ಗೋ ಶಾಲೆ ಸಹಾಯಾರ್ಥ ಯಕ್ಷಗಾನ

Monday, July 4th, 2011
havyaka go shale

ವೇಣೂರು: ಜಗದ್ಗುರುಶಂಕರಾಚಾರ್ಯ ಮಹಾ ಸಂಸ್ಥಾನಮ್ ,ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ವೇಣೂರು ಸಮೀಪದ ಗುಂಡೂರಿಯಲ್ಲಿರುವ ಕಾವೇರಮ್ಮ ಅಮೃತಧಾರಾ ಗೋಶಾಲೆಯ ಸಹಾಯಾರ್ಥ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜುಲೈ 21ರಂದು ಸಂಜೆ 6ಗಂಟೆಗೆ ಗುರುವಾಯನಕೆರೆ “ನಮ್ಮ ಮನೆ” ಹವ್ಯಕ ಭವನದಲ್ಲಿ  ಶ್ರೀ ಧರ್ಮಸ್ಥಳ ಮತ್ತು ಶ್ರೀ ಕಟೀಲು ಮೇಳದ ಸುಪ್ರಸಿದ್ಧ ಕಲಾವಿದರ ಸಮ್ಮಿಲನದಲ್ಲಿ “ವಿಷಮರ್ಧನ – ಕುಶಲವ” ಎಂಬ ಪುರಾಣ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ರೂಪದಲ್ಲಿ ಆಡಿತೋರಿಸಲಿದ್ದಾರೆ. ಯಸ್.ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಪೆರುವೋಡಿ […]

ದೇಶದಲ್ಲಿ ದುಷ್ಕೃತ್ಯವೆಸಗುವ ಕೆ.ಎಫ್.ಡಿ. ಮತ್ತು ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Saturday, June 25th, 2011
ABVP protest

ಮಂಗಳೂರು: ಭಯೋತ್ಪಾದಕ ಕೃತ್ಯ ಮತ್ತು ಸಮಾಜಘಾತಕ ಕೃತ್ಯಗಳಲ್ಲಿ ತೊಡಗಿರುವ ಕರ್ನಾಟಕ ಫೋರಂ ಫಾರ್  ಡಿಗ್ನಿಟಿ (ಕೆ.ಎಫ್.ಡಿ)  ಸಂಘಟನೆಯನ್ನು ರಾಜ್ಯ ಸರ್ಕಾರ ಕೂಡಲೇ ನಿಷೇಧಿಸಬೇಕೆಂದು ಅಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ನಗರದ ಬೆಸೆಂಟ್ ವೃತ್ತದ ಬಳಿ  ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ. ಹರ್ಷ ಮಾತನಾಡಿ ಹುಣಸೂರಿನ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ 5. ಕೋಟಿ ಹಣ ನೀಡಬೇಕೆಂದು ತಂದೆ-ತಾಯಿಗಳಿಗೆ ಬೆದರಿಕೆ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದನ್ನು ಅಭಾವಿಪ ತೀವ್ರವಾಗಿ ಖಂಡಿಸುತ್ತದೆ ಅಲ್ಲದೇ ಕೆ.ಎಫ್.ಡಿ […]

ರೋಗಗಳ ಹತೋಟಿಗೆ ಅಯೋಡಿನ್ ಯುಕ್ತ ಉಪ್ಪು ಅತೀ ಅಗತ್ಯ

Tuesday, May 31st, 2011
iodin

ಮಂಗಳೂರು:2005 ರಿಂದ ಪೌಷ್ಟಿಕ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪನ್ನುಬಳಸುವ ಬಗ್ಗೆ ಗ್ರಾಮಾಂತರಪ್ರದೇಶದ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದು,ಈಗಾಗಲೇ ಶೇಕಡಾ 47 ರಷ್ಟು ಪ್ರಗತಿಯಾಗಿದೆ. ಅಯೋಡಿನ್ ಇಲ್ಲದ ಉಪ್ಪನ್ನು ಈಗಲೂ ಕೆಲವು ಗ್ರಾಮಾಂತರ ಜನರು ಬಳಸುತ್ತಿದ್ದಾರೆ. ಅಯೋಡಿನ್ ಯುಕ್ತ ಉಪ್ಪನ್ನು ಎಲ್ಲರೂ ಬಳಸುವ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾಗಿದೆ. ಉಪ್ಪುತಯಾರಕರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಅಯೋಡಿನ್ಯುಕ್ತ ಉಪ್ಪು ಹಲವಾರು ರೋಗಗಳನ್ನು ಹತೋಟಿಯಲ್ಲಿಡಬಲ್ಲದು ಎಂದು ಮಂಗಳೂರು ತಾಲೂಕಿನ ಸಹಾಯಕ ಕಮೀಷನರ್ ಶ್ರೀ ಪ್ರಭುಲಿಂಗ ಕವಳಿಕಟ್ಟಿ ಅಭಿಪ್ರಾಯ ಪಟ್ಟರು. ಅವರು ಇಂದು (31-5-11)ಫಾದರ್ […]

ಮೂಡನಂಬಿಕೆ ತಡೆಗೆ ಅರಿವು

Monday, May 30th, 2011
superstitions

ಮಂಗಳೂರು: ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಮೂಢನಂಬಿಕೆಯಿಂದ ಬಾಲಕಿ ಬಲಿ ಕುರಿತ ವರದಿಯಿಂದ ಇನ್ನು ಮುಂದೆ ಇಂತಹ ಮೂಡನಂಬಿಕೆಗಳು ಪುನರಾವರ್ತನೆಯಾಗದಂತೆ ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಅಧೀನ ಕಾರ್ಯದರ್ಶಿಗಳು ಸುತ್ತೋಲೆಯನ್ನು ಹೊರಡಿಸಿರುತ್ತಾರೆ.ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಅರಿವನ್ನುಂಟು ಮಾಡುವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಮತ್ತು ಪಂಚಾಯತಿಗಳ ಮೂಲಕ ಹಮ್ಮಿಕೊಳ್ಳುವುದು ಮತ್ತು ಕರಪತ್ರಗಳನ್ನು ಮುದ್ರಿಸಿ ಸಮುದಾಯ,ಶಾಲಾ ಕಾಲೇಜುಗಳಿಗೆ ವಿತರಿಸುವುದು. ಸ್ತ್ರೀಶಕ್ತಿ ,ಸ್ವಸಹಾಯ ಸಂಘಗಳು  ,ಮಹಿಳಾ ಮಂಡಳಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕ್ಷೇತ್ರ […]

ಜೂನ್ 8 ರಂದು ಕಯ್ಯಾರ ಕಿಂಞಣ್ಣ ರೈಯವರ 97ನೇ ವರ್ಷದ ಜನ್ಮದಿನೋತ್ಸವ ಮತ್ತು ಸಾಹಿತ್ಯೋತ್ಸವ

Saturday, May 28th, 2011
kayyara kinyanna rai

ಅಖಿಲ ಭಾರತ 66ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಾಗೂ ಕರ್ನಾಟಕ  ರಾಜ್ಯೋತ್ಸವ ಪ್ರಶಸ್ತಿ,ಮಂಗಳೂರು ವಿಶ್ವ ವಿದ್ಯಾನಿಲಯ ಡಾಕ್ಟರೇಟ್,ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ನಾಡೋಜ ಪದವಿ ಪುರಸ್ಕೃತ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರ 97ನೇ ವರ್ಷದ ಜನ್ಮದಿನೋತ್ಸವ ಮತ್ತು ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಕಾಸರಗೋಡು ಬದಿಯಡ್ಕ ಪೆರಡಾಲದ ಕವಿತಾ ಕುಟೀರದಲ್ಲಿ 2011 ಜೂನ್ 8 ರಂದು ಸಂಜೆ 3.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸರಕಾರದ ಪರವಾಗಿ ಅಭಿನಂದನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ […]

ಮೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀ ವಿಜಯನರಸಿಂಹ

Monday, May 23rd, 2011
ವಿಜಯನರಸಿಂಹ

ಮಂಗಳೂರು : ಮೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಜಯನರಸಿಂಹ ಎಂ.ಇ., ಡಿ.ಬಿ.ಎಫ್.,  ಇವರು ಕರ್ನಾಟಕ  ಸರಕಾರದ ಅಧಿಸೂಚನೆಯಂತೆ, ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡು, ದಿನಾಂಕ 23.05.2011 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ. ಶ್ರೀಯುತರು 1977ರಲ್ಲಿ ಅಂದಿನ ಕೆ.ಇ.ಬಿ ಗೆ ಪ್ರೊಬೇಷನರಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿ) ಆಗಿ ನೇಮಕಗೊಂಡು, ಕೆ.ಇ.ಬಿ/ಕವಿಪ್ರನಿನಿಯಲ್ಲಿ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿ.), ಅಧೀಕ್ಷಕ ಇಂಜಿನಿಯರ್ (ವಿ.) ಹಾಗೂ ಮುಖ್ಯ ಇಂಜಿನಿಯರ್ (ವಿದ್ಯುತ್) ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. […]

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ : ಹುಡುಗಿ ಸಹಿತ ಆರು ಮಂದಿಯ ಸೆರೆ

Saturday, May 21st, 2011
ವೇಶ್ಯಾವಾಟಿಕೆ : ಹುಡುಗಿ ಸಹಿತ ಆರು ಮಂದಿಯ ಸೆರೆ

ಮಂಗಳೂರು : ನಗರದ ಮೈದಾನ ರಸ್ತೆಯ 3ನೇ ಕ್ರಾಸಿನ ಸಮೃದ್ಧಿ ಲಾಡ್ಜಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇನೇಜರ್ ಆಶ್ರಫ್ ಜೊತೆಗೆ ಆತನಿಗೆ ಸಹಕರಿಸುತ್ತಿದ್ದ ರೂಂ ಬೋಯ್ ರವಿ ಶಿರಸಿ, ಹಾಗೂ ಕ್ಲೀನರ್ ರಾಜೇಶ್, ಗಿರಾಕಿಗಳಾದ ಹರೀಶ್ ಬೆಂಗಳೂರು, ಅಬ್ಬಾಸ್ ತೊಕ್ಕೋಟ್ಟು, ಅರುಣ್ ನೀರು ಮಾರ್ಗ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆಂದ್ರಮೂಲದ ಮಮತಾ (26ವ) ಎಂಬವರನ್ನು ಬಂಧಿಸಲಾಗಿದೆ. ಇಂದು ಸಂಜೆ 4 ಗಂಟೆಗೆ ಎಸಿಪಿ ರವೀಂದ್ರ ಗಡದಿಯವರಿಗೆ ಬಂದ ಮಾಹಿತಿಯಂತೆ ಬಂದರು ಠಾಣೆಯ ಇನ್ಸ್ ಫೆಕ್ಟರ್ ಕೆ.ಕೆ. ರಾಮಕೃಷ್ಣ […]

ಏರ್ ಇಂಡಿಯಾ ವಿಮಾನ ದುರಂತದ ಒಂದು ವರ್ಷದ ಕಹಿ ನೆನಪು

Saturday, May 21st, 2011
ಏರ್ ಇಂಡಿಯಾ ದುರಂತದ ಒಂದು ವರುಷ

ಮಂಗಳೂರು : ಏರ್ ಇಂಡಿಯಾ  ಬೋಯಿಂಗ್ ಏರ್‌ಕ್ರಾಫ್ಟ್ 737- 800  ವಿಮಾನ ದುರಂತ ನಡೆದು  ಮೇ 22 ಕ್ಕೆ   ಒಂದು ವರ್ಷವಾದ ಕಹಿ ನೆನಪಿನ ದಿನವನ್ನು ಮಂಗಳೂರು ವಿಮಾನ ದುರಂತ ಸಂತ್ರಸ್ತರ ಕುಟುಂಬಗಳ ಸಂಘ ಇಂದು ಆಚರಿಸಿತು. ಇಂದು ಬೆಳಿಗ್ಗೆ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆದ ಸಂತಾಪ ಸಭೆಯ ಅಧ್ಯಕ್ಷತೆಯನ್ನು ಮಾಹೆಯ ಮಾಜಿ ಡೀನ್ ಡಾ.ಬಿ.ಎಂ. ಹೆಗ್ಡೆ ವಹಿಸಿದ್ದರು. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಿ ರಾಜ ಯೋಗಿಣಿ ಬ್ರಹ್ಮಕುಮಾರಿ ಪಿ.ಕೆ. ನಿರ್ಮಲಾ, ಅಬ್ದುಲ್ ಅಝೀಝ್ ಫೈಝಿ, ರೆ.ಫಾ. […]

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಫೋನ್, ಗಾಂಜಾ ಪತ್ತೆ

Wednesday, May 18th, 2011
ಮಂಗಳೂರು ಜಿಲ್ಲಾ ಕಾರಾಗೃಹ

ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳು ಅಕ್ರಮ ವ್ಯವಹಾರ ಹಾಗೂ  ಕ್ರಿಮಿನಲ್ ಚಟುವಟಿಕೆ ಗಳಲ್ಲಿ ತೊಡಗಿದ್ದಾರೆ ಎಂಬ ದೂರಿನ ಅನ್ವಯ ಎಸಿಪಿ ರವೀಂದ್ರ ಗಡಾದಿ ಅವರ ನೇತ್ರತ್ವದಲ್ಲಿ ಇಂದು ಮಧ್ಯಾಹ್ನ ಅನಿರೀಕ್ಷಿತ ದಾಳಿ ನಡೆಸಿದ ಪೊಲೀಸರು ಜೈಲಿನಲ್ಲಿದ್ದ ಖೈದಿಗಳಿಂದ ಸಿಮ್ ಕಾರ್ಡ್, ಎರಡು ಮೊಬೈಲ್ ಫೋನ್ ಹಾಗೂ ಎರಡು ಪ್ಯಾಕೇಟ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಖೈದಿಗಳಿಗೆ ಗಾಂಜಾ ಹಾಗೂ ಮೊಬೈಲ್ ಫೋನ್ ಸಿಗುವಲ್ಲಿ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿರುವ ಬಗ್ಗೆ ಸಂಶಯವಿದ್ದು ತನಿಖೆಯಿಂದ ತಿಳಿದು ಬರಬೇಕಿದೆ. […]

ಎಂಡೋಸಲ್ಫಾನ್ ನಿಷೇಧ ಕೂಡಲೇ ಜಾರಿಗೆ ಆಗ್ರಹಿಸಿ ರೈತಸಂಘಟನೆಗಳ ಪ್ರತಿಭಟನೆ

Tuesday, May 17th, 2011
ಎಂಡೋಸಲ್ಫಾನ್ ನಿಷೇಧ ಕೂಡಲೇ ಜಾರಿಗೆ ಆಗ್ರಹಿಸಿ ರೈತಸಂಘಟನೆಗಳ ಪ್ರತಿಭಟನೆ

ಮಂಗಳೂರು : ಭಾರತೀಯ ಕಿಸಾನ್ ಸಂಘ ಮತ್ತು ದ.ಕ ಜಿಲ್ಲಾ ಸಾವಯವ ಕೃಷಿ ಪರಿವಾರ ಇವರ ಜಂಟಿ ಆಶ್ರಯದಲ್ಲಿ ದಿನಾಂಕ ಇಂದು ಬೆಳಿಗ್ಗೆ 11-00 ರಿಂದ ಜಿಲ್ಲಾಧಿಕಾರಿ ಕಛೇರಿ ಎದುರುಗಡೆ ಎಂಡೋಸಲ್ಫಾನ್ ನಿಷೇಧ ಕೂಡಲೇ ಜಾರಿಗೆ ಆಗ್ರಹಿಸಿ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾವಯವ ಕೃಷಿಕ ಸುಂದರ್ ರಾವ್ ಅವರು ಎಂಡೋಸಲ್ಫಾನ್ ಎಂಬ ಮಹಾಮಾರಿ ಕೀಟ ನಾಶಕವು ಸಂಪೂರ್ಣ ಜೀವ ಜಗತ್ತಿಗೇ ಮಾರಕವಾಗಿರುವುದು  ಇಂದು ಗುಟ್ಟಾಗಿ ಉಳಿದಿಲ್ಲ. ಜಗತ್ತಿನ 84 ದೇಶಗಳು ಈ ಮಾರಕ […]