ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಅಧಾರ್ ಕಾರ್ಡ್ ಬಿಡುಗಡೆ

Tuesday, July 19th, 2011
Udupi-Adhar-card/ಉಡುಪಿಯಲ್ಲಿ ಆಧಾರ್ ಕಾರ್ಡ್ ಬಿಡುಗಡೆ

ಉಡುಪಿ : ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಜಾರಿಗೆಗೊಳಿಸಿದ ಅಧಾರ್ ಕಾರ್ಡ್ ವಿತರಣೆಯನ್ನು ಜಿಲ್ಲಾಧಿಕಾರಿ ಟಿ‌.ಎಮ್ ರೇಜು  ನೆರವೇರಿಸಿದರು. ಪ್ರಥಮ ಆಧಾರ್ ಕಾರ್ಡ್ ನ್ನು ಜಿಲ್ಲಾಧಿಕಾರಿ ಟಿ‌.ಎಮ್ ರೇಜು ಅವರು ಲಯನ್ಸ್ ಗವರ್ನರ್ ಪಿಹೆಚ್ ಆಫ್ ಜಯಕರ ಶೆಟ್ಟಿ ಇಂದ್ರಾಳಿ ಯವರಿಗೆ ಹಸ್ತಾಂತರಿಸುವುದರ ಮೂಲಕ ಬಿಡುಗಡೆಗೊಳಿಸಿದರು. ಆಧಾರ್ ಕಾರ್ಡ್ ನಿಂದ ಸಾಕಷ್ಟು ಪ್ರಯೋಜನಕಾರಿಯಾಗಿದ್ದು ಕಂದಾಯ ಇಲಾಖೆಯ ಸಂಬಂಧ ಪಟ್ಟ ತೊಂದರೆಗಳನ್ನು ಈ ಕಾರ್ಡ್ ನಿಂದ ಬಗೆಹರಿಸಬಹುದಾಗಿದೆ. ಈ ಆಧಾರ್ ಕಾರ್ಡ್ ನ ವಿತರಣೆ […]

ಮಳೆಗಾಲದ ರಜಾ-ಮಜಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರಿಷಸ್‌ಗೆ

Tuesday, July 19th, 2011
yeddyurappa family/ಬಿ.ಎಸ್.ಯಡಿಯೂರಪ್ಪ ಕುಟುಂಬ

ಬೆಂಗಳೂರು : ಮಂಗಳವಾರ ಮುಂಜಾನೆ 5.55ಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬಿ.ಎಸ್.ಯಡಿಯೂರಪ್ಪ ಕುಟುಂಬ ಸದಸ್ಯರ ಸಹಿತ ಮಾರಿಷಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಭೂಹಗರಣದ ವಿಚಾರಣೆ, ಅಕ್ರಮ ಗಣಿಯ ಅಂತಿಮ ವರದಿಯನ್ನು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸಲ್ಲಿಸಲು ದಿನಗಣನೆ ಆರಂಭವಾಗುತ್ತಿದ್ದ ಬೆನ್ನಲ್ಲೇ ಮುಖ್ಯಮಂತ್ರಿಗಳು ಪ್ರಯಾಣ ಬೆಳೆಸಿರುವುದು ಕುತೂಹಲಕ್ಕೆ ಎಡೆ ಮಾಡಿದೆ. ರಾಜ್ಯದಲ್ಲಿ ಸಾಕಷ್ಟು ಪ್ರವಾಹ ಪರಿಸ್ಥಿತಿ, ಭೂ ಹಗರಣದ ವಿಚಾರಣೆ ನಡೆಯುತ್ತಿದ್ದರೂ ಕೂಡ ದಿಢೀರ್ ಅಂತ ಪುತ್ರ ರಾಘವೇಂದ್ರ, ಪುತ್ರಿ, ಮೊಮ್ಮಕ್ಕಳ ಜತೆ ಮಾರಿಷಸ್ ಪ್ರವಾಸ ಕೈಗೊಂಡಿದಕ್ಕೆ ಪ್ರತಿಪಕ್ಷಗಳು ಕಿಡಿಕಾರಿವೆ. […]

ಸರಕಾರದ ಆದೇಶದಂತೆ ಶೀಘ್ರದಲ್ಲೇ ಖಾಸಗಿ ಬಸ್ಸ್ ದರ ಏರಿಕೆ : ಜಿಲ್ಲಾಧಿಕಾರಿ

Saturday, July 16th, 2011
Bus Meeting/ಬಸ್ಸ್ ದರ ಏರಿಕೆ

ಮಂಗಳೂರು : ಖಾಸಗಿ ಬಸ್ ಮಾಲೀಕರು ಇತ್ತೀಚಿನ ದಿನಗಳಲ್ಲಿ ಇಂಧನ, ವಾಹನದ ಬಿಡಿಭಾಗಗಳ ಬೆಲೆ ಏರುತ್ತಿರುವುದರಿಂದ ಖಾಸಗಿ ಬಸ್ ಪ್ರಯಾಣದರ ಏರಿಸಬೇಕು ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಏರಿಕೆಯ ಕುರಿತು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳ ತಿಳಿಸಿದರು. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಅವರ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು ಬಸ್ ಪ್ರಯಾಣದರ ನಿಗಧಿಗೆ ಸರಕಾರದ ಮಾರ್ಗದರ್ಶನದಂತೆ […]

ದ.ಕ ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣ ಪತ್ತೆ

Friday, July 15th, 2011
DHO-Rangappa/ಡಾ.ಶ್ರೀರಂಗಪ್ಪ

ಮಂಗಳೂರು ಜುಲೈ: ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಜೊತೆಗೆ ಡೆಂಗ್ಯೂ ಕಾಯಿಲೆಯೂ ಸೇರ್ಪಡೆಗೊಂಡಿದ್ದು, 2011ರ ಜೂನ್ ಅಂತ್ಯದ ವರೆಗೆ    ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ.ಓ.ಶ್ರೀರಂಗಪ್ಪ ಅವರು ತಿಳಿಸಿದ್ದಾರೆ. ಈ ವರ್ಷ 36 ಪ್ರಕರಣಗಳು ಪತ್ತೆಯಾದುದರಲ್ಲಿ.  ಮಂಗಳೂರು ನಗರದ ಬಿಜಾಪುರ ಕಾಲೊನಿ (ಲಿಂಗಪ್ಪಯ್ಯಕಾಡು) ನಲ್ಲಿ 3 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಇದನ್ನು ಹೊರತುಪಡಿಸಿ ಮತ್ಯಾವುದೇ ಸಾವುಗಳು ಡೆಂಗ್ಯು ಜ್ವರದಿಂದ ಜೂನ್ ಅಂತ್ಯದ ತನಕ ದಾಖಲಾಗಿಲ್ಲ ಎಂದು ಡಾ.ಶ್ರೀರಂಗಪ್ಪ ತಿಳಿಸಿದ್ದಾರೆ. ಕಳೆದ […]

ಮುಂಬೈ ತ್ರಿವಳಿ ಸ್ಪೋಟ 18ಸಾವು 131ಮಂದಿಗೆ ತೀವ್ರ ಗಾಯ

Thursday, July 14th, 2011
Mumbai-attack/ಮುಂಬೈ ಸ್ಫೋಟ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಬುಧವಾರ ಸಂಜೆ ಸಂಭವಿಸಿದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, 131 ಮಂದಿ ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ಭಯೋತ್ಪಾದನೆ ದಾಳಿ ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ಖಚಿತಪಡಿಸಿದ್ದು, ಇಂಡಿಯನ್ ಮುಜಾಹಿದ್ದೀನ್ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಆದರೆ ತ್ರಿವಳಿ ಸ್ಫೋಟ ನಡೆದು 15 ಗಂಟೆಗಳಾದರೂ ಯಾವುದೇ ಭಯೋತ್ಪಾದನೆ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ. ಅಲ್ಲದೆ ಮೃತ ವ್ಯಕ್ತಿಯೊಬ್ಬರ ಮರೋಣೋತ್ತರ ಪರೀಕ್ಷೆಯ ವೇಳೆ ಶರೀರದಲ್ಲಿ ಐಇಡಿ ಸರ್ಕ್ಯೂಟ್ ಪತ್ತೆಯಾಗಿರುವುದು ಮತ್ತಷ್ಟು ಶಂಕೆಗೆ ಎಡೆ ಮಾಡಿಕೊಟ್ಟಿದೆ. […]

ವಿಮಾನ ನಿಲ್ದಾಣ ಮತ್ತು ಬಿಜೈ ಕೆ.ಎಸ್.ಆರ್.ಟಿಸಿ ನಿಲ್ದಾಣ ಮಧ್ಯೆ ಸರಕಾರಿ ವೋಲ್ವೊ ಬಸ್

Tuesday, July 12th, 2011
kdp meeting/ಕೆಡಿಪಿ ಸಭೆ

ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ  ತ್ರೈ ಮಾಸಿಕ ಕೆಡಿಪಿ ಸಭೆ ಸೋಮವಾರ ನಡೆಯಿತು.  ಗ್ರಾಮೀಣ ಪ್ರದೇಶಗಳಿಗೆ ಅನುಕೂಲವಾಗುವಂತೆ ಬಸ್ಸಿನ ವ್ಯವಸ್ಥೆ  ಮಾಡುವಂತೆ ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು,  ಅದರಂತೆ ಗ್ರಾಮೀಣ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು  ಒದಗಿಸಲು  ಸಲ್ಲಿಸಿರುವ 4 ತಾತ್ಕಾಲಿಕ ಪರವಾನಿಗೆ ಅರ್ಜಿಗಳನ್ನು ಪರಿಗಣಿಸಿ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ, 78ಚಾಲಕರನ್ನು ನೇಮಿಸಲಾಗಿದ್ದು,  ಅದರಂತೆ ಬಸ್ಸುಗಳನ್ನು ಓಡಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೆಡಿಪಿ ಸಭೆಯಲ್ಲ್ಲಿ ತಿಳಿಸಿದರು. […]

ಅಶ್ವಿನಿ ಅಕ್ಕುಂಜೆ ಉದ್ದೀಪನ ಮದ್ದು ಸೇವಿಸಿದ್ದು ನಿಜ: ಬಿ ರಿಪೋರ್ಟ್ ಪಾಸಿಟೀವ್

Monday, July 11th, 2011
Ashwini-Akkunji/ಅಶ್ವಿನಿ ಅಕ್ಕುಂಜೆ

ನವದೆಹಲಿ :  ಅಥ್ಲೀಟ್ ಆಟಗಾರ್ತಿ ಅಶ್ವಿನಿ ಅಕ್ಕುಂಜೆ  ಉದ್ದೀಪನ ಮದ್ದು ಸೇವಿಸಿರುವುದು ಬಿ ರಿಪೋರ್ಟ್ ನಿಂದ ಸಾಬೀತಾಗಿದೆ.  ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಕಿದ ಬಿ ರಿಪೋರ್ಟ್  ಪಾಸಿಟೀವ್ ಆಗಿದೆ. ಇದರಿಂದ ಅಶ್ವಿನಿಗೆ 2 ವರ್ಷ ನಿಷೇಧ ವಿಧಿಸುವ ಸಾಧ್ಯತೆ ಇದೆ. ಬಿ ರಿಪೋರ್ಟ್ ಫಲಿತಾಂಶದಿಂದ ಅಶ್ವಿನಿ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿರುವುದರಿಂದ 2012ರ ಒಲಿಂಪಿಕ್ಸ್ ನಲ್ಲಿ ಅಶ್ವಿನಿ ಪಾಳ್ಗೊಳ್ಳುವುದು ದೂರದ ಮಾತಾಗಿದೆ. ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಮತ್ತೊಬ್ಬ ಅಥ್ಲೀಟ್ ಪ್ರಿಯಾಂಕಾ ಪನ್ವಾರ್ ಕೂಡಾ 2 ವರ್ಷ  ಒಲಿಂಪಿಕ್ಸ್ ನಲ್ಲಿ […]

ಅಶ್ವಿನಿ ಅಕ್ಕುಂಜೆಯನ್ನು ಜಾಹೀರಾತಿನಿಂದ ವಿಮುಖಗೊಳಿಸಿದ ಕಾರ್ಪೊರೇಷನ್ ಬ್ಯಾಂಕ್

Saturday, July 9th, 2011
Ashwini Akkunje

ಮಂಗಳೂರು :  ಅಶ್ವಿನಿ ಅಕ್ಕುಂಜೆ ಉದ್ದೀಪನ ಮದ್ದು ಸೇವನೆ ಮಾಡಿರುವ ವಿವಾದದ ಸುಳಿಗೆ ಸಿಲುಕುತ್ತಿದ್ದಂತೆಯೇ ಕಾರ್ಪೊರೇಷನ್ ಬ್ಯಾಂಕ್ ಆಕೆಯನ್ನು ರಾಯಬಾರಿ (ಬ್ಯ್ರಾಂಡ್ ಅಂಬಾಸಿಡರ್) ಜಾಹೀರಾತಿನಿಂದ ವಿಮುಖಗೊಳಿಸಿದೆ. ಮಂಗಳೂರು ಸಹಿತ ದೇಶದಾದ್ಯಂತ ಆಕೆಯ ಭಾವಚಿತ್ರವಿದ್ದ ಹೋರ್ಡಿಂಗ್ ಗಳನ್ನು ತೆಗೆಯಲು ಸೂಚನೆ ಕೊಟ್ಟಿದೆ.ಈ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಅಶ್ವಿನಿ ಅಕ್ಕುಂಜೆಯವರ ಹೋರ್ಡಿಂಗ್ ಮಾಯವಾಗಿವೆ. ಶನಿವಾರ ಆಕೆಯ ಬಿ ಸ್ಯಾಂಪಲ್ ಪರೀಕ್ಷೆಯ ಫಲಿತಾಂಶ ಹೊರಬೀಳಲಿದ್ದು ಮುಂದೇನು ಎನ್ನುವುದು ಕುತೂಹಲದಾಯಕ. ಹಳ್ಳಿ ಹುಡುಗಿಯ ಸಾಧನೆಗೆ ದೇಶವೇ ಅಂದು ಕೊಂಡಾಡಿತ್ತು.

ಮಂಗಳೂರು ವಿಶೇಷ ಆರ್ಥಿಕ ವಲಯದ ಸಿಬ್ಬಂದಿ ಭಾರಿ ಯಂತ್ರಕ್ಕೆ ಸಿಕ್ಕಿ ಸಾವು

Friday, July 8th, 2011
JONSON/ಜಾನ್ಸನ್‌

ಮಂಗಳೂರು: ಇಂದು ಮುಂಜಾನೆ ಮಂಗಳೂರು ವಿಶೇಷ ಆರ್ಥಿಕ ವಲಯದ ಕಳವಾರು ಪ್ರದೇಶದಲ್ಲಿ ಕ್ರೇನ್‌ನಿಂದ ಸಾಗಿಸುತ್ತಿದ್ದ ಯಂತ್ರವೊಂದು ತುಂಡಾಗಿ ಬಿದ್ದ ಪರಿಣಾಮ ಗುರುಪುರದ ಜಾನ್ಸನ್ ಸಂತೋಷ ರೊಝಾರಿಯೊ (21)ಮೃತ ಪಟ್ಟಿದ್ದಾರೆ.ಈ ದುರ್ಘಟನೆ ಮುಂಜಾನೆ 9:45ರ ಸುಮಾರಿಗೆ ಸಂಭವಿಸಿದೆ.ಜಾನ್ಸನ್ ಎಂಆರ್‌ಪಿಎಲ್‌ನ ತೃತೀಯ ಹಂತದ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಕ್ರೇನ್‌ನಿಂದ ಭಾರೀ ಯಂತ್ರೋಪಕರಣ ಆಕಸ್ಮಿಕವಾಗಿ ತುಂಡಾಗಿ ಬಿದ್ದ ಪರಿಣಾಮ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ಜಾನ್ಸನ್‌ರ ಎದೆ ಹಾಗೂ ತಲೆ ಮೇಲೆ ಬಿದ್ದು ಅವರು ಮಾರಣಾಂತಿಕವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ […]

ಆಧಾರ್ ಗುರುತಿನ ಚೀಟಿಗೆ ಮಂಗಳೂರು ನಗರ ಪ್ರಧಾನ ಅಂಚೆ ಕಚೇರಿಯಲ್ಲಿ ಚಾಲನೆ

Thursday, July 7th, 2011
Adhar card/ಆಧಾರ್ ಗುರುತಿನ ಚೀಟಿ

ಮಂಗಳೂರು: ಮಂಗಳೂರು ನಗರ ಪ್ರಧಾನ ಅಂಚೆ ಕಚೇರಿಯಲ್ಲಿ ದ.ಕ.ಜಿಲ್ಲಾ ವ್ಯಾಪ್ತಿಯ ಆಧಾರ್ ವಿಶಿಷ್ಟ ಗುರುತಿನ ಚೀಟಿಗಾಗಿ ನೋಂದಣಿ ಪ್ರಕ್ರಿಯೆಗೆ ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಬುಧವಾರ ಚಾಲನೆ ನೀಡಿದರು.ಅವರು ಲಯನ್ಸ್ ಜಿಲ್ಲಾ ಗವರ್ನರ್ ಜಿ.ಕೆ.ರಾವ್‌ರಿಗೆ ಮೊದಲ ಆಧಾರ್ ನೋಂದಣಿ ಅರ್ಜಿ ನೀಡುವ ಮೂಲಕ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶರ್ಮಾ ನೋಂದಣಿ ಅರ್ಜಿ ತುಂಬಲು ಅನಕ್ಷರಸ್ಥರು ಹಾಗೂ ಹಳ್ಳಿಯ ಜನರು ಏಜೆಂಟರ ಮೊರೆ ಹೋಗುವುದನ್ನು ತಪ್ಪಿಸಬೇಕು, ಅದಕ್ಕಾಗಿ ಅನುಭವಿ ಏಜೆನ್ಸಿಯ ಮೂಲಕ […]