ಕೋಡಿಂಬಾಳ ಜೋಡಿಕೊಲೆ ಪ್ರಕರಣ ಆರೋಪಿಗಳು ಪೊಲೀಸ್ ವಶಕ್ಕೆ

Monday, October 29th, 2012
double murder case

ಮಂಗಳೂರು: ಸೆಪ್ಟೆಂಬರ್ 25ರ ತಡರಾತ್ರಿ ಕಡಬ ಬಳಿಯ ಕೋಡಿಂಬಾಳ ಗ್ರಾಮದ ಉಂಡಿಲದಲ್ಲಿ ನಡೆದ ಜೋಡಿಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ. ಸೋಮವಾರಪೇಟೆಯ ಕರ್ಕಳ್ಳಿ ನಿವಾಸಿ ಮಹಮ್ಮದ್ ರಫೀಕ್, ಪುಂಜಾಲಕಟ್ಟೆ ತಣ್ಣೀರುಪಂಥ ಗ್ರಾಮದ ಕಲ್ಲೇರಿ ನಿವಾಸಿ ಸಯೀದ್ ಎಂಬುವವರು ಆರೋಪಿಗಳಾಗಿದ್ದಾರೆ. ಮಹಮ್ಮದ್ ರಫೀಕ್ ಕೋಡಿಂಬಾಳದಲ್ಲಿಯೇ ಕೆಂಪುಕಲ್ಲಿನ ಲಾರಿಯ ಚಾಲಕನಾಗಿದ್ದು ಈತನ ಪತ್ನಿಯ ಸಂಬಂಧಿಯಾಗಿದ್ದ ಸಯೀದ್ ಈತನಿಗೆ ಪರಿಚಿತನಾಗಿದ್ದ. ಮೃತ ಥಾಮಸ್ ರವರು ತಮ್ಮ ಮನೆಯ ಆವರಣದ ಗೋಡೆ ನಿರ್ಮಿಸಲು ಸಯೀದ್ ನ ಲಾರಿಯಲ್ಲಿಯೇ […]

ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ವಾಹನ ಜಾಥಕ್ಕೆ ಚಾಲನೆ

Saturday, October 27th, 2012
Plastic awareness program

ಮಂಗಳೂರು: ಮಂಗಳೂರು ತಾಲೂಕಿನಾದ್ಯಂತ ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟ ವಸ್ತುಗಳನ್ನು ನವೆಂಬರ್ 1ರಿಂದ ನಿಷೇಧಿಸಲು ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗುಲ್ಜಾರ್ ಬಾನುರವರು ಶುಕ್ರವಾರ ಜಿಲ್ಲಾಧಿಕಾರಿ ಬಳಿಯಲ್ಲಿ ಪ್ಲಾಸ್ಟಿಕ್ ಬಗ್ಗೆ ನಾಗರೀಕರಲ್ಲಿ ಜಾಗೃತಿ ಮೂಡಿಸುವ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಪ್ಲಾಸ್ಟಿಕ್ ನಿಂದಾಗುವ ತೊಂದರೆಯ ಬಗ್ಗೆ ಜನರಲ್ಲಿ ಈ ವಾಹನವು ಜಾಗೃತಿ ಮೂಡಿಸಲಿದ್ದು ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದರು. […]

ಕುಂದಾಪುರ: ಸಮುದ್ರಕ್ಕಿಳಿದ ಮೂವರು ನೀರುಪಾಲು

Saturday, October 27th, 2012
Kodi beach

ಕುಂದಾಪುರ: ಕುಂದಾಪುರದ ಕೋಡಿ ಸಮುದ್ರ ಕಿನಾರೆಯಲ್ಲಿ ಶುಕ್ರವಾರ ಸಂಜೆ ನೀರಿಗಿಳಿದ ಮೂವರು ಸಮುದ್ರಪಾಲಾಗಿದ್ದಾರೆ. ಬಕ್ರೀದ್ ಹಬ್ಬಕ್ಕೆಂದು ಕೋಡಿಯ ಮೂಲಮನೆಗೆ ಬಂದಿದ್ದ ಮಂಗಳೂರಿನಲ್ಲಿ ವಿಶ್ವಾಸ್ ಬಾವಾ ಬಿಲ್ಡರ್ಸ್ ಪಾಲುದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಸಯ್ಯದ್ ಮಹಮ್ಮದ್, ಮತ್ತು ಅವರ ಸಹೋದರ ಬೆಂಗಳೂರಿನಲ್ಲಿ ರಿಯಲ್ಎಸ್ಟೀಟ್ ಉದ್ಯಮಿಯಾಗಿರುವ ಅಬ್ದುಲ್ ಖಾದರ್ ಹಾಗೂ ಇವರ ಹತ್ತಿರದ ಸಂಬಂಧಿ ಬಾಲಕ ರಿಯಾನ್ ಮೃತಪಟ್ಟವರಾಗಿದ್ದಾರೆ. ಬಕ್ರೀದ್ ಹಬ್ಬದ ಸಂಭ್ರಮದಲ್ಲಿದ್ದ ಇವರು ಸಂಜೆಯ ವೇಳೆ ಸಮುದ್ರ ಕಿನಾರೆಗೆ ತೆರಳಿದ್ದರು, ನೀರಿನಲ್ಲಿ ಆಟವಾಡುತ್ತಿದ್ದ ಬಾಲಕ ರಿಯಾನ್ ಸಮುದ್ರಪಾಲಾಗುತ್ತಿರುವುದನ್ನು ಗಮನಿಸಿದ ಇವರು […]

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಗುಂಪು ಘರ್ಷಣೆ

Saturday, October 27th, 2012
Mangalore sub jail

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಕೈದಿಗಳ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿದ್ದು, ಜೈಲ್ ವಾರ್ಡನ್ ಪುಟ್ಟಣ್ಣ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ ಕೈದಿಗಳಿಗೆ ಊಟಕ್ಕೆ ಹೊರಗಡೆ ಬಿಟ್ಟ ಸಂದರ್ಭ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಕೈದಿಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಬೇಕೆಂಬ ಕೋರಿಕೆಯ ಮೇರೆಗೆ ಪೊಲೀಸರ ಸಮ್ಮತಿಯೊಂದಿಗೆ ಜೈಲು ಅಧಿಕಾರಿಗಳು ಅನುಮತಿ ನೀಡಿದ್ದರು, ನಮಾಜು ಮುಗಿಸಿ ಕೈದಿಗಳು ತಮ್ಮಸೆಲ್ ಗಳಿಗೆ ವಾಪಾಸಾಗುತ್ತಿದ್ದಾಗ ಇನ್ನೊಂದು ಗುಂಪಿನ […]

ಮೀನುಗಾರಿಕೆಗೆ ತೆರಳಿದ ಮೀನುಗಾರನ ಆಕಸ್ಮಿಕ ಸಾವು

Friday, October 26th, 2012
Malpe beach

ಉಡುಪಿ: ಬಡಾನಿಡಿಯೂರು ಕದಿಕೆಯ ಮಹಾಲಿಂಗ ಕುಂದರ್ ಎಂಬುವವರು ಗುರುವಾರ ಮಲ್ಪೆಯ ಸೈಂಟ್ ಮೇರೀಸ್ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸೀ ಮದರ್ ಎಂಬ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಬಲೆ ಎಳೆಯುವ ಸಂದರ್ಭದಲ್ಲಿ ಜಾರಿ ದೋಣಿಯ ದಂಡೆಯ ಮೇಲೆ ಬಿದ್ದಿದ್ದಾರೆ. ಬೋಟಿನ ದಂಡೆಗೆ ಹಣೆಗೆ ತಾಗಿ ಅಲ್ಲಿಂದ ಸಮುದ್ರಕ್ಕೆ ಬಿದ್ದಿದ್ದಾರೆ. ಜೊತೆಯಲ್ಲಿದ್ದವರು ತಕ್ಷಣ ಅವರನ್ನು ಮೇಲೆತ್ತಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. […]

ರಕ್ತ ಚಂದನ ಕಳ್ಳಸಾಗಾಟ ಯತ್ನ ನಾಲ್ವರು ಆರೋಪಿಗಳ ಸೆರೆ

Thursday, October 25th, 2012
ರಕ್ತ ಚಂದನ ಕಳ್ಳಸಾಗಾಟ ಯತ್ನ ನಾಲ್ವರು ಆರೋಪಿಗಳ ಸೆರೆ

ಮಂಗಳೂರು: ಪಣಂಬೂರಿನ ನವಮಂಗಳೂರು ಬಂದರಿನ ಮೂಲಕ ದುಬೈಗೆ ಅಕ್ರಮವಾಗಿ ರಫ್ತು ಮಾಡಲೆತ್ನಿಸಿದ ಸುಮಾರು 3ಕೋಟಿ ರೂಪಾಯಿ ಮೌಲ್ಯದ ಕೆಂಪು ಶ್ರೀಗಂಧದ ದಿಮ್ಮಿಗಳನ್ನು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಬಂಧಿತರು ಕೇರಳದವರಾಗಿದ್ದು, ಆರೋಪಿಗಳನ್ನು ಮುಸ್ತಫಾ ಅಬ್ದುಲ್ ರೆಹಮಾನ್, ಎಂ.ಕೆ.ಸಲೀಹ್, ಅಬ್ದಲ್ ಕಲಾಂ, ಎಡ್ವರ್ಡ್ ಜಾರ್ಜ್ಎಂದು ಗುರುತಿಸಲಾಗಿದೆ. ಕೊಚ್ಚಿನ್ನ ಎಕ್ಸ್ಪೋರ್ಟ್ ಸಂಸ್ಥೆಯ ಮೂಲಕ ದುಬೈಯ ಜೆಬೆಲ್ ಆಲಿ ಎಂಬ ಸಂಸ್ಥೆಗೆ ಫ್ಲೈವುಡ್ ಕಳುಹಿಸಲಾಗುತ್ತಿದೆ ಎಂಬುದಾಗಿ ದಾಖಲೆ ನಿರ್ಮಿಸಿ ಕಂಟೈನರ್ ನಲ್ಲಿ ಫ್ಲೈವುಡ್ ನೆಪದಲ್ಲಿ ಕೆಂಪು ಶ್ರೀ […]

ಮಂಗಳಾದೇವಿಯಲ್ಲಿ ವೈಭವದ ರಥೋತ್ಸವದೊಂದಿಗೆ ದಸರಾ ಉತ್ಸವದ ಸಮಾಪನೆ

Thursday, October 25th, 2012
Mangaladevi Temple

ಮಂಗಳೂರು: ಮಂಗಳೂರಿನ ಪ್ರಸಿದ್ಧ ದೇವಾಲಯವಾದ ಬೋಳಾರದ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆ ವಿಶಿಷ್ಟವಾಗಿ ನಡೆಯುತ್ತಿದ್ದು ಅಸಂಖ್ಯಾತ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯದಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲಿಯೂ ನವದುರ್ಗೆಗೆ ಮಧ್ಯಾಹ್ನ ಕಲ್ಪೋಕ್ತ ಪೂಜೆಗಳು ನಡೆಯುತ್ತವೆ. ಮಂಗಳಾದೇವಿಯಲ್ಲಿ ದೇವಿಯನ್ನು ಒಂಭತ್ತು ದಿನಗಳಲ್ಲಿ ಒಂಭತ್ತು ರೀತಿಗಳಲ್ಲಿ ಅಲಂಕರಿಸುವ ಸಂಪ್ರದಾಯವಿದ್ದು, ಪ್ರತಿದಿನ ದಿನಕ್ಕೊಂದರಂತೆ ದೇವಿಯರ ಪೂಜೆ ನಡೆಯುತ್ತದೆ. ದುರ್ಗಾದೇವಿ, ಆರ್ಯದೇವಿ, ಭಗವತಿ, ಕೌಮಾರಿ, ಅಂಬಿಕೆ, ಮಹಿಷಮರ್ಧಿ ನಿ, ಚಂಡಿಕೆ, ಸರಸ್ವತಿ, ನಾಗೇಶ್ವರಿ ಹೀಗೆ ವಿವಿಧ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವರ್ಣರಂಜಿತ ದಸರಾ ಶೋಭಾಯಾತ್ರೆ

Thursday, October 25th, 2012
Kudroli Sharadha

ಮಂಗಳೂರು: ಮಂಗಳೂರು ದಸರಾದ ಭವ್ಯ ಶೋಭಾಯಾತ್ರೆಯು ಬುಧವಾರ ವೈಭವದಿಂದ ನಡೆಯಿತು. ನೂರರ ಸಂಭ್ರಮ ಆಚರಣೆಯ ಅಲೆಯಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನನರಾತ್ರಿಯ ಉತ್ಸವದ ಅಂಗವಾಗಿ ನಡೆಯುವ ನವದುರ್ಗೆಯರು ಸೇರಿದಂತೆ ಟ್ಯಾಬ್ಲೋಗಳ ಭವ್ಯ ಮೆರವಣಿಗೆ ಸಂಜೆ 4.15ರ ವೇಳಗೆ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾ ರೂವಾರಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಕುದ್ರೋಳಿ ದೇವಸ್ಥಾನದ ಸ್ವರ್ಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದ […]

ಮಂಗಳೂರು ಕಾಂಗ್ರೆಸ್ ನಲ್ಲಿ ಟಿಕೇಟ್ ರಾಜಕೀಯ

Wednesday, October 24th, 2012
Rohan Lobo

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ರಾಜಕೀಯ ಈಗ ಗರಿಕೆದರಿಕೊಂಡಿದೆ. ಕ್ರಿಶ್ಚಿಯನ್ ಕೊಂಕಣಿಗರು ದೊಡ್ಡ ಸಂಖ್ಯೆಯಲ್ಲಿ ಮತದಾರರಾಗಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಂಗಣದಲ್ಲಿ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎನ್ನುವ ವಿಚಾರ ಮತದಾರ ಪ್ರಭುಗಳಿಗೆ ಗೊಂದಲಕ್ಕೆ ಕಾರಣವಾಗುತ್ತಿದೆ. ಕಾಂಗ್ರೆಸ್ ಟಿಕೇಟ್ ಮಂಗಳೂರು ವಿಧಾನಸಭಾದ ಲೆಕ್ಕಚಾರದ ಪ್ರಕಾರ ಕ್ರಿಶ್ಚಿಯನ್ ಸಮುದಾಯವರಿಗೆ ಸಿಗಬೇಕು ಎನ್ನುವ ನಿಯಮ ಚಾಲ್ತಿಯಲ್ಲಿತ್ತು. ಆದರೆ ಪ್ರತಿ ಬಾರಿನೂ ಇಂತಹ ಟಿಕೇಟ್ ಕ್ರಿಶ್ಚಿಯನ್ ಅಭ್ಯರ್ಥಿಗೆ ಸಿಕ್ಕಿದಾಗ ಸೋಲನ್ನೇ ನೆಚ್ಚಿಕೊಂಡರು. ಕಾಂಗ್ರೆಸ್ […]

ಕುದ್ರೋಳಿ ದಸರಾ ಮೆರವಣಿಗೆ ವಾಹನ ಸಂಚಾರದಲ್ಲಿ ಬದಲಾವಣೆ

Wednesday, October 24th, 2012
Kudroli Temple

ಮಂಗಳೂರು: ಅ.24 ರಂದು ಸಂಜೆ 4 ಗಂಟೆಗೆ ಕುದ್ರೋಳಿ ದಸರಾ ಶೋಭಾಯಾತ್ರೆಯು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಹೊರಡಲಿದೆ. ಮಣ್ಣಗುಡ್ಡೆ, ಲೇಡಿಹಿಲ್, ಲಾಲ್ ಬಾಗ್, ಪಿವಿಎಸ್, ನವಭಾರತ್ ವೃತ್ತ, ಕೆ.ಎಸ್.ರಾವ್ ರಸ್ತೆ, ಕೆ.ಬಿ.ವೃತ್ತ, ಗಣಪತಿ ಹೈಸ್ಕೂಲ್ ರಸ್ತೆ, ಮೋಹಿನಿ ವಿಲಾಸ, ಓಂ ಮಹಲ್ ಜಂಕ್ಷನ್, ರಥಬೀದಿ, ಲೋವರ್ ಕಾರ್ ಸ್ಟ್ರೀಟ್, ನ್ಯೂಚಿತ್ರ, ಅಳಕೆಯ ಮೂಲಕ ಕುದ್ರೋಳಿ ದೇವಳಕ್ಕೆ ಬಂದು  ದೇವಳದ ಕೆರೆಯಲ್ಲಿ ವಿಗ್ರಹ ಜಲಸ್ತಂಭನಗೊಳ್ಳಲಿದೆ. ಈ ಸಂದರ್ಭದಲ್ಲಿ 30,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿರುವುದರಿಂದ […]