ಕಾಂಗ್ರೆಸ್ ನಲ್ಲಿ ಬಿರುಸುಗೊಂಡ ಜಾತಿ ರಾಜಕಾರಣ !

Friday, December 28th, 2012
Mangalore Politics

ಮಂಗಳೂರು : ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯ ವಿಷಯ ಬಂದಾಗ ಯಾವ ಜಾತಿಗೆ ಎಲ್ಲಿ ಅದ್ಯತೆ ಎಂಬ ಪ್ರಶ್ನೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಏಳುತ್ತದೆ. ಜಾತಿ ರಾಜಕಾರಣ ಹುಟ್ಟು ಹಾಕಿದ್ದೇ ಕಾಂಗ್ರೆಸ್ ಎಂದು ಹೇಳಬಹುದು. ಸಾಮಾಜಿಕ ನ್ಯಾಯದ ನೆಪ ದಲ್ಲಿ ಜಾತಿವಾರು ಲೆಕ್ಕಾಚಾರ ನಡೆಸಿ ಮತಗಳ ಮೇಲೆ ಲಗ್ಗೆ ಇಡಲು ಎಲ್ಲ ರಾಜಕೀಯ ಪಕ್ಷಗಳೂ ಈಗ ಯೋಜನೆ ರೂಪಿಸುತ್ತಿವೆ. ಇಂತಹದ್ದೇ ಲೆಕ್ಕಾಚಾರದ ವರದಿಯೊಂದು ಕಾಂಗ್ರೆಸ್ ನಿಂದ ಹೊರಬಿದ್ದಿದೆ. ದ.ಕ. ಜಿಲ್ಲೆಯ ಕಾಂಗ್ರೆಸ್ ನಲ್ಲಿ ಯಾರು ಯಾವ ಕ್ಷೇತ್ರದ ಅಭ್ಯರ್ಥಿ, […]

ಮುಡಿಪು : ಹೆಚ್ಚಿನ ಸರಕಾರಿ ಬಸ್ ಗೆ ಒತ್ತಾಯಿಸಿ ಪ್ರತಿಭಟನೆ

Friday, December 28th, 2012
Bundh in Mudipu

ಮಂಗಳೂರು : ಮುಡಿಪು ಸರಕಾರಿ ಬಸ್ ಹೋರಾಟ ಸಮಿತಿ ವತಿಯಿಂದ ಗುರುವಾರ ಮಂಗಳೂರಿನಿಂದ ಕೊಣಾಜೆ -ಮುಡಿಪು ಮತ್ತು ಆ ಮಾರ್ಗವಾಗಿ ಇತರೆಡೆಗಳಿಗೆ ಹೆಚ್ಚಿನ ಸರಕಾರಿ ಬಸ್ ಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಯನ್ನುಹಮ್ಮಿಕೊಳ್ಳಲಾಗಿತ್ತು. ಹೋರಾಟ ಸಮಿತಿಯ ಅದ್ಯ್ಹಕ್ಷ, ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಮುಡಿಪು ಪರಿಸರದ ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಸಾರಿಗೆ ಸಚಿವರು ಕೆಲ ತಿಂಗಳ ಹಿಂದೆಯಷ್ಟೆ 3 ಬಸ್ ಗಳನ್ನು ಮಂಜೂರು ಮಾಡಿದರು ಆದರೆ ಖಾಸಗಿ ಬಸ್ ಮಾಲಕರ ಲಾಭಿಯಿಂದಾಗಿ […]

ಕಾಸರಗೋಡು ರಸ್ತೆ ಅಪಘಾತ ನಾಲ್ವರು ಮೃತ್ಯು

Thursday, December 27th, 2012
auto bus collision Kasargod

ಕಾಸರಗೋಡು : ಕಾಸರಗೋಡು ಜಿಲ್ಲೆಯ ಪಲ್ಲಿಕೆರೆ ಪೂಚಕ್ಕಾಡ್ ಎಂಬಲ್ಲಿ ಬುಧವಾರ ಮಧ್ಯಾಹ್ನ ಆಟೋ ರಿಕ್ಷಾವೊಂದಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಆಟೋ ಚಾಲಕ ಅಜಾನೂರು ಕಡಪ್ಪುರ ನಿವಾಸಿ ರತೀಶ್ (25), ಮತ್ತು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಂಕಿತ್(13), ಸಚಿನ್ (5), ಅಭಿಷೇಕ್ (4) ಎನ್ನಲಾಗಿದೆ. ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾಕ್ಕೆ ಗುದ್ದಿದ ಪರಿಣಾಮ […]

ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಣೆ : ಗಣೇಶ್ ಕಾರ್ಣಿಕ್

Thursday, December 27th, 2012
Capt Ganesh Karnik

ಮಂಗಳೂರು : ವಿದೇಶದಲ್ಲಿರುವ ರಾಜ್ಯದ ಜನರ ಹಿತದೃಷ್ಟಿಯನ್ನು ಕಾಪಾಡುವ ಸಲುವಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ಅನಿವಾಸಿ ಭಾರತೀಯ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಇದರಲ್ಲಿ ತನಗೆ ಅವಧಿಗಿಂತ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ ಎಂದು ವಿಧಾನ ಪರಿಷತ್ ನೈರುತ್ಯ ಶಿಕ್ಷಕ ಕ್ಷೇತ್ರದ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿದ್ದು ತನ್ನನ್ನು ಇದರ ಉಪಾಧ್ಯಕ್ಷನನ್ನಾಗಿ ಮಾಡಿದೆ. ತನ್ನ […]

ಮಡೆಸ್ನಾನ: ನಿಡುಮಾಮಿಡಿ ಸ್ವಾಮೀಜಿ ದ್ವಂದ್ವ ನಿಲುವು ಶ್ರೀಗಳಿಗೆ ಶೋಭೆ ತರುವಂತದಲ್ಲ ಪೇಜಾವರ ಶ್ರೀ

Thursday, December 27th, 2012
ಮಡೆಸ್ನಾನ: ನಿಡುಮಾಮಿಡಿ ಸ್ವಾಮೀಜಿ ದ್ವಂದ್ವ ನಿಲುವು ಶ್ರೀಗಳಿಗೆ ಶೋಭೆ ತರುವಂತದಲ್ಲ ಪೇಜಾವರ ಶ್ರೀ

ಮಂಗಳೂರು : ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಮಡೆಸ್ನಾನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಡೆಸ್ನಾನಕ್ಕೆ ಬದಲಾಗಿ ಎಡೆಸ್ನಾನ ಜಾರಿಗೊಳಿಸುವಂತೆ ಸಲಹೆ ನೀಡಿದಾಗ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದ ನಿಡುಮಾಮಿಡಿ ಸ್ವಾಮೀಜಿ, ಇದೀಗ ಸಾರ್ವಜನಿಕ ಸಭೆಗಳಲ್ಲಿ ನಮ್ಮನ್ನು ಅವಮಾನಿಸುವಂತಹ ಮಾತುಗಳನ್ನಾಡಿರುವುದು ಶ್ರೀಗಳಿಗೆ ಶೋಭೆ ತರುವಂತದಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆರೋಪಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಈ ಆಚರಣೆಯಿಂದ ಜನರ ಭಾವನೆಗಳಿಗೆ ಧಕ್ಕೆ ಬರುವುದಾದರೆ ಅದನ್ನು ನಿಲ್ಲಿಸಿ ಎಂಜಲೆಲೆಯ ಬದಲಿಗೆ ದೇವರ […]

ಮಸ್ಕತ್‌ನಲ್ಲಿ ಮಂಗಳೂರು ಸಹೋದರ ಸಂಬಂಧಿಗಳ ಸಾವು

Thursday, December 27th, 2012
Mangaloreans dies at Muscat

ಮಂಗಳೂರು : ಮಂಗಳೂರು ಜೆಪ್ಪು ಬಪ್ಪಲ್ ನಿವಾಸಿಗಳಾದ ಲ್ಯಾನ್ಸಿಲಾಟ್ ಡಿಸೋಜ (40) ಮತ್ತು ಆತನ ಸಹೋದರ ಸಂಬಂಧಿ ಶರುಣ್ ಡಿಸೋಜ (26) ಎಂಬವರು ಸೋಮವಾರ ರಾತ್ರಿ ಮಸ್ಕತ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಶರುಣ್ ಡಿಸೋಜ ಕಳೆದ ಕೆಲವು ವರ್ಷಗಳಿಂದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದರು. ಆದರೆ ಲ್ಯಾನ್ಸಿಲಾಟ್ ಡಿಸೋಜ ಕಳೆದ 15 ದಿನಗಳ ಹಿಂದಷ್ಟೇ ವೀಸಾ ಪಡೆದು ಮಸ್ಕತ್‌ಗೆ ತೆರಳಿದ್ದರು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಸ್ಕತ್‌ನ ಆಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. […]

ಕದ್ರಿ ಪಾರ್ಕ್ ಬಳಿ ಅಪರಿಚತ ಯುವಕನ ಶವ ಪತ್ತೆ ಕೊಲೆ ಶಂಕೆ

Wednesday, December 26th, 2012
Kadri Park

ಮಂಗಳೂರು :ಮಂಗಳವಾರ ಕದ್ರಿ ಪಾರ್ಕ್ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು ಇದೊಂದು ಸಲಿಂಗ ಕಾಮದ ಉದ್ದೇಶದಿಂದ ನಡೆದ ಕೊಲೆ ಎಂದು ಶಂಕಿಸಲಾಗಿದೆ. ಕದ್ರಿ ಪಾರ್ಕ್ ಹೊರಗಡೆಯಿರುವ ಪೊದೆಯಲ್ಲಿ ಮೃತದೇಹ ಪತ್ತೆಯಾಗಿದ್ದು ಯುವಕನಿಗೆ ಸುಮಾರು 20 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಗಿಸಲಾಗಿದೆ. ಬಲಕಿವಿಯ ಪಕ್ಕ ರಕ್ತ ಮಡುಗಟ್ಟಿದ ಗುರುತು ಕಂಡುಬಂದಿದ್ದು, ಮೂಗಿನಲ್ಲಿ ರಕ್ತದ ಗುರುತಿದೆ. ದಾರಿಹೊಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತದೇಹವಿದ್ದ ಸ್ಥಳದಲ್ಲಿ ದೊಡ್ಡ ಗಾತ್ರದ ಕಲ್ಲೊಂದು ಪತ್ತೆಯಾದರು ಈತನ ಸಾವಿಗೂ ಕಲ್ಲಿಗೂ […]

ಕುದ್ರೋಳಿಯಲ್ಲಿ ಜನವರಿ 1 ರಂದು ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ

Wednesday, December 26th, 2012
Urulu Seve

ಮಂಗಳೂರು :ಜನವರಿ 1 ರಂದು ಶ್ರೀ ಕ್ಷೇತ್ರ ಕುದ್ರೋಳಿ ಯಲ್ಲಿ ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ಆಯೋಜಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರು ತಿಳಿಸಿದರು. ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಮಡೆಸ್ನಾನ ಪದ್ಧತಿಯನ್ನು ವಿರೋಧಿಸಿ ಉರುಳು ಸೇವೆಯನ್ನು ನಡೆಸುವುದಲ್ಲದೆ ಇದಾದ ನಂತರ ಪತಿಯನ್ನು ಕಳೆದುಕೊಂಡ ಪರಿಶಿಷ್ಟ ಜಾತಿಯ ವಿಧವೆಯ ಪಾದ ಪೂಜೆ ಮಾಡಲಾಗುವುದು ದೇವರ ಸೃಷ್ಟಿಯಲ್ಲಿ ನಾವೆಲ್ಲರೂ ಒಂದೇ ದೇವರು ಎಲ್ಲರಿಗೂ ಸಮಾನವಾದ ಅವಕಾಶ ನೀಡಿರುವಾಗ ಮನುಷ್ಯರಾದ ನಾವೇಕೆ ತಾರತಮ್ಯ […]

ಕರಾವಳಿಯೆಲ್ಲೆಡೆ ಸಂಭ್ರಮ ಸಡಗರದ ಕ್ರಿಸ್ ಮಸ್ ಹಬ್ಬ

Wednesday, December 26th, 2012
Chirstmas

ಮಂಗಳೂರು : ಕರಾವಳಿಯಲ್ಲಿ ಸೋಮವಾರ ರಾತ್ರಿ ಕ್ರಿಸ್ತನ ಜನ್ಮ ಸಂಭ್ರಮವನ್ನು ಆಚರಿಸಲಾಯಿತು. ಕ್ರೈಸ್ತ ಬಾಂಧವರು ಸೋಮವಾರ ಮಧ್ಯರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಪೂಜೆ, ಪ್ರಾರ್ಥನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸ್ವಾಗತಿಸಿದರು. ಮಂಗಳವಾರ ಮಂಗಳೂರಿನ ಮಿಲಾಗ್ರಿಸ್ ಚರ್ಚ್, ಬೆಂದೂರ್‌ವೆಲ್, ಬಿಜೈ, ಲೇಡಿಹಿಲ್, ಕೋಡಿಕಲ್, ಕೂಳೂರು, ಬೊಂದೆಲ್, ದೇರೆಬೈಲ್, ಕುಲಶೇಖರ, ಉರ್ವ, ಪಾಲ್ದನೆ, ವಾಮಂಜೂರು, ಪೆರ್ಮನ್ನೂರು, ಕುತ್ತಾರುಪದವು, ಕೋಡಿಕಲ್ ಮುಂತಾದ ಚರ್ಚ್‌ಗಳಲ್ಲಿ ಸಹಸ್ರಾರು ಕ್ರೈಸ್ತ ಬಾಂಧವರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು, ಚರ್ಚ್‌ಗಳನ್ನು ದೀಪಗಳಿಂದ ಅಲಂಕರಿಸಲಾಗಿದ್ದು, ಎಲ್ಲರೂ […]

ಕ್ರಿಸ್ಮಸ್ ಮನುಷ್ಯರನ್ನು ಪ್ರೀತಿಸುವ ಹಬ್ಬ

Monday, December 24th, 2012
Christmas Celebrations

ಮಂಗಳೂರು :ಭಾರತ ಹಬ್ಬಗಳ ನಾಡು. ನಮ್ಮ ಆಚಾರ – ವಿಚಾರಗಳು, ನಮ್ಮಲ್ಲಿ ಹೂತು ಹೋಗಿರುವ ನಂಬಿಕೆ, ಋತುಗಳ ಬದಲಾವಣೆಯಿಂದ ಬೆಳೆದು ಬಂದಿರುವ ಸಂಸ್ಕಾರ, ಸಂಭ್ರಮಗಳೆಲ್ಲ ಹಬ್ಬ ಹರಿದಿನಗಳ ಹೊನಲನ್ನೇ ಹರಿಸಿವೆ ಎಂದರೂ ತಪ್ಪಾಗಲಾರದು. ಹಬ್ಬಗಳು ಒಂದು ರೀತಿಯಲ್ಲಿ ನಮಗೆ ಜೀವಾಳವಾಗಿಬಿಟ್ಟಿವೆ. ನಾವಾಚರಿಸುವ ಪ್ರತಿಯೊಂದು ಹಬ್ಬಕ್ಕೂ ತನದೇ ಆದ ವೈಶಿಷ್ಟ್ಯವಿದೆ. ಪ್ರತಿ ಹಬ್ಬಕ್ಕೂ ಇತಿಹಾಸವಿದೆ. ಒಂದು ನಿರ್ಧಿಷ್ಟ ಹಿನ್ನೆಲೆ ಇದೆ. ನಮ್ಮ ಸಂಸ್ಕೃತಿಯ ದೇಗುಲದಲ್ಲಿ ಹಬ್ಬಗಳು ದೀಪವಾಗಿ ನಿರಂತರ ಉರಿಯುತ್ತಲೇ ಇರುತ್ತವೆ. ಸಾವಿರಾರು ವರುಷಗಳ ಚರಿತ್ರೆ ಹೊಂದಿರುವ ನಮ್ಮ […]