ರೈಲ್ವೇ ಬಜೆಟ್ ನಲ್ಲಿ ಕರಾವಳಿಗೆ ಅತ್ಯುತ್ತಮ ಕೊಡುಗೆ : ಸಂಸದ ನಳಿನ್ ಕುಮಾರ್

Tuesday, July 8th, 2014
Nalin Rail

ಮಂಗಳೂರು: ದೇಶದ ಹಾಗೂ ರಾಜ್ಯದ ಸಮಗ್ರ ರೈಲ್ವೇ ಹಿತದೃಷ್ಠಿಯನ್ನು ಕಾಪಾಡುವುದರ ಜತೆಗೆ ಕರಾವಳಿ ಜಿಲ್ಲೆಗೆ ರೈಲ್ವೇ ಬಜೆಟ್ ನಲ್ಲಿ ದೊಡ್ಡ ಕೊಡುಗೆ ನೀಡಲಾಗಿದೆ. ನಮ್ಮವರೇ ಆದ ರೈಲ್ವೆ ಸಚಿವರಾದ ಡಿ. ವಿ. ಸದಾನಂದ ಗೌಡರು ಕರಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡದಂತಹ ದೊಡ್ಡ ಪ್ರಮಾಣದ ರೈಲು ಹಾಗೂ ರೈಲು ಹಳಿಗಳ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಸಚಿವರು, ಮಂಗಳೂರು ರೈಲ್ವೇ ವಿಭಾಗದ ಘೋಷಣೆಗೆ […]

ಪೊಳಲಿಯಲ್ಲಿ ನಡೆಯಲಿರುವ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಲಾಂಛನ ಆಹ್ವಾನ

Monday, July 7th, 2014
Pradeep Kalkura

ಮಂಗಳೂರು : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ2014, ಆಗಸ್ಟ್ 2 ಮತ್ತು 3ರಂದು ನಡೆಯಲಿರುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರಿಂದ ಸೂಕ್ತ ಲಾಂಛನವನ್ನು ಆಹ್ವಾನಿಸಲಾಗಿದೆ. ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಉತ್ಸವಕ್ಕೆ ಸರಿಹೊಂದುವ ‘ಲಾಂಛನ’ವನ್ನು ರಚಿಸಿ ಸ್ವವಿಳಾಸ, ದೂರವಾಣಿ ಸಂಖ್ಯೆ ಸಹಿತ ಜುಲೈ 13ರೊಳಗಾಗಿ ಅಧ್ಯಕ್ಷರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮಾಗಾಂಧಿ ರಸ್ತೆ, ಕೊಡಿಯಾಲ್ಬೈಲ್, ಮಂಗಳೂರು ಇಲ್ಲಿಗೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಆಯ್ಕೆಗೊಂಡ ಲಾಂಛನ […]

“ಮುಲ್ತ ಸಂಸ್ಕೃತಿ ಆಚಾರ ವಿಚಾರ ಭಾರೀ ಪೊರ್ಲು ” : ಶಿವಶರಣ್

Monday, July 7th, 2014
Shivasharan

ಕಲ್ಲಡ್ಕ : ಮುಲ್ತ ಸಂಸ್ಕೃತಿ ಆಚಾರ ವಿಚಾರ ಭಾರೀ ಪೊರ್ಲು ಉಂಡು. ಎಂಕ್ ಮಸ್ತ್ ಖುಷಿ ಅಂಡ್ ಎಂದು ತುಳುವಿನಲ್ಲಿ ಮಾತು ಆರಂಭಿಸಿದ ಬಲೇ ತೆಲಿಪುಲೇ ನಾಟಕದ ರೂವಾರಿ ಹಾಗೂ ನೇತಾಜಿ ನರ್ಸಿಂಗ್ ಕಾಲೇಜಿನ ನಿದೇಶರ್ಕರಾದ ಡಾ. ಶಿವಶರಣ್ ಇವರು ಸಂವಾದ ಮತ್ತು ನಾಯಕತ್ವ ಇದೊಂದು ತೆರನಾದ ಕೌಶಲ್ಯ. ನಾಯಕತ್ವಕ್ಕೆ ಬೇಕಾದುದು ನಿರ್ಧಿಷ್ಟವಾದ ಗುರಿ. ಆ ಗುರಿ ಸಾಧಿಸಲು ನಾಯಕರಿಗೆ ಪ್ರಬಲವಾದ , ಉತ್ತಮವಾದ ಸಂಘಟನೆ ಶಕ್ತಿಯ ಅಗತ್ಯವಿದೆ. ಆಗ ತಾನೇ ನಾಯಕ ಯಶಸ್ಸಿನ ಗುರಿ ತಲುಪಲು […]

ಅಪೌಷ್ಠಿಕ ಮಕ್ಕಳು ರಾಷ್ಟ್ರಾಭಿವೃದ್ಧಿಗೆ ತೊಡಕು-ಎನ್.ಕೆ.ಪಾಟೀಲ್

Saturday, July 5th, 2014
unhealthy child seminar

ಮಂಗಳೂರು : ಬಡತನ ದೇಶದ ಒಂದು ದೊಡ್ಡ ಪಿಡುಗಾಗಿದ್ದು ,ಇದರಿಂದಾಗಿ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಅಪೌಷ್ಠಿಕತೆ ಮಕ್ಕಳು ನಾನಾ ರೋಗರುಜಿನಗಳಿಗೆ ತುತ್ತಾಗಿ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಅಧ:ಪತನಕ್ಕೆ ಕಾರಣರಾಗುತ್ತಿದ್ದಾರೆ. ಆದ್ದರಿಂದ ಇಂತಹ ಅಪೌಷ್ಠಿಕತೆಯ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಾವಲ್ಲರೂ ಮುಂದಾಗಬೇಕೆಂದು ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳ ಹಾಗೂ ಮಕ್ಕಳ ಅಪೌಷ್ಠಿಕತೆ ತಡೆಗಟ್ಟುವುದರ ಕಾರ್ಯ ಯೋಜನೆ ಸಮಿತಿಯ ಗೌರವಾನ್ವಿತ ಅಧ್ಯಕ್ಷ ಎನ್.ಕೆ. ಪಾಟೀಲ್ ತಿಳಿಸಿದರು. ಅವರು ಇಂದು ನಗರದ ರೊಜಾರಿಯೋ ಕ್ಯಾಥಡ್ರಲ್ ಚರ್ಚ್ ಸಭಾಭವನದಲ್ಲಿ […]

ಶರವು ರಾಘವೇಂದ್ರ ಶಾಸ್ತ್ರಿಯವರಿಗೆ “ಕಲ್ಕೂರ ಪ್ರಶಸ್ತಿ”

Friday, July 4th, 2014
Kalkura Prasasti

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಶ್ರೀ ಶರವು ರಾಘವೇಂದ್ರ ಶಾಸ್ತ್ರಿಯವರಿಗೆ ಕಲ್ಕೂರ ಪ್ರಶಸ್ತಿ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪಿ.ಜಯರಾಮ್ ಭಟ್, ಮುಖ್ಯ ಮಹಾಪ್ರಬಂಧಕರಾದ ಎಂ.ಎಸ್. ಮಹಾಬಲೇಶ್ವರ್, ಹಿರಿಯ ಮಹಾ ಪ್ರಬಂಧಕರಾದ ಜಯರಾಮ ಹಂದೆ, ಇಂಡಿಯನ್ ಓವರಸೀಸ್ ಬ್ಯಾಂಕಿನ ಹಿರಿಯ ಅಧಿಕಾರಿ ಕೆ. ಅನಿಲ್ ಕಾರ್ಪೋರೇಟರ್ಗಳಾದ ಅಶೋಕ್ ಡಿ.ಕೆ., ಭಾಸ್ಕರ್ ಹಾಗೂ ಪ್ರೊ| ಎಂ.ಬಿ. ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.

ಪತ್ರಿಕಾ ದಿನಾಚರಣೆ ರೋನ್ಸ್ ಬಂಟ್ವಾಳ್ ಗೆ ದಶಮಾನದ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ

Thursday, July 3rd, 2014
Press Day

ಮುಂಬಯಿ: ಪತ್ರಕರ್ತರ ವೇದಿಕೆ ಬೆಂಗಳೂರು, ಕರ್ನಾಟಕ ಮೀಡಿಯಾ ಮತ್ತು ನ್ಯೂಸ್ ಸೆಂಟರ್ ಇವರ ವತಿಯಿಂದ ಕಳೆದ ಮಂಗಳವಾರ ಸಂಜೆ ಪತ್ರಿಕಾ ದಿನಾಚರಣೆ-2014 ಸಂಭ್ರಮಿಸಲಾಗಿದ್ದು, ಇದೇ ಸಂದರ್ಭದಲ್ಲಿ ದಶಮಾನದ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿಸಲಾಯಿತು. ಕರ್ನಾಟಕ ರಾಜಧಾನಿಯಲ್ಲಿನ ಬೆಂಗಳೂರು ಕನ್ನಡ ಭವನದ ನಯನ ಸಭಾಂಗಣದಲ್ಲಿ ನೇರವೇರಿಸಲಾಗಿದ್ದು, ಹಿರಿಯ ಪತ್ರಕರ್ತ ಕೆ.ಜಿ.ನಾಗಲಕ್ಷ್ಮೀ ಭಾಯಿ ಅವರ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭದಲ್ಲಿ ಚಿತ್ರನಟಿ ಕು| ರೂಪಿಕಾ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಹಾಗೂ ಗೌರವ ಅತಿಥಿಗಳಾಗಿ […]

ಕಟೀಲು ಸೀಯಾಳಭಿಷೇಕ ವಿವಾದ ಅತ್ತೂರು, ಕೊಡೆತ್ತೂರು ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ

Wednesday, July 2nd, 2014
Kateel coconut

ಮೂಲ್ಕಿ: ಕಟೀಲು ಕಿನ್ನಿಗೋಳಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕಟೀಲು ದೇವಳದಲ್ಲಿ ನಡೆಯುತ್ತಿದ್ದ ಸೀಯಾಳಭಿಷೇಕ ಕುರಿತು ಪರಂಪರಾಗತವಾಗಿ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಅರ್ಚಕರು ಆಸ್ಪದ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಶಾಸಕರು, ಸಂಸದರಿಗೆ ಮನವಿ ಸಲ್ಲಿಸಲು ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮಸ್ಥರ ಆಶಯವನ್ನು ಪುರಸ್ಕರಿಸುವಂತೆ ಮಾಡಬೇಕು. ತಪ್ಪಿದಲ್ಲಿ ಗ್ರಾಮದ ವೈದಿಕರಿಂದ ದಿನ ನಿರ್ಣಯಿಸಿ, ಗ್ರಾಮಸ್ಥರು ಸೇರಿ ದೇವಳಕ್ಕೆ ಬಂದು ಭಜನಾ ಸಂಕೀರ್ತನೆ ನಡೆಸುವ ಮೂಲಕ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಅತ್ತೂರು ಮತ್ತು […]

ನ್ಯಾಯದ ನಿರೀಕ್ಷೆ ಮೂಡಿದೆ : ಮುನೀರ್ ಕಾಟಿಪಳ್ಳ

Wednesday, July 2nd, 2014
Muneer Katipalla

ಮಂಗಳೂರು : ಎರಡು ತಿಂಗಳ ನಿರಂತರ ಹೋರಾಟದ ನಂತರ ಸರಕಾರ ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ. ಸರಕಾರದ ಈ ನಿರ್ಧಾರದಿಂದ ಪ್ರಕರಣದಲ್ಲಿ ನ್ಯಾಯದ ನಿರೀಕ್ಷೆ ಮೂಡಿದೆ ಎಂದು ಆಙಈ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳು ಎಂದು ಮಲ್ಲೂರು ಗ್ರಾಮದ ಹುಸೈನ್, ಇಮ್ರಾನ್, ಇರ್ಷಾದ್ ಎಂಬ ಅಮಾಯಕ ಯುವಕರ ಬಂಧನವಾದಾಗಲೇ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಕಂಡು ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು. ಆನಂತರ ನಿರಂತರವಾಗಿ ಹೋರಾಟಗಳನ್ನು ನಡೆಸಿ ಮರು ತನಿಖೆಗೆ ಒತ್ತಾಯಿಸಲಾಗಿತ್ತು. […]

ಸ್ಟುಡಿಯೋ ಮಾಲಕರು ಜಾಗ್ರತೆ ವಹಿಸಬೇಕು : ನಂದ ಕುಮಾರ್

Wednesday, July 2nd, 2014
Studio owners

ಬಂಟ್ವಾಳ: ಇತ್ತೀಚಿನ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸ್ಟುಡಿಯೋಗಳಿಂದ ಬೆಲೆ ಬಾಳುವ ವಸ್ತುಗಳು ಕಳವು ನಡೆಯುತ್ತಿರುವ ಬಗ್ಗೆ ಸ್ಟುಡಿಯೋ ಮಾಲಕರು ಜಾಗ್ರತೆ ವಹಿಸಬೇಕು ಎಂದು ನಗರ ಠಾಣಾ ಉಪನಿರೀಕ್ಷಕ ನಂದ ಕುಮಾರ್ ಹೇಳಿದರು. ಅವರು ನಗರ ಠಾಣೆಯಲ್ಲಿ ಸ್ಟುಡಿಯೋ ಮಾಲಕರ ಜೋತೆ ಸಮಾಲೋಚನೆ ಸಭೆ ನಡೆಸಿ ಮುಂಜಾಗ್ರತೆಯ ಬಗ್ಗೆ ತಿಳಿಸಿದರು. ಸ್ಟುಡಿಯೋಗಳಿಗೆ ಕಾವಲುಗಾರರನ್ನು ನೇಮಿಸಬೇಕು, ಬಾಗಿಲು ಕಿಟಕಿ ಮತ್ತು ಛಾವಣಿಗಳನ್ನು ಭದ್ರಗೋಳಿಸಿ, ಅಂಗಡಿಗಳ ಒಳಗೆ ಮುನ್ಸೂಚನೆ ನೀಡುವ ಎಚ್ಚರಿಕೆ ಗಂಟೆಯನ್ನು ಅಳವಡಿಸಿ ಮತ್ತು ಸಿ,ಸಿ ಕ್ಯಾಮಾರಗಳನ್ನು ಅಳವಡಿಸಿ ಎಂದು […]

ದ.ಕ. ಜಿಲ್ಲಾ ‘ಡಿ’ ವರ್ಗ ಸರಕಾರಿ ನೌಕರರ ಸಂಘದ ವತಿಯಿಂದ ಬಿಳ್ಕೋಡುಗೆ

Friday, June 27th, 2014
D group employs

ಮಂಗಳೂರು : ದ.ಕ. ಜಿಲ್ಲಾ ‘ಡಿ’ ವರ್ಗ ಸರಕಾರಿ ನೌಕರರ ಸಂಘ (ರಿ). ದ.ಕ. ಮಂಗಳೂರು ಸಂಘದ ಕಛೇರಿಯಲ್ಲಿ ದಿನಾಂಕ: 26.06.2014ರಂದು ಜರುಗಿದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಅಧ್ಯಕ್ಷ ಶ್ರೀ. ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಇವರ ಅಧ್ಯಕ್ಷತೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ. ಯು.ಆರ್. ಶೆಟ್ಟಿ (ಶಿಕ್ಷಣ ಇಲಾಖೆ) ಇವರು ದ್ವಿ.ದ. ಸಹಾಯಕರಾಗಿ ಪದೊನ್ನತಿ ಹೊಂದಿರುವ ಇವರನ್ನು ಹಾಗೂ ಶ್ರೀ. ಆರ್. ಎ. ಜೊಸೆಫ್ (ಕ್ಷಯ ರೋಗ ಆಸ್ಪತ್ರೆ) ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ […]