ಉದ್ಯಮಿ ರಮೇಶ್ ಕುಮಾರ್ ದಂಪತಿಗಳಿಂದ ಕುದ್ರೋಳಿ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ

Wednesday, March 2nd, 2011
ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ

ಮಂಗಳೂರು : ಉದ್ಯಮಿ ರಮೇಶ್ ಕುಮಾರ್ ಮತ್ತು ಉರ್ಮಿಳ ರಮೇಶ್ ದಂಪತಿಗಳು ಇಂದು ಮಧ್ಯಾನ್ಹ 12.42 ರ ವೃಷಭ ಲಗ್ನದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಈ ಬೆಳ್ಳಿರಥವನ್ನು ಸಮರ್ಪಿಸಿದರು. 18.5 ಅಡಿ ಎತ್ತರ ಹಾಗೂ 8.5 ಅಡಿ ಅಗಲವಿರುವ  ಬೆಳ್ಳಿ ರಥವನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ರಥವನ್ನು 225ಕ.ಜಿ. ಬೆಳ್ಳಿಯಲ್ಲಿ ತಯಾರಿಸಲಾಗಿದೆ. ಫೆಬ್ರವರಿ 18 ರಂದು  ಕುಂಟಾಡಿಯಿಂದ ವಿವಿಧ ವಾದ್ಯಾ ಘೋಷಗಳೊಂದಿಗೆ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ತರಲಾಗಿತ್ತು. ಇಂದು ಮಧ್ಯಾಹ್ನ […]

ಐದೇ ದಿನದಲ್ಲಿ ಕಬೀರ್ ಕೊಲೆ ಆರೋಪಿಗಳ ಬಂಧನ

Tuesday, March 1st, 2011
ಕಬೀರ್ ಕೊಲೆ ಆರೋಪಿಗಳ ಬಂಧನ

ಮಂಗಳೂರು : ಕಳೆದ ಶುಕ್ರವಾರ ಮಧ್ಯಾನ್ಹದ ನಮಾಜಿಗೆಂದು ಗುರುಪುರದ ಮಸೀದಿಯೊಂದಕ್ಕೆ ಹಿರೋ ಹೋಂಡ ಬೈಕಿನಲ್ಲಿ ತೆರಳುತಿದ್ದ ವೇಳೆ ಕಪ್ಪು ಸ್ಕಾರ್ಪಿಯೋ ವಾಹನದಲ್ಲಿ ಬಂದ ಅಪರಿಚಿತ ಹಂತಕರ ತಂಡ ಗುರುಪುರದ ಬಂಡಸಾಲೆ ಬಳಿ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ, ಕೆಳಗೆ ಬಿದ್ದ ಕಬೀರನನ್ನು ಕೊಚ್ಚಿ ಕೊಲೆಗೈದಿತ್ತು. ಘಟನೆಯ ಐದು ದಿನಗಳ ಬಳಿಕ ದ.ಕ.ಜಿಲ್ಲಾ ಪೊಲೀಸರ ವಿಶೇಷ ತಂಡವು ನಡೆಸಿದ ತ್ವರಿತ ಕಾರ್ಯಚರಣೆಯಲ್ಲಿ ಕಬೀರ್ ಕೊಲೆ ಪ್ರಕರಣದ 6 ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹಾವೇರಿ ನಿವಾಸಿ ರವಿ ಯಾನೆ ಟಿಕ್ಕಿ […]

ನಿರ್ವಸಿತ ವಿದ್ಯಾರ್ಥಿಗಳಿಂದ ಉದ್ಯೋಗಕ್ಕಾಗಿ ಪ್ರತಿಭಟನೆ

Tuesday, March 1st, 2011
ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳ ಪ್ರತಿಭಟನೆ

ಮಂಗಳೂರು: ಎಮ್.ಎಸ್.ಇ.ಝಡ್ ನಿರ್ವಸಿತ ವಿದ್ಯಾರ್ಥಿಗಳಿಂದ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಯವರ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಕಳೆದ ಮೂರುವರೆ ವರ್ಷಗಳಿಂದ ಕೆ.ಪಿ.ಟಿ.ಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಎಂ.ಆರ್.ಪಿ.ಎಲ್/ಓ.ಎನ್.ಜಿ.ಸಿ.ಯಂತಹ ದೊಡ್ಡಸಂಸ್ಥೆಯಲ್ಲಿ ಉದ್ಯೋಗ ದೊರಕುವುದೆಂಬ ಆಸೆಯಿಂದ ನಮ್ಮ ವಿದ್ಯಾಭ್ಯಾಸ ಹಾಗೂ ಕೆಲವರು ಈ ಮೊದಲು ಮಾಡುತ್ತಿದ್ದ ಉದ್ಯೋಗವನ್ನು ಬಿಟ್ಟು ತರಬೇತಿಗೆ ಸೇರಿದ್ದು, ಈಗ ತರಬೇತಿಯು ಮುಗಿದಿರುತ್ತದೆ. ಆದರೆ ಈಗ ಎಂ.ಆರ್.ಪಿ.ಎಲ್/ಓ.ಎನ್.ಜಿ.ಸಿ.ಯವರು ತನ್ನ ವ್ಯಾಪ್ತಿಯವರಿಗೆ ಮಾತ್ರ ಉದ್ಯೋಗ ನೀಡುತ್ತಿರುವುದು ವಿಷಾದನೀಯ. ಸರಕಾರದ ಆದೇಶದಲ್ಲಿರುವಂತೆ ಎಮ್.ಆರ್.ಪಿ.ಎಲ್/ಓ.ಎನ್.ಜಿ.ಸಿ ವಿಸ್ತರಣೆಗಾಗಿ ಎಮ್.ಎಸ್.ಇ.ಝಡ್ ಸ್ಥಾಪನೆಯಾಗಿರುವುದರಿಂದ ಉದ್ಯೋಗ ಕೊಡಲು ಕೂಡ ಎಮ್.ಆರ್.ಪಿ.ಎಲ್/ಓ.ಎನ್.ಜಿ.ಸಿ.ಯವರೇ […]

ನೂತನ ಮೇಯರ್‌ ಆಗಿ ಪ್ರವೀಣ್‌ ಹಾಗೂ ಉಪಮೇಯರ್‌ ಆಗಿ ಶ್ರೀಮತಿ ಎನ್. ಗೀತಾ. ಎನ್‌. ನಾಯಕ್‌

Monday, February 28th, 2011
ನೂತನ ಮೇಯರ್‌ ಆಗಿ ಪ್ರವೀಣ್‌ ಹಾಗೂ ಉಪಮೇಯರ್‌ ಆಗಿ ಶ್ರೀಮತಿ ಎನ್. ಗೀತಾ. ಎನ್‌. ನಾಯಕ್‌

ಮಂಗಳೂರು :  ಮಂಗಳೂರು ಮಹಾನಗರಪಾಲಿಕೆಯ ನೂತನ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇಂದು ಬೆಳಿಗ್ಗೆ  ಪಾಲಿಕೆಯ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಮಹಾನಗರಪಾಲಿಕೆ 60 ಸದಸ್ಯರನ್ನು ಹೊಂದಿದೆ. ಅದರಲ್ಲಿ ಬಿಜೆಪಿ 35 ಸದಸ್ಯರನ್ನು, ಕಾಂಗ್ರೆಸ್ 21 ಸದಸ್ಯರನ್ನು ಹಾಗೂ 5ಸದಸ್ಯರು ಪಕ್ಷೇತರರು. ಮೈಸೂರು ವಿಭಾಗದ ಪ್ರಾದೇಶಿಕ ಅಯುಕ್ತೆ   ಶ್ರೀಮತಿ ಜಯಂತಿ ಹಾಗೂ ಮನಪಾ ಅಯುಕ್ತ ಡಾ| ಕೆ.ಎನ್. ವಿಜಯಪ್ರಕಾಶ್ ಅವರ  ಸಮಕ್ಷಮದಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ನೂತನ ಮೇಯರ್‌ ಆಗಿ ಪ್ರವೀಣ್‌ ಹಾಗೂ ಉಪಮೇಯರ್‌ ಆಗಿ ಶ್ರೀಮತಿ ಎನ್. […]

ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಎರಡು ದಿನದ ಗೋ ಸಮ್ಮೆಳನಕ್ಕೆ ಚಾಲನೆ

Saturday, February 26th, 2011
ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಎರಡು ದಿನದ ಗೋ ಸಮ್ಮೆಳನಕ್ಕೆ ಚಾಲನೆ

ಕೋಣಾಜೆ : ಪಜೀರು ಬೀಜಗುರಿಯಲ್ಲಿ ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಫೆ.26 ಮತ್ತು 27 ರಂದು ನಡೆಯಲಿರುವ ಎರಡು ದಿನದ ಗೋ ಸಮ್ಮೆಳನ ವನ್ನು ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ ಅವರು “ಕಪಿಲಾ” ದನಕ್ಕೆ ಆರತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. “ಗೋವರ್ದನ” ಎಂಬ ಸಂಚಿಕೆ ಬಿಡುಗಡೆಯನ್ನು ಮಂಗಳೂರು ವಿವಿಯ ಕುಲಸಚಿವ ಪ್ರೊ.ಕೆ.ಚಿನ್ನಪ್ಪ ಗೌಡ ನರವೇರಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಯೊಂದು ದೇಶವು ನಗರ ಕೇಂದ್ರ ಆಧರಿತ ಹಾಗೂ ಗ್ರಾಮೀಣ ಕೃಷಿ ಆಧರಿತ ವಿನ್ಯಾಸದಲ್ಲಿ ಬದುಕು […]

ಕೊಲೆಯ ಪ್ರತೀಕಾರ : ರೌಡಿ ಕಬೀರ್ ಬರ್ಬರ ಹತ್ಯೆ

Friday, February 25th, 2011
ರೌಡಿ ಕಬೀರ್ ಬರ್ಬರ ಹತ್ಯೆ

ಮಂಗಳೂರು : ಎರಡು ಕೊಲೆ ಹಾಗೂ ಒಂಬತ್ತು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗುರುಪುರ ನಿವಾಸಿ ಅಕ್ಬರ್ ಯಾನೆ ಕಬೀರ್ ಗುರುಪುರ (30ವ) ಇಂದು ಮಧ್ಯಾಹ್ನ 12.40ರ ಸುಮಾರಿಗೆ ಗುರುಪುರ ಸೇತುವೆ ಬಳಿ ಬರ್ಬರವಾಗಿ ಹಂತಕರ ತಲವಾರಿನೇಟಿಗೆ ಪ್ರಾಣ ಬಿಟ್ಟಿದ್ದಾನೆ. ಶುಕ್ರವಾರದ ಮಧ್ಯಾಹ್ನದ ನಮಾಜಿಗೆ ತನ್ನ ಸ್ನೇಹಿತರಾದ ನಝೀರ್ ಹಾಗೂ ಸರ್ಪರಾಜ್ ಜೊತೆಗೆ ಬೈಕಿನಲ್ಲಿ ಗುರುಪುರದ ಮಸೀದಿಯೊಂದಕ್ಕೆ ತೆರರಳುತ್ತಿದ್ದ ವೇಳೆ ಟಾಟಾ ಸುಮೋದಲ್ಲಿ ಬಂದ ಹಂತಕರ ತಂಡವೊಂದು ಹಿಂದಿನಿಂದ ಬಂದು ಬೈಕಿಗೆ  ಹೊಡೆಯಿತು, ಪರಿಣಾಮ ಬೈಕು ಚಲಾಯಿಸುತ್ತಿದ್ದ ಮೂರು […]

ರಾಜ್ಯ ಬಜೆಟ್ : ಗ್ರಾಮೀಣ ಅಭಿವೃದ್ಧಿಯ ಜೊತೆಗೆ ನಗರ ಅಭಿವೃದ್ಧಿಗೆ ವಿಶೇಷ ಆದ್ಯತೆ

Thursday, February 24th, 2011
ರಾಜ್ಯ ಬಜೆಟ್

ಬೆಂಗಳೂರು : ರಾಜ್ಯ ಸರಕಾರದ ಆಡಳಿತಾವದಿಯ ಎರಡೂವರೆ ವರ್ಷದ ಅವದಿಯಲ್ಲಿ ಸತತವಾಗಿ ಆರನೇ ಬಾರಿಗೆ  ಬಜೆಟ್ ಮಂಡಿಸಿದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನ್ನದಾತನ ಹೊಲದಲ್ಲಿ ಚಿನ್ನದ ಹೊಳೆಯನ್ನೇ ಹರಿಸಿದ್ದಾರೆ. ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರ ಎಂದಿಗೂ ಅನ್ನದಾತರ ಪರ ಎಂದ ಸಿಎಂ, ರೈತರ ನಾಡಗೀತೆ ‘ನೇಗಿಲ ಹಿಡಿದು.. ಉಳುವ ಯೋಗಿಯ..’ ಸಾಲುಗಳನ್ನು ಹೇಳಿದರು. ನಂತರ ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೆ ಮೇಲು ಎನ್ನುತ್ತಾ ಆಯವ್ಯಯ ಪತ್ರವನ್ನು ಸದನದಲ್ಲಿ ಮಂಡಿಸಿದರು. ಕೃಷಿ ಬಜೆಟ್ ಮಂಡಿಸಿದ ಬಳಿಕ  […]

ಇತಿಹಾಸ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿಪುಜೆ

Wednesday, February 23rd, 2011
ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ

ಮಂಗಳೂರು :  ಮಂಗಳೂರಿನ ಇತಿಹಾಸ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ  ವರ್ಷಾವಧಿ ಮಹಾಪೂಜೆಯು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರಗಿತು. ಮೊದಲ ದಿನ ರಾತ್ರಿ  ಮಾರಿಯಮ್ಮ ಕ್ಷೇತ್ರದ ವಿಶೇಷ ಸಂಪ್ರದಾಯವಾದ ಹಾಲು ಉಕ್ಕಿಸುವ ಪೂಜೆಯೊಂದಿಗೆ ಆರಂಭವಾದ ಉತ್ಸವವು ಎರಡನೇ ದಿನದಂದು ಇಲ್ಲಿನ ಪರಂಪರೆಯಂತೆ ನೈವೇದ್ಯ ಬಲಿ, ರಾಶಿಪೂಜೆ, ಮಾರಿ ಉಚ್ಚಿಷ್ಠ, ಮೊದಲಾದ ಸಾಂಪ್ರದಾಯಿಕ ವಿಧಿ ವಿಧಾನದೊಂದಿಗೆ ನಡೆಯಿತು. ವರ್ಷಾವಧಿ ಮಹೋತ್ಸವಕ್ಕೆ ಫೆ.11ರಂದು ಪ್ರಸಾದ ಹಾರಿಸುವ ಮೂಲಕ ಈ ಬಾರಿಯ ಚಾಲನೆ […]

ಮೀಸಲಾತಿ ಆಶ್ರಯಿಸದೇ ಮಹಿಳೆ ಮುನ್ನಡೆಯಬೇಕು: ಶೈಲಜಾ ಭಟ್

Friday, February 18th, 2011
ಮಹಿಳಾ ಸಬಲೀಕರಣ

ಮಂಗಳೂರು : ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಸರ್ಕಾರ ಮಹಿಳೆಗೆ ರಾಜಕೀಯ ಸ್ಥಾನಮಾನ ದೊರೆಯುವ ಅವಕಾಶ ಕಲ್ಪಿಸಿದೆ. ಒಂದು ಹಂತದ ವರೆಗೆ ಈ ಸೌಲಭ್ಯವನ್ನು ಬಳಸಿಕೊಂಡು, ಮುಂದೆ ಮೀಸಲಾತಿಯ ಆಶ್ರಯವಿಲ್ಲದೆಯೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಷ್ಟು ಮಹಿಳೆ ಸಬಲಳಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ಅವರು ತಿಳಿಸಿದರು. ಮಹಿಳಾ ಸಬಲೀಕರಣ ಕುರಿತು ವಾರ್ತಾ ಇಲಾಖೆ ಶಕ್ತಿನಗರದ ಕಲಾಂಗಣ್ನಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ […]

ಹರಿಷಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಜಿ ಸಚಿವ ಹಾಲಪ್ಪ ಹಲ್ಲೆ

Wednesday, February 16th, 2011
ಹಾಲಪ್ಪ ಉಮಾಪತಿ

ಶಿವಮೊಗ್ಗ : ಸೊರಬದ ಹರಿಷಿ ಗ್ರಾಮದ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಹರಿಷಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಮಾಪತಿಯವರ ಮೇಲೆ ಹಾಲಪ್ಪ ಬೂಟು ಕಾಲಿನಿಂದ ಹಲ್ಲೆ ನಡೆಸಿದ್ದಾರೆ. ಬೂಟು ಕಾಲಿನಿಂದ ಎದೆಗೆ ಒದ್ದು ಹಲ್ಲೆ ನಡೆಸಿರುವ ಘಟನೆಯಿಂದ ಉಮಾಪತಿ ಸೊರಬ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಹಾಲಪ್ಪ ಆರೋಗ್ಯ ಕೇಂದ್ರದ ಕೋಣೆಗಳಿಗೆ ಬೀಗ ಹಾಕಿರುವುದನ್ನು ಪ್ರಶ್ನಿಸಿದ್ದರು. ಆರೋಗ್ಯದ ಕೇಂದ್ರದ ಕೆಲಸ ಪೂರ್ಣವಾಗಿಲ್ಲ ಎಂದು ಅಧ್ಯಕ್ಷ ಉಮಾಪತಿ ಬೀಗ ಹಾಕಿದ್ದರು. ಇದರಿಂದ […]