ದ.ಕ.ಜಿಲ್ಲಾ ಸಶಸ್ತ್ರ ಮೀಸಲು ಪಡೆ ಅವರಣದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ

Sunday, October 21st, 2012
Police Martyrs’ Day

ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದ.ಕ.ಜಿಲ್ಲಾ ಪೊಲೀಸರ ಸಹಯೋಗದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ದ.ಕ.ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಛೇರಿ ಅವರಣದಲ್ಲಿ ಇಂದು ಬೆಳಗ್ಗೆ ಆಚರಿಸಲಾಯಿತು. ಹುತಾತ್ಮ ಪೊಲೀಸರಿಗೆ ಸ್ಮಾರಕದ ಬಳಿ ಹೂ ಗುಚ್ಚ ಇಟ್ಟು, ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ದ.ಕ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಶೋಕ್ ನಿಜಗಣ್ಣನವರ್, 1959 ರ ಅ.21 ರಂದು ಎಸ್ಪಿ ಚರಣ್ ಸಿಂಗ್ ನೇತೃತ್ವದ ಸಿ.ಆರ್.ಪಿ.ಎಫ್ ತುಕಡಿ ಭಾರತ […]

ಮರದ ಕೊಂಬೆಗಳ ನಡುವೆ ಸಿಲುಕಿ ವ್ಯಕ್ತಿಯ ಸಾವು

Saturday, October 20th, 2012
Youth dies

ಮಂಗಳೂರು: ವಾಮಂಜೂರು ಬಳಿಯ ತಾರಿಗುಡ್ಡೆ ಬೊಂಡೆಂತಿಲ ಎಂಬಲ್ಲಿ ಮರ ಕಡಿಯುತ್ತಿರುವಾಗ ಮರದ ಕೊಂಬೆಗಳ ನಡುವೆ ಸಿಲುಕಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಸಂಭವಿಸಿದೆ. ಮಂಜೊಟ್ಟಿ ಹೌಸ್ ನಿವಾಸಿ ಅಬೂಬಕ್ಕರ್ ಅವರ ಮಗ ಆರಿಸ್ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಆರಿಸ್ ಹಾಗೂ ಇತರರು ಮರಕಡಿಯಲು ತೆರಳಿದ್ದು, ಆರಿಸ್ ದೊಡ್ಡದಾದ ಮರದ ಕೊಂಬೆಯನ್ನು ಕತ್ತರಿಸುವಾಗ ಕೊಂಬೆಯು ಆರಿಸ್ ಇದ್ದ ಕಡೆಗೆ ವಾಲಿದ್ದರಿಂದ ಆರಿಸ್ ಹಿಂದಿನ ಮರ ಹಾಗು ಕೊಂಬೆಯ ನಡುವೆ ಸಿಲುಕಿ ಸ್ಠಳದಲ್ಲೆ ಮೃತಪಟ್ಟಿದ್ದಾನೆ. ಉಳಿದಂತೆ ಇತರರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. […]

ಜಲ್ಲಿ ಕ್ರಷರ್ ಬಂದ್; ಕಟ್ಟಡ ನಿರ್ಮಾಣಕ್ಕೆ ತಟ್ಟಿದ ಬಿಸಿ!

Saturday, October 20th, 2012
gravl crusher

ಮಂಗಳೂರು: ರಾಜ್ಯ ಹೈಕೋರ್ಟ್ ನ ತಡೆಯಾಜ್ಞೆ ಮತ್ತು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಷೇಧಾಜ್ಞೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಮಾರು 200 ಜಲ್ಲಿ ಕ್ರಷರ್ ಗಳು ಸೆಪ್ಟಂಬರ್ 22ರಿಂದ ಮುಚ್ಚಲ್ಪಟ್ಟಿದೆ. ಅಂದರೆ, ಕಳೆದ ಮೂರು ವಾರದಿಂದ ಜಿಲ್ಲೆಯ ಯಾವುದೇ ಜಲ್ಲಿ ಕ್ರಷರ್ ಗಳು ಸ್ತಬ್ಧವಾಗಿದೆ. ಇದರಿಂದ ಜಲ್ಲಿ ಕ್ರಷರ್ ಗೆ ಪೂರಕವಾದ ವಿವಿಧ ಉದ್ಯಮ, ಸಾರಿಗೆ ವ್ಯವಸ್ಥೆ, ಕಾರ್ಮಿಕ ವಿಭಾಗಕ್ಕೆ ಬಾರೀ ಹೊಡೆತ ಬಿದ್ದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಹಾಗಾಗಿ […]

ಮೀನುಗಾರರಿಗೆ ಭಯ ಹುಟ್ಟಿಸುವ `ಅಳಿವೆ ಬಾಗಿಲು’ ಸಂಪೂರ್ಣ ಡ್ರೆಜ್ಜಿಂಗ್ಗಾಗಿ ಕಾಯುತ್ತಿದ್ದಾರೆ ಮೀನುಗಾರರು…

Saturday, October 20th, 2012
fishing boat accident

ಮಂಗಳೂರು : ಕರಾವಳಿಯಲ್ಲಿ ಮೀನುಗಾರಿಕೆಯೇ ಆರ್ಥಿಕ ಸಂಪತ್ತಿನ ಪ್ರಮುಖ ಕೇಂದ್ರ. ಲಕ್ಷಾಂತರ ಮೊತ್ತದ ವಹಿವಾಟು ಮೀನುಗಾರಿಕೆ ಮೂಲಕ ನಡೆಯುತ್ತದೆ. ದೇಶ ವಿದೇಶಗಳಿಗೆ ಇಲ್ಲಿನ ಮತ್ಸ್ಯ ಸಂಪತ್ತು ರವಾನೆಯಾಗುತ್ತಿದೆ. ಆದರೆ ಮೀನುಗಾರಿಕೆಯನ್ನೇ ಕಾಯಕವನ್ನಾಗಿಸಿಕೊಂಡಿರುವ ಮೀನುಗಾರರು ಮಾತ್ರ ಜೀವ ಭಯದಿಂದಲೇ ಸಮುದ್ರಕ್ಕಿಳಿಯುವ ಸನ್ನಿವೇಶವಿದೆ. ಕಡಲ ಒಡಲಿಗಿಳಿದು ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರ ಜೀವಕ್ಕೆ ನಿರಂತರ ಆಪತ್ತು ಎದುರಾಗುತ್ತಿದೆ. ಆಳಸಮುದ್ರಕ್ಕೆ ತೆರಳಿ ಲಕ್ಷಾಂತರ ಮೊತ್ತದ ಮೀನುಗಳನ್ನು ಹೊತ್ತು ವಾಪಾಸು ಬರುತ್ತಿದ್ದರೂ ನೆಮ್ಮದಿಯಿಂದ ದಡ ಸೇರುತ್ತೇವೆ ಎಂಬ ನಂಬಿಕೆ ಅವರಲ್ಲಿರುವುದಿಲ್ಲ. ಮಂಗಳೂರಿನ ಬಂದರು(ಧಕ್ಕೆ) ಪ್ರವೇಶಿಸುವ […]

ಪಟ್ಟಿಯಲ್ಲಿ ಹೆಸರು, ಫೋಟೋ ಇಲ್ವಾ? ಓಟು ಹಾಕಲು ಅಸಾಧ್ಯ ಗೊತ್ತಾ?

Saturday, October 20th, 2012
Vote for election

ಮಂಗಳೂರು: ಭಾರತದ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಸಮೇತ ಹೆಸರು ಸೇರ್ಪಡೆಗೆ ಇದೀಗ ದ.ಕ. ಜಿಲ್ಲಾಡಳಿತ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಒಂದು ವೇಳೆ ಅಕ್ಟೋಬರ್ 31ರೊಳಗೆ ನಿಮ್ಮ ಹೆಸರನ್ನು ನೊಂದಾಯಿಸದಿದ್ದರೆ 2013ರಲ್ಲಿ ನಡೆಯುವ ರಾಜ್ಯ ವಿಧಾನ ಸಭೆ ಅಥವಾ ಲೋಕಸಭಾ ಚುನಾವಣೆಯಲ್ಲಿ ಓಟು ಹಾಕಲು ನಿಮಗೆ ಸಾಧ್ಯವಿಲ್ಲ. ನಿಮ್ಮ ನಿಮ್ಮ ಮತ ಚಲಾಯಿಸುವ ಹಕ್ಕನ್ನು ಕೈಯಾರೆ ಕಳಕೊಳ್ಳುವಿರಿ. 2013ರ ಜನವರಿ 1ಕ್ಕೆ ಅನ್ವಯವಾಗುವಂತೆ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ […]

ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ನ ಸೆಮಿ- ಫೈನಲ್ಗೆ ಮಂಗಳೂರಿನ ಓಶಿಯನ್ ಕಿಡ್ಸ್ ಡ್ಯಾನ್ಸ್ ಗ್ರೂಪ್

Friday, October 19th, 2012
Ocean Kids

ಮಂಗಳೂರು: ಮಂಗಳೂರು ಮೂಲದ ನೃತ್ಯ ತಂಡ ಓಶಿಯನ್ ಕಿಡ್ಸ್ ತಂಡವು ಕಲರ್ಸ್ ಟಿವಿ ಚಾನೆಲ್ ನಲ್ಲಿ ಪ್ರಸಾರ ವಾಗುವ ಭಾರತದ ಹೆಸರಾಂತ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಶೋ ನ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. ಇಂದು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಓಶಿಯನ್ ಕಿಡ್ಸ್ ತಂಡದ ಮುಖ್ಯಸ್ಥರಾದ ಪ್ರಮೋದ್ ಆಳ್ವ ಈ ವಿಷಯವನ್ನು ತಿಳಿಸಿದರು. ಓಶಿಯನ್ ಕಿಡ್ಸ್ ತಂಡವು ಇದುವರೆಗೆ ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. 1988 ರಲ್ಲಿ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದ ಸೋನಿಯ ಗಾಂಧಿ

Friday, October 19th, 2012
Sonia Kudroli

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶತಮಾನೋತ್ಸವ ಸಮಾರಂಭ ಹಾಗೂ ಮಂಗಳೂರು ದಸರವನ್ನು ಎಐಸಿಸಿ ಅಧ್ಯಕ್ಷೆಯಾದ ಸೋನಿಯ ಗಾಂಧಿಯವರು ಗುರುವಾರ ಉಧ್ಘಾಟಿಸುವ ಮೂಲಕ ಮಂಗಳೂರು ದಸರಕ್ಕೆ ಅಧಿಕೃತ ಚಾಲನೆ ನೀಡಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಕುದ್ರೋಳಿ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಹಾಗೂ ಆಡಳಿತ ಮಂಡಳಿ ನೇತ್ರತ್ವದಲ್ಲಿ ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳಾದ ಜಾತ್ಯಾತೀತ ಪರಿಕಲ್ಪನೆ, ಸಾಮಾಜಿಕ ಪರಿವರ್ತನೆ ಕಾರ್ಯಗಳು ಇನ್ನಷ್ಟು ಬಲಿಷ್ಠವಾಗಿ ಮುಂದುವರಿಯಲಿ ಎಂದು ಹಾರೈಸಿದರು. 19ನೇ ಶತಮಾನದಲ್ಲಿ ನಾರಾಯಣ ಗುರುಗಳು ಪ್ರವರ್ತಿಸಿದ ಮಹಾನ್ ಸಿದ್ಧಾಂತಗಳಾದ […]

ಕಾಂಗ್ರೆಸ್ ಸಮಾವೇಶದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ವಾಹನ ಜಾಥಾ

Thursday, October 18th, 2012
KPCC President Parameshwar

ಮಂಗಳೂರು: ಕಾಂಗ್ರೆಸ್ ಹಿಂದುಳಿದ ವರ್ಗದ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೃತ್ ಕದ್ರಿಯವರ ನೇತೃತ್ವದಲ್ಲಿ ನಗರದ ಕದ್ರಿ ಮೈದಾನದಿಂದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ರವರು ಧ್ವಜ ಬೀಸುವುದರ ಮುಖಾಂತರ ನಗರದಲ್ಲಿನ ಬೃಹತ್ ವಾಹನ ಜಾಥಕ್ಕೆ ಇಂದು ಮಧ್ಯಾಹ್ನ 12.10 ಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ, ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಉಪಸ್ಥಿತರಿದ್ದರು. ಎಮ್ ವೇಣುಗೋಪಾಲ್ ಅವರು ಮಂಗಳೂರಿಗೆ ಸೋನಿಯ ಗಾಂಧಿಯವರ ಭೇಟಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ […]

ಮಂಗಳೂರು ದಸರಾ ಎಷ್ಟೊಂದು ಸುಂದರ…

Wednesday, October 17th, 2012
Mangalore dasara

ಮಂಗಳೂರು : ಮಂಗಳೂರಿನ ದಸರಾ ಕರಾವಳಿ ಪ್ರದೇಶದ ಪ್ರಮುಖ ಉತ್ಸವ. ಕುದ್ರೋಳಿಯ ಗೋಕರ್ಣನಾಥೇಶ್ವರನ ಸನ್ನಿಧಿಯಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ಮೆರವಣಿಗೆ ಮಾಡುವುದು ದಸರಾ ಆಚರಣೆಯ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ದಸರಾ ನಾಡಿನ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. `ದಸರಾ’ ಅಂದಾಕ್ಷಣ ನೆನಪಾಗುವುದು ಮೈಸೂರಿನ ದಸರಾ. ಆನೆ, ಅಂಬಾರಿ, ಜಂಬೂ ಸವಾರಿ ಇತ್ಯಾದಿಗಳು ಕಣ್ಣಮುಂದೆ ಸುಳಿಯುತ್ತವೆ. `ಮಂಗಳೂರಿನ ದಸರಾ’ ಕರಾವಳಿ ಪ್ರದೇಶದ ಅತ್ಯಂತ ದೊಡ್ಡ ಉತ್ಸವ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ದಸರಾ ಜನಪ್ರಿಯವಾಗುತ್ತಿದೆ. ಒಂಬತ್ತು ದಿನಗಳ […]

ನವರಾತ್ರಿಯಲ್ಲಿ ನವದುರ್ಗೆಯರ ನವ ವೈಭವ

Wednesday, October 17th, 2012
Navaratri

ಮಂಗಳೂರು: ನವರಾತ್ರಿ ನಮ್ಮ ದೇಶದ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯು ಶಕ್ತಿ ದೇವತೆಯ ಹಬ್ಬ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಶಕ್ತಿದೇವತೆಯನ್ನು ಒಂಭತ್ತು ರಾತ್ರಿಗಳು ಹಾಗೂ ಹತ್ತು ಹಗಲುಗಳ ಕಾಲ ಒಂಭತ್ತು ರೂಪಗಳಲ್ಲಿ ಪೂಜಿಸುತ್ತಾರೆ. ಹತ್ತನೆಯ ದಿನವನ್ನು ವಿಜಯದಶಮಿ ಅಥವಾ ದಸರಾ ಎಂದು ಕರೆಯುತ್ತಾರೆ. ಭಾರತದಲ್ಲಿ ನವರಾತ್ರಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಉತ್ತರ ಭಾರತೀಯರಿಗೆ ನವರಾತ್ರಿ ಎಂದರೆ ಬಹುದೊಡ್ಡ ಹಬ್ಬವಾಗಿದೆ. ಒಂಭತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ, ಆರಾಧಿಸುತ್ತಾರೆ. ಭಾರತದ ವಿವಿಧ ಭಾಗಗಳಲ್ಲಿ […]