ವಾಟ್ಸಾಪ್​ ವಿಡಿಯೋ ಕಾಲ್ ಬಳಸಿ ದರೋಡೆ ಮಾಡುತ್ತಿದ್ದ ಬೆಂಗಳೂರಿನ ಹೈಟೆಕ್ ಕಳ್ಳನ ಬಂಧನ

Tuesday, January 28th, 2020
bengaluru

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಪರಾಧಗಳನ್ನು ತಡೆಗಟ್ಟಲು ಪೊಲೀಸರು ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಅದಕ್ಕೆ ಪರ್ಯಾಯವಾಗಿ ದರೋಡೆಕೋರರು ಹೊಸ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅದೇರೀತಿ, ಮೊಬೈಲ್ ತಂತ್ರಜ್ಞಾನವನ್ನು ದರೋಡೆಗೆ ಬಳಕೆ ಮಾಡಿಕೊಳ್ಳುತ್ತಿದ್ದ ಕಳ್ಳರ ಜಾಲವೊಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಕಳ್ಳತನ ಮಾಡಲು ಹೋಗಬೇಕಾದ ಮನೆಯಲ್ಲಿ ಯಾರಾದರೂ ಇದ್ದಾರಾ? ಎಂದು ನೋಡಲು ನಾನಾ ಉಪಾಯಗಳನ್ನು ಕಂಡುಕೊಂಡಿದ್ದ ಮಹಾನಗರಗಳ ಕಳ್ಳರು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ತಡರಾತ್ರಿ ವಿಡಿಯೋ ಕಾಲ್ ಮುಖಾಂತರ […]

ಉಡುಪಿಯ ಖ್ಯಾತ ಉದ್ಯಮಿ ಅಲೆಕ್ಸ್ ಲೂವಿಸ್ ಬೆಂಗಳೂರಿನಲ್ಲಿ ಆತ್ಮಹತ್ಯೆ

Thursday, January 23rd, 2020
Alex-Lewis

ಉಡುಪಿ : ಖ್ಯಾತ ಉದ್ಯಮಿ, ಕ್ರಿಕೆಟ್ ಪಟು ಮತ್ತು ಸಂಘಟಕ ಅಲೆಕ್ಸ್ ಲೂವಿಸ್ (45) ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿರುವ ಘಟನೆ ನಡೆದಿದೆ. ಉದ್ಯಾವರದ ಬೋಳಾರ್ ಗುಡ್ಡೆ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು ಡಿಎನ್ಎ ಹೋಂ ಥಿಯೇಟರ್ ಉದ್ಯಮವನ್ನು ನಡೆಸುತ್ತಿದ್ದರು. ಕಳೆದ ಹಲವಾರು ದಿನಗಳಿಂದ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದ, ಅಲೆಕ್ಸ್ ಲುವಿಸ್ ಇಂದು ಸಂಜೆ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಖ್ಯಾತ ಕ್ರಿಕೆಟ್ ಪಟು ಆಗಿದ್ದ ಇವರು, ಹಲವಾರು ಕ್ರಿಕೆಟ್ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದರು. ಕೆಲವು ವರ್ಷಗಳ […]

ಭೂಗತ ಪಾತಕಿ ಛೋಟಾ ರಾಜನ್‌ ವಿರುದ್ಧ ನಾಲ್ಕು ಪ್ರಕರಣಗಳ ತನಿಖೆ

Thursday, January 23rd, 2020
khotaa

ನವದೆಹಲಿ : ಭೂಗತ ಪಾತಕಿ ಛೋಟಾ ರಾಜನ್‌ ಅವರ ಪಾತ್ರವಿದೆಯೆನ್ನಲಾದ, ನಾಲ್ಕು ಪ್ರಕರಣಗಳ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. 1997ರಲ್ಲಿ ಪತ್ರಕರ್ತ ಬಲ್ಜೀತ್‌ ಶೆರ್ಸಿಂಗ್‌ ಪರ್ಮಾರ್‌ ಕೊಲೆಯತ್ನವೂ ಇದರಲ್ಲಿದೆ. ಸದ್ಯ ಛೋಟಾ ರಾಜನ್‌ ಬಂಧನದಲ್ಲಿ ಇದ್ದಾನೆ. 2015ರಲ್ಲಿ ಆತ ನನ್ನು ಇಂಡೋನೇಷ್ಯಾದಲ್ಲಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.1995ರಲ್ಲಿ ಮುಂಬಯಿ ಉದ್ಯಮಿ ದೇವಾಂಗ್‌ ಬಿಪಿನ್‌ ಪಾರೀಖ್‌ರಿಂದ 20 ಲಕ್ಷ ರೂ., 1998 ರಲ್ಲಿ 25 ಲಕ್ಷ ರೂ.ವಸೂಲು ಮಾಡಿದ ಪ್ರಕರಣವನ್ನು ಕೈಗೆತ್ತಿಕೊಂಡಿದೆ.  

ಮಂಗಳೂರು : ರಾತ್ರಿಯಿಡೀ ಆರೋಪಿ ಆದಿತ್ಯರಾವ್​ ತೀವ್ರ ವಿಚಾರಣೆ; ಇಂದು ಕೋರ್ಟ್​ಗೆ ಹಾಜರು

Thursday, January 23rd, 2020
adithya-rao

ಮಂಗಳೂರು : ರಾಜ್ಯದಾದ್ಯಂತ ಭೀತಿ ಸೃಷ್ಟಿಸಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದು, ತನಿಖಾಧಿಕಾರಿಗಳಿಂದ ತೀವ್ರ ವಿಚಾರಣೆ ನಡೆದಿದೆ. ನಿನ್ನೆ ಬೆಂಗಳೂರಿನ ಮೊದಲನೇ ಎಸಿಎಂಎಂ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಅಲ್ಲಿ ನ್ಯಾಯಾಧೀಶರು ಅನುಮತಿ ನೀಡಿದ ಬಳಿಕ ತನಿಖಾ ತಂಡ ಮಂಗಳೂರಿಗೆ ಕರೆ ತಂದಿದೆ. ಮಂಗಳೂರು ಪೊಲೀಸ್ ಆಯುಕ್ತ ಹರ್ಷಾ ನೇತೃತ್ವದಲ್ಲಿ ರಾತ್ರಿಯಿಡೀ ವಿಚಾರಣೆಗೊಳಪಡಿಸಿರುವ ಪೊಲೀಸ್ ಅಧಿಕಾರಿಗಳು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿಯನ್ನು ಇಂದು ಸಂಜೆಯೊಳಗೆ ಮಂಗಳೂರಿನ 6ನೇ ಜೆಎಂಎಫ್ಸಿ ಕೋರ್ಟ್ಗೆ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣ : ಮಂಗಳೂರಿನ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಆದಿತ್ಯ ರಾವ್

Wednesday, January 22nd, 2020
adithya-rao

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ವೊಂದರಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಮಣಿಪಾಲದ ಆದಿತ್ಯ ರಾವ್, ಮಂಗಳೂರಿನ ಹೊಟೇಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿಷಯ ಬಹಿರಂಗವಾಗಿದೆ. ಆರೋಪಿ ಆದಿತ್ಯ ರಾವ್ ಇಂದು ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಯು ನಗರದ ಬಲ್ಮಠದ ಹೋಟೆಲ್‌ವೊಂದರಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದಾನೆ. ಹೋಟೆಲ್‌ನ ಬಿಲ್ಲಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ, ಅಚ್ಚುಕಟ್ಟಾಗಿಯೇ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಯು ಕೆಲಸಕ್ಕೆ ಬರುವಾಗ ಬ್ಯಾಗ್‌ವೊಂದನ್ನು ಸದಾ ಹಿಡಿಕೊಂಡು ಬರುತ್ತಿದ್ದ. […]

ಗ್ರಾಮಪಂಚಾಯಿತಿ ಮಾಸಿಕ ಸಭೆಯ ನಡುವೆ ಅಧ್ಯಕ್ಷೆ ಸದಸ್ಯನ ನಡುವೆ ಮಾತಿನ ಚಕಮಕಿ

Wednesday, January 22nd, 2020
harish

ಕುಶಾಲನಗರ : ಗ್ರಾಮಪಂಚಾಯಿತಿ ಮಾಸಿಕ ಸಭೆಯ ನಡುವೆ ಅಧ್ಯಕ್ಷೆ ಮತ್ತು ಸದಸ್ಯನ ನಡುವೆ ಮಾತಿನ ಚಕಮಕಿ ನಡೆದು ಅಧ್ಯಕ್ಷೆ ಸದಸ್ಯನ ಶರ್ಟ್ ಅನ್ನು ಹರಿದು ಹಾಕಿದ ಘಟನೆ ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಈ ಹಿಂದಿನ ಸಭೆಯ ನಡಾವಳಿಗಳನ್ನು ಕಾರ್ಯರೂಪಕ್ಕೆ ತರದಿರುವ ಬಗ್ಗೆ ಸಭೆಯಲ್ಲಿ ಕೆಲವು ಸದಸ್ಯರು ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದಾರೆ. ಸಭೆಯನ್ನು ಸ್ಥಗಿತಗೊಳಿಸುವ ಸಂಬಂಧ ಚರ್ಚೆಗಳು ನಡೆಯುತ್ತಿರುವ ವೇಳೆ ಪಂಚಾಯಿತಿ ಅಧ್ಯಕ್ಷೆ ಭವ್ಯ ಮತ್ತು ಸದಸ್ಯ ಹರೀಶ್ ನಡುವೆ ಮಾತಿನ ಚಕಮಕಿ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದ ವ್ಯಕ್ತಿ ಆದಿತ್ಯರಾವ್ ಬೆಂಗಳೂರು ಪೊಲೀಸರಿಗೆ ಶರಣು

Wednesday, January 22nd, 2020
Accused-Adithya-Rao

ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಡುಪಿ ಮೂಲದ ಆದಿತ್ಯರಾವ್ ಎಂಬಾತ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ. ಬೆಂಗಳೂರಿನ ನೃಪತುಂಗ ರಸ್ತೆ ಬಳಿ ಇರುವ ಡಿಜಿಐಜಿಪಿ ಕಚೇರಿಗೆ ಬಂದು ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಹುಸಿ‌ ಬಾಂಬ್ ಕರೆಯಿಂದ ಆದಿತ್ಯರಾವ್ ಅರೆಸ್ಟ್ ಆಗಿದ್ದ. ಇಂದು ಡಿಜಿ ಕಚೇರಿಗೆ ಬಂದು ಶರಣಾದ ಹಿನ್ನೆಲೆ ಆರೋಪಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸ್ರು ವಶಕ್ಕೆ ಪಡೆದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮುಂದುವರೆಸಲಿದ್ದಾರೆ. ಎರಡು […]

ಬೆಂಗಳೂರಿನ ಕೆಂಗೇರಿ ಸ್ಯಾಟಲೈಟ್​ ಟೌನ ಸಂತ ಫ್ರಾನ್ಸಿಸ್​ ಅಸೀಸಿ ಚರ್ಚ್​ ಮೇಲೆ ದುಷ್ಕರ್ಮಿಗಳ ದಾಳಿ

Tuesday, January 21st, 2020
santa-prancis

ಬೆಂಗಳೂರು : ನಗರದ ಕೆಂಗೇರಿ ಸ್ಯಾಟಲೈಟ್ ಟೌನ ಸಂತ ಫ್ರಾನ್ಸಿಸ್ ಅಸೀಸಿ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಚರ್ಚ್ ಒಳಗೆ ನುಗ್ಗಿದ ಕೆಲವು ಕಿಡಿಗೇಡಿಗಳು, ಗಾಜಿನ ಆವರಣವನ್ನು ಪುಡಿಪುಡಿ ಮಾಡಿದ್ದು, ಕೆಲವು ಧಾರ್ಮಿಕ ವಸ್ತುಗಳ ಮೇಲೆ ದಾಳಿ ನಡೆಸಿದ್ದಾರೆ. ಯಾರು ಯಾವಾಗ ಈ ಘಟನೆ ಮಾಡಿದ್ದಾರೆ ಎಂಬುದು ಇನ್ನು ಬೆಳಕಿಗೆ ಬಂದಿಲ್ಲ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್ನ ಗುರು ಫಾ.ಸತೀಶ್ ಅವರಿಂದ ಮಾಹಿತಿ […]

ಕುಡಿತಕ್ಕೆ ಹಣ ನೀಡಲಿಲ್ಲವೆಂದು ಮಗನಿಂದ ತಂದೆಯ ಕೊಲೆ : ತಾಯಿ ಗಂಭೀರ

Tuesday, January 21st, 2020
lokesh

ಮಡಿಕೇರಿ : ಕುಡಿತದ ದಾಸನಾಗಿದ್ದ ವ್ಯಕ್ತಿಯೋರ್ವ ಕುಡಿಯಲು ಹಣ ನೀಡಲಿಲ್ಲವೆಂದು ತಂದೆ ಹಾಗೂ ತಾಯಿಯ ಮೇಲೆ ಮರದ ತುಂಡಿನಿಂದ ಹಲ್ಲೆ ಮಾಡಿ ತಂದೆಯನ್ನು ಕೊಲೆಗೈದಿರುವ ಘಟನೆ ವರದಿಯಾಗಿದೆ. ಸೋಮವಾರಪೇಟೆ ಸಮೀಪದ ಗೋಣಿಮರೂರು ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಜೇನುಕುರುಬರ ಕರಿಯಪ್ಪ (46) ಎಂಬುವವರೇ ಮಗ ಲೋಕೇಶ ಎಂಬಾತನಿಂದ ಹತ್ಯೆಗೀಡಾದ ದುರ್ದೈವಿಯಾಗಿದ್ದಾರೆ. ಮಗನ ಹಲ್ಲೆಯಿಂದ ತಾಯಿ ಲೀಲಾ ಎಂಬುವವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಲೋಕೇಶ ನಿನ್ನೆ ರಾತ್ರಿ ಕಂಠಪೂರ್ತಿ ನಿಶೆಯೇರಿಸಿ ಮನೆಗೆ ಬಂದು ತಂದೆ […]

ರಸ್ತೆ ದಾಟುತ್ತಿದ್ದ ವೇಳೆ ಅಪಘಾತ : ವ್ಯಕ್ತಿ ಮೃತ್ಯು

Tuesday, January 21st, 2020
kaleed

ಮಡಿಕೇರಿ : ಮುಖ್ಯ ರಸ್ತೆಯನ್ನು ದಾಟುತ್ತಿದ್ದ ವ್ಯಕ್ತಿಯೊಬ್ಬರು ರಾಯಲ್ ಎನ್‌ಫೀಲ್ಡ್ ಡಿಕ್ಕಿಯಿಂದ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಎಫ್.ಎಂ.ಸಿ. ರಸ್ತೆಯ ಬಳಿಯ ಮಾಡರ್ನ್ ವಾಚ್ ವರ್ಕ್ಸ್ ಅಂಗಡಿಯ ಮಾಲೀಕರಾದ ಎಂ.ಎಸ್.ಖಾಲೀದ್ ಅಹಮ್ಮದ್ (56)ಎಂಬವರೆ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಯ, ಎನ್‌ಫೀಲ್ಡ್ ಸವಾರ, ಚೊಕಂಡಳ್ಳಿ ನಲ್ವತೊಕ್ಲು ಗ್ರಾಮದ ನಿವಾಸಿ ಮೂಸ ಅವರ ಪುತ್ರ ರಫೀಕ್ ಎಂಬವರು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ. ಖಾಲೀದ್ ಅಹಮ್ಮದ್ ಅವರು ಅಪೋಲೋ ಜೌಷಧಿ ಅಂಗಡಿಗೆ ತೆರಳಿ, ಅಗತ್ಯ ಜೌಷಧಿ ತೆಗೆದುಕೊಂಡು ಮುಖ್ಯ ರಸ್ತೆಯನ್ನು ದಾಟುವ ಸಂದರ್ಭ […]