ಲಕ್ಷ ದ್ವೀಪಕ್ಕೆ ತೆರಳುತ್ತಿದ್ದ ಸರಕು ನೌಕೆ ಮುಳುಗಡೆ ಅಪಾಯದಿಂದ ಪಾರಾದ ಸಿಬ್ಬಂದಿಗಳು

Friday, February 8th, 2013
Al Masoor

ಮಂಗಳೂರು : ಬುಧವಾರ ಬೆಳಗ್ಗೆ 6 .30 ಕ್ಕೆ ಮಂಗಳೂರು ಹಳೆ ಬಂದರು ದಕ್ಕೆಯಿಂದ ಸಿಮೆಂಟ್‌, ಜಲ್ಲಿ, ಕಬ್ಬಿಣ ಮತ್ತಿತರ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮತ್ತು ಆಹಾರ ವಸ್ತುಗಳನ್ನು ಹೊತ್ತು ಲಕ್ಷದ್ವೀಪಕ್ಕೆ ತೆರಳುತ್ತಿದ್ದ  ಸರಕು ನೌಕೆ ‘ಅಲ್‌ ಮಸೂರ್‌’ ಮಂಗಳೂರಿನಿಂದ 50 ನಾಟಿಕಲ್‌ ಮೈಲು ದೂರ ತಲುಪಿದಾಗ ಗಾಳಿ ಮತ್ತು ತೆರೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಎಲ್ಲಾ 6 ಮಂದಿ ಸಿಬಂದಿ ಹುಸೈನ್‌, ಅರಾಫತ್‌, ಖಾದರ್‌, ಅನ್ವರ್‌, ಜಾವೇದ್‌ ಮತ್ತು ಬಶೀರ್‌  ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರು […]

ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಲ್ಲಿ ಪೊಲೀಸ್‌ ಇಲಾಖೆಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ :ಡಿಸಿ

Thursday, February 7th, 2013
meeting on drug mafia

ಮಂಗಳೂರು : ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯ ವತಿಯಿಂದ ಬುಧವಾರ ದ.ಕ. ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ ರವರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಡ್ರಗ್ ಮಾಫಿಯಾದ ಮೂಲವನ್ನು ಪತ್ತೆಹಚ್ಚಿ ನಿರ್ಮೂಲನ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಜಿಲ್ಲಾಡಳಿತ ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿ ಪೊಲೀಸ್‌ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಜೊತೆಗೆ  ಅಬಕಾರಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ […]

ಜಿಲ್ಲೆಯಲ್ಲಿನ ಮಾದಕ ವಸ್ತುಗಳ ಮಾರಾಟ ಜಾಲದ ವಿರುಧ್ಹ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಶ್ರೀ ರಾಮ ಸೇನೆ ಆಗ್ರಹ

Wednesday, February 6th, 2013
Sri Rama Sene

ಮಂಗಳೂರು : ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ಜಾಲದಿಂದಾಗಿ ಜಿಲ್ಲೆಯಲ್ಲಿನ ಅನೇಕ ಅಮಾಯಕ ವಿಧ್ಯಾರ್ಥಿಗಳು ಈ ಪಿಡುಗಿಗೆ ಬಲಿಯಾಗುತ್ತಿದ್ದರೂ  ಜಿಲ್ಲಾಡಳಿತ ಈ ಜಾಲದ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಜಿಲ್ಲಾಡಳಿತ ಈ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ರಾಮ ಸೇನೆ ಜಿಲ್ಲಾ ಸಂಚಾಲಕ ಕುಮಾರ್ ಮಾಲೆಮಾರ್ ಒತ್ತಾಯಿಸಿದರು. ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲವು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಈ ಜಾಲಗಳು  ಸ್ಥಳೀಯ ಕಾಲೇಜುಗಳನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದೆ. ಈ […]

ಸಾಗರೋತ್ಪನ್ನಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದ್ದ ಕಂಪನಿಗೆ ವಂಚನೆ, ಆರೋಪಿಯ ಬಂಧನ

Wednesday, February 6th, 2013
Shameer Bashyar

ಮಂಗಳೂರು : ಸಾಗರೋತ್ಪನ್ನಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದ್ದ ನಗರದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉಳ್ಳಾಲ ನಿವಾಸಿ ಶಮೀರ್ ಬಶಾರ್ ಎಂಬಾತನು ಕಂಪನಿಗೆ 3.3 ಕೋಟಿ ರೂಪಾಯಿಗಳ ಮೋಸವನ್ನು ಮಾಡಿದ್ದಾನೆ ಎಂದು ಕಂಪನಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ನಿಟ್ಟಿನಲ್ಲಿ  ಪಾಂಡೇಶ್ವರ ಪೊಲೀಸರು ಉಳ್ಳಾಲ ನಿವಾಸಿ ಶಮೀರ್ ಬಶಾರ್ ನನ್ನು ಬಂಧಿಸಿದ್ದು ಇತರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಂಪನಿಯು ದೂರಿನಲ್ಲಿ ಶಮೀರ್ ತನ್ನ ಕಂಪನಿಗೆ ಬರಬೇಕಾಗಿದ್ದ ಕೋಟ್ಯಾಂತರ ರೂಪಾಯಿಗಳನ್ನು ತನ್ನ ಖಾತೆಗೆ ಬರುವಂತೆ ಮಾಡಿ ಹಲವು ವರ್ಷಗಳಿಂದ […]

ಯುವತಿಯರ ಮೊಬೈಲ್ ಕಳವು ಗೈದು ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಗಳ ಬಂಧನ

Wednesday, February 6th, 2013
Kasaragod

ಕಾಸರಗೋಡು : ಕೇರಳದಲ್ಲಿ ನಡೆದ  ಕೊರಗ ನೃತ್ಯದಲ್ಲಿ ಪಾಲ್ಗೊಂಡು ತನ್ನ ಊರಿಗೆ ರೈಲಿನಲ್ಲಿ ಹಿಂದಿರುಗುತ್ತಿದ್ದ  ಕಾಸರಗೋಡಿನ ಕೊರಗ ನೃತ್ಯ ಕಲಾವಿದೆಯಾದ ಆದಿವಾಸಿ ಯುವತಿಯೋರ್ವಳ ಮೊಬೈಲ್ ಹಾಗೂ ನಗದನ್ನುರೈಲಿನಲ್ಲಿ  ಕಳವುಗೈದು ಬಳಿಕ  ಆ ಮೊಬೈಲ್ ನಿಂದ ಯುವತಿಯ ಸ್ನೇಹಿತೆಯ ಮೊಬೈಲ್ ಗೆ ಕರೆ ಮಾಡಿ ಯುವತಿಗೆ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಮಲಪ್ಪುರಂ ಪೊನ್ನಾನಿಯ ಹಂಝ(26) ಮತ್ತು ಮಹಮ್ಮದ್ ಶಾಫಿ(25) ಬಂಧಿತ ಆರೋಪಿಗಳಾಗಿದ್ದಾರೆ. ಕೇರಳದ ಆಲುವಾದಲ್ಲಿ ನಡೆಯುವ ಕೊರಗ ನೃತ್ಯದಲ್ಲಿ ಪಾಲ್ಗೊಳ್ಳಲು ಇತರ […]

ಪ್ರವಾಸಿ ಕಾರಿಗೆ ಡಿಕ್ಕಿ ಹೊಡೆಸಿ ಚಿನ್ನಾಭರಣ ದರೋಡೆ ಆರೋಪಿಗಳ ಸೆರೆ

Tuesday, February 5th, 2013
Sulya robbery

ಮಂಗಳೂರು : ಸುಳ್ಯ ತಾಲೂಕಿನ ಕಲ್ಲುಗುಂಡಿ ಎಂಬಲ್ಲಿ ಪ್ರವಾಸಿ ಕಾರಿಗೆ ಡಿಕ್ಕಿ ಹೊಡೆಸಿ ಅದರಲಿದ್ದ ಪ್ರಯಾಣಿಕರ ಚಿನ್ನಾಭರಣವನ್ನು ದರೋಡೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಬೆಂಗಳೂರು  ವಿದ್ಯಾರಣ್ಯಪುರದ ತಿಂಡ್ಲು ನಿವಾಸಿಗಳಾದ ಮಂಜುನಾಥ (೨೪), ಚಂದ್ರಶೇಖರ (೨೫), ಮತ್ತು ಶ್ರೀನಿವಾಸ (೨೧), ಬಂಧಿಸಲ್ಪಟ್ಟಿದ್ದು ಇನ್ನೊಬ್ಬ ಆರೋಪಿ ರಮೇಶ್ (೨೭), ತಲೆಮರೆಸಿಕೊಂಡಿದ್ದಾನೆ. ಬೆಂಗಳೂರಿನವರಾದ ಸೋಮವಾರಪೇಟೆಯ ಹೊಸೂರು ಮಾದಾಪುರದ ನಾಗರಾಜ ಎಂಬವರು ತಮ್ಮ ಪತ್ನಿ ಹಾಗೂ ಮಗನೊಂದಿಗೆ ಬೆಂಗಳೂರಿನಿಂದ ಕಾರನ್ನು ಬಾಡಿಗೆಗೆ ಮಾಡಿಕೊಂಡು ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳಿದ್ದರು. […]

ಜಿಲ್ಲೆಯಲ್ಲಿ ನೂತನ ಕೊಳವೆ ಬಾವಿ ಕೊರೆಯಲು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಂತರ್ಜಲ ಪ್ರಾಧಿಕಾರದ ಅನುಮತಿ ಕಡ್ಡಾಯ :ಎನ್‌. ಪ್ರಕಾಶ್‌

Tuesday, February 5th, 2013
DK Groundwater Authority

ಮಂಗಳೂರು : ಕರ್ನಾಟಕ ಅಂತರ್ಜಲ ಅಭಿವೃದ್ಧಿ ಪಡಿಸುವ ಮತ್ತು ಅಂತರ್ಜಲ ಅತಿ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಅಂತರ್ಜಲ ಅಧಿನಿಯಮ 2011 ನಿಯಮಾವಳಿ-2012ರನ್ವಯ ನೂತನವಾಗಿ ರಚಿಸಿರುವ ಜಿಲ್ಲಾ ಮಟ್ಟದ ಅಂತರ್ಜಲ ಪ್ರಾಧಿಕಾರದ ಪ್ರಥಮ ಸಭೆಯು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಇದರ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌  ರವರು ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ ಹಾಗೂ ಪುತ್ತೂರು ತಾಲೂಕುಗಳ 43 ಗ್ರಾಮಗಳನ್ನು ಅಂತರ್ಜಲ ಅತಿ ಬಳಕೆ ಗ್ರಾಮಗಳೆಂದು ಘೋಷಿಸಲಾಗಿದೆ. ಈ ಗ್ರಾಮಗಳಲ್ಲಿ ಇನ್ನು […]

ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ, ಶೀಘ್ರ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Monday, February 4th, 2013
Drugs mafia DK

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಿದ್ದು,  ಇಡೀ ರಾಜ್ಯದಲ್ಲಿಯೇ ಜಿಲ್ಲೆ  ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ದೆ. ಇಲ್ಲಿ  ಹೊರದೇಶ ಹಾಗೂ ಹೊರರಾಜ್ಯಗಳಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದು ಇವರನ್ನು ಕೇಂದ್ರವಾಗಿರಿಸಿಕೊಂಡು ಡ್ರಗ್ ಮಾಫಿಯಾಗಳು ಕಾರ್ಯಾಚರಿಸುತ್ತಿದ್ದು ಅಮಾಯಕ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಶೀಘ್ರವೇ ಡ್ರಗ್ಸ್ ಮಾಫಿಯಾವನ್ನು ನಮ್ಮ ಜಿಲ್ಲಾಡಳಿತ ಹಾಗೂ ಸರಕಾರಗಳು ನಿಯಂತ್ರಿಸದೇ ಹೋದಲ್ಲಿ ಯುವಜನತೆ ಅಡ್ಡದಾರಿ ಹಿಡಿಯುವ ಸಾಧ್ಯತೆ ಇದೆ ಎಂದು  ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಹೇಳಿದರು. ಡ್ರಗ್ಸ್ […]

ವಿವಿಧ ಬೇಡಿಕೆಗಳಿಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಧರಣಿ.

Monday, February 4th, 2013
Guest lecturer's Protest

ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸುವ ಕುರಿತು ನೊಂದ ಅಧ್ಯಾಪಕರು ಜ್ಯೋತಿ ಸರ್ಕಲಿನ ಸರ್ಕಾರದ ಪದವಿಪೂರ್ವ ಕಾಲೇಜಿನಿಂದ ಡಿ.ಸಿ. ಆಫೀಸಿಗೆ ಪ್ರತಿಭಟನಾ ಮೆರವಣಿಗೆಯಿಂದ ಘೋಷಣೆ ಕೂಗುತ್ತಾ ಬಂದರು. ಪ್ರತಿಭಟನಾ ಸಮಾವೇಶದ ಉದ್ಘಾಟನೆಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ರವರು ದಿI ರಾಷ್ಟ್ರಪತಿ ಡಾ. ರಾಧಕೃಷ್ಣ ರವರ ಭಾವ ಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ […]

ಆತ್ಮಗೌರವ, ಸ್ವಾಭಿಮಾನ, ನಿಸ್ವಾರ್ಥ ಸೇವೆಯಿಂದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ : ಮೋಹನ್ ಭಾಗವತ್

Monday, February 4th, 2013
RSS Vibhag Sanghik

ಮಂಗಳೂರು : ಯುವಜನತೆಯೇ ದೇಶದ ಶಕ್ತಿ, ಯುವಜನತೆ ಕೈಗೆತ್ತಿಕೊಂಡ ಸದಾಶಯದ ಕಾರ್ಯಗಳೆಲ್ಲವೂ ಗುರಿ ತಲುಪುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಾರ್ಗದರ್ಶನವನ್ನು ನೀಡುತ್ತಿದೆ. ಆತ್ಮಗೌರವ, ಸ್ವಾಭಿಮಾನ, ಪರರ ಹಿತಕ್ಕಾಗಿ ನಿಸ್ವಾರ್ಥ ಸ್ಪಂದನದ ಕರ್ತವ್ಯವನ್ನು ಪ್ರತಿಯೋರ್ವನೂ ನಿರ್ವಹಿಸಿದಾಗ ತೇಜಸ್ವಿಯಾದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ. ಎಂದು ರಾಷ್ಟ್ರೀಯ ಸ್ವಯಂಸೇವ ಸಂಘದ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಹೇಳಿದರು. ಬಜಪೆ ಸಮೀಪದ ಕೆಂಜಾರು ಬಳಿ ಭಾನುವಾರ ಸಂಘದ ಮಂಗಳೂರು ವಿಭಾಗದ ವತಿಯಿಂದ ನಡೆದ ಆರ್‌ಎಸ್‌ಎಸ್‌ನ ಸಾಂಘಿಕ್ ಕಾರ್ಯಕ್ರಮದಲ್ಲಿ  ಭಾಗವಹಿಸಿ ಅವರು ಮಾತನಾಡಿದರು. ಸಚ್ಚ್ಯಾರಿತ್ರ್ಯದಿಂದ ಕೂಡಿದ ಸಂಘಟನೆಯಿಂದ […]