ಕಾಲೇಜಿಗೆ ಹೋದ ಯುವತಿ ಮನೆಗೆ ಮರಳಿ ಬಾರದೆ ನಾಪತ್ತೆ

Wednesday, December 22nd, 2021
Supriya

ಉಡುಪಿ : ಮನೆಯಿಂದ ಕಾಲೇಜಿಗೆ ಹೋದ ಯುವತಿಯೊಬ್ಬಳು  ಡಿ.15ರಂದು ವರು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಕಳ ತಾಲೂಕು ಮಾಳ ಗ್ರಾಮದ ಹುಕ್ರಟ್ಟೆ ಬೆಟ್ಟು ನಿವಾಸಿ ಸುಪ್ರಿಯಾ (18) ಕಾಣೆಯಾದ ಯುವತಿ. ಈಕೆ 5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂರವಾಣಿ ಸಂಖ್ಯೆ: 08258-231083, 9480805435, ಕಾರ್ಕಳ ಗ್ರಾಮಾಂತರ ಠಾಣೆ […]

ಖಾಸಗಿ ಶಾಲೆ ಪರ ಲಾಬಿಗಳಿಂದ ಪಂಜಿಮೊಗರು ಶಾಲೆ ಮುಚ್ಚಿಸುವ ಪ್ರಯತ್ನ : ಪೋಷಕರ ಪ್ರತಿಭಟನೆ

Tuesday, December 21st, 2021
panjimogaru

ಮಂಗಳೂರು  : ಪಂಜಿಮೊಗರು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪೂರಕ ವಾತಾವರಣ ಇಲ್ಲವಾಗಿದ್ದು, ಇಲ್ಲಿನ ಮುಖ್ಯೋಪಾದ್ಯಾಯಿನಿ ಹಾಗೂ ಶಿಕ್ಷಕರ ಗುಂಪೊಂದು ಪೋಷಕರ, ಎಸ್.ಡಿ.ಎಂ.ಸಿ ಸದಸ್ಯರ ಯಾವುದೇ ಮಾತಿಗೆ ಬೆಲೆ ಕೊಡದೆ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ, ಮಕ್ಕಳಿಗೆ ತಾರತಮ್ಯ, ದೈಹಿಕ ಹಲ್ಲೆ, ದೂರು ನೀಡಿದ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ, ಗುಣಮಟ್ಟದ ಶಿಕ್ಷಣದ ಕೊರತೆ ಹಲವಾರು ದೋಷಗಳಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಗೆ ಹಲವಾರು ಮನವಿ ನೀಡಿದರೂ ಯಾವೂದೇ ಕ್ರಮ ಕೈಗೊಳ್ಳದ ಕಾರಣ ಇಂದು ಕೊಟ್ಟಾರ ಡಿಡಿಪಿಐ ಕಛೇರಿ ಮುಂಭಾಗ ಮಕ್ಕಳೊಂದಿಗೆ […]

ಡಿ.28 ರಂದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಾವೇಶ ; ಲಾಂಛನ ಬಿಡುಗಡೆ

Tuesday, December 21st, 2021
Lanchana

ಧರ್ಮ ಸ್ಥಳ : ದಕ್ಷಿಣ ಕನ್ನಡ ಪತ್ರಕರ್ತರ ಸಮ್ಮೇಳನ ಮಾದರಿ ಯಶಸ್ವಿ ಸಮ್ಮೇಳನ ವಾಗಿ ಮೂಡಿ ಬರಲಿ ಎಂದು ಶ್ರೀ ಧರ್ಮ‌ಸ್ಥಳ ಕ್ಷೇತ್ರದ  ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ‌ಹೆಗ್ಗಡೆ ತಿಳಿಸಿದ್ದಾರೆ. ಮಂಗಳೂರಿನ ಕುದ್ಮುಲ್  ರಂಗ ರಾವ್ ಸಭಾಂಗಣದಲ್ಲಿ ಡಿ.28 ರಂದು ನಡೆಯಲಿರು ವ ದಕ್ಷಿಣ ಕನ್ನಡ ಕಾರ್ಯ ನಿರತ ಸಂಘದ ಜಿಲ್ಲಾ ಸಮಾವೇಶ ದ ಲಾಂಛನ ವನ್ನು ‌ಸೋಮವಾರ ಶ್ರೀ ಧರ್ಮ‌ಸ್ಥಳ ಕ್ಷೇತ್ರದ  ಶ್ರೀ ಕ್ಷೇತ್ರದಲ್ಲಿಂದು ಬಿಡುಗಡೆಗೊಳಿ‌ಸಿ ಮಾತನಾಡಿದರು. ದ.ಕ ಜಿಲ್ಲಾ ಕಾರ್ಯ ನಿರತ ಷತ್ರಕರ್ತರ ಸಂಘ ಕ್ರೀಯಾಶೀಲ […]

ಬಂಟವಾಳ ಕಾಶೀ ಮಠದ ವೃಂದಾವನ ಕ್ಕೆ ನವೀಕೃತ ಗೋಪುರ ಹಾಗೂ ಶಿಖರ ಕಲಶ ಪ್ರತಿಷ್ಠಾಪನೆ

Tuesday, December 21st, 2021
Kashi matta

ಮಂಗಳೂರು : ಬಂಟ್ವಾಳ ಶ್ರೀ ಕಾಶೀಮಠದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ 6 ನೇ ಯತಿವರ್ಯರಾದ ಮಹಾ ತಪಸ್ವಿ ಶ್ರೀಮದ್ ದೇವೇಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನ ದ ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಯು ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಆದಿತ್ಯವಾರ ನೆರವೇರಿತು . ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಪ್ರಯುಕ್ತ ಶಾಖಾ ಮಠದಲ್ಲಿ 10 ದಿನಗಳ ಪರ್ಯಂತ 108 […]

ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳ ಮೇಲೆ ಹೆಜ್ಜೇನು ದಾಳಿ, 8 ಮಂದಿ ಆಸ್ಪತ್ರೆಗೆ

Tuesday, December 21st, 2021
Bee Attack

ಕಿನ್ನಿಗೋಳಿ: ವಸತಿ ಸಮುಚ್ಚಯದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿಯಿಂದ  8 ಮಂದಿ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಗಾಯಗೊಂಡು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಾದ ಘಟನೆ  ಕಿನ್ನಿಗೋಳಿಯ  ಮೂರುಕಾವೇರಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ  ಕೆನರಾ ಲೈಟಿಂಗ್ ಸಿಬ್ಬಂದಿ ಬೈಕ್‌ನಲ್ಲಿ ತೆರಳುತ್ತಿರುವಾಗ ನೊಣಗಳ ಹಿಂಡು ದಾಳಿ ಮಾಡಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೋಳಿಜೋರ ನೀರಳಿಕೆ ನಿವಾಸಿ ರವಿ, ಮೂರುಕಾವೇರಿ ರೋಟರಿ ಶಾಲೆ ಶಿಕ್ಷಕ ಸೂರ್ಯಕಾಂತ್ ತೀವ್ರ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಉಳಿದಂತೆ ರಿಚರ್ಡ್ ನಝರತ್ ಮೂರುಕಾವೇರಿ, […]

ನಂದಿನಿ ಗ್ರಾಹಕರಿಗೆ ಸಿಹಿ ಸುದ್ಧಿ : ನಂದಿನಿ ಗೋಧಿ ಲಾಡು ಮಾರುಕಟ್ಟೆಗೆ

Tuesday, December 21st, 2021
Nandini-Godi-Ladu

ಮಂಗಳೂರು  : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲು ಸಂಗ್ರಹಣೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದು, ಮೌಲ್ಯವರ್ಧಿತ ಉತ್ಪನ್ನಗಳನ್ನು ಗ್ರಾಹಕರ ಬೇಡಿಕೆಗನುಗುಣವಾಗಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹಾಲು ಉತ್ಪಾದಕರ ಹಾಲಿಗೆ ಹೆಚ್ಚಿನ ಮೌಲ್ಯ ನೀಡಲು ಶ್ರಮಿಸುತ್ತಿದೆ. ಒಕ್ಕೂಟವು ಗ್ರಾಹಕರಿಗೆ ಈಗಾಗಲೇ ನಂದಿನಿ ಸಿಹಿ ಉತ್ಪನ್ನಗಳಾದ ಪೇಡಾ, ಮೈಸೂರು ಪಾಕ್, ಬೈಟ್, ಕ್ಯಾಶು ಬರ್ಫಿ ಸ್ಥಳೀಯವಾಗಿ ಉತ್ಪಾದಿಸಿ ಮಾರಾಟ ಮಾಡುತ್ತಿದ್ದು, ಸದರಿ ಸಿಹಿ ಉತ್ಪನ್ನಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಇದರೊಂದಿಗೆ ನೂತನ ಗೋಧಿ ಲಾಡು ತಯಾರಿಸಿ […]

ಪೊಲೀಸ್ ಠಾಣೆಯ ಮೇಲೆ PFI ಕಾರ್ಯಕರ್ತರ ದಾಳಿ : ಆರೋಪಿಗಳ ಮೇಲೆ ದೇಶದ್ರೋಹದ ಕೇಸು ದಾಖಲಿಸಲು ಆಗ್ರಹ – ವಿಶ್ವ ಹಿಂದೂ ಪರಿಷದ್

Monday, December 20th, 2021
VHP puttur

ಪುತ್ತೂರು  : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಡಿಸೆಂಬರ್ 14ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ PFI – SDPI ನ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನುಗ್ಗಿ, ಪೋಲೀಸರ ಮೇಲೆ ದಾಳಿ ನಡೆಸಿದ್ದು ಬಹಳ ಆತಂಕಕಾರಿ ಘಟನೆಯಾಗಿದ್ದು, ಜನರ ರಕ್ಷಣೆ ಮಾಡುವಂತಹ ಪೊಲೀಸರನ್ನೇ ಕೊಲೆ ಮಾಡಲು ಪ್ರಯತ್ನಿಸಿದ್ದು ಜಿಲ್ಲೆಯ ಸಮಸ್ತ ನಾಗರಿಕ ಸಮಾಜ ಈ ಕೃತ್ಯದಿಂದ ಭಯಭೀತರಾಗಿದ್ದಾರೆ. PFI ಕಾರ್ಯಕರ್ತರು ಅವರದ್ದೇ ಅಂಬುಲೆನ್ಸ್ ನಲ್ಲಿ ತಲುವಾರು, ಸೋಡಾ ಬಾಟಲಿಗಳು, ಕಲ್ಲುಗಳು, ಇನ್ನಿತರ ಮಾರಕ ಆಯುಧಗಳ ಸಹಿತ ಪೋಲೀಸರ ಮೇಲೆ […]

ಯುವವಾಹಿನಿ (ರಿ )ಶಕ್ತಿನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ

Monday, December 20th, 2021
Yuvavahini Shakthinagara

ಮಂಗಳೂರು : ಯುವವಾಹಿನಿ (ರಿ )ಶಕ್ತಿನಗರ ಘಟಕದ 2021/22 ನೇ ಸಾಲಿನ ಪದಗ್ರಹಣ , ಪ್ರಶಸ್ತಿ , ಸನ್ಮಾನ , ಕಾರ್ಯಕ್ರಮವು ದಿನಾಂಕ 19.12.2021ನೇ ಆದಿತ್ಯವಾರ ನಾಲ್ಯಪದವು ಕುವೆಂಪು ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಜರಗಿತು. ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಹಾಗೂ ಕೇಂದ್ರ ಸಮಿತಿಯ ಸಲಹೆಗಾರರು ಪದ್ಮರಾಜ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅಹಂಕಾರ ಅಹಂ ನಮ್ಮಲ್ಲಿ ಹೋದರೆ ನಾವು ಸಮಾಜಮುಖಿ ಕೆಲಸ ಮಾಡಲು ಅನುಕೂಲ ಸಾಧ್ಯವೆಂದು ತಿಳಿಸಿ ನೂತನ ಪದಾಧಿಕಾರಿಗಳಿಗೆ ಶುಭ […]

ಯುವತಿಯರನ್ನು ಬಳಸಿ ಹನಿಟ್ರ್ಯಾಪ್, ಓರ್ವನ ಬಂಧನ

Monday, December 20th, 2021
Ranjith S

ಉಡುಪಿ : ಹಣಕ್ಕಾಗಿ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ನಡೆಸಿ ಬೆದರಿಕೆ ಹಾಕುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಶಂಕರ ನಾರಾಯಣ ಪೊಲೀಸರು ಬಂಧಿಸಿದ್ದಾರೆ. ರಂಜಿತ್ ಎಸ್. ಹೆಂಗವಳ್ಳಿ (26) ಬಂಧಿತ ಆರೋಪಿ. ರಂಜಿತ್ ಹಣಕ್ಕಾಗಿ ಹನಿಟ್ರ್ಯಾಪ್ ನಡೆಸಿ ಬೆದರಿಕೆ ಹಾಕುತ್ತಿದ್ದನು ಎಂದು ವ್ಯಕ್ತಿಯೊಬ್ಬರು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಡಿ.17ರಂದು ಸಂಜೆ ವೇಳೆ ಬಂಧಿಸಿದ್ದಾರೆ. ಆರೋಪಿಯನ್ನು ಡಿ.18ರಂದು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಆರು ದಿನಗಳ ಕಾಲ […]

ಪ್ರೇಮ ವೈಫಲ್ಯ – ಮೆಡಿಕಲ್ ಕಾಲೇಜ್‌ ವಿದ್ಯಾರ್ಥಿನಿ ಆತ್ಮಹತ್ಯೆ

Monday, December 20th, 2021
Vaishali

ಮಂಗಳೂರು : ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜ್‌ವೊಂದರಲ್ಲಿ ಎಂಬಿಬಿಎಸ್ ಇಂಟರ್ನ್ ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ  ಕುತ್ತಾರು ಪದವಿನಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಆನಂದ ನಗರ ನಿವಾಸಿ ವಿಜಯಕುಮಾರ್ ಗಾಯಕ್‌ ವಾಡ್ ಎಂಬವರ ಪುತ್ರಿ ವೈಶಾಲಿ ಗಾಯಕ್‌ ವಾಡ್ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ ಈಕೆ ತನ್ನ ಸಹಪಾಠಿ ಜತೆ ಮಾತನಾಡಿದ್ದನ್ನು ಮತ್ತು ಇಬ್ಬರೂ ಪ್ರತ್ಯೇಕ ರೂಮ್‌ನಲ್ಲಿ ಮಲಗಿದ್ದನ್ನು ಅಪಾರ್ಟ್‌ಮೆಂಟ್‌ನ ಇತರರು ಕಂಡಿದ್ದಾರೆ. ಆದರೆ ರವಿವಾರ ಬೆಳಗ್ಗೆ 10 […]