ಉದಾರ ಆರ್ಥಿಕ ನೀತಿಯಿಂದ ಒಳ್ಳೆಯದು ಮಾತ್ರ ಆಗೋದಿಲ್ಲ !

Wednesday, February 13th, 2013
Invest

ಮಂಗಳೂರು : ಕೇಂದ್ರ ಸರಕಾರ ಇತ್ತೀಚಿನ ವರ್ಷಗಳಲ್ಲಿ ಅನುಸರಿಸಿದ ಉದಾರ ಆರ್ಥಿಕ ನೀತಿಗಳಿಂದ ಒಳ್ಳೆಯದೇ ಆಗಿದೆಯೆಂದು ಹೇಳುವಂತಿಲ್ಲ. ಕೆಟ್ಟದ್ದೂ ಆಗಿದೆ. ಕೈಗಾರಿಕೆ ಮತ್ತು ಸೇವಾ ಕ್ಷೇತ್ರವನ್ನು ಸರ್ಕಾರಿ ಏಕಸ್ವಾಮ್ಯದಿಂದ ಬಿಡುಗಡೆ ಗೊಳಿಸಿದ್ದರಿಂದ ಮಾರುಕಟ್ಟೆ ಮುಕ್ತವಾಗಿ ಉದ್ಯಮಕ್ಷೇತ್ರಕ್ಕೆ ಮತ್ತು ಗ್ರಾಹಕರಿಗೆ ಒಳ್ಳೆಯದೇ ಆಯಿತು. ಆದರೆ ಉದಾರವಾದಿ ನೀತಿಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ಉದ್ಯಮ, ಸೇವಾ ಕ್ಷೇತ್ರಗಳು ಖಾಸಗಿ ವಲಯದಿಂದ ಪೈಪೋಟಿ ಎದುರಿಸಲು ಅಗತ್ಯವಾದ ಬದಲಾವಣೆ ತರುವಲ್ಲಿ ಕೇಂದ್ರ ಸರಕಾರ ವಿಫಲವಾದದ್ದರಿಂದ ಅವೆಲ್ಲ ಇಂದು ನಷ್ಟಕ್ಕೆ ಒಳಗಾಗಿ […]

ಕಡಲ್ ನಲ್ಲಿ ಹುಡುಕಬೇಕಾದ ಮಣಿರತ್ನಂ !

Wednesday, February 13th, 2013
Mani Ratnam

ಮಂಗಳೂರು : ಆ ನಿರ್ದೇಶಕನ ಮೊದಲ ಸಿನಿಮಾವದು. ಚೊಚ್ಚಲ ಹೆರಿಗೆಯನ್ನು ನಿರೀಕ್ಷಿಸುತ್ತಿರುವ ಗರ್ಭಿಣಿಯ ಪ್ರಸವ ವೇದನೆಯ ಕಾಲವದು. ಬೆಂಗಳೂರಿನ ಕೆಂಪೇಗೌಡ ಸರ್ಕಲ್ ನಲ್ಲಿರುವ ಥಿಯೇಟರ್ ಒಳಗೆ ಅಳುಕುತ್ತಲೇ ಕಾಲಿಟ್ಟ ಆ ನಿರ್ದೇಶಕನ ದುಗುಡವನ್ನು ಯಾರೂ ಗುರುತಿಸಲಿಲ್ಲ. ಅಸಲಿಗೆ ಆತ ಒಬ್ಬ ನಿರ್ದೇಶಕನೆಂದೇ ಅಲ್ಲಿಯವರೆಗೆ ಗೊತ್ತಿರಲಿಲ್ಲ. ಅದೊಂದು ಆರಂಭ ಅಷ್ಟೇ. ಆನಂತರ ಆ ನಿರ್ದೇಶಕನಿಗೆ ತನ್ನ ಸಿನಿಮಾಕ್ಕೆ ಪ್ರೇಕ್ಷಕರನ್ನು ಹುಡುಕುವುದು ಕಷ್ಟವಾಗಲಿಲ್ಲ. ಪ್ರೇಕ್ಷಕರೇ ಆ ನಿರ್ದೇಶಕನ ಸಿನಿಮಾವನ್ನು ಹುಡುಕಿಕೊಂಡು ಬಂದರು. ಆ ನಿರ್ದೇಶಕನೇ ಮಣಿರತ್ನಂ. ಮಣಿಯ ಚಿತ್ರಗಳು ಉಳಿದ […]

ಪಡೀಲ್ : ಬೈಕ್ ಸವಾರರ ಮೇಲೆ ಟೆಂಪೋ ಹರಿದು ಇಬ್ಬರ ಸಾವು

Saturday, February 9th, 2013
mishap at Padil

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 75ರಲ್ಲಿ  ಪಡೀಲು ಸಮೀಪ ಶುಕ್ರವಾರ ಮಧ್ಯಾಹ್ನ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರೆ, ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಕಾರ್ಕಳ ಮೂಲದ ಆನಂದ ದೇವಾಡಿಗ ಹಾಗೂ ಸಂತೋಷ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಸವಾರರು ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಪಡೀಲು ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್ ಸವಾರರು ಹೆದ್ದಾರಿಗೆ ಉರುಳಿ ಬಿದ್ದಿದ್ದರು. ಈ ಸಂದರ್ಭ […]

ಹತ್ತೂರಿನ ಪುತ್ತೂರಿನಲ್ಲಿ ಡಿವಿಎಸ್ ವಿರುದ್ಧ ಕರಂದ್ಲಾಜೆ

Monday, January 28th, 2013
Sadananda Gowda, Shobha Karandlaje

ಮಂಗಳೂರು : ಸದಾನಂದ ಗೌಡ ಮೇಲೆ ಶೋಭಾ ಕರಂದ್ಲಾಜೆ ಆಕ್ರೋಶಿತರಾಗಿಯೇ ಇದ್ದಾರೆ. ಯಡಿಯೂರಪ್ಪರೊಂದಿಗೆ ಗುರುತಿಸಿಕೊಂಡ ನೆಪದಲ್ಲಿ ಶೋಭಾ ಕರಂದ್ಲಾಜೆಯ ಮಂತ್ರಿ ಸ್ಥಾನ ಕಿತ್ತುಕೊಳ್ಳಲು ಸದಾನಂದ ಗೌಡರು ಪಿತೂರಿ ನಡೆಸಿದ್ದರು ಎಂದು ಶೋಭಾರ ಹಿಂಬಾಲಕರು ನಂಬಿದ್ದಾರೆ. ಇದೇ ಕೋಪದಲ್ಲಿ ಡಿ.ವಿ. ವಿರುದ್ಧ ಪುತ್ತೂರಿನಲ್ಲಿ ಸ್ಪರ್ಧಿಸುತ್ತೇನೆ ಎಂದು ಶೋಭಾ ಎಚ್ಚರಿಕೆ ಸಂದೇಶವನ್ನೂ ನೀಡಿದ್ದರು. ಡಿ.ವಿ.ವಿರುದ್ಧ ಶೋಭಾ ಸ್ಪರ್ಧಿಸದೇ ಇದ್ದರೂ ಕೂಡ ಡಿ.ವಿ. ಗೆಲವು ತಡೆಯಲು ಹೋರಾಡದೆ ಇರಲಾರರು. ಶೋಭಾ ಪುತ್ತೂರಿನಲ್ಲಿ ಓಡಾಡಿದ್ದೇ ಆದರೆ ಒಕ್ಕಲಿಗ ಮತಗಳು ಒಡೆಯದಿರಲಾರವು ಎಂದು ಸದಾನಂದ […]

ಪುತ್ತೂರು ಜೋಡಿ ಆತ್ಮಹತ್ಯೆ ಪ್ರೀತಿಗೆ ಯುವಕನ ತಾಯಿಯೇ ವಿಲನ್ ಆದಳು !

Saturday, December 29th, 2012
Chetan Navya

ಮಂಗಳೂರು : ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ತಾಜಾ ಘಟನೆ ಪುತ್ತೂರು ಪೇಟೆಯ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕರ್ಮಲ ಎಂಬಲ್ಲಿಂದ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ಅವರ ವಿವಾಹಕ್ಕೆ ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿರುವುದೇ ಆತ್ಮಹತ್ಯೆಗೆ ಕಾರಣ ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಿ ಬರುತ್ತಿದೆ. ಚಿಕ್ಕಮುಡ್ನೂರು ಗ್ರಾಮದ ಕರ್ಮಲ ನಿವಾಸಿ ರುಕ್ಮಯ್ಯ ಗೌಡ ಅವರ ಪುತ್ರ ಚೇತನ್ (26) ಮತ್ತು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ವಿಶ್ವನಾಥ ಗೌಡ ಅವರ ಪುತ್ರಿ ನವ್ಯ […]

ಕರಾವಳಿಯ ಜೆಡಿಎಸ್ ನಲ್ಲಿ `ಸದಾ’ ಹೊಸ ಸಂಚಲನ

Friday, December 28th, 2012
Sadananda Shetty

ಮಂಗಳೂರು : ರಾಜ್ಯದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾನಾ ಪಕ್ಷಗಳ ರಾಜಕೀಯ ಕಸರತ್ತು ಆರಂಭಗೊಂಡಿದೆ. ಅದರಲ್ಲೂ ಜೆಡಿಎಸ್ ಈ ನೆಲೆಯಲ್ಲಿ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಎ. ಸದಾನಂದ ಶೆಟ್ಟಿ ಅವರನ್ನು ಘೋಷಿಸಿದೆ. ಈ ಮೂಲಕ ರಾಜ್ಯದಲ್ಲೇ ಜೆಡಿಎಸ್ ತನ್ನ ಮೊದಲ ಅಭ್ಯರ್ಥಿ ಘೋಷಣೆಯಾದಂತಾಗಿದೆ. ಅದು ಕೂಡ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಅಂತಿಮ ನಿರ್ಧಾರವನ್ನು ವನ್ನು […]

ಮೋಹಕ ಬೆಡಗಿ ತ್ರಿಷಾ ಕೃಷ್ಣನ್ ಕನ್ನಡಕ್ಕೆ ಎಂಟ್ರಿ

Thursday, December 27th, 2012
Trisha Krishnan

ತಮಿಳು , ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ ನಟಿ ತ್ರಿಷಾ ಕೃಷ್ಣನ್ ಚೊಚ್ಚಲ ಕನ್ನಡ ಚಿತ್ರ ‘ರಮ್’ ನಲ್ಲಿ ಅಭಿನಯಿಸುತ್ತಿದ್ದಾಳೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ರಮ್’ ಇದೊಂದು ತ್ರಿಭಾಷಾ ಚಿತ್ರವಾಗಿದ್ದು ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲೂ ಚಿತ್ರ ಏಕಕಾಲಕ್ಕೆ ಸೆಟ್ಟೇರಲಿದೆ. ಜನವರಿ 2013ಕ್ಕೆ ಸೆಟ್ಟೇರಲಿರುವ ಈ ಚಿತ್ರದ ಟೈಟಲ್ RUM (ರಂಭೆ ಊರ್ವಶಿ ಮೇನಕೆ). ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಇನ್ನೂ ಏನನ್ನು ಹೇಳಿಲ್ಲ. ಟಾಲಿವುಡ್ ಟಾಪ್ […]

ಹಾಸ್ಯ ಘಟನೆಗಳು

Saturday, December 22nd, 2012
Fun Movement

ಕಿಲಾಡಿ ನಂ.786

Thursday, December 20th, 2012
Khiladi 786

ಅಕ್ಷಯ್ ಕುಮಾರ್ ಅವರ ಅಭಿನಯದ ಸಿನಿಮಾಗಳು ತಿಂಗಳಿಗೊಂದು ರಿಲೀಸ್ ಆಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ರೌಡಿ ರಾಥೋಡ್, ಓ ಮೈಗಾಡ್ ಸಿನಿಮಾಗಳು ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿದ್ದವು. ಈಗ ಕಿಲಾಡಿ 786 ಬಂದಿದೆ. ಇಲ್ಲೂ ಅವರು ಪ್ರೇಕ್ಷಕರನ್ನು ನಗಿಸುವ, ರಂಜಿಸುವ ಕೆಲಸ ಮಾಡಿದ್ದಾರೆ. ಇಲ್ಲಿ ಅವರು ಪಂಜಾಬಿ ಡಾನ್ ಮಗನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಹೀರೊ ನ ಫ್ಯಾಮಿಲಿಗೆ ರೌಡಿಸಂ ನಂಟಿದೆ ಎಂಬ ಕಾರಣಕ್ಕೆ ವಧು ಕೊಡಲು ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ ಇಂಡಿಯಾದಲ್ಲಿ ಹೆಣ್ಣು ಸಿಗಲಿಲ್ಲ […]

ಸೈನ್ಸ್ ಆನ್ಸರ್ ಭೂಮಿಗೆ ಪ್ರಳಯ ಬರೋದೆ ಇಲ್ಲ !

Monday, December 10th, 2012
Doomsday

ಮಂಗಳೂರು :ಬಹಳಷ್ಟು ಮಂದಿ ಕಾಲಜ್ಞಾನಿಗಳು, ಕಣಿ ಜ್ಯೋತಿಷಿಗಳು ಹಾಗೂ ಪೊಳ್ಳು ವಿಜ್ಞಾನಿಗಳು ಈ ವರ್ಷದ ಡಿಸೆಂಬರ್ 21ರಂದು ಭೂಮಿ ಪ್ರಳಯಕ್ಕೆ ಆಹುತಿಯಾಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಮೆಸೊ ಅಮೆರಿಕನ್ ದೀರ್ಘ ಲೆಕ್ಕಾಚಾರದ ಕ್ಯಾಲೆಂಡರ್ ನ 5125 ವರ್ಷ ಚಕ್ರವು ಡಿಸೆಂಬರ್ 21 ರಂದು ಕೊನೆಯಾಗಲಿರುವುದೇ ಈ ವದಂತಿಗೆ ಕಾರಣ. ಪ್ರಳಯದ ಕುರಿತಾಗಿ ಭವಿಷ್ಯ ನುಡಿಯುವವರು ಕಪ್ಪುರಂಧ್ರ, ಕ್ಷುದ್ರಗ್ರಹ, ಧೂಮಕೇತು ಅಥವಾ ಅರಿವಿಗೆ ಬರದ ವಿಶ್ವದ ಸಾಧ್ಯತೆಗಳೊಂದಿಗೆ ಭೂಮಿಯು ಘರ್ಷಣೆಗೊಳಪಡುವುದರಿಂದಾಗಿ ಈ ವಿನಾಶ ಸಂಭವಿಸಲಿದೆ ಎಂದು ವಾದಿಸುತ್ತಾರೆ. ಬೃಹತ್ […]