ಕೊಂಡೆವೂರು ನಿತ್ಯಾನಂದ ಯೋಗಾಶ್ರಮದಲ್ಲಿ ಚಂಡಿಕಾಯಾಗ

Thursday, February 28th, 2013
Chandika yaga

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಕೊಂಡೆವೂರು, ಉಪ್ಪಳ ಇಲ್ಲಿ ಫೆಬ್ರವರಿ 27 ರಿಂದ ಮಾರ್ಚ್  6 ರ ವರೆಗೆ ಸಹಸ್ರ ಮಹಾಯಾಗವೂ ನಡೆದಿದೆ. ಫೆಬ್ರವರಿ 28 ರಂದು ಬೆಳಿಗ್ಗೆ 5 ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ. ಉಷಕಾಲ ಪೂಜೆ, ನಾಂಧೀ ಸಮಾರಾಧನೆ, ದುರ್ಗಾ ಸಪ್ತಶತೀ ಪಾರಾಯಣ ಆರಂಭವಾಯಿತು. ಬೆಳಿಗ್ಗೆ ಅಥರ್ವ ಶೀರ್ಘ ಗಣಯಾಗವು ನವಾಕ್ಷರೀ ಜಪಹೋಮದೊಂದಿಗೆ ನಡೆಯಿತು. ದೇವಿ ಭಾಗವತ ಪ್ರವಚನ, ಸಾರ್ವಜನಿಕ ಅನ್ನಸಂತರ್ಪನಣೆಯು ನಡೆಯಿತು. ಸಂಜೆ ಐಲ […]

ರಾಜ್ಯದಲ್ಲಾಗಲೀ, ಸ್ಥಳೀಯ ಸಂಸ್ಥೆಗಳಲ್ಲಾಗಲೀ ಅಧಿಕಾರದಲ್ಲಿರುವ ಅರ್ಹತೆಯನ್ನು ಬಿಜೆಪಿ ಕಳೆದುಕೊಂಡಿದೆ : ಜನಾರ್ಧನ ಪೂಜಾರಿ

Thursday, February 28th, 2013
BJP in polls

ಮಂಗಳೂರು : ರಾಜ್ಯದಲ್ಲಿ 5 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಪಕ್ಷವು ಇನ್ನು ಮುಂದೆ ಅಧಿಕಾರದಲ್ಲಿರುವ ಹಕ್ಕನ್ನು ಕಳೆದುಕೊಂಡಿದ್ದು, ಈ ಸರ್ಕಾರದಲ್ಲಿರುವ ಬಹಳಷ್ಟು ಮಂತ್ರಿಗಳು ಒಂದಲ್ಲ ಒಂದು ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ, ಈ ಮೂಲಕ ಬಿಜೆಪಿಯು ರಾಜ್ಯದಲ್ಲಾಗಲೀ, ಸ್ಥಳೀಯ ಸಂಸ್ಥೆಗಳಲ್ಲಾಗಲೀ ಅಧಿಕಾರದಲ್ಲಿರುವ ಅರ್ಹತೆಯನ್ನು ಕಳೆದುಕೊಂಡಿದೆ ಎಂದು ಕೇಂದ್ರ ಸರ್ಕಾರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಆರೋಪಿಸಿದರು. ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,  ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದು, […]

ಮಹಾನಗರ ಪಾಲಿಕೆ ಚುನಾವಣೆ ಜೆಡಿಎಸ್ ನಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

Thursday, February 28th, 2013
ಮಹಾನಗರ ಪಾಲಿಕೆ ಚುನಾವಣೆ ಜೆಡಿಎಸ್ ನಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ ಮಾರ್ಚ್  7ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ನಗರದಲ್ಲಿ ಜಾತ್ಯಾತೀತ ಜನತಾ ದಳದ ರಾಜ್ಯ ಉಪಾಧ್ಯಕ್ಷ- ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಜಾತ್ಯಾತೀತ ಜನತಾದಳದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಜೆಡಿ‌ಎಸ್, ಮನಪಾ ವ್ಯಾಪ್ತಿಯ 60ವಾರ್ಡ್‌ಗಳಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳನ್ನು ಗಮನದಲ್ಲಿ ಇರಿಸಿಕೊಂಡು ವಿವಿಧ ನಾಗರಿಕ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಗರಾಜ […]

ಪುರಭವನದಲ್ಲಿ “ಮಿ. ದಕ್ಷಿಣ ಕನ್ನಡ 2013″ ದೇಹಧಾರ್ಡ್ಯ ಸ್ಪರ್ಧೆ

Thursday, February 28th, 2013
mr Dakshina Kannada

ಮಂಗಳೂರು : ವೈಷ್ಣವಿ ಪ್ರೆಂಡ್ಸ್, ಮಾರುತಿ ಹೈ-ಟೆಕ್ ಜಿಮ್ ಮಂಗಳೂರು ಹಾಗೂ ದಕ್ಷಿಣ ಕನ್ನಡ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ಫೆಬ್ರವರಿ 27 ಬುಧವಾರ ಸಂಜೆ “ಮಿ. ದಕ್ಷಿಣ ಕನ್ನಡ 2013” ದೇಹಧಾರ್ಡ್ಯ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಕಾಮನ್ ವೆಲ್ತ್ ಕ್ರಿಡಾಕೂಟದಲ್ಲಿ ಚಿನ್ನದ ಪದಕ ಪಡೆದು ಉಪ್ಪಳ ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಭಂದಕ ಪುಪ್ಪರಾಜ ಹೆಗ್ಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮನುಷ್ಯ ಆರೋಗ್ಯವಾಗಿರಬೇಕಾದರೆ ವ್ಯಾಯಮ ಅತ್ಯಗತ್ಯ ಜಿಮ್ನೆಶಿಯಂಗಳಂತಹ ವ್ಯಾಯಾಮಶಾಲೆಗಳಿಂದ ಆರೋಗ್ಯ ಮತ್ತು ದೇಹಧಾರ್ಡ್ಯತೆಗಳೆರಡನ್ನು ಬೆಳೆಸಿಕೊಳ್ಳಬಹುದು […]

ಸೌಮ್ಯ ಕೊಲೆ ಪ್ರಕರಣದ ಆರೋಪಿಗೆ ಮರಣ ದಂಡನೆ ಶಿಕ್ಷೆ ಗೆ ಒತ್ತಾಯಸಿ ಸರ್ವ ಪಕ್ಷಗಳಿಂದ ಬೃಹತ್ ಪ್ರತಿಭಟನಾ ಸಭೆ

Thursday, February 28th, 2013
Soumya murder political parties join hands

ಬಂಟ್ವಾಳ : ಬುಧವಾರ ಬೆಳಗ್ಗೆ  ಬಿಸಿ ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ  ಎಲ್ಲಾ ಪಕ್ಷಗಳ ನಾಯಕರು ಪಕ್ಷ ಭೇದ ಮರೆತು ಸೌಮ್ಯ ಕೊಲೆ ಪ್ರಕರಣದ ಆರೋಪಿಗೆ ಮರಣ ದಂಡನೆ ನೀಡುವಂತೆ ಒತ್ತಾಯಸಿ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಶಾಸಕ ರಮಾನಾಥ ರೈ ಹಗಲು ಹೊತ್ತಿನಲ್ಲೇ ಇಂತಹ ಕೃತ್ಯದಿಂದ  ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು, ಇಂತಹ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕವ ಉದ್ದೇಶದಿಂದ ಮತ್ತು ನಾಗರೀಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಎಚ್ಚೆತ್ತುಕೊಳ್ಳುವಂತೆ […]

ಮೃತ ಸೌಮ್ಯಾ ಳ ಮನೆಗೆ ಜನಾರ್ದನ ಪೂಜಾರಿ, ಕಾಂಗ್ರೆಸ್ಸ್ ನಾಯಕರ ಭೇಟಿ, ಸಾಂತ್ವಾನ

Thursday, February 28th, 2013
Janardhana poojaary visit Sowmya's family

ಬಂಟ್ವಾಳ : ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ಯಲ್ಲಿ ಸೋಮವಾರ ಅತ್ಯಾಚಾರ ಯತ್ನದ ಬಳಿಕ ಕೊಲೆಗೀಡಾಗಿರುವ ಸೌಮ್ಯಾ ಅವರ ಮನೆಗೆ ಬುಧವಾರ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಮತ್ತು ಕಾಂಗ್ರೆಸ್ಸ್ ನಾಯಕರು ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಹಾಗು ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಕಾರ್ಯಕರ್ತರಿಂದ ಮಂಗಳವಾರ ಸಂಗ್ರಹಿಸಿದ 1.10 ಲಕ್ಷ ರೂಪಾಯಿಗಳನ್ನು  ಸೌಮ್ಯಾ ಳ ಹೆತ್ತವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮಹಿಳೆಗೆ ರಕ್ಷಣೆ ಇಲ್ಲದಂತಹ  ಸ್ಥಿತಿ ನಿರ್ಮಾಣವಾಗಿದ್ದು, […]

ಬಂಟ್ವಾಳ : ಕಾನೂನು ಮಾಹಿತಿ ಶಿಬಿರ

Wednesday, February 27th, 2013
Legal Information Camp at Bantwal

ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಬಂಟ್ವಾಳ ಹಾಗೂ ಗ್ರಾಮ ಪಂಚಾಯತ್ ಅಲ್ಲಿಪಾದೆ ಇವುಗಳ  ಆಶ್ರಯದಲ್ಲಿ ನಡೆದ ಕಾನೂನು ಮಾಹಿತಿ ಶಿಬಿರವನ್ನು ತಾಲೂಕು ಸೇವೆಗಳ ಸಮಿತಿಯ ಅಧ್ಯಕ್ಷರು ಹಿರಿಯ ಸಿವಿಲ್ ನ್ಯಾಯಧೀಶೆಯಾದ ಎ.ಕೆ ನವೀನಕುಮಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಾನೂನಿನ ದೃಷ್ಠಿಯಲ್ಲಿ  ಎಲ್ಲರೂ ಸಮಾನರಾಗಿದ್ದು ಅದಕ್ಕೆ ಮೇಲು -ಕೀಳು, ಗಂಡು ಹೆಣ್ಣು ಎಂಬ ಭೇದವಿಲ್ಲ ಈ ಅರಿವು ಎಲ್ಲರಲ್ಲೂ ಮೂಡಬೇಕು ಎಂಬ […]

ಜಿಲ್ಲಾಧಿಕಾರಿಗಳಿಂದ ನಗರದ ನೈರ್ಮಲ್ಯ ಪರಿಶೀಲನೆ

Wednesday, February 27th, 2013
city's sanitation inspection

ಮಂಗಳೂರು  : ಇಂದು ಬೆಳಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆದ ಶ್ರೀ ಎನ್. ಪ್ರಕಾಶ್ ಅವರು  ಮಾನ್ಯ ಆಯುಕ್ತರು ಹಾಗೂ ಪರಿಸರ ಅಭಿಯಂತರರೊಂದಿಗೆ ಪಾಲಿಕಾ ವ್ಯಾಪ್ತಿಯೊಳಗಿನ ಘನತ್ಯಾಜ್ಯ ವಿಲೇವಾರಿ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿ ಕೆಲ  ಪ್ರದೇಶಗಳಿಗೆ ಸ್ವತಹ ಸಂದರ್ಶಿಸಿ ಪರಿಶೀಲನೆ ನಡೆಸಿದರು. ನಗರದ ಫಳ್ನೀರು ರಸ್ತೆ, ಕಂಕನಾಡಿ, ಶಾಂತಿನಿಲಯ ರಸ್ತೆ, ನಂದಿಗುಡ್ಡ, ಪಾಂಡೇಶ್ವರ, ಕೋರ್ಟ್, ದಕ್ಕೆ, ಸೆಂಟ್ರಲ್ ಮಾರ್ಕೆಟ್, ರಥಬೀದಿ, ಬಂದರು, ಕುದ್ರೋಳಿ, ಮಣ್ಣಗುಡ್ಡೆ, ಉರ್ವ, ಕೊಟ್ಟಾರ, ಬಿಜೈ, ಕದ್ರಿ, ಶಿವಭಾಗ್, […]

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ “ತುಳುನಾಡ ಜಾನಪದ ವೈಭವ ಕಾರ್ಯಕ್ರಮ “

Wednesday, February 27th, 2013
Tulunada Janapada Vaibhava

ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇದರ ವತಿಯಿಂದ ಪ್ರತಿಭಾ ದಿನಾಚರಣೆ “ತುಳುನಾಡ ಜಾನಪದ ವೈಭವ” ಕಾರ್ಯಕ್ರಮ ಕಾಲೇಜಿನ ವಿದ್ಯಾರ್ಥಿಗಳಿಂದ ಬುಧವಾರ ಫೆಬ್ರವರಿ 27 ರಂದು ಬೆಳಗ್ಗೆ ನಡೆಯಿತು. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತುಳುನಾಡಿನ ಸಂಸ್ಕೃತಿಗೆ ಸಂಬಂಧಪಟ್ಟ, ಯಕ್ಷಗಾನ, ಹುಲಿವೇಷ, ಆಟಿಕಳಂಜ, ಕೋಟಿ ಚೆನ್ನಯ್ಯ, ಜನಪದ ನೃತ್ಯ, ಕಂಗೀಲು ಮೊದಲಾದ ಪ್ರದರ್ಶನಗಳನ್ನು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ ಶ್ರೀಮತಿ ಸರೋಜಿನಿ ಶೆಟ್ಟಿ ಮಾತನಾಡಿ, ಆಧುನಿಕತೆಯ ಪ್ರಭಾವದಿಂದ […]

ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

Wednesday, February 27th, 2013
Niddodi thermal power project

ಮೂಡುಬಿದಿರೆ : ದ.ಕ.ಜಿಲ್ಲೆಯ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ನಿಡ್ಡೋಡಿ ಗ್ರಾಮದಲ್ಲಿ  ನಾಲ್ಕುಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರ ಸ್ಥಾಪಿಸಲುದ್ದೇಶಿಸಿರುವ ವಿಷಯ ಬಹಿರಂಗವಾಗಿದ್ದು, ಕೃಷಿ ಪ್ರಧಾನ ವಾದ ಈ ಪ್ರದೇಶದಲ್ಲಿ  ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಈ ಪರಿಸರದ ಜನ ರಾಜಕೀಯೇತರ ಹೋರಾಟಕ್ಕೆ ಸಜ್ಜಾಗಿದ್ದಾರೆ. ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಸುಮಾರು 4,000 ಎಕ್ರೆ ಜಾಗದ ಅಗತ್ಯತೆ ಇದೆ. ಶೇ. 85ರಷ್ಟು ಕೃಷಿಭೂಮಿಯೇ ಇರುವ ನಿಡ್ಡೋಡಿಯಲ್ಲಿ ಒಂದು ವೇಳೆ ಈ ಯೋಜನೆ ಜಾರಿಗೆ ಬಂದಲ್ಲಿ  ತಲೆತಲಾಂತರಗಳಿಂದ ಕೃಷಿಯನ್ನೇ […]