ಕ್ಯಾಂಡಲ್ ಪ್ಯಾಕ್ಟರಿಯಲ್ಲಿ ಬೆಂಕಿ, ಕೋಟ್ಯಾಂತರ ರೂಪಾಯಿ ನಷ್ಟ

Saturday, January 12th, 2013
Fire mishap candle factory

ಮಂಗಳೂರು : ಜನವರಿ 10 ಗುರುವಾರ ರಾತ್ರಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ, ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ಎಂಬ ಸಂಸ್ಥೆಗೆ ಸೇರಿದ ಕ್ಯಾಂಡಲ್ ಪ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕಾರ್ಖಾನೆ ಬಹುತೇಕ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಯಂತ್ರಗಳು, 15 ಕೋಟಿ ರೂಪಾಯಿ ಮೌಲ್ಯದ ಕಟ್ಟಡ ಹಾಗೂ ಕಚ್ಛಾ ಸಾಮಗ್ರಿ ಸಹಿತ ಪ್ರಾಥಮಿಕ ಮಾಹಿತಿ ಪ್ರಕಾರ ನಷ್ಟದ ಪ್ರಮಾಣ ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. […]

ಜನವರಿ 27 ಬಜೊಡಿ ಪ್ರೇಮನಗರದ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭ

Thursday, January 10th, 2013
Sandesha awards

ಮಂಗಳೂರು : ನಗರದ ಸಂದೇಶ ಫೌಂಡೇಶನ್‌ ವತಿಯಿಂದ ನೀಡಲಾಗುವ ಸಂದೇಶ ಪ್ರಶಸ್ತಿಗೆ 2013ನೇ ಸಾಲಿನಲ್ಲಿ ಒಟ್ಟು 9 ಮಂದಿ ಆಯ್ಕೆಯಾಗಿದ್ದಾರೆ ಎಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಸಂದೇಶ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿಸೋಜಾ ತಿಳಿಸಿದರು. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ ಕಳೆದ 22 ವರ್ಷ ಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಪ್ರಶಸ್ತಿಯು ತಲಾ 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ […]

ರವೀಂದ್ರ ಕಲಾ ಭವನದಲ್ಲಿ ಏರ್ಪಟ್ಟ ರಾಷ್ಟ್ರೀಯ ವಿಚಾರಸಂಕಿರಣ ‘ಕಲೆ-ಹಿಂಸೆ’

Thursday, January 10th, 2013
National seminar

ಮಂಗಳೂರು : ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಕಾಲೇಜಿನ ಇಂಗ್ಲಿಷ್‌ ವಿಭಾಗ ವತಿಯಿಂದ ನಡೆದ ‘ಕಲೆ-ಹಿಂಸೆ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಏರ್ಪಟ್ಟ ರಾಷ್ಟ್ರೀಯ ವಿಚಾರಸಂಕಿರಣವನ್ನು ಮಂಗಳೂರು ವಿಶ್ವದ್ಯಾನಿಲಯದ ಕುಲಪತಿ ಪ್ರೊ| ಟಿ.ಸಿ. ಶಿವಶಂಕರ ಮೂರ್ತಿ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಹಿಂಸೆ ಎನ್ನುವುದು ವಿವಿಧ ಆಯಾಮಗಳಲ್ಲಿ, ಬೇರೆ ಬೇರೆ ಸಂದರ್ಭದಲ್ಲಿ ಪ್ರತಿಫಲಿಸಿದರೆ, ಕಲೆ ಮಾನವನ ಜೀವನದಲ್ಲಿ ಅನನ್ಯ ಭಾವರೂಪಿಯಾಗಿ ಹೊಸತನವನ್ನು ಪ್ರಜ್ವಲಿಸುತ್ತದೆ. ಕಲೆಯ ಮೂಲಕ ಹಿಂಸೆಯನ್ನು ತಡೆಗಟ್ಟಿ, ಅದನ್ನು ಮಟ್ಟಹಾಕಲು ಸಾಧ್ಯ ಎಂದವರು ಹೇಳಿದರು. […]

ಹಾಡ ಹಗಲೇ ನಿಲ್ಲಿಸಿದ್ದ ಕಾರಿನಿಂದ ಲಕ್ಷಾಂತರ ಮೌಲ್ಯದ ಹಣ ಕಳವು

Thursday, January 10th, 2013
thef in car

ಮಂಗಳೂರು : ಕಾರಿನ ಗಾಜು ಒಡೆದು 8 ಲಕ್ಷ ರೂಪಾಯಿ ನಗದನ್ನು ಕಳ್ಳತನ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ಕೂಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಸುರತ್ಕಲ್ ಸಮೀಪದ ಸೂರಿಂಜೆ ನಿವಾಸಿ ಕೇಶವ ಶೆಟ್ಟಿ (34) ಎಂಬವವರು ಬುಧವಾರ ಲ್ಯಾಂಡ್ ಡೀಲಿಂಗ್ ನಡೆಸಿದ್ದು, ಜಾಗ ಖರೀದಿಸಿದವರು ನೀಡಿದ ಹಣವನ್ನು ಕಾರಿನಲ್ಲಿಟ್ಟು ಲಾಕ್ ಹಾಕಿ ಕೂಳೂರು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಹೋಟೆಲ್‌ಗೆ ಊಟ ಮಾಡಲೆಂದು ತೆರಳಿದ್ದರು. ಇದರ ಲಾಭವನ್ನು ಪಡೆದ ಕಳ್ಳರು ಸರಿಯಾದ ಸಮಯ ಗಮನಿಸಿ […]

ಉಳ್ಳಾಲ : ವೈಯಕ್ತಿಕ ದ್ವೇಷ ಯುವಕನ ಕೊಲೆಯತ್ನ

Thursday, January 10th, 2013
Ullal group clash

ಉಳ್ಳಾಲ : ಉಳ್ಳಾಲ ಕೋಡಿ ನಿವಾಸಿ ಇಬ್ರಾಹಿಂ ಎಂಬವರ ಮಗ ವಾಕರ್ ಯೂನುಸ್ (೨೧) ಎಂಬಾತನ ಮೇಲೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ, ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಾಕರ್ ಯೂನುಸ್ ನಿನ್ನೆ ರಾತ್ರಿ ದರ್ಗಾ ಸಂದರ್ಶನ ಮುಗಿಸಿ ಕೋಡಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಕೊಲೆಯತ್ನ ನಡೆಸಲಾಗಿದೆ. ವಕಾರ್ ಯೂನಸ್ ತನ್ನ ಸ್ನೇಹಿತರೊಂದಿಗೆ ಕಾರಿನಿಂದ ಇಳಿದು ಪಕ್ಕದಲ್ಲಿದ್ದ ಗೂಡಂಗಡಿ ಬಳಿ ತೆರಳುತ್ತಿದ್ದಾಗ ಹಠಾತನೆ ದಾಳಿ ನಡೆಸಿದ ಇಲಿಯಾಸ್ […]

ಬಾರೊಂದರಲ್ಲಿ ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಸರ್ವೇಯರ್ ಲೋಕಾಯುಕ್ತ ವಶಕ್ಕೆ

Wednesday, January 9th, 2013
Sullia surveyor

ಸುಳ್ಯ : ಸುಳ್ಯದ ಜಟ್ಟಿಪಳ್ಳದ ಬಾರೊಂದರಲ್ಲಿ ಮಂಗಳವಾರ ಮಧ್ಯಾಹ್ನ ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಸರ್ವೆ ಇಲಾಖೆಯ ಸರ್ವೇಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಭೂಮಾಪನಾ ಇಲಾಖೆಯ ಪರವಾನಗಿ ಭೂಮಾಪಕ ಚೆನ್ನಪಟ್ಟಣ ಮೂಲದ ಶರತ್‌ಕುಮಾರ್(೩೪) ಬಂಧಿತ ಆರೋಪಿಯಾಗಿದ್ದಾನೆ. ಆಲೆಟ್ಟಿ ಗ್ರಾಮದ ಕೋಲ್ಚಾರಿನ ಪದ್ಮಾನಾಭ ಎಂಬುವವರು ಕೊಯಿಂಗಾಜೆಯಲ್ಲಿರುವ ತಮ್ಮ ಒಂದೂವರೆ ಎಕ್ರೆ ಜಾಗ ಸರ್ವೆ ಮಾಡಲು ಕಳೆದ ಡಿಸೆಂಬರ್ ೧೨ ರಂದು ಅರ್ಜಿ ಸಲ್ಲಿಸಿದ್ದರು. ಬಳಿಕ ೨೯ ರಂದು ಶರತ್‌ಕುಮಾರ್ ಕೊಯಿಂಗಾಜೆಗೆ ತೆರಳಿ ಸ್ಥಳದ ಸರ್ವೆ ನಡೆಸಿದ್ದರು. ಆದರೆ ದಾಖಲೆಗಳನ್ನು […]

ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವದಿನ ಮತ್ತು ಯುವಜನೋತ್ಸವ ಶಿಬಿರ

Wednesday, January 9th, 2013
swami vivekananda

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ರಾಮಕೃಷ್ಣ ಆಶ್ರಮಗಳ ಜಂಟಿ ಆಯೋಜನೆಯಲ್ಲಿ ಜನವರಿ 11 ಮತ್ತು 12 ರಂದು ಮಂಗಳೂರಿನ ಶ್ರೀರಾಮಕೃಷ್ಣ ಮಠದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವದಿನ ಮತ್ತು ಯುವಜನೋತ್ಸವ ಶಿಬಿರ ಆಯೋಜಿಸಲಾಗಿದೆ ಎಂದು ದ. ಕ. ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಿಳಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದರು. ಜನವರಿ 11ರಂದು ಬೆಳಗ್ಗೆ 9ಗಂಟೆಗೆ ವಿವೇಕ ಚೇತನ ಮತ್ತು ವಿವೇಕ ಸಿಂಚನ […]

ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಆಮ್ ಆದ್ಮಿ ಪಾರ್ಟಿ

Wednesday, January 9th, 2013
Distict aam aadmi party

ಮಂಗಳೂರು : ಭ್ರಷ್ಟಾಚಾರ ನಿರ್ಮೂಲನೆಗೆ ಅರವಿಂದ ಕೇಜ್ರಿವಾಲ್ ರವರಿಂದ ಕೇಂದ್ರದಲ್ಲಿ ನಿರ್ಮಾಣ ಗೊಂಡ ಆಮ್ ಆದ್ಮಿ ಪಾರ್ಟಿ ಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾನುವಾರ 40 ಸದಸ್ಯರನ್ನೊಳಗೊಂಡ ಸಮಿತಿಯನ್ನು ಕರ್ನಾಟಕ ರಾಜ್ಯ ಘಟಕದ ಪ್ರತಿನಿಧಿಗಳ ಸಮ್ಮುಖದಲ್ಲಿ ರಚಿಸಲಾಯಿತು. ಜಿಲ್ಲೆಯ ರಾಜಕೀಯ ಅಭಿವೃದ್ಧಿಗಾಗಿ ಮತ್ತು ಜಿಲ್ಲೆಯಲ್ಲಿ ರಾಜಕೀಯ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಈ ಸಮಿತಿಯನ್ನು ಸಹೋದಯ ಸಭಾಂಗಣದಲ್ಲಿ ರಾಜ್ಯ ಸಮಿತಿಯ ಮುಖಂಡ ಕೆ.ಎನ್.ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಪ್ರಸ್ತುತ 40 ಸದಸ್ಯರನ್ನೊಳಗೊಂಡ ಈ ಸಮಿತಿಯ ಸಂಚಾಲಕರಾಗಿ ಕಿನ್ನಿಗೋಳಿ […]

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯುಟ್‌

Wednesday, January 9th, 2013
Fr Muller Hospital Fire accident

ಮಂಗಳೂರು : ಮಂಗಳವಾರ ಫಾದರ್ ಮುಲ್ಲರ್ ಆಸ್ಪತ್ರೆಯ ಹೃದ್ರೋಗ ತೀವ್ರ ನಿಗಾ ಘಟಕದ ಎ.ಸಿ. ಯಲ್ಲಿ ಶಾರ್ಟ್ ಸರ್ಕ್ಯುಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ಸ್ವಲ್ಪ ಹೊತ್ತು ಗಲಭೆಯ ವಾತಾವರಣ ನಿರ್ಮಾಣವಾಯಿತು. ಆದರೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಳಗ್ಗೆ 10.30 ರ ವೇಳೆಗೆ ಏರ್‌ಕಂಡೀಷನ್ ಯಂತ್ರದ ಒಳಗೆ ಹೊಗೆ, ಸುಟ್ಟ ವಾಸನೆ ಹಾಗೂ ಸ್ವಲ್ಪ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಆಸ್ಪತ್ರೆಯ ಸಿಬ್ಬಂದಿ, ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು ಉಸಿರಾಟಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡರು. ಸಂಸ್ಥೆಯ ಭದ್ರತಾ ಸಿಬ್ಬಂದಿ […]

ಬ್ರೇಕ್ ಫೇಲ್ ತಪ್ಪಿದ ಅನಾಹುತ

Tuesday, January 8th, 2013
Mangalore Udupi bus

ಮಂಗಳೂರು : ಉಡುಪಿ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಬಸ್ ನ ಬ್ರೇಕ್ ವೈಫಲ್ಯ ದಿಂದಾಗಿ ಅದೇ ಮಾರ್ಗದ ಮೂಲಕ ಸಾಗುತ್ತಿದ್ದ ಲಾರಿಗೆ ಹಿಂದಿನಿಂದ ಗುದ್ದಿದ್ದು ಬಸ್ಸಿನ ಚಾಲಕ ಮತ್ತು ಪ್ರಯಾಣಿಕರು ಸಣ್ಣ ಪುಟ್ಟ ಗಾಯದೊಂದಿಗೆ ಪಾರಾದ ಘಟನೆ ಸೋಮವಾರ ಪಾಂಗಾಳ ಸೇತುವೆಯ ಬಳಿ ಮಧ್ಯಾಹ್ನ ಸಂಭವಿಸಿದೆ. ಲಾರಿ ಹಾಗೂ ಬಸ್ ಉಡುಪಿ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಸಂದರ್ಭ ವೇಗದೂತ ಬಸ್ಸಿನ ಬ್ರೇಕ್ ವೈಫಲ್ಯಗೊಂಡಿತ್ತು. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಲಾರಿಯ ಹಿಂಬದಿಗೆ ಗುದ್ದಿದ ಪರಿಣಾಮ ಭಾರೀ ಅನಾಹುತ […]