ನೂತನ ಶಾಲಾ ಕಟ್ಟಡದ ಉದ್ಘಾಟನೆ

Monday, July 25th, 2016
School-Building

ಕುಂಬಳೆ: ಕಾಸರಗೋಡು ಜಿಲ್ಲಾ ಅಭಿವೃದ್ದಿ ಪ್ಯಾಕೇಜಿನಲ್ಲಿ ಒಳಪಟ್ಟ ಅಂಗಡಿಮೊಗರು ಹಯರ್ ಸೆಕಂಡರಿಶಾಲೆಯ ಹೊಸಕಟ್ಟಡವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಸಕಲ ಸೌಲಭ್ಯಗಳಿರುವ ಶಾಲೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಲಿದೆ. ಜಿಲ್ಲೆಯ ಅಭಿವೃದ್ದಿ ಯೋಜನೆಯಡಿ ಸುಮಾರು 54 ಲಕ್ಷರೂ.ವಿನಿಯೋಗಿಸಿ ಸ್ಥಾಪಿಸಲಾದ ಹೊಸಕಟ್ಟಡವು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲಿ ಎಂದು ಹಾರೈಸಿದರು. ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ, ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಜೆ.ಅರುಣಾ, ಗ್ರಾ.ಪಂ ಸದಸ್ಯ […]

ಕುಖ್ಯಾತ ಕಳವು ಆರೋಪಿಗಳ ಕಾರು ಮಗುಚಿಬಿದ್ದು ಗಾಯಾಳುಗಳು ಆಸ್ಪತ್ರೆಯಿಂದ ಪರಾರಿ

Friday, July 22nd, 2016
Kumbale

ಕುಂಬಳೆ: ಕುಖ್ಯಾತ ಕಳವು ಆರೋಪಿ ಹಾಗೂ ತಂಡ ಸಂಚರಿಸಿದ ಕಾರು ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿಬಿದ್ದ ಘಟನೆ ಬುಧವಾರ ಮಧ್ಯರಾತ್ರಿ ಕುಂಬಳೆ ಸಮೀಪದ ಶಾಂತಿಪಳ್ಳದಲ್ಲಿ ನಡೆದಿದೆ. ಈವೇಳೆ ನಾಗರಿಕರು ಆಸ್ಪತ್ರೆಗೆ ತಲುಪಿಸಿದ ಗಾಯಾಳುಗಳ ಪೈಕಿ ಇಬ್ಬರು ಆಸ್ಪತ್ರೆಯಿಂದ ಪರಾರಿಯಾ ಗಿದ್ದಾರೆ. ಮೂವರು ಅಪಘಾತ ತಕ್ಷಣವೇ ಪರಾರಿಯಾಗಿದ್ದಾರೆ. ಇನ್ನೋರ್ವ ಗಾಯಗೊಂಡ ಸ್ಥಿತಿಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬುಧವಾರ ಮಧ್ಯಾತ್ರಿ ೧.೪೫ರ ವೇಳೆ ಕುಂಬಳೆ-ಬದಿಯಡ್ಕ ರಸ್ತೆಯ ಶಾಂತಿಪಳ್ಳ ತಿರುವಿನಲ್ಲಿ ಅಬಕಾರಿ ಕಚೇರಿಯ ಸಮೀಪ […]

ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗಲು ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕು: ಜಯಶರ್ಮಿಳಾ

Tuesday, July 19th, 2016
Anniversary

ಉಪ್ಪಳ: ಸರಕಾರ ಇಂದು ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇದರ ಬಗ್ಗೆ ಸ್ಪಷ್ಟ ಅರಿವಿನ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.ವಿದ್ಯಾಭ್ಯಾಸದ ಮಟ್ಟ ಮಹಿಳೆಯರಲ್ಲಿ ಸಮಾಧಾನಕರ ಮಟ್ಟದಲ್ಲಿದ್ದರೂ ದೌರ್ಜನ್ಯಗಳಂತಹ ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗದಿರುವುದು ಖೇದಕರವಾಗಿದ್ದು,ಈ ನಿಟ್ಟಿನಲ್ಲಿ ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕಿದೆಯೆಂದು ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಜಯಶರ್ಮಿಳಾ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಶ್ರಯದಲ್ಲಿ ಕುಬಣೂರಲ್ಲಿ ಕಾರ್ಯಾಚರಿಸುತ್ತಿರುವ ಚಿನ್ಮಯೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವವನ್ನು ಕುಬಣೂರು ಶ್ರೀರಾಮ ಎಯುಪಿ ಶಾಲೆಯಲ್ಲಿ ಉದ್ಘಾಟಿಸಿ ಅವರು […]

ನಿರ್ಮಾಣಗೊಂಡು ಎರಡು ವರ್ಷವಾದರೂ ಉಪಯೋಗ ಶೂನ್ಯ ಆಸ್ಪತ್ರೆ

Tuesday, July 19th, 2016
Mulleria

ಮುಳ್ಳೇರಿಯಾ: ನಿರ್ಮಾಣ ಕಾಮಗಾರಿ ಪೂರ್ತಿಗೊಂಡು ವರ್ಷಗಳೆರಡು ಕಳೆದರೂ ಮುಳ್ಳೇರಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆಗೊಳ್ಳದೆ ಉಪಯೋಗ ಶೂನ್ಯವಾಗಿದ್ದು,ಲಕ್ಷಾಂತರ ರೂ.ವ್ಯಯಿಸಿ ನಿರ್ಮಿಸಲಾದ ಕಟ್ಟಡ ವ್ಯರ್ಥವಾಗುತ್ತಿದೆ. ಎಂಡೋಸಲ್ಫಾನ್ ಸಂತ್ರಸ್ಥರು ಅಧಿಕವಿರುವ ಪ್ರದೇಶವೆಂದು ಪರಿಗಣಿಸಿ ನಿರ್ಮಿಸಲಾದ ಈ ಆಸ್ಪತ್ರೆ ನಿತ್ಯ ಚಿಕಿತ್ಸೆಗಳಿಗೆ ಆಗಮಿಸುವ ನೂರಾರು ರೋಗಿಗಳಿಗೆ ಯಾವುದೇ ಪ್ರಯೋಜನಕ್ಕೆ ಬಾರದೆ ಉಪಯೋಗ ಶೂನ್ಯವಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.ಈ ನೂತನ ಕಟ್ಟಡ ನಿರ್ಮಾಣಕ್ಕೆ ಎಂಡೋಸಲ್ಫಾನ್ ಪ್ಯಾಕೇಜ್ ಹಾಗೂ ನಬಾರ್ಡ್ ಅನುದಾನದಿಂದ ಒಟ್ಟು 64ಲಕ್ಷ ರೂ.ಗಳನ್ನು ವ್ಯಯಿಸಿ 2003 ಮೇ ತಿಂಗಳಲ್ಲಿ ಕಾಮಗಾರಿ […]

ವಿಶ್ವ ತುಳುವೆರೆ ಆಯನದಲ್ಲಿ ಭೂತನಾಥೇಶ್ವರ ಕ್ರೀಡೋತ್ಸವ

Thursday, July 14th, 2016
bhootanatha

ಬದಿಯಡ್ಕ: ಡಿಸೆಂಬರ್ 9ರಿಂದ 13ರ ತನಕ ಬದಿಯಡ್ಕದಲ್ಲಿ ನಡೆಯುವ ವಿಶ್ವ ತುಳುವೆರೆ ಆಯನೊದಲ್ಲಿ ಭೂತನಾಥೇಶ್ವರ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ರಂಗೇರಿಸಲಿದೆ. ತುಳುನಾಡಿನ ಪುರಾತನ ಕ್ರೀಡೆಗಳು ಹಾಗೂ ಜನ ಮನರಂಜನೆಗೆ ಒತ್ತುನೀಡುವ ಕೆಲವೊಂದು ಆಕರ್ಷಣೀಯ ಕ್ರೀಡೆಗಳೊಂದಿಗೆ ಜನ ಮನಸೂರೆಗೊಂಡು ತನ್ನದೇ ಆದ ದಾಖಲೆ ನಿರ್ಮಿಸಿರುವ ಮಂಗಳೂರಿನ ಬಡಗು ಎಡಪದವಿನ ಶ್ರೀ ಶಾಸ್ತಾವು ಭೂತನಾಥೇಶ್ವರ ಕ್ರೀಡಾ ಸಮಿತಿಯ ನೇತೃತ್ವದಲ್ಲಿ ಕ್ರೀಡೋತ್ಸವ ಆಯೋಜಿಸುವುದಾಗಿ ಶ್ರೀ ವಿಜಯನಾಥ ವಿಠಲ ಶೆಟ್ಟಿಯವರು ಹೇಳಿದರು. ತುಳುವೆರೆ ಆಯನೊ ಕೂಟದ ಸದಸ್ಯರು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಅವರು […]

ಕಾರು ಡಿಕ್ಕಿಯಾಗಿ ಬಸ್ ಚಾಲಕ ಮೃತ್ಯು, ಪರಾರಿಯಾದ ವಾಹನ ವಶ

Thursday, July 14th, 2016
Poinachi Accident

ಕಾಸರಗೋಡು: ಕಾರು ಡಿಕ್ಕಿಹೊಡೆದು ಖಾಸಗೀ ಬಸ್ ಚಾಲಕ ಮೃತಪಟ್ಟ ಘಟನೆ ಗುರುವಾರ ಮುಂಜಾನೆ ಪೊಯಿನಾಚಿಯಲ್ಲಿ ನಡೆದಿದೆ. ಕುಂಡಂಗುಳಿ ಮರುದಡ್ಕದ ರಾಮಕೃಷ್ಣನ್ ನಾಯರ್ ಎಂಬವರ ಪುತ್ರ ಮಧುಸೂದನ್(32)ಮೃತ ಬಸ್ ಚಾಲಕ.ಮಧುಸೂದನ್ ಮೂವರು ಸ್ನೇಹಿತರೊಂದಿಗೆ ಜು.12 ರಂದು ಕೊಲ್ಲೂರು ಕ್ಷೇತ್ರಕ್ಕೆ ತೆರಳಿದ್ದರು. ಮರಳಿ ಬಂದ ಇವರು ಗುರುವಾರ ಮುಂಜಾನೆ 1.30ರ ವೇಳೆಗೆ ಪೊಯಿನಾಚಿ ಪೆಟ್ರೋಲ್ ಬಂಕ್ ಬಳಿ ಕಾರಲ್ಲಿ ವಿಶ್ರಾಂತಿಪಡೆಯುತ್ತಿದ್ದರು.ಈ ಮಧ್ಯೆ 2 ಗಂಟೆಯ ವೇಳೆ ಮಧುಸೂದನ್ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು.ಈ ಬಗ್ಗೆ ಪೋಲೀಸರಿಗೆ ಮಾಹಿತಿ […]

ಮಹಿಳೆ ಮತ್ತು ಮಕ್ಕಳ ಕಾನೂನು ಅರಿವು ಕಾರ್ಯಕ್ರಮ 

Tuesday, July 12th, 2016
court

ಮ೦ಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಮಂಗಳೂರು ವಕೀಲರ ಸಂಘ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 11 ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಬಾಲಭವನ, ಕದ್ರಿ, ಮಂಗಳೂರು ಇಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಮಹಿಳೆ ಮತ್ತು ಮಕ್ಕಳ ಕುರಿತಾದ ಕಾನೂನುಗಳು ಹಾಗೂ ಮಾನವ ಸಾಗಾಣಿಕೆಯಿಂದ ತೊಂದರೆಗೊಳಗಾದವರಿಗೆ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಇರುವ ಸೌಲಭ್ಯಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು […]

ಕೃಷಿ ಅಭಿಯಾನಕ್ಕೆ ಚಾಲನೆ 

Tuesday, July 12th, 2016
Krishi

ಮ೦ಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿರುವ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯತ್ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕೃಷಿ ಅಭಿಯಾನ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಉಪಕಾರ್ಯದರ್ಶಿ ಎನ್.ಆರ್ ಉಮೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಉಪಸ್ಥಿತರಿದ್ದರು. 20 ದಿನಗಳ […]

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ವತಿಯಿಂದ ಸನ್ಮಾನ

Friday, July 8th, 2016
Rotary club

ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಕ್ಲಬಿನ ಮೂರು ಸದಸ್ಯರನ್ನು ಅವರ ಕೆಲಸ ಕಾರ್ಯಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಕ್ಲಬ್ಬಿನ ಅಧ್ಯಕ್ಷ ರೊ| ಇಲಿಯಾಸ್ ಸಾಂಟೀಸ್ ಮಾತಾಡುತ್ತಾ ರೋಟರಿ ವಲಯ ನಾಲ್ಕರಲ್ಲಿ ಅತೀ ಹೆಚ್ಚು ಕೆಲಸಗಳನ್ನು ಮಾಡುತ್ತಾ ವಿಭಾಗ ನಾಲ್ಕರಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹೆಚ್ಚಿನ ಯಶಸ್ವಿಯಾಗಳು ನಮ್ಮ ಕ್ಲಬ್ಬಿನ ವಲಯ ಸೇನಾನಿ ರೊ| ರಾಜಗೋಪಾಲ್ ರೈ , ರೊ| ದೇವದಾಸ ರೈ, ಹಾಗೂ ಹರಿಯ ರೊ| ರಾಮಮೋಹನ್ ರೈ ತುಂಬಾ ದುಡಿದಿದ್ದಾರೆ. ಆ ಪ್ರಯುಕ್ತ […]

ವರ್ಕಾಡಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ

Friday, July 8th, 2016
VRA-Research-Sub-Centre

ಮಂಜೇಶ್ವರ: ಇಲ್ಲಿನ ವರ್ಕಾಡಿ ಪ್ರಾದೇಶಿಕ ಕೃಷಿ ಸಂಶೋಧನಾ ಉಪಕೇಂದ್ರಕ್ಕೆ ಪಿಲಿಕ್ಕೋಡು ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದರು. ಕಳೆದ ದಶಕಗಳಿಂದ ಅನಾಸ್ಥೆಯಲ್ಲಿರುವ ಪ್ರಸ್ತುತ ಕೇಂದ್ರಕ್ಕೆ ಪುನಶ್ಚೇತನ ನೀಡಬೇಕೆನ್ನುವ ನಿರಂತರ ಬೇಡಿಕೆಯನ್ನು ಮನ್ನಿಸಿ ಅಧಿಕಾರಿಗಳ ನಿಯೋಗವೊಂದು ಪ್ರಸ್ತುತ ಸ್ಥಳಕ್ಕೆ ಭೇಟಿ ನೀಡಿ ವರದಿ ಸಂಗ್ರಹಿಸಿತು. ಪಿಲಿಕ್ಕೋಡು ಕೃಷಿ ಶಂಶೋಧನಾ ಕೇಂದ್ರದ ಎಡಿಆರ್ ಡಾ,ಅಬ್ದುಲ್ ಕರೀಂ ನೇತೃತ್ವದ ತಂಡದಲ್ಲಿ ಸಹಾಯಕ ಉಪನ್ಯಾಸಕ ಪಿ.ಕೆ.ರಿತೇಶ್, ಡಾ.ಶಶಿಕಾಂತ್, ಪಾರ್ಮ್ ಸುಪರಿಟೆಂಡೆಂಟ್ ಎಂ.ವಿ. ಪ್ರೇಮರಾಜನ್, ಕೃಷಿ ಭವನದ ಸಹಾಯಕ ಅಧಿಕಾರಿ ಎ.ವಿ.ರಾಧಾಕೃಷ್ಣ, ಮುಂತಾದವರು […]