ಡಿಸಿ ಎತ್ತಂಗಡಿ ಹಿಂದೆ ಭಟ್ಟರ ಆಟ

Saturday, November 24th, 2012
Yogish Bhatt Chennapa

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪ ಗೌಡರನ್ನು ಏಕ್ ದಂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರಿನ ಕೇಂದ್ರ ಕಚೇರಿ ನಿರ್ದೇಶಕರಾಗಿ ನಿಯುಕ್ತಿಗೊಳಿಸಿದ ನಿರ್ಧಾರದ ಹಿಂದೆ ಏನಿದೆ ಮರ್ಮ ಎನ್ನುವ ರಹಸ್ಯ ವಿಚಾರ ಕಡೆ ಕಣ್ಣು ಹಾಕಿದರೆ ಜಿಲ್ಲೆಗೆ ಬಂದ ಎಲ್ಲ ಡಿಸಿಗಳ ಎತ್ತಂಗಡಿಯ ಹಿಂದೆ ಇರುವ ರಾಜಕಾರಣದ ನಂಟು ಹೊರಬೀಳುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಮಾರಕ, ರಾಜಕಾರಣಿಗಳ ಮಾತು ಕೇಳುತ್ತಿಲ್ಲ ಎನ್ನುವ ನಾನಾ ಕಾರಣಗಳನ್ನು ಒಡ್ಡಿಕೊಂಡು ಜಿಲ್ಲೆಯ ಡಿಸಿಗಳನ್ನು ಏಕ್ ದಂ ಎತ್ತಂಗಡಿ ಮಾಡುವ […]

ಆಮ್ಮಿ ಕೊಂಕಣಿ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ

Friday, November 23rd, 2012
Aami Konkani

ಮಂಗಳೂರು :ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿರುವ ಆಮ್ಮಿ ಕೊಂಕಣಿ ನಾಲ್ಕು ದಿನಗಳ ಕೊಂಕಣಿ ಸಾಂಸ್ಕೃತಿಕ ಮಹೋತ್ಸವವನ್ನು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಗುರುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯಾವುದೇ ಒಂದು ದೇಶದ, ಸಮುದಾಯದ ಅಸ್ತಿತ್ವ ಅದರ ಭಾಷೆ, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ ಉಳಿವಿನ ಮೇಲಿದೆ. ಒಂದು ಸಮುದಾಯದ ಸಂಸ್ಕೃತಿಯ ಆಚರಣೆ ಎಂದಿಗೂ ಶಾಶ್ವತವಾಗಿ ಉಳಿಯಬೇಕಾದರೆ ಆ ಸಮುದಾಯದ ಭಾಷೆಯನ್ನು ಉಳಿಸಿ ಬೆಳೆಸಬೇಕು. ದೇಶದ ವಿವಿಧ ಜನರನ್ನು […]

ಇಂದು ಸಾರಿಗೆ ಸಚಿವ ಆರ್‌. ಅಶೋಕ್‌ ರವರಿಂದ ಮಣಿಪಾಲದ ನೂತನ ಆರ್‌ಟಿ‌ಒ ಕಚೇರಿ ಉದ್ಘಾಟನೆ

Friday, November 23rd, 2012
New RTO Office Udupi

ಉಡುಪಿ : ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಆರ್‌ಟಿ‌ಒ ಕಚೇರಿ ಕಟ್ಟಡ ಪೂರ್ಣಗೊಂಡಿದ್ದು ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾದ ಆರ್‌. ಅಶೋಕ್‌ ಇಂದು ಮಧ್ಯಾಹ್ನ 12 30 ಕ್ಕೆ ಈ ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಒಟ್ಟು 2.32 ಎಕ್ರೆ ಪ್ರದೇಶದಲ್ಲಿ ಸುಮಾರು 5.94 ಕೋ.ರೂ. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕಟ್ಟಡವು ತಳ‌ಅಂತಸ್ತು, ನೆಲ ಅಂತಸ್ತು, ಮತ್ತು ಮೊದಲ ಮಹಡಿಗಳನ್ನೊಳಗೊಂಡಿದೆ . ರಾಜ್ಯದ ವಿವಿಧ ಆರ್‌ಟಿ‌ಒ ಕಚೇರಿಗಳಲ್ಲಿ ವಿಶಾಲ, ವಿಸ್ತಾರವಾದ ಕಚೇರಿ ಎಂಬ ಹೆಗ್ಗಳಿಕೆ ಮಣಿಪಾಲದ […]

ಸೌಜನ್ಯಾ ಕೊಲೆ ಪ್ರಕರಣದ ತನಿಖೆ ಸಿಬಿಐ ಗೆ ಒಪ್ಪಿಸಲು ಶ್ರೀರಾಮ ಸೇನೆ ಆಗ್ರಹ

Thursday, November 22nd, 2012
Sri Rama Sene

ಮಂಗಳೂರು :ಸೌಜನ್ಯಾ ಕೊಲೆ ಪ್ರಕರಣದ ತನಿಖೆಯನ್ನು ತತ್‌ಕ್ಷಣ ಸಿಬಿಐಗೆ ಒಪ್ಪಿಸಬೇಕು ಎಂದು ದ.ಕ. ಶ್ರೀರಾಮ ಸೇನೆ ರಾಜ್ಯ ವಕ್ತಾರ ಮಧುಕರ ಮುದ್ರಾಡಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆಯೂ ಹಲವು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಹಿಂದಿನ ಯಾವುದೇ ಪ್ರಕರಣದಲ್ಲಿ ಕೂಡಾ ನೈಜ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸ್‌ ಇಲಾಖೆಯ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿವೆ. ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಸಿಕ ಅಸ್ವಸ್ಥ ಸಂತೋಷ್‌ ರಾವ್‌ನನ್ನು ಬಂಧಿಸಲಾಗಿದ್ದರೂ ಈ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು […]

ಮಂಗಳೂರು ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನಾಭರಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

Thursday, November 22nd, 2012
Gold smuggler

ಮಂಗಳೂರು : ಸುಮಾರು 35 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದುಬೈ ನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಮಂಗಳೂರು ಕಚೇರಿಯ ಅಧಿಕಾರಿಗಳು ಬುಧವಾರ ಪತ್ತೆಹಚ್ಚಿ ಬಂಧಿಸಿದ್ದಾರೆ. ಭಟ್ಕಳದ ಅಬ್ದುಲ್‌ ಖಾದಿರ್‌ (25) ಬಂಧಿತ ಆರೋಪಿ ಯಾಗಿದ್ದು ಬುಧವಾರ ಬೆಳಗ್ಗೆ 6.15 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತನನ್ನು ಡಿಆರ್‌ಐ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಕೂಲಂಕುಷವಾಗಿ ತಪಾಸಣೆ ನಡೆಸಿದಾಗ ಚಿನ್ನಾಭರಣ ಪತ್ತೆಯಾಗಿದೆ. ಪತ್ತೆಯಾದ ಸೊತ್ತುಗಳಲ್ಲಿ ಒಂದು ಚಿನ್ನದ ಬಿಸ್ಕಿಟನ್ನು […]

ಕಸಬ್ ಗೆ ಗಲ್ಲು ಎಬಿವಿಪಿ ವತಿಯಿಂದ ವಿಜಯೋತ್ಸವ

Wednesday, November 21st, 2012
ABVP celebrated Vijayotsav

ಮಂಗಳೂರು : ಮುಂಬೈ ದಾಳಿಯಲ್ಲಿ ಬಂಧನಕ್ಕೊಳಗಾದ, ಲಷ್ಕರ್‌-ಇ-ತೊಯ್ಬಾ ಸಂಘಟನೆಯವನಾದ ಅಜ್ಮಲ್‌ ಕಸಬ್‌ ನನ್ನು ಇಂದು ಮುಂಜಾನೆ 7.30ಕ್ಕೆ ಪುಣೆಯಲ್ಲಿರುವ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಿರುವುದಕ್ಕಾಗಿ ಇಂದು ಕೆಪಿಟಿ ಬಳಿಯ ಬಸವೇಶ್ವರ ವೃತ್ತದಲ್ಲಿ ಎಬಿವಿಪಿ ವತಿಯಿಂದ ವಿಜಯೋತ್ಸವವನ್ನು ಆಚರಿಸಲಾಯಿತು. ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್.ಕೆ ಮಾತನಾಡಿ ಕಸಬ್ ನನ್ನು ಗಲ್ಲಿಗೇರಿಸಿರುವುದು ಅಭಿನಂದನಾರ್ಹ ವಿಷಯವಾಗಿದ್ದು , ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಕೇಂದ್ರ ಸರಕಾರವನ್ನು ಅಭಿನಂದಿಸುತ್ತೇನೆ ಎಂದರು. ಕಸಬ್ ನನ್ನು ಗಲ್ಲಿಗೇರಿಸಿರುವುದು ಉಗ್ರಗಾಮಿಗಳ ವಿರುದ್ಧ ಸಿಕ್ಕ ಜಯ ಹಾಗೂ ದೇಶದ್ರೋಹಿಗಳಿಗೆ ಬೆಂಬಲ […]

ಶಿವಸೇನೆ ವರಿಷ್ಠ ಬಾಳಾ ಸಾಹೇಬ್ ಠಾಕ್ರೆ ಅವರ ಅಂತಿಮಯಾತ್ರೆ ಹರಿದು ಬಂದ ಜನಸಾಗರ

Monday, November 19th, 2012
Bal Thackeray

ಮುಂಬಯಿ :ಮಹಾರಾಷ್ಟ್ರದ ಹುಲಿ ಎಂದೇ ಪ್ರಸಿದ್ಧರಾದ, ಮಹಾರಾಷ್ಟ್ರದ್ಲಲಿ ಶಿವಸೇನೆಯನ್ನು ಅಧಿಕಾರಕ್ಕೆ ತಂದ ಬಾಳ ಠಾಕ್ರೆ ದೇಹಕ್ಕೆ ಹಲವಾರು ಜನರ ಸಮ್ಮಖದಲ್ಲಿ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಠಾಕ್ರೆಯವರ ದೇಹ ಪಂಚಭೂತಗಳಲ್ಲಿ ಲೀನವಾಯಿತು. ಶಿವಸೇನೆ ವರಿಷ್ಠ ಬಾಳಾ ಸಾಹೇಬ್ ಠಾಕ್ರೆ ಅವರ ಅಂತಿಮಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಠಾಕ್ರೆ ಶವವನ್ನು ಬೆಳಗ್ಗೆ 9 ಗಂಟೆಗೆ ಅವರ ನಿವಾಸ ‘ಮಾತೋಶ್ರೀ’ ಯಿಂದ ಹೊರಕ್ಕೆ ತರಲಾಯಿತು. ಗಾಜಿನ ಪೆಟ್ಟಿಗೆಯಲ್ಲಿ ಇರಿಸಿದ್ದ ದೇಹವನ್ನು ಪುಷ್ಪಾಲಂಕೃತ ವಾಹನದಲ್ಲಿ […]

ಕುದ್ರೋಳಿ: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರಿಂದ ನೂತನ ಸಭಾಭವನದ ಉದ್ಘಾಟನೆ

Saturday, November 17th, 2012
ಕುದ್ರೋಳಿ: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರಿಂದ ನೂತನ ಸಭಾಭವನದ ಉದ್ಘಾಟನೆ

ಮಂಗಳೂರು :ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದ ರೂವಾರಿ ಹಾಗು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ಜಯ ಸಿ. ಸುವರ್ಣ ಸಭಾಭವನ ಹಾಗೂ ರಾಘವೇಂದ್ರ ಕೆ. ಭೋಜನ ಶಾಲೆಯ ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಈ ಹಿಂದೆ ಮೊದಲ ಸಭಾ ಭವನ ನಿರ್ಮಾಣ ಕಾರ್ಯ ಪ್ರಾರಂಭಿಸಿದಾಗ ಹೆಚ್ಚಿನ ಆರ್ಥಿಕ ಸಮಸ್ಯೆ ಇದ್ದರೂ ಸಹ ಸಭಾ ಭವನದ ನಿರ್ಮಾಣ ಕಾರ್ಯ ಯಶಸ್ವಿಯಾಗಿ ನೆರವೇರಿತ್ತು. ಈಗ ಶ್ರೀ ಕ್ಷೇತ್ರದಲ್ಲಿ  ಒಟ್ಟು […]

ಅಕ್ರಮ ಮೀನುಗಾರಿಕೆ ಮಲ್ಪೆ ಬಂದರಿನಿಂದ ಅನ್ಯರಾಜ್ಯದ ದೋಣಿಗಳ ತೆರವು

Saturday, November 17th, 2012
Illegal fishing

ಉಡುಪಿ :ಮಲ್ಪೆ ಬಂದರಿನಲ್ಲಿ ಅಕ್ರಮವಾಗಿ ಮೀನುಗಾರಿಕೆಯನ್ನು ನಡೆಸಲಾಗುತ್ತಿದೆ ಎಂಬ ಹಿನ್ನಲೆಯಲ್ಲಿ ಶುಕ್ರವಾರ ಮಲ್ಪೆ ಮೀನುಗಾರರು ಬಂದರಿನ ಹೊರಗೆ ನಿಲ್ಲಿಸಿದ್ದ ತಮಿಳುನಾಡಿನ ದೋಣಿಗಳನ್ನು ಅಲ್ಲಿಂದ ತೆರವುಗೊಳಿಸಿ ಪ್ರತಿಭಟಿಸಿದರು. ಶುಕ್ರವಾರ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ 22 ಮೀನುಗಾರಿಕಾ ಸಂಘಟನೆಗಳು ಪಾಲ್ಗೊಂಡು ಸಭೆ ನಡೆಸಿದವು. ಮೀನುಗಾರರು ಆಕ್ರೋಶಿತರಾಗಿ ತಮಿಳುನಾಡಿನ ಬೋಟ್‌ಗಳನ್ನು ಹಾನಿಗೀಡು ಮಾಡುವ ಸಾಧ್ಯತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅನ್ಯರಾಜ್ಯದ ಎಲ್ಲ ಬೋಟುಗಳನ್ನು ಅಲ್ಲಿಂದ ತೆರವುಗೊಳಿಸಲಾಯಿತು. ಸರಕಾರ, ಜಿಲ್ಲಾಡಳಿತ ಅಕ್ರಮ ಮೀನುಗಾರಿಕೆ ನಿಷೇಧವನ್ನು ಜಾರಿಗೊಳಿಸಿದ್ದರೂ ತಮಿಳುನಾಡು ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರೂ ಇಲಾಖೆ […]

ಕಲಾ ರಸಿಕರನ್ನು ತನ್ಮಯಗೊಳಿಸಿದ ಆಳ್ವಾಸ್‌ ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

Saturday, November 17th, 2012
Alvas Nudisiri

ಮೂಡಬಿದಿರೆ :ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿಯ ಮೊದಲದಿನವಾದ ಶುಕ್ರವಾರ ಸಂಜೆ ವಿದ್ಯಾಗಿರಿ ಸುಂದರಿ ಆನಂದ್ ಆಳ್ವ ಅವರಣದಲ್ಲಿ 5 ವೇದಿಕೆಯಲ್ಲಿ ಏಕಕಾಲದಲ್ಲಿ ನಡೆದ ನೃತ್ಯ-ಗಾನ ವೈಭವ ಕಲಾ ರಸಿಕರನ್ನು ರೋಮಾಂಚನಗೊಳಿಸಿತು. 5 ವೇದಿಕೆಗಳಲ್ಲಿ ಒಂದಾದ ರತ್ನಾಕರವರ್ಣಿ ವೇದಿಕೆಯಲ್ಲಿ ಮೈಸೂರಿನ ವಿದುಷಿ ಕೃಪಾ ಪಡ್ಕೆ ಮತ್ತು ತಂಡದವರಿಂದ ನಡೆದ ವಂದೇ ಮಾತರಂ ನೃತ್ಯ ರೂಪಕವು ಭಾರತೀಯರ ಏಕತೆಯ ಮಂತ್ರ ಮತ್ತು ಈ ಏಕತೆಯನ್ನು ಮುರಿಯಲು ಬ್ರಿಟಿಷರು ಮಾಡಿದ ಕುತಂತ್ರಗಳನ್ನು ಮನೋಜ್ಞವಾಗಿ ಬಿಂಬಿಸಿತು. ಚಂದ್ರಶೇಖರ್ ಕೆ.ಎಸ್ […]