ಕೊಟೇಶ್ವರದ ಬಳಿ ಭೀಕರ ರಸ್ತೆ ಅಪಘಾತ ಬೈಕ್ ಸವಾರನ ಸಾವು

Monday, December 10th, 2012
Bus bike collision

ಕುಂದಾಪುರ : ರವಿವಾರ ರಾತ್ರಿ 9.30 ರ ಸುಮಾರಿಗೆ ಕುಂದಾಪುರದ ಕೋಟೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಖಾಸಗಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮ್ರತಪಟ್ಟಿದ್ದಾನೆ. ಮೃತ ಬೈಕ್ ಸವಾರ ಅಂಪಾರು ಮೂಲದ ಸತೀಶ್ ಶೆಟ್ಟಿ(28) ಎಂಬುವವರಾಗಿದ್ದಾರೆ. ಸತೀಶ್ ಮೂಲತಃ ಅಂಪಾರಿನವರಾಗಿದ್ದು ಕಳೆದ ಕೆಲ ವರ್ಷಗಳಿಂದ ಹೈದರಾಬಾದಿನಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ತಂದೆ ಶೇಖರ ಶೆಟ್ಟಿಯವರ ನಿಧನದ ಸಲುವಾಗಿ ಊರಿಗೆ ಆಗಮಿಸಿದ ಅವರು ತೆಕ್ಕಟ್ಟೆಯ ಹೋಟೇಲ್ವೊಂದರಲ್ಲಿ […]

ಕಲಾಂಗಣ್‌ನಲ್ಲಿ 4 ನೇ ವಿಶ್ವ ಕೊಂಕಣಿ ಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭ

Monday, December 10th, 2012
Global Konkani Music Award

ಮಂಗಳೂರು : ಮಂಗಳೂರು ಶಕ್ತಿನಗರದ ಕಲಾಂಗಣ್‌ ಸಭಾಂಗಣದಲ್ಲಿ ಮಾಂಡ್ ಸೋಭಾಣ್ ಸಂಸ್ಥೆ ವತಿಯಿಂದ ನಾಲ್ಕನೇ ವಿಶ್ವ ಕೊಂಕಣಿ ಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ಸಂಜೆ ನಡೆಯಿತು. 2011ರ ಅತ್ಯುತ್ತಮ ಮಹಿಳಾ ಗಾಯಕಿ ಪ್ರಶಸ್ತಿಯನ್ನು ಲವಿಟಾ ಲೋಬೊ ಹಾಗೂ ಅತ್ಯುತ್ತಮ ಪುರುಷ ಗಾಯಕ ಪ್ರಶಸ್ತಿಯನ್ನು ಬೆಂಗಳೂರಿನ ಬುಟ್ಟೋ ಪಡೆದುಕೊಂಡರು. ಅತ್ಯುತ್ತಮ ಸಂಗೀತ ಸಾಹಿತ್ಯ ಪ್ರಶಸ್ತಿಯನ್ನು ಅಂಜಲೋರಿನ ರೋಶನ್ ಡಿಸೋಜ, ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದಿವಂಗತ ಚಾಫ್ರಾ ಡಿಕೋಸ್ತಾ, ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿಯನ್ನು ಹೊನ್ನಾವರದ ಕಜೆತನ್ […]

ತೆನೆ ಹೊತ್ತ ಮಹಿಳೆ ಪೂಜಾಗಾಂಧಿ ಕೆಜೆಪಿ ಸೇರ್ಪಡೆ

Saturday, December 8th, 2012
Pooja Gandhi KJP

ಬೆಂಗಳೂರು :ಕಳೆದ ಆರು ತಿಂಗಳ ಹಿಂದೆಯಷ್ಟೆ ಜೆಡಿಎಸ್‌ ಮೂಲಕ ರಾಜಕೀಯಕ್ಕೆ ಪಾದಾರ್ಪಣೆಮಾಡಿದ್ದ ಮಳೆ ಹುಡುಗಿ ಪೂಜಾಗಾಂಧಿ ಈಗ ಪಕ್ಷ ಬದಲಾಯಿಸಿದ್ದಾರೆ. ಎರಡು ತಿಂಗಳ ಹಿಂದೆ ತಮ್ಮ ವಿರುದ್ಧ ಆರೋಪ ಕೇಳಿಬಂದಾಗ ಪಕ್ಷದ ಯಾವೊಬ್ಬ ಪ್ರಮುಖ ನಾಯಕರೂ ತಮ್ಮ ಬೆಂಬಲಕ್ಕೆ ಬಂದಿರಲಿಲ್ಲ ಆದ್ದರಿಂದ ಜೆಡಿಎಸ್‌ಗೆ ರಾಜೀನಾಮೆ ನೀಡಿ ಕೆಜೆಪಿಗೆ ಸೇರ್ಪಡೆಗೊಂಡಿದುದಾಗಿ ತಿಳಿಸಿದರು. ಶುಕ್ರವಾರ ಮಲ್ಲೇಶ್ವರದಲ್ಲಿರುವ ಕೆಜೆಪಿ ಕಚೇರಿಯಲ್ಲಿ ಪಕ್ಷದ ಬಾವುಟ ಹಿಡಿಯುವ ಮೂಲಕ ನೂತನ ಪಕ್ಷಕ್ಕೆ ಸೇರ್ಪಡೆಗೊಂಡ ಅವರನ್ನು ಕೆಜೆಪಿ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯೆ ಐಶ್ವರ್ಯ ಅವರು […]

ವಾರ್ತಾ ಇಲಾಖೆಯ ಪ್ರಾಯೋಜಕತ್ವದಲ್ಲಿನ ವಿಧಾನ ಸಭೆ-60 ಛಾಯಾಚಿತ್ರ ಪ್ರದರ್ಶನ

Saturday, December 8th, 2012
Karnataka Vidhana Sabha 60

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಡಿಸೆಂಬರ್ 7 ರಂದು ವಿಧಾನ ಸೌಧದ ಅಪರೂಪದ ಛಾಯಾಚಿತ್ರಗಳ ಛಾಯಾಚಿತ್ರ ಪ್ರದರ್ಶನ ವಿಧಾನ ಸಭೆ-60 ನಡೆಯಿತು. ರಾಜ್ಯ ವಿಧಾನ ಸಭೆಗೆ 60 ವರ್ಷ ತುಂಬಿದ ಸವಿನೆನಪಿಗಾಗಿ ವಾರ್ತಾ ಇಲಾಖೆಯ ಪ್ರಾಯೋಜಕತ್ವದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿತ್ತು. ವಿಧಾನಸೌಧ ನಿರ್ಮಾಣದಿಂದ ಹಿಡಿದು, ವಿವಿಧ ಹಂತದ ಕಾಮಗಾರಿಗಳ ಛಾಯಾಚಿತ್ರಗಳು, ವಿಧಾನ ಸೌಧ ನಿರ್ಮಾಣದ ಕಾರ್ಯನೆರವೇರಿಸಿದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ರಿಂದ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿನ ಛಾಯಾಚಿತ್ರಗಳು […]

ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

Friday, December 7th, 2012
Baby found on rly tracks

ಮಂಗಳೂರು :ಇಂದು ಬೆಳಗಿನ ಜಾವ ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದ ಟ್ರ್ಯಾಕ್ ಮದ್ಯೆ ಆಗತಾನೆ ಹುಟ್ಟಿದ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದೆ. ಎಂದಿನಂತೆ ರೈಲನ್ನು ಪರಿಶೀಲಿಸುತ್ತಿದ್ದ ರೈಲ್ವೆಯ ಪಾರ್ಸೆಲ್ ವಿಭಾಗದ ಸಿಬ್ಬಂದಿ ರಜಾಕ್ ಎಂಬುವವರಿಗೆ ರೈಲಿನ ಟ್ರ್ಯಾಕ್ ಮಧ್ಯೆ ಮಗುವಿನ ಅಳಲು ಕೇಳಿಸಿದಾಗ ಅವರು ಕೂಡಲೇ ಈ ವಿಷಯವನ್ನು ಇತರೆ ಅಧಿಕಾರಿಗಳ ಗಮನಕ್ಕೆ ತಂದು, ಮಗುವನ್ನು ಕೂಡಲೇ ಸರಕಾರೀ ಲೇಡಿಗೋಶನ್ ಆಸ್ಪತ್ರೆಗೆ ಕೊಂಡೊಯ್ದರು. ಮಗುವಿನ ದೇಹ ರಕ್ತ ಸಿಕ್ತ ಸ್ಥಿತಿಯಲ್ಲಿತ್ತು ಇದರಿಂದಾಗಿ ಮಗು ಆಗ ತಾನೆ ಜನಿಸಿದೆ […]

ಬಹು ನಿರೀಕ್ಷೆಯ ತುಳುಚಿತ್ರ “ತೆಲಿಕೆದ ಬೊಳ್ಳಿ” ತೆರೆಗೆ

Friday, December 7th, 2012
Thelikeda Bolli film released

ಮಂಗಳೂರು :ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಬಹು ನಿರೀಕ್ಷೆಯ ತುಳುಚಿತ್ರ “ತೆಲಿಕೆದ ಬೊಳ್ಳಿ” ಗುರುವಾರ ತೆರೆಕಂಡಿತು. ಸೆಂಟ್ರಲ್‌ ಸಿನಿಮಾಸ್‌ ಲಾಂಛನದಲ್ಲಿ ನಿರ್ಮಾಣಗೊಂಡ ಈ ಚಿತ್ರದ ಬಿಡುಗಡೆ ಸಮಾರಂಭವು ನಗರದ ಸೆಂಟ್ರಲ್ ಟಾಕೀಸ್ ನಲ್ಲಿ ಗುರುವಾರ ನಡೆಯಿತು. ಸಮಾರಂಭದಲ್ಲಿ ಚಿತ್ರದ ನಿರ್ದೇಶಕ ಪಿ.ಎಚ್‌. ವಿಶ್ವನಾಥ್‌, ಛಾಯಾಗ್ರಾಹಕ ಆರ್‌. ಮಂಜುನಾಥ್‌, ಚಿತ್ರದ ನಿರ್ಮಾಪಕರಾದ ಸುಧೀರ್‌ ಕಾಮತ್‌ ಮತ್ತು ಶರ್ಮಿಳಾ ಡಿ. ಕಾಪಿಕಾಡ್‌, ತೆಲಿಕೆದ ಬೊಳ್ಳಿ ಚಿತ್ರದ ಪ್ರಮುಖ ನಟ ಹಾಗೂ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದ ದೇವದಾಸ್‌ […]

ಬೆಂಗಳೂರು – ಬಂಟ್ವಾಳ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಬೀಕರ ಅಪಘಾತ ಒಂದೇ ಕುಟುಂಬದ 6 ಮಂದಿ ದುರ್ಮರಣ

Friday, December 7th, 2012
mishap near Kushalnagar

ಕುಶಾಲನಗರ :ಗುರುವಾರ ಸಂಜೆ ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗು ಒಂದೇ ಕುಟುಂಬದ 6 ಮಂದಿ ಸದಸ್ಯರು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟ ಘಟನೆ ಬೈಲುಕೊಪ್ಪದ ಸಮೀಪ ಬೆಂಗಳೂರು- ಬಂಟ್ವಾಳ ರಾಜ್ಯ ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ. ಸುಂಟಿಕೊಪ್ಪದ ಕಾರ್ಪೆಂಟರ್ ಶಫಿ (43), ಪತ್ನಿ ರಮೀಜಾ (36) ಪುತ್ರರಾದ ಇರ್ಫಾನ್‌ (19), ಇಮ್ರಾನ್‌ (16), ಪುತ್ರಿ ತಸ್ಮಿಯಾ (13), ಕಿರಿಯ ಪುತ್ರ ಮೂರು ವರ್ಷದ ಆಫಾನ್‌, ಶಫಿ ಅವರ ತಮ್ಮ […]

ನಗರದ ಕಲ್ಲಾಪು ಬಳಿ ಬಸ್ -ಜೀಪ್ ಡಿಕ್ಕಿ ಆರುಮಂದಿಗೆ ಗಾಯ

Friday, December 7th, 2012
Jeep bus hit at Kallaup

ಮಂಗಳೂರು : ಗುರುವಾರ ಬೆಳಗ್ಗೆ ತೊಕ್ಕೊಟ್ಟು ಸಮೀಪ ಕಲ್ಲಾಪು ಬಳಿ ಬಸ್ ಮತ್ತು ಕಾರ್ ನಡುವೆ ಮುಖಾಮುಕಿ ಸಂಭವಿಸಿದ ಡಿಕ್ಕಿಯಲ್ಲಿ ಜೀಪ್ ನಲ್ಲಿದ್ದ 6 ಮಂದಿ ಗಾಯಗೊಂಡಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಿದೇಶಕ್ಕೆ ತೆರಳಲಿದ್ದ ಮನೆಮಂದಿಯೊಬ್ಬರನ್ನು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಿಟ್ಟು ಹಿಂದಿರುಗುತ್ತಿದ್ದ ವೇಳೆ ಕುಂಪಲದಿಂದ ಸ್ಟೇಟ್ ಬ್ಯಾಂಕ್ ಗೆ ತೆರಳುತ್ತಿದ್ದ ಸಿಟಿ ಬಸ್ ಡಿಕ್ಕಿ ಹೊಡೆದಿದೆ. ಕಾಸರಗೋಡು ವಿದ್ಯಾನಗರದ ನಾಸಿರ್, ಅಬ್ದುಲ್ ಕುಂಞ, ಅನ್ಫಾಲ, ಅಶ್ರಫ್, ನೌಫಾರ ಹಾಗೂ ಜೀಪ್ ಚಾಲಕ ಅಬೂಬಕರ್ ಗಾಯಾಳುಗಳಾಗಿದ್ದು ಈ […]

ಆರ್ಥಿಕ ಮುಗ್ಗಟ್ಟಿನಿಂದಾಗಿ ಕುಂದಾಪುರ – ತಲಪಾಡಿ ನಡುವಿನ ಚತುಷ್ಪಥ ಕಾಮಗಾರಿ ಕುಂಠಿತ

Thursday, December 6th, 2012
Kundapur Talapady project

ಮಂಗಳೂರು :ಕುಂದಾಪುರ- ಸುರತ್ಕಲ್ ಮತ್ತು ನಂತೂರು- ತಲಪಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆಯನ್ನು 2010ರ ಸೆ.5ರಲ್ಲಿ ನವಯುಗ ಎಂಜಿನಿಯರಿಂಗ್ ಕಂಪನಿ ವಹಿಸಿಕೊಂಡಿದ್ದು 910 ದಿನ ಅಂದರೆ 2013ರ ಮಾ.5ಕ್ಕೆ ಮುಗಿಸುವ ಒಪ್ಪಂದವಾಗಿತ್ತು. ಅದರಂತೆ ಪ್ರಾರಂಭದಲ್ಲಿ ಕಾಮಗಾರಿ ಶರವೇಗದಲ್ಲಿ ನಡೆಯುವ ಮೂಲಕ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಇದೀಗ ಗುತ್ತಿಗೆ ಪಡೆದಿರುವ ಕಂಪನಿ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನಿಂದಾಗಿ ಮಳೆಗಾಲದ ನಂತರ ಕಾಮಗಾರಿ ಪುನಾರಂಭಗೊಂಡಿಲ್ಲ. ತಿಂಗಳಿಗೆ ಕನಿಷ್ಠ 10 ಕಿ.ಮೀ. ಕಾಮಗಾರಿ ಮುಗಿಸಬೇಕು ಎಂಬ ಉದ್ದೇಶವಿದ್ದರೂ, ಈಗಿನ ಆರ್ಥಿಕ […]

ಮೀನುಗಾರಿಕೆಗೆ ತೆರಳಿದ ಬೋಟ್‌ ಮುಳುಗಡೆ, ಲಕ್ಷಾಂತರ ರೂಪಾಯಿ ನಷ್ಟ

Thursday, December 6th, 2012
Boat collision

ಮಂಗಳೂರು : ಮೀನುಗಾರಿಕೆಗೆ ತೆರಳಿದ ಎಫ್‌. ಎಂ. ಫಯಾಜ್‌ ಎಂಬುವವರಿಗೆ ಸೇರಿದ ಬೋಟೊಂದು ಮಂಗಳವಾರ ಮುಳುಗಡೆಗೊಂಡು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ . ಮಂಗಳವಾರ ಮಲ್ಪೆ ಬಂದರಿನಿಂದ ಹೊರಟ ಬೋಟ್‌ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಂದರಿನ ನೇರ ತೆಲ್‌ಕಲ್‌ ಸಮೀಪ ಸಾಗುತ್ತಿದ್ದಾಗ ಬೋಟ್‌ನ ಅಡಿಭಾಗ ಕಲ್ಲಿಗೆ ತಾಗಿ ಹಲಗೆ ಮುರಿದು ನೀರು ಒಳನುಗ್ಗಿ ಬೋಟ್‌ ಮುಳುಗಡೆಗೊಂಡಿದೆ. ಬೋಟ್‌ನಲ್ಲಿದ್ದ 7 ಮಂದಿ ಮೀನುಗಾರರು ಹಾಗೂ ಬೋಟನ್ನು ಸಮೀಪದಲ್ಲಿದ್ದ ಹನುಮಬೆನಕ ಬೋಟಿನವರು ರಕ್ಷಿಸಿ ದಡ ಸೇರಿಸಿದ್ದಾರೆ. ಸುಮಾರು […]