ಮನುಷ್ಯ ಸಂಬಂಧ ವೃದ್ಧಿ ವರ್ತಮಾನದ ತುರ್ತು : ಡಾ. ಕೈರೋಡಿ

Monday, February 29th, 2016
Yuva Friends

ಬಂಟ್ವಾಳ: ಕಳೆದ ಎರಡು ದಶಕಗಳಿಂದೀಚೆಗೆ ಯಾಂತ್ರಿಕವಾಗಿ, ಸೌಲಭ್ಯ ಕೇಂದ್ರಿತವಾಗಿ ಸಾಕಷ್ಟು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಮನುಷ್ಯ ಮನುಷ್ಯನೊಂದಿಗೆ ಅರಿತು ಬೆರೆತು ಬದುಕುವ ವಾತಾವರಣ ಕ್ಷಿಣಿಸುತ್ತಿವೆ. ಸ್ವಾರ್ಥಪರ ಹಾಗೂ ಸಂಕುಚಿತ ಮನೋಭಾವ ಬಿತ್ತುವ ಸಂಗತಿಗಳೇ ವಿಜೃಂಭಿಸುತ್ತಿವೆ. ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ನುಡಿದರು. ಅವರು ಬಂಟ್ವಾಳ ತಾಲೂಕಿನ ಕುಕ್ಕಿಪಾಡಿಯ ನೇಲ್ಯಕುವೇರಿನಲ್ಲಿ ಯುವ ಫ್ರೆಂಡ್ಸ್ ಬಳಗದ ವತಿಯಿಂದ ನಡೆದ ಸಾಂಸ್ಕೃತಿಕ ಉತ್ಸವವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಭತ್ತದ ಕೃಷಿಯಲ್ಲಿ ಹಾಸು ಹೊಕ್ಕಾಗಿದ್ದ ಮನುಷ್ಯ ಭಾಂಧವ್ಯವಾಗಲಿ ಜನಪದ […]

ಸರ್ಕಾರದ ಇಚ್ಛಾಶಕ್ತಿ ಕೊರತೆ, ಉಪ್ಪು ನೀರು ಸೇವನೆಯಿಂದ ಮುಕ್ತರಾಗದ ಕಾಸರಗೋಡಿನ ಜನತೆ

Monday, February 29th, 2016
Salt water

ಕಾಸರಗೋಡು: ನಗರ ಹಾಗೂ ಆಸುಪಸಿನ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಾವಿಕೆರೆ ಶಾಶ್ವತ ಅಣೆಕಟ್ಟು ಯೋಜನೆ ಮತ್ತೆ ಅತಂತ್ರ ಸ್ಥಿತಿಯತ್ತ ಸಾಗಿದೆ. ಗುತ್ತಿಗೆದಾರರು ಅಣೆಕಟ್ಟು ಕಾಮಗಾರಿಯನ್ನು ಅರ್ಧದಲ್ಲಿ ಕೈಬಿಟ್ಟು ತೆರಳಿರುವುದರಿಂದ ಈ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಾಮಗಾರಿಯ ರೀ ಟೆಂಡರ್ ನಡೆಸಿ ಯೋಜನೆ ಪೂರ್ತಿಗೊಳಿಸುವಂತೆ ನೀರಾವರಿ ಖಾತೆ ಸಚಿವ ಪಿ.ಜೆ ಜೋಸೆಫ್ ನೀಡಿರುವ ಭರವಸೆ ಒಂದಷ್ಟು ಭರವಸೆಯನ್ನು ಹುಟ್ಟಿಸಿದ್ದರೂ, ಈ ವರ್ಷವೂ ಕಾಮಗಾರಿ ಪೂರ್ತಿಗೊಳ್ಳುವುದು ಅನಿಶ್ಚಿತಾವಸ್ಥೆಯಲ್ಲಿದೆ. ಯೋಜನೆ ಜಾರಿಗೊಳ್ಳಲಿರುವ […]

ತಡೆಗೋಡೆ ಒಡೆದು ನೀರು ನುಗ್ಗಿ ನೂರು ಎಕರೆ ಕೃಷಿ ಭೂಮಿ ನಾಶ

Monday, February 29th, 2016
wall collapse

ಉಪ್ಪಳ : ತಡೆಗೋಡೆ ಒಡೆದು ಕೃಷಿ ಸ್ಥಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಪೈವಳಿಕೆ ಪಂಚಾಯತಿನ ಕುಡಾಲ್‌ಮೇರ್ಕಳದಲ್ಲಿ ನೂರು ಎಕರೆ ಕೃಷಿ ಸ್ಥಳ ನಾಶವಾಗಿದೆ. ದಶಕದ ಹಿಂದೆ ಕಿರು ನೀರಾವರಿ ಯೋಜನೆಯಂಗವಾಗಿ ನಿರ್ಮಿಸಿದ ತಡೆಗೋಡೆ ಒಡೆದು ನಾಲ್ಕು ವರ್ಷಗಳಾದರೂ ಅದನ್ನು ಪುನರ್ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಕರ, ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಗದ್ದೆಗಳಲ್ಲಿ ನಡೆಯುತ್ತಿದ್ದ ಪರಂಪರಾಗತ ಕೃಷಿಗೆ ತಡೆಯುಂಟಾಗಿದೆ. ತಡೆಗೋಡೆ ಒಡೆದ ಪರಿಣಾಮವಾಗಿ ತೋಡಿನ ಗತಿ […]

ಮಂಗಳೂರಿನಿಂದ ಕಾಸರಗೋಡು ಬೇಕಲಕ್ಕೆ ಶೀಘ್ರದಲ್ಲೇ ವಿಮಾನ ಸಂಚಾರ

Monday, February 29th, 2016
Mangalore Kasaragod Flight

ಕಾಸರಗೋಡು: ಅಂತರಾಷ್ಟ್ರೀಯ ಪ್ರವಾಸೋದ್ಯಮ ರಂಗದ ಭೂಪಟದಲ್ಲಿ ಸ್ಥಾನ ಪಡೆದಿರುವ ಬೇಕಲ ಪ್ರವಾಸಿ ಕೇಂದ್ರ ದೇಶ, ವಿದೇಶಗಳಲ್ಲಿ ಇನ್ನಷ್ಟು ಪ್ರವಾಸಿಗಳನ್ನು ಆಕರ್ಷಿಸುವ ಗುರಿಯೊಂದಿಗೆ ಬೇಕಲಕೋಟೆ ಪರಿಸರದಲ್ಲಿ ಏರ್ ಸ್ಟ್ರಿಪ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ. ಬೇಕಲದಲ್ಲಿ ಏರ್ ಸ್ಟ್ರಿಪ್ ನಿರ್ಮಿಸುವ ಯೋಜನೆಗೆ ಸಿಯಾಲ್ ಸಂಸ್ಥೆ ಈಗಾಗಲೇ ಅಧ್ಯಯನ ನಡೆಸಿ ರಾಜ್ಯ ಸರಕಾರಕ್ಕೆ ವರದಿ ನೀಡಿದೆ. ಇದರಂತೆ ಕನಿಷ್ಠ 50 ಮಂದಿ ಪ್ರಯಾಣಿಕರು ಸಂಚರಿಸುವ ಸೌಕರ್ಯವಿರುವ ಕಿರು ವಿಮಾನ ಸಂಚಾರವನ್ನು ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇಕಲಕ್ಕೆ ಆರಂಭಿಸಲು ಸಿದ್ದತೆ […]

ಕೇರಳ ಸರಕಾರದಿಂದ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ದೌರ್ಜನ್ಯ

Monday, February 29th, 2016
Kannada Kasargod

ಕಾಸರಗೋಡು: ಸಂವಿಧಾನಬದ್ಧವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ನೀಡಲಾಗಿದ್ದ ಸವಲತ್ತು ಮತ್ತು ಹಕ್ಕುಗಳನ್ನು ನಿರಂತರ ಕಸಿಯುತ್ತಲೇ ಬಂದಿರುವ ಕೇರಳ ಸರಕಾರ ಇದೀಗ ಕಡ್ಡಾಯ ಮಲಯಾಳ ಭಾಷಾ ಮಸೂದೆ-2015 ರ ಮುಖಾಂತರ ಕನ್ನಡಿಗರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಇದರ ವಿರುದ್ಧ ನಿರಂತರ ಹೋರಾಟ ಅನಿವಾರ್ಯವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರನ್ನು ಚುನಾವಣಾ ಕಣಕ್ಕಿಳಿಸಲು ಕನ್ನಡ ಹೋರಾಟ ಕ್ರಿಯಾ ಸಮಿತಿ ತೀರ್ಮಾನಿಸಿದೆ. ಕಾಸರಗೋಡು ಸರ್ವೀಸ್ ಕೋ-ಓಪರೇಟಿವ್ ಬ್ಯಾಂಕ್ (ಹೊಸ ಬಸ್ ನಿಲ್ದಾಣದ ಬಳಿ)ನ ಎರಡನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇರಳ […]

ಕಾಸರಗೋಡಿನಲ್ಲಿ ಬೃಹತ್ ಉದ್ಯೋಗ ಮೇಳ

Monday, February 29th, 2016
Udyogamela

ಕಾಸರಗೋಡು: ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಯುವ ಸಮೂಹದ ಕೊಡುಗೆಯನ್ನು ಲಕ್ಷ್ಯದಲ್ಲಿರಿಸಿ ಕೇಂದ್ರ ಸರಕಾರ ವಿವಿಧ ಆಯಾಮಗಳಲ್ಲಿ ಯೋಜನೆಗಳಿಗೆ ರೂಪು ನೀಡುತ್ತಿರುವುದು ಸ್ತುತ್ಯರ್ಹವೆಂದು ಕಾಸರಗೋಡು ಚಿನ್ಮಯಾ ಮಿಷನ್ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರ ಕಾರ್ಮಿಕ ಉದ್ಯೋಗ ಸಚಿವಾಲಯದ ನೇತೃತ್ವದಲ್ಲಿ ಕಾಸರಗೋಡಿನ ವಿವೇಕಾನಂದ ಎಜ್ಯುಕೇಶನಲ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಯುವ ಕಿರಣ್ ಸಂಘಟನೆಗಳ ಸಹಕಾರದೊಂದಿಗೆ ಭಾನುವಾರ ವಿದ್ಯಾನಗರದ ಚಿನ್ಮಯಾ ಮಿಷನ್ ಪರಿಸರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ದೀಪ ಬೆಳಗಿಸಿ ಅವರು ಮಾತನಾಡುತ್ತಿದ್ದರು. ಉದ್ಯೋಗ ಇಂದು […]

ಏಳರ ಬಾಲಕಿಗೆ ಪೀಡನೆ, ಮನೆ ಮಾಲಕನ ವಿರುದ್ದ ದೂರು

Sunday, February 28th, 2016
girl

ಕುಂಬಳೆ: ಕೊಲ್ಲುವುದಾಗಿ ಬೆದರಿಸಿ ಮನೆ ಕೆಲಸಗಳನ್ನು ಮಾಡಿಸಿ,ತಲೆ ಬೋಳಿಸಿ ಕ್ರೂರ ಪೀಡನೆ ನೀಡುತ್ತಿದ್ದ ಮನೆ ಮಾಲಕನ ವಿರುದ್ದ ಕುಂಬಳೆ ಪೋಲೀಸರು ದೂರು ದಾಖಲಿಸಿದ್ದಾರೆ. ಮನೆ ಮಾಲಕ ಹಾಗೂ ಆತನ ಪತ್ನಿಯ ಪೀಡನೆ ಸಹಿಸಲಾರದೆ ಬಾಲಕಿ ಮನೆಬಿಟ್ಟು ಹೊರಬಂದಾಗ ಈ ದುರಂತ ಕಥೆ ತಡವಾಗಿ ಹೊರಜಗತ್ತಿಗೆ ಅರಿವಿಗೆ ಬಂದಿದ್ದು, ಗಮನಿಸಿದ ಊರವರು ಕೂಡಲೇ ಬಾಲಕಿಯನ್ನು ಕುಂಬಳೆ ಪೋಲೀಸರಿಗೊಪ್ಪಿಸಿದರು. ಕುಂಬಳೆ ಪರಿಸರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.ಪೆರಿಯಡ್ಕದ ಶಾಲೆಯೊಂದರಲ್ಲಿ ಎರಡನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿನಿಯನ್ನು ಆಕೆಯ ತಾಯಿ ಕೆಲಸಕ್ಕೆ ನಿಲ್ಲಿಸಿರುವುದಾಗಿ […]

ಮೊಬೈಲ್ ಗೀಳು -ರೈಲು ಡಿಕ್ಕಿಹೊಡೆದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

Sunday, February 28th, 2016
vaishak

ಕಾಸರಗೋಡು: ಅತಿಯಾದ ಮೊಬೈಲ್ ಗೀಳಿಗೊಳಗಾದ ವಿದ್ಯಾರ್ಥಿಯೊಬ್ಬ ರೈಲು ಡಿಕ್ಕಿಯಾಗಿ ದಾರುಣನಾಗಿ ಮೃತಪಟ್ಟ ಘಟನೆ ಕಾಸರಗೊಡು ರೈಲು ನಿಲ್ದಾಣ ಬಳಿ ಶುಕ್ರವಾರ ರಾತ್ರಿ ನಡೆದಿದೆ. ತೃಶೂರ್ ಕುನ್ನಂಕುಳಂ ನ ತೆಕ್ಕೆಪರಂಬಿಲ್ ನ ರವಿ ಕುಮಾರ್ ಎಂಬವರ ಪುತ್ರ ಹಾಗೂ ಪೊವ್ವಲ್ ಎಲ್‌ಬಿಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಕೆ.ಆರ್.ವೈಶಾಖ್ (23)ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಶನಿವಾರ ಹಾಗೂ ಭಾನುವಾರ ಕಾಲೇಜಿಗೆ ರಜೆಯಾಗಿರುವುದರಿಂದ ಊರಿಗೆ ತೆರಳಲು ವೈಶಾಖ್ ಕಾಸರಗೋಡಿಗೆ ಬಂದಿದ್ದನು. ಅಲ್ಲಿ ಮೊಬೈಲ್ ಪೋನ್ ನ ಇಯರ್ ಫೋನ್ ಕಿವಿಗಿರಿಸಿ ರೈಲು […]

ಸರ್ಕಾರಿ ಕಾಲೇಜಿಗೆ ಯಕ್ಷಗಾನ, ಸಂಶೋಧನಾ ಕೇಂದ್ರ-ಯಕ್ಷಸಂಶೋಧನಾಸಕ್ತರಿಗೆ ವರದಾನ

Sunday, February 28th, 2016
yakshagana research center

ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿಗೆ ಯಕ್ಷಗಾನ ಸಂಶೋಧನಾ ಕೇಂದ್ರ ಮಂಜೂರಾಗುವ ಮೂಲಕ ಯಕ್ಷಗಾನ ಸಂಶೋಧನಾಸಕ್ತ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯೊಂದು ಈಡೇರುವ ಸನ್ನಹದಲ್ಲಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ಡಾ. ಪ್ರಭಾಕರನ್ ಆಯೋಗ ಶಿಫಾರಸಿನ ಮೇರೆಗೆ ಕಾಸರಗೋಡು ಸರ್ಕಾರಿ ಕಾಲೇಜಿಗೆ ಕೇಂದ್ರ ಲಭ್ಯವಾಗಿದೆ. ಪ್ರಥಮ ಹಂತದಲ್ಲಿ ಯಕ್ಷಗಾನ ಮ್ಯೂಸಿಯಂ ಹಾಗೂ ಯಕ್ಷಗಾನ ಗ್ರಂಥಾಲಯ ಆರಂಭಿಸಲಾಗುವುದು. ಪ್ರಸ್ತುತ ಕಾಲೇಜಿನ ಕನ್ನಡ ವಿಭಾಗದ ಸಮೀಪವಿರುವ ಕೊಠಡಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಶ್ರೇಷ್ಠ ಕಲೆಯಾಗಿರುವ ಯಕ್ಷಗಾನಕ್ಕೆ ಅಕಾಡಮಿಕ್ ಆದ ಅಧ್ಯಯನ ಕೇಂದ್ರದ ಕೊರತೆಯನ್ನು ಈ […]

ಕಟ್ಟಡದಿಂದ ಬಿದ್ದ ಯುವಕ ಮೃತ್ಯು-ಅಂಗಾಂಗ ದಾನ

Friday, February 26th, 2016
Vinithraj

ಮಂಜೇಶ್ವರ: ಇಲೆಕ್ಟ್ರಿಶಿಯನ್ ಕೆಲಸದ ವೇಳೆ ಕಟ್ಟಡದಿಂದ ಬಿದ್ದು ಗಂಭೀರಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಬಟ್ಯಪದವು ಕೃಷ್ಣ ಮೂಲ್ಯ-ಗೀತಾ ದಂಪತಿಗಳ ಪುತ್ರ ವಿನೀತ್ ರಾಜ್(21) ಬುಧವಾರ ನಿಧನರಾದರು. ಕಳೆದ ಮಂಗಳವಾರ ಮಂಗಳೂರಿನ ನಂತೂರಿನಲ್ಲಿ ಕಟ್ಟಡದಿಂದ ಬಿದ್ದು ಗಂಭೀರಗಾಯಗೊಂಡಿದ್ದನು.ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ವಿಫಲಗೊಂಡು ಮೃತನಾದನು. ಈ ಮಧ್ಯೆ ಈತನ ಕಿಡ್ನಿ ಹಾಗೂ ಪಿತ್ತಜನಕಾಂಗವನ್ನು ಬೆಂಗಳೂರಿನಿಂದ ಆಗಮಿಸಿದ ತಜ್ಞರ ತಂಡ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರೋಗಿಯೊಬ್ಬನಿಗೆ ಅಳವಡಿಸಲು ಕೊಂಡುಹೋದರು.ಮೂತ್ರ ಜನಕಾಂಗದಲ್ಲಿ ಒಂದನ್ನು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಹಾಸನದ ನಿವಾಸಿ ರೋಗಿಯೋರ್ವನಿಗೆ ಗುರುವಾರ […]