ದ.ಕ ಜಿಲ್ಲಾಧ್ಯಕ್ಷರ ಸರ್ವಾಧಿಕಾರ ಧೋರಣೆ; ಕಾರ್ಯಕರ್ತರೂ ಸೇರಿದಂತೆ ಪ್ರಮುಖ ನಾಯಕರ ರಾಜೀನಾಮೆ

Tuesday, March 26th, 2013
JDS in district

ಮಂಗಳೂರು : ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗ್ಡೆ ಸೇರಿದಂತೆ  ಪಕ್ಷದ ಪ್ರಮುಖ 10ಮಂದಿ ನಾಯಕರು,50 ಮಂದಿ ಕಾರ್ಯಕರ್ತರು  ಒಟ್ಟು 60ಮಂದಿ ಸದಸ್ಯರು  ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜಿನಾಮೆ ನೀಡಿರುವುದಾಗಿ ತಿಳಿಸಿದರು.ಸೋಮವಾರ ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಜನತಾದಳ ಪಕ್ಷವನ್ನು ಕರಾವಳಿ ಭಾಗದಲ್ಲಿ ಮುನ್ನಡೆಸಲು ಸ್ವತ; ಪಕ್ಷದ ರಾಜ್ಯಾಧ್ಯಕ್ಷ  ಹೆಚ್. ಡಿ .ಕುಮಾರಸ್ವಾಮಿ ಕೋರಿ ಅಹ್ವಾನ ನೀಡಿದ್ದರಿಂದ ಅವರ ಮನವಿಯನ್ನು ಪುರಸ್ಕರಿಸಿ ಪಕ್ಷವನ್ನು ಸೇರಿ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕ ಪ್ರಯತ್ನ  ಮಾಡಿದ್ದೆವು. ಆದರೆ  […]

ದುಬೈಯಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿ ನಾಪತ್ತೆ

Tuesday, March 26th, 2013
Mohammad Ashraf

ಮಂಗಳೂರು : ದುಬೈಯಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡು ತ್ರಿಕಾರಿಪುರ ನಿವಾಸಿ ಮಹಮ್ಮದ್ ಅಶ್ರಫ್ ಎಂಬಾತ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಸರಗೋಡು ತ್ರಿಕ್ಕಾರಿಪುರದ ಮುಹಮ್ಮದ್ ಕುಂಞಿ ಎಂಬವರ ಪುತ್ರ ಮುಹಮ್ಮದ್‌ಅಶ್ರಫ್ (24) ಎಂಬವರು ಮಾರ್ಚ್ 21ರಂದು ದುಬೈಯಿಂದ ಮಂಗಳೂರಿಗೆ 12:30 ಗಂಟೆಗೆ ತಲುಪಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಕಾಯಿನ್ ಬಾಕ್ಸ್‌ನಿಂದ ತನ್ನ ಮನೆಗೆ ದೂರವಾಣಿ ಕರೆ ಮಾಡಿ ತಾನು ದುಬೈಯಿಂದ ಬಂದಿದ್ದಾಗಿ ಮತ್ತು ಬೆಂಗಳೂರಿನಲ್ಲಿರುವ ಮುನೀಫ್ ಎಂಬವರ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ. […]

ಹೆಚ್.ಡಿ.ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ : ಅಕ್ಬರ್ ಉಳ್ಳಾಲ್

Tuesday, March 26th, 2013
Akbar Ullal

ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು 117 ಸ್ಥಾನವನ್ನು ಪಡೆಯುವುದಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದಾಗಿ ವಾರ್ತಾಮಿತ್ರ ಕನ್ನಡ ಮಾಸ ಪತ್ರಿಕೆ ಸಂಪಾದಕ ಅಕ್ಬರ್ ಉಳ್ಳಾಲ್ ಭವಿಷ್ಯ ನುಡಿದಿದ್ದಾರೆ. ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ   ಕುರಿತು ಮಾತನಾಡಿದ ಅವರು  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪಕ್ಷದ  ಹಿರಿಯ ನಾಯಕರು ಹಾಗು ಕಾರ್ಯಕರ್ತರ ನಡುವಿನ ಭಿನಾಭಿಪ್ರಾಯಗಳು ಮತ್ತು ಅನ್ಯ ಪಕ್ಷಗಳ ಕೆಲವು ಪಕ್ಷಾಂತರ ನಾಯಕರು ವಲಸೆ ಬಂದಿರುವುದು  ಕಾರಣವಾಗಿದೆ. ಆದರೆ […]

ಪಕ್ಷದ ವತಿಯಿಂದ ಚುನಾವಣೆಯಲ್ಲಿ ವಿಜೇತರಾದ ಕಾರ್ಪೊರೇಟರ್‌ ಗಳಿಗೆ ಸನ್ಮಾನ

Monday, March 25th, 2013
Corporators

ಮಂಗಳೂರು : ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಕಾರ್ಪೊರೇಟರ್‌ಗಳಾದ ಲ್ಯಾನ್ಸಿಲಾಟ್ ಪಿಂಟೋ, ಡಿ.ಕೆ. ಅಶೋಕ್ ಕುಮಾರ್, ಕೇಶವ, ಪ್ರಕಾಶ್ ಸಾಲ್ಯಾನ್, ರಜನೀಶ್, ರಾಧಾಕೃಷ್ಣ, ಝುಬೈದಾ, ಸಬಿತ್ ಮಿಸ್ಕಿತ್, ಅಖಿಲ್ ಆಳ್ವ, ನಾಗವೇಣಿರನ್ನು ರವಿವಾರ ಪಕ್ಷದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಕೆಪಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮಾತನಾಡಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ್ದು, ವಿಧಾನ ಸಭಾ ಚುನಾವಣೆಯಲ್ಲೂ ಪಕ್ಷ ಬಹುಮತ ಪಡೆಯಲಿದೆ ಎಂದರು. ಬ್ಲಾಕ್ ಅಧ್ಯಕ್ಷ […]

ಬೆಳ್ತಂಗಡಿ : ಹೋಲಿ ರಿಡೀಮರ್‌ ಚರ್ಚ್‌ ನಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ಕ್ರೈಸ್ತ ಬಾಂಧವ ರ ಮೇಲೆ ಹೆಜ್ಜೇನು ದಾಳಿ

Monday, March 25th, 2013
Wild bee attack at Gadaikal

ಬೆಳ್ತಂಗಡಿ : ಕಪ್ಪು ತಿಂಗಳ ಪ್ರಯುಕ್ತ ಪ್ರತೀ ವರ್ಷ ಬೆಳ್ತಂಗಡಿಯ 1100 ಅಡಿ ಎತ್ತರದ ಗಡಾಯಿಕಲ್ಲಿನಲ್ಲಿರುವ ಹೋಲಿ ರಿಡೀಮರ್‌ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ವಾಡಿಕೆ  ಹೋಲಿ ರಿಡೀಮರ್‌ ಚರ್ಚ್‌ಗೆ ಸಂಬಂಧಪಟ್ಟ ಕ್ರೈಸ್ತ ಬಾಂಧವರಲ್ಲಿ  ಇದ್ದು ಅದರಂತೆ ಭಾನುವಾರ  ಹೋಲಿ ರಿಡೀಮರ್‌ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಅನೇಕರು ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ. ಪ್ರತೀ ವರ್ಷದಂತೆ ಬೆಳ್ತಂಗಡಿಯ ಹೋಲಿ ರಿಡೀಮರ್‌ ಚರ್ಚ್‌ಗೆ ಸಂಬಂಧಪಟ್ಟ  ಕ್ರೈಸ್ತ ಬಾಂಧವರು ಧರ್ಮಗುರು […]

ಷರತ್ತುಬದ್ದ ಜಾಮೀನಿನೊಂದಿಗೆ ಬಿಡುಗಡೆಯಾದ ಪತ್ರಕರ್ತ ನವೀನ್ ಸೂರಿಂಜೆ

Monday, March 25th, 2013
Naveen Soorinje released

ಮಂಗಳೂರು : ಪಡೀಲ್‌ನ ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಿ ಬಂಧನಕ್ಕೊಳಗಾದ ಪತ್ರಕರ್ತ ನವೀನ್ ಸೂರಿಂಜೆ ಷರತ್ತುಬದ್ದ ಜಾಮೀನಿನೊಂದಿಗೆ ಮಾರ್ಚ್ 23 ಶನಿವಾರ ಮಂಗಳೂರು ಸಬ್ ಜೈಲ್‌ನಿಂದ ಬಿಡುಗಡೆಗೊಂಡಿದ್ದಾರೆ. ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 7ರಂದು ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸರಿಂದ ಬಂಧಿತರಾಗಿದ್ದ ನವೀನ್ ಸೂರಿಂಜೆಯ ಬಿಡುಗಡೆಗೆ ಈವರೆಗೆ ಹಲವು ರೀತಿಯ ಹೋರಾಟಗಳು ನಡೆದಿದ್ದವು. ನಾಲ್ಕೂವರೆ ತಿಂಗಳ ಜೈಲುವಾಸವನ್ನು ಅನುಭವಿಸಿ ಇದೀಗ ಬಿಡುಗಡೆಗೊಂಡಿದ್ದಾರೆ. ಹೋಂ ಸ್ಟೇ ಪ್ರಕರಣದ ಸಂತ್ರಸ್ತರಲ್ಲಿ ಒಬ್ಬರಾದ […]

ಬಂಟರ ಗುದ್ದಾಟ : ಕೈಯಲ್ಲಿ ಮತ್ತೇ ತಳಮಳ

Monday, March 25th, 2013
Kripa Alva Shakuntala Shetty

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಇಬ್ಬರು ಬಂಟ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದು ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ. ಕಳೆದ ಅವಧಿಯಲ್ಲಿ ಸುರತ್ಕಲ್ ನಲ್ಲಿ ಅವಕಾಶ ತಪ್ಪಿದ್ದು ಗೊಂದಲಕ್ಕೆ ಕಾರಣವಾಗಿದ್ದು, ಈಗ ಮತ್ತೆ ಅದೇ ಗೊಂದಲ ಮುಂದುವರಿದಿದೆ. ಬಂಟರಿಗೆ ಅವಕಾಶ ಕೊಡಬೇಕು ಎಂಬ ಆಗ್ರಹ ಜೋರಾಗಿದೆ. ಆದರೆ ಎಲ್ಲಿ ಎಂಬ ಪ್ರಶ್ನೆಯೂ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಮಹಿಳೆಯರು ತಮಗೆ ಅವಕಾಶ ಕೊಡಲೇಬೇಕು ಎಂದು ರಾಜ್ಯ ಮಟ್ಟದಲ್ಲಿ ಹೋರಾಟಕ್ಕಿಳಿದಿದ್ದಾರೆ. ಈ ಬೆಳವಣಿಗೆ ಕೂಡ […]

ಕರಾವಳಿಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಯಾರು ಹೊಣೆ

Monday, March 25th, 2013
Monappa Palemar

ಮಂಗಳೂರು : ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಉಸ್ತುವಾರಿಯನ್ನು ಎಂಎಲ್ ಸಿ ಮೋನಪ್ಪ ಭಂಡಾರಿ ಅವರಿಗೆ ನೀಡಿರುವುದು ಹಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು ಎನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಅವರು ಕಲ್ಲಡ್ಕ ಭಟ್ಟರ ನಿಷ್ಠಾವಂತ ಎಂಬ ಒಂದೇ ಮಾನದಂಡದಲ್ಲಿ ಅವರಿಗೆ ಎಂಎಲ್ ಸಿ ಸ್ಥಾನ ನೀಡಲಾಗಿತ್ತು. ಅವರಲ್ಲಿ ಯಾವುದೇ ವಿಶೇಷ ಶಕ್ತಿ-ಸಾಮರ್ಥ್ಯ ಇಲ್ಲ ಎಂಬುದು ಈ ಚುನಾವಣಾ ಫಲಿತಾಂಶವೇ ಸಾರಿ ಹೇಳಿದೆ. ಅದರಲ್ಲೂ ಕಳೆದ ಬಾರಿ ಶಾಸಕ ಕೃಷ್ಣ ಜೆ.ಪಾಲೆಮಾರ್ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು ಮತ್ತು […]

ಮಂಗಳೂರು : ಮೇಯರ್ – ಉಪ ಮೇಯರ್ ಯಾರು?

Monday, March 25th, 2013
Mayor

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 6ನೆ ಅವಧಿಯ ಮೇಯರ್-ಉಪಮೇಯರ್ ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಗೆ ಬಲವಾಗಿ ಕಾಡುತ್ತಿದೆ. ಅದಕ್ಕೂ ಮೊದಲು ರಾಜ್ಯ ಸರಕಾರ ಮೇಯರ್-ಉಪಮೇಯರ್ ಸ್ಥಾನದ ಮೀಸಲಾತಿ ಪ್ರಕಟಿಸಬೇಕು. ಬಳಿಕ ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ರಾಜ್ಯ ವಿಧಾನ ಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ನೀತಿ ಸಂಹಿತೆ ಪ್ರಕಟಿಸಿದರೆ ಮೇಯರ್- ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದರೂ ಚುನಾವಣೆ ನಡೆಸುವಂತಿಲ್ಲ. ನೀತಿ ಸಂಹಿತೆ ಮುಗಿದ ಬಳಿಕ ಕಾರ್ಪೋರೇಟರ್ ಗಳು ಸಭೆ ಸೇರಿ ಮೇಯರ್- ಉಪ […]

ಸ್ವಪ್ರತಿಷ್ಠೆಯ ಅಖಾಡವಾಗುತ್ತಿರುವ ಬಿಲ್ಲವರ ಯೂನಿಯನ್

Monday, March 25th, 2013
Naveenchandra

ಮಂಗಳೂರು : ಕಳೆದ ಒಂದು ವರುಷದ ಹಿಂದೆ ಅಖಿಲ ಭಾರತ ಬಿಲ್ಲವರ ಯೂನಿಯನ್ ವಿರುದ್ಧ ಸಮರ ಸಾರಿರುವ ಬಿಲ್ಲವರು ಈ ಬಾರಿಯೂ ಯೂನಿಯನ್ ಸಭೆಗೆ ಅಡ್ಡಿ ಉಂಟು ಮಾಡಿದ ಘಟನೆ ಮತ್ತೇ ನಡೆದಿದೆ. ಆದರೆ ಈ ಬಾರಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರು ತಂತ್ರಗಾರಿಕೆ ನಡೆಸಿಯೇ ಸಭೆ ಕರೆದಿದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದೆ ಕೋರಂ ಕೊರತೆ ಎದುರಿಸಿದರೂ ಸಭೆ ನಡೆದಿದೆ. ಅಖಿಲಭಾರತ ಬಿಲ್ಲವರ ಯೂನಿಯನ್ ಸಭೆ ನಡೆಯುವ ಸಮಯದಲ್ಲಿ ಕಳೆದ ಕೆಲವು ವರುಷದಿಂದ […]