನೀಡಿರುವುದು ಹಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು ಎನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಅವರು ಕಲ್ಲಡ್ಕ ಭಟ್ಟರ ನಿಷ್ಠಾವಂತ ಎಂಬ ಒಂದೇ ಮಾನದಂಡದಲ್ಲಿ ಅವರಿಗೆ ಎಂಎಲ್ ಸಿ ಸ್ಥಾನ ನೀಡಲಾಗಿತ್ತು. ಅವರಲ್ಲಿ ಯಾವುದೇ ವಿಶೇಷ ಶಕ್ತಿ-ಸಾಮರ್ಥ್ಯ ಇಲ್ಲ ಎಂಬುದು ಈ ಚುನಾವಣಾ ಫಲಿತಾಂಶವೇ ಸಾರಿ ಹೇಳಿದೆ. ಅದರಲ್ಲೂ ಕಳೆದ ಬಾರಿ ಶಾಸಕ ಕೃಷ್ಣ ಜೆ.ಪಾಲೆಮಾರ್ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು ಮತ್ತು […]

ಮಂಗಳೂರು : ಮೇಯರ್ – ಉಪ ಮೇಯರ್ ಯಾರು?

Monday, March 25th, 2013
Mayor

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 6ನೆ ಅವಧಿಯ ಮೇಯರ್-ಉಪಮೇಯರ್ ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಗೆ ಬಲವಾಗಿ ಕಾಡುತ್ತಿದೆ. ಅದಕ್ಕೂ ಮೊದಲು ರಾಜ್ಯ ಸರಕಾರ ಮೇಯರ್-ಉಪಮೇಯರ್ ಸ್ಥಾನದ ಮೀಸಲಾತಿ ಪ್ರಕಟಿಸಬೇಕು. ಬಳಿಕ ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ರಾಜ್ಯ ವಿಧಾನ ಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ನೀತಿ ಸಂಹಿತೆ ಪ್ರಕಟಿಸಿದರೆ ಮೇಯರ್- ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದರೂ ಚುನಾವಣೆ ನಡೆಸುವಂತಿಲ್ಲ. ನೀತಿ ಸಂಹಿತೆ ಮುಗಿದ ಬಳಿಕ ಕಾರ್ಪೋರೇಟರ್ ಗಳು ಸಭೆ ಸೇರಿ ಮೇಯರ್- ಉಪ […]

ಸ್ವಪ್ರತಿಷ್ಠೆಯ ಅಖಾಡವಾಗುತ್ತಿರುವ ಬಿಲ್ಲವರ ಯೂನಿಯನ್

Monday, March 25th, 2013
Naveenchandra

ಮಂಗಳೂರು : ಕಳೆದ ಒಂದು ವರುಷದ ಹಿಂದೆ ಅಖಿಲ ಭಾರತ ಬಿಲ್ಲವರ ಯೂನಿಯನ್ ವಿರುದ್ಧ ಸಮರ ಸಾರಿರುವ ಬಿಲ್ಲವರು ಈ ಬಾರಿಯೂ ಯೂನಿಯನ್ ಸಭೆಗೆ ಅಡ್ಡಿ ಉಂಟು ಮಾಡಿದ ಘಟನೆ ಮತ್ತೇ ನಡೆದಿದೆ. ಆದರೆ ಈ ಬಾರಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರು ತಂತ್ರಗಾರಿಕೆ ನಡೆಸಿಯೇ ಸಭೆ ಕರೆದಿದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದೆ ಕೋರಂ ಕೊರತೆ ಎದುರಿಸಿದರೂ ಸಭೆ ನಡೆದಿದೆ. ಅಖಿಲಭಾರತ ಬಿಲ್ಲವರ ಯೂನಿಯನ್ ಸಭೆ ನಡೆಯುವ ಸಮಯದಲ್ಲಿ ಕಳೆದ ಕೆಲವು ವರುಷದಿಂದ […]

ಆರ್ ಟಿ ಓ ಅಧಿಕಾರಿಗಳ ನಿರ್ಲಕ್ಷ್ಯ: ಲಾರಿಗೆ ಬೈಕ್ ಡಿಕ್ಕಿ, ಸವಾರನ ಸಾವು

Saturday, March 23rd, 2013
Baik accsident near KPT

ಮಂಗಳೂರು : ಆರ್ ಟಿ ಓ ನವರ ನಿರ್ಲಕ್ಷ್ಯದಿಂದಾಗಿ ಕಬ್ಬಿಣದ ಸರಳುಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರಲ್ಲಿ ಒಬ್ಬ ಮೃತಪಟ್ಟರೆ, ಮತ್ತೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಗ್ಗೆ 10 ಗಂಟೆಗೆ ಕೆಪಿಟಿ ಬಳಿಯ ಲ್ಯಾಂಡ್ ಮಾರ್ಕ್ ಬಿಲ್ಡಿಂಗ್ ಬಳಿ ನಡೆದಿದೆ. ಕಬ್ಬಿಣದ ಸರಳುಗಳನ್ನು ಹೊತ್ತುಕೊಂಡು ಸಾಗುತ್ತಿದ್ದ ಟ್ರೇಲರ್ ನ್ನು ತಪಾಸಣೆಗೆಂದು ಆರ್ ಟಿಓನವರು ಕೆಪಿಟಿ ಬಳಿಯ ಲ್ಯಾಂಡ್ ಮಾರ್ಕ್ ಬಿಲ್ಡಿಂಗ್ ಬಳಿ  ಸೂಚನಾ ಫಲಕವಿಲ್ಲದೆ ಹಠಾತ್ […]

ಕುಂದಾಪುರ ನ್ಯಾಯಾಲಯದಲ್ಲಿ ಶಂಕಿತ ನಕ್ಸಲ್ ಆರೋಪಿ ಸರೋಜಾಳ ಕೊನೆ ಪ್ರಕರಣದ ವಿಚಾರಣೆ, ಬಿದ್ದು ಹೋದ ಕೇಸ್

Saturday, March 23rd, 2013
Naxal suspect Saroja

ಕುಂದಾಪುರ : ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾಳೆ ಎಂಬ ಆರೋಪದಡಿ ಬಂಧನಕ್ಕೆ ಒಳಗಾಗಿ, ಕುಂದಾಪುರ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಸುಮಾರು ಹತ್ತು ಪ್ರಕರಣಗಳಲ್ಲಿ ಸಿಲುಕಿ ಎರಡೂವರೆ ವರ್ಷ ಜೈಲುವಾಸ ಶಿಕ್ಷೆಯನ್ನು ಪಡೆದಿದ್ದ ಹೊರಲೆ ಸರೋಜಾಳ ಕೊನೆ ಪ್ರಕರಣದ  ವಿಚಾರಣೆಯು ಕುಂದಾಪುರ ನ್ಯಾಯಾಲಯದಲ್ಲಿ  ಶುಕ್ರವಾರ ನಡೆಯಿತು. ಹೊರಲೆ ಸರೋಜಾಳ ಮೇಲೆ ಈ ಹಿಂದೆ  ಒಟ್ಟು ೧೦ ಪ್ರಕರಣಗಳು ದಾಖಲಾಗಿತ್ತು. ಎಲ್ಲಾ ಹತ್ತು ಪ್ರಕರಣಗಳಲ್ಲಿ  ಈ ಹಿಂದೆ ಸಾಕ್ಷ್ಯಾಧಾರಗಳಿಲ್ಲದೇ ೯ ಪ್ರಕರಣಗಳು ಖುಲಾಸೆಗೊಂಡಿದ್ದು ಬಾಕಿ ಉಳಿದ ಒಂದು ಪ್ರಕರಣದ ವಿಚಾರಣೆ ಮಾರ್ಚ್ ೨೨ […]

ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ರಾಜ್ಯ ಉಪಾಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಂ.ಜಿ.ಹೆಗಡೆ

Saturday, March 23rd, 2013
Nagaraj Shetty, MG Hegde resign

ಮಂಗಳೂರು : ಜಾತ್ಯಾತೀತ ಜನತಾದಳದ ಕರಾವಳಿ ಭಾಗದ ಪ್ರಮುಖ ಮುಖಂಡರಾದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಹಾಗೂ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜಿಲ್ಲ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಸ್ಲಂ ಹಾಗೂ ಜಿಲ್ಲ ಪ್ರಧಾನ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ರವರ ಬಗ್ಗೆ ಸಭೆಯೊಂದರಲ್ಲಿ ಅಸಮಧಾನ ವನ್ನು ವ್ಯಕ್ತಪಡಿಸಿದರ ಹಿನ್ನಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರ ಸ್ವಾಮಿಯವರು ಈ ಇಬ್ಬರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ರಾಜ್ಯಾಧ್ಯಕ್ಷರ […]

ನಗರದ ಓಶಿಯನ್ ಪರ್ಲ್ ನಲ್ಲಿ ಮಾರ್ಚ್ 20 ರಿಂದ ಎಪ್ರಿಲ್ 5 ರವರೆಗೆ ನಡೆಯಲಿರುವ ಆಹಾರೋತ್ಸವ ‘ಖಾವ್ ಗಲಿ’

Saturday, March 23rd, 2013
Khau Gali Food Fest

ಮಂಗಳೂರು : ನಗರದ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಮಾರ್ಚ್ 20 ರಿಂದ  ಎಪ್ರಿಲ್ 5ರವರೆಗೆ ಉತ್ತರ ಭಾರತದ ಸ್ಟ್ರೀಟ್ ಫುಡ್‌ಗಳನ್ನು  ಪರಿಚಯಿಸುವ ಆಹಾರೋತ್ಸವ  ‘ಖಾವ್ ಗಲಿ’ ಆರಂಭಗೊಂಡಿದ್ದು ಪ್ರೀಮಿಯಂ ರೆಸ್ಟೋರೆಂಟ್ ‘ಸಾಗರ್‌ರತ್ನ’ ಸಮೂಹದ ಹೊಟೇಲ್ ಸಂಸ್ಥೆಯ ಪರಿಣತ ಶೆಫ್‌ಗಳ ಮೇಲ್ವಿಚಾರಣೆಯಲ್ಲಿ ಖಾದ್ಯಗಳು ತಯಾರಿಸಲ್ಪಡುತ್ತವೆ  ಎಂದು ಓಶಿಯನ್ ಪರ್ಲ್ ಹೊಟೇಲ್‌ನ ಜನರಲ್ ಮ್ಯಾನೇಜರ್ ಬಿ.ಎನ್.ಗಿರೀಶ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು. ಉತ್ತರ ಭಾರತದ ಖಾದ್ಯ ಗಳಾದ ಮಸಾಲ ಪುರಿ, ಬೇಲ್ ಪುರಿ, ಸೇವ್‌ಪುರಿ, ದಹಿಪುರಿ, ದಹಿ ಪಾಪ್ಡಿ ಚಾಟ್, ದಿಲ್ಲಿ […]

ವಿದಾನಸಭಾ ಚುನಾವಣೆ : ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ

Saturday, March 23rd, 2013
Indipendent candidate Halady Shreenivasa shetty

ಕುಂದಾಪುರ : ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ವಿದಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವುದಾಗಿ ಮುಲಗಳಿಂದ  ತಿಳಿದುಬಂದಿದೆ. ಬಿಜೆಪಿ ಸಚಿವ ಸ್ಥಾನದಿಂದ ವಂಚಿತರಾದ ಮೇಲೆ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಹುತೇಕ ರಾಜಕೀಯದಿಂದ ದೂರ ಉಳಿದಿದ್ದ ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಯವರು ಕಾರ್ಯಕರ್ತರ ಹಾಗೂ ಅಭಿಮಾನಿಗಳ ಆಕಾಂಕ್ಷೆಯಂತೆ ಪಕ್ಷೇತರ ಆಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿದುಬಂದಿದೆ.

ರಾಜ್ಯ ವಿಧಾನ ಸಭಾ ಚುನಾವಣೆ : ಏಪ್ರಿಲ್ 17 ನಾಮಪತ್ರ ಸಲ್ಲಿಸಲು ಕೊನೆಯ ದಿನ

Friday, March 22nd, 2013
DC office press meet

ಮಂಗಳೂರು : ಮೇ ೫ ರಂದು ರಾಜ್ಯ ವಿಧಾನ ಸಭಾ ಚುನಾವಣೆಯು ನಡೆಯಲಿದ್ದು ಚುನಾವಣೆಗೆ ಸಂಬಂಧಪಟ್ಟಂತೆ  ದ.ಕ. ಜಿಲ್ಲಾಡಳಿತವು ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ದ.ಕ. ಜಿಲ್ಲಾಧಿಕಾರಿ ಎನ್.ಪ್ರಕಾಶ್ ಹೇಳಿದರು. ಶುಕ್ರವಾರ ಜಿಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಭಾರತ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು, ದಿನಾಂಕವನ್ನು ಪ್ರಕಟಿಸಿರುವುದರಿಂದ ಮೇ 11 ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಬಾರಿ ಚುನಾವಣೆಯಲ್ಲಿ  7,25,162 ಪುರುಷ ಮತದಾರರು, 7,36,497 ಮಹಿಳಾ ಮತದಾರರು ಸೇರಿ ಒಟ್ಟು […]