ಮಂಗಳೂರಿ ನಲ್ಲಿ ಪ್ರಪ್ರಥಮ ಸುಸಜ್ಜಿತ ಪಂಚತಾರ ಹೋಟೆಲ್ ದೀಪ ಗ್ರಾಂಡ್ಯೂರ್ ಗೆ ಶಿಲಾನ್ಯಾಸ

Tuesday, November 27th, 2012
Deepa Grandeur

ಮಂಗಳೂರು :ಮಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ ದೀಪ ಡೆವಲಪರ್ಸ್ ಸಂಸ್ಥೆಯಿಂದ ನಗರದ ಎಂ.ಜಿ.ರಸ್ತೆಯಲ್ಲಿ ದೀಪ ಗ್ರಾಂಡ್ಯೂರ್ ಎಂಬ ಸುಸಜ್ಜಿತವಾದ ಪಂಚತಾರ ಹೊಟೇಲನ್ನು ಸ್ಥಾಪಿಸಲಾಗುವುದಾಗಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಜನತಾ ಕನ್ಟ್ರಕ್ಷನ್ ಸಂಸ್ಥೆಯ ಆಡಳಿತ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು. ಮಂಗಳೂರಿನಲ್ಲಿ ಈ ವರೆಗೆ ಪಂಚತಾರಾ ಹೋಟೆಲ್ ಇಲ್ಲದೇ ಇದ್ದು ಇದು ಮೊದಲ ಹೊಟೇಲಾಗಿದೆ. ಮತ್ತು ಇದರ ಜೊತೆಗೆ ಪಕ್ಕದಲ್ಲಿ ಸುಸಜ್ಜಿತ ಸೌಕರ್ಯವುಳ್ಳ ವಸತಿ ಹಾಗೂ ವಾಣಿಜ್ಯ ಸಂಕೀರ್ಣವನ್ನು ಕೂಡ ಸ್ಥಾಪಿಸಲಾಗುವುದು. ಈ ಎರಡು ಕಟ್ಟಡಗಳಿಗೂ ನವೆಂಬರ್ […]

ಮಂಗಳೂರಿಗೆ ಬಂದ ಎರಡು ವಿದೇಶಿ ಐಶರಾಮಿ ಪ್ರವಾಸಿ ಹಡಗು

Tuesday, November 27th, 2012
New Mangalore Port

ಮಂಗಳೂರು :ಸುಮಾರು 1,810 ಪ್ರಯಾಣಿಕರು ಮತ್ತು 617 ಸಿಬ್ಬಂದಿಯನ್ನು ಹೊತ್ತ ಎಂ. ವಿ. ಐಡಾ ದಿವಾ ಮತ್ತು 60 ಪ್ರಯಾಣಿಕರು ಮತ್ತು 70 ಸಿಬ್ಬಂದಿಯನ್ನು ಹೊತ್ತ ಎಂ. ವಿ. ಕ್ಲಿಪ್ಪರ್ ಒಡಿಸ್ಸಿ ಎಂಬ ಐಶಾರಾಮಿ ಹಡಗುಗಳು ನವಮಂಗಳೂರು ಬಂದರಿಗೆ ನವೆಂಬೆರ್ 24ರಂದು ಆಗಮಿಸಿದವು. ಐಡಾ ದಿವಾ ಅತೀ ದೊಡ್ಡ ಐಶಾರಾಮಿ ಹಡಗುಗಳ ಪೈಕಿ ಒಂದಾಗಿದ್ದು ಮೂರನೇ ಬಾರಿಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ. ಈ ಮೂಲಕ ಕರಾವಳಿಗೆ ಮತ್ತೆ ವಿದೇಶಿ ಪ್ರವಾಸಿಗರ ದಂಡು ಹರಿದು ಬರತೊಡಗಿದೆ. ಐಡಾ […]

ಬಾಲಕಲಾವಿದೆ ಜ್ಞಾನಾ ಐತಾಳ್‌ ರವರಿಂದ ಮಕ್ಕಳ ಚಲನಚಿತ್ರೋತ್ಸವ ಸಮಾರಂಭಕ್ಕೆ ಚಾಲನೆ

Tuesday, November 27th, 2012
Children s Film Festival

ಮಂಗಳೂರು :ಚಿಲ್ಡ್ರನ್ಸ್‌ ಫಿಲ್ಮ್ ಸೊಸೈಟಿ ಚೆನೈ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಸೋಮವಾರ ಮಕ್ಕಳ ಚಲನಚಿತ್ರೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಪ್ರತಿಭಾವಂತ ಬಾಲಕಲಾವಿದೆ ಜ್ಞಾನಾ ಐತಾಳ್‌ ಸಮಾರಂಭಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ಎನ್. ವಿಜಯಪ್ರಕಾಶ್ ಅಧ್ಯಕ್ಷತೆ ವಹಿಸಿ ಅಸಾಧಾರಣ ಪ್ರತಿಭೆ ಮೂಲಕ ಅರ್ಥಪೂರ್ಣ ಉದ್ಘಾಟನೆ ನಡೆದಿದೆ. ಚಲನಚಿತ್ರದ ಸಂದೇಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸುವುದು ಪ್ರದರ್ಶನದ ಉದ್ದೇಶ. ವಿದ್ಯಾರ್ಥಿಗಳು ರಾಷ್ಟ್ರಪ್ರೇಮ, ಸತ್ಯ, ನಿಷ್ಠೆ […]

ಕಾಸರಗೋಡು :ತುಳು ಶಾಸನ ಪತ್ತೆ

Tuesday, November 27th, 2012
Ancient Tulu inscription

ಉಡುಪಿ :ಕಾಸರಗೋಡಿನ ಪರಕ್ಕಿಲ ಎಂಬಲ್ಲಿ ತುಳು ಶಾಸನವೊಂದು ಪತ್ತೆಯಾಗಿದ್ದು, ಕಾಸರಗೋಡಿನಿಂದ ಮಧೂರು ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮಧೂರು ದೇವಸ್ಥಾನಕ್ಕಿಂತ ಸುಮಾರು ಒಂದು ಕಿ.ಮೀ. ಮೊದಲು ಉಳಿಯತ್ತಡ್ಕದಿಂದ ಕವಲೊಡೆಯುವ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಪರಕ್ಕಿಲ ಮಹಾಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ಪಡುಗೋಪುರದಲ್ಲಿ ಶಾಸನವು ದೊರೆತ್ತಿದ್ದು ಶಾಸನದ ಎಡದಲ್ಲಿ ಅಂಕುಶದ ಚಿಹ್ನೆ ಇದೆ, ಮಧೂರು ಸಿದ್ಧಿವಿನಾಯಕನ ಹಸ್ತಶೋಭಿ ಒಂದು ಅಂಕುಶವೂ ಇದೆ. ಈ ಹಿನ್ನೆಲೆಯಲ್ಲಿ ಇದು ಎರಡು ದೇವಾಲಯಗಳಿಗೆ ಸಂಬಧಿಸಿರಬಹುದಾದ ಶಾಸನವಾಗಿರಬಹುದು. ಶಾಸನವು ಬಹಳಷ್ಟು ಸವೆದಿರುವುದರಿಂದ ಓದಲಾಗದ ಸ್ಥಿತಿಯಲ್ಲಿದೆ. […]

ಮಂಗಳೂರು :ನೂತನ ಪ್ರವಾಸಿ ತಾಣ “ಕುಡ್ಲ ಕುದ್ರು” ಉದ್ಘಾಟನೆ

Monday, November 26th, 2012
Kudla Kudru island

ಮಂಗಳೂರು :ಶಾಸಕ ಕೃಷ್ಣ ಜೆ ಪಾಲೆಮಾರ್ ರವರು ನಗರದ ಬೊಕ್ಕಪಟ್ಟಣದ ನಡುಕುದ್ರುವಿನಲ್ಲಿ ನೂತನ ಪ್ರವಾಸಿ ತಾಣ ‘ಕುಡ್ಲ ಕುದ್ರುವನ್ನು’ ವನ್ನು ರವಿವಾರ ಸಂಜೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕರಾವಳಿ ಜನತೆಯ ಆಧ್ಯತೆಯ ಮೇರೆಗೆ ಇಲ್ಲಿ ಪ್ರವಾಸಿ ತಾಣಗಳು ರೂಪುಗೊಳ್ಳುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದ್ದು ಈ ಪ್ರವಾಸಿ ತಾಣವು ಕರಾವಳಿ ಪ್ರವಾಸೋಧ್ಯಮಕ್ಕೆ ಹೊಸ ಮುನ್ನುಡಿ ಎಂದವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದಾನಸಭಾ ಉಪಸಭಾಪತಿ ಎನ್ ಯೋಗೀಶ್ ಭಟ್ ವಹಿಸಿದ್ದರು. ಮಂಗಳೂರು ಮೇಯರ್ ಗುಲ್ಜಾರ್ ಬಾನು, ಉಪ ಮೇಯರ್ […]

ಜನಸಾಗರದಿಂದ ಕೂಡಿದ ಉಲ್ಲಾಳ ಬೀಚ್ ಉತ್ಸವ

Monday, November 26th, 2012
Ullal Beach Festival

ಮಂಗಳೂರು :ಮಾರುತಿ ಯುವಕ ಮಂಡಲದ ರಜತ ಮಹೋತ್ಸವದ ಅಂಗವಾಗಿ ಉಳ್ಳಾಲ ಮೊಗವೀರ ಪಟ್ಣದಲ್ಲಿ ಎರಡು ದಿನಗಳ ಕಾಲ ನಡೆದ ಬೀಚ್‌ ಉತ್ಸವದಲ್ಲಿ ಸಮುದ್ರಕ್ಕೆ ಸವಾಲೆಸೆಯುವಂತೆ ಜನ ಸಾಗರ ಸೇರಿತ್ತು. ಮೊದಲ ದಿನವಾದ ಶನಿವಾರವೇ ಜನರಿಂದ ತುಂಬಿದ್ದ ಉಳ್ಳಾಲ ಬೀಚ್ ಗೆ ರವಿವಾರ ನಾನಾ ಕಡೆಗಳಿಂದ ಜನಸಾಗರವೇ ಹರಿದು ಬಂದಿತ್ತು. ರವಿವಾರ ಬೆಳಗ್ಗೆ ಬಲೆ ಬೀಸುವ ಸ್ಪರ್ದೆ ಹಾಗೂ ನಾಡಾದೋಣಿ ಸ್ಪರ್ಧೆಗೆ ಶಾಸಕ ಯು. ಟಿ ಖಾದರ್ ಚಾಲನೆ ನೀಡಿದರು. ಕಾರ್ಯಕ್ರಮವು ಬಲೆ ಬೀಸುವ ಸ್ಪರ್ಧೆಯೊಂದಿಗೆ ಆರಂಭವಾಯಿತು. ಬಲೆ […]

ಕರಾವಳಿಯಲ್ಲಿ ಗರಿಕೆದರಿದ ಯಡ್ಡಿ ಪಕ್ಷ ಕುಂದಾಪುರದಲ್ಲಿ ಹಾಲಾಡಿ ಶೆಟ್ಟರಿಗೆ ಮಣೆ

Saturday, November 24th, 2012
Yadyurappa & Halaadi

ಮಂಗಳೂರು :ರಾಜ್ಯದ ಬಿಜೆಪಿ ಪಕ್ಷದ ಭವಿಷ್ಯ ಸಧ್ಯಕ್ಕಂತೂ ನೆಟ್ಟಗೆ ಇಲ್ಲ ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಿಸಿಕೊಳ್ಳಲು ಆರಂಭವಾಗಿದೆ. ಕಾರಣ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ಬಿಟ್ಟು ತನ್ನದೇ ಹೊಸ ಪಕ್ಷ ಕೆಜೆಪಿಯನ್ನು ಕಟ್ಟಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಹೊಸ ಪಕ್ಷ ಘೋಷಣೆ ಮಾಡಿರುವ ಯಡಿಯೂರಪ್ಪರ ನೂತನ ಪಕ್ಷದ ರಾಜಾಧ್ಯಕ್ಷರಾಗಿ ಬಿಜೆಪಿಯಿಂದ ಹೊರಹಾಕಲ್ಪಟ್ಟ ಧನಂಜಯ ಕುಮಾರ್ ನೇಮಕವಾದ ಬೆನ್ನಲ್ಲೇ ರಾಜ್ಯದ ನಾನಾ ಕಡೆ ಕೆಜೆಪಿ ಪಕ್ಷಕ್ಕೆ ನಾಯಕರ ಹುಡುಕಾಟ ಶುರುವಾಗಿದೆ. ಅದರಲ್ಲೂ ಮುಖ್ಯವಾಗಿ ಡಿಸೆಂಬರ್ ತಿಂಗಳ 9ರಂದು […]

ತುಳಸಿ ಪೂಜೆಯ ಸನಾತನ ಮಹತ್ವ

Saturday, November 24th, 2012
Tulasi Pooja

ಮಂಗಳೂರು :ದೀಪಾವಳಿ ಹಬ್ಬದ ಬಲಿ ಪಾಡ್ಯಮಿಯ ನಂತರ ಬರುವ ಇನ್ನೊಂದು ಹಬ್ಬ ಎಂದರೆ ಉತ್ಥಾನ ದ್ವಾದಶೀ. ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿ ತಿಥಿಯಂದು ಈ ಪವಿತ್ರ ದಿನವನ್ನು ಹಬ್ಬವನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ. ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿವ್ರತವೆಂದೂ […]

ನವೆಂಬರ್ 24, 25 ರಂದು ಉಳ್ಳಾಲ ಕಡಲ ತೀರದಲ್ಲಿ ಬೀಚ್ ಉತ್ಸವ

Saturday, November 24th, 2012
Ullal Beach Utsava

ಮಂಗಳೂರು : ಸುಕುಮಾರ್ ತೊಕ್ಕೋಟ್ಟು ;  ಉಳ್ಳಾಲ ಈ ದೇಶದ ಮೊಟ್ಟಮೊದಲ ಸ್ವಾತಂತ್ಯ್ರ ಸಮರಕ್ಕೆ ಕಹಳೆ ಊದಿದ ತಾಣ. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ದ ಹೋರಾಟ ಮಾಡಿದ್ದು ಇಲ್ಲೇ ಎನ್ನುವುದು ಬಹು ಮುಖ್ಯ ಸಂಗತಿ. ಅಬ್ಬಕ್ಕಳ ಆರಾಧ್ಯದೇವರು ಸೋಮನಾಥ. ಪ್ರತೀ ದಿನವೂ ಈ ದೇವಾಲಯಕ್ಕೆ ಅಬ್ಬಕ್ಕ ಬಂದು ಸೋಮನಾಥ ದೇವರಿಗೆ ಪೂಜೆ ಸಲ್ಲಿಸುವ ಪರಿಪಾಠವಿತ್ತು. ಆಕೆ ಬದುಕಿರುವಷ್ಟು ಕಾಲವೂ ಈ ದೇವಾಲಯಕ್ಕೆ ಬಂದು ದೇವರಿಗೆ ಕೈಮುಗಿದ ಮೇಲೆಯೇ ಯಾವುದೇ ಕೆಲಸ ಮಾಡುತ್ತಿದ್ದಳು. ಆಕೆ ಕೊನೆಯುಸಿರೆಳೆದಾಗಲೂ ಜೈ […]

ಕಕ್ಕೂರು ಮರ್ಡರ್ ಪ್ರಕರಣ: ಅಷ್ಟಕ್ಕೂ ಕೊಲೆಗಾರ ಯಾರು ?

Saturday, November 24th, 2012
Kakur Murder case

ಮಂಗಳೂರು :ಇದು ತೀರಾ ಸಾಮಾನ್ಯವಾದ ಪ್ರಕರಣವಲ್ಲ. ಒಂದೇ ಮನೆಯಲ್ಲಿ ನಾಲ್ಕು ಮೃತದೇಹಗಳು ಬಿದ್ದುಕೊಂಡಿರುವುದು ಜತೆಗೆ ಮನೆ ಮಾಲೀಕ ತಲೆ ತಪ್ಪಿಸಿಕೊಂಡಿರುವುದು ಎಲ್ಲವೂ ಇಡೀ ಜಿಲ್ಲೆಯ ಜನರಲ್ಲಿ ಸಾವಿರಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಇದರ ಜತೆಗೆ ಪೊಲೀಸ್ ಇಲಾಖೆನೂ ಕೂಡ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿತ್ತು. ಈಗ ಮನೆ ಮಾಲೀಕರ ತಲೆ ಬರುಡೆ ಸೇರಿದಂತೆ ಅವರ ಆತ್ಮಹತ್ಯೆಗಳ ಕುರುಹುಗಳು ಪತ್ತೆಯಾಗುವ ಮೂಲಕ ಎದ್ದು ನಿಂತು ಕೊಂಡು ಪ್ರತಿಯೊಬ್ಬರು ಕೇಳುವ ಪ್ರಶ್ನೆ ಒಂದೇ ಅಷ್ಟಕ್ಕೂ ಕೊಲೆಗಾರ ಯಾರು ಸ್ವಾಮಿ..? ಆದರೆ […]