ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಕ್ಕಳಿಗೆ ಜೈನ ಧರ್ಮದ ವಿವಿಧ ಸ್ಫರ್ಧೆಗಳು

Wednesday, August 12th, 2015
Jain Children

ಧರ್ಮಸ್ಥಳ: ಬಾಹುಬಲಿ ಮಹಿಳಾ ಸಮಿತಿ ವತಿಯಿಂದ ಜೈನ ಧರ್ಮದ ಕುರಿತಾಗಿ ವಿಶೇಷವಾಗಿ ವಿವಿಧ ಸ್ಫರ್ಧೆಗಳನ್ನು ಭಾನುವಾರದಂದು ಧರ್ಮಸ್ಥಳದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಯಿತು. ಈ ಸ್ಫರ್ಧೆಗಳಲ್ಲಿ ಸುಮಾರು 25 ಕ್ಕೂ ಮಿಕ್ಕಿದ ಮಕ್ಕಳು ಪಾಲ್ಗೊಂಡಿದ್ದು ವಿಜೇತರ ವಿವರ ಹೀಗಿದೆ. ಭಕ್ತಾಮರ ಸ್ತೋತ್ರ ಪಠಣದಲ್ಲಿ ಕ್ರಮವಾಗಿ (ಸ್ತುತಿ, ದರ್ಶನ್, ನಿಧಿಶಾ), ಉತ್ತಮ ಸತ್ಯಧರ್ಮದ ಕುರಿತು ನಡೆಸಿದ ಪ್ರಬಂಧ ಸ್ಫರ್ಧೆಯಲ್ಲಿ (ಪೂರ್ಣಿಮಾ, ದರ್ಶನ್, ಸಾನಿಧ್ಯ), ಜಿನಭಕ್ತಿಗೀತೆಯಲ್ಲಿ (ಸ್ವಪ್ನ, ಸಿಂಚನ, ಶಮಿತಾ), ದರ್ಶನ ಸ್ತುತಿ ಸ್ಫರ್ಧೆಯಲ್ಲಿ ಸಾನ್ವಿ ವಿಜೇತರಾಗಿರುತ್ತಾರೆ. ಚಿತ್ರಕಲೆಯ […]

ದೆಹಲಿ ತುಳು ಸಿರಿ ಅಧ್ಯಕ್ಷರಾಗಿ ಡಾ. ಪುರುಷೋತ್ತಮ ಬಿಳಿಮಲೆ ಆಯ್ಕೆ

Wednesday, August 12th, 2015
Purushatama

ನವದೆಹಲಿ: ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ದೆಹಲಿಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಸ್ಥೆ ದೆಹಲಿ ತುಳು ಸಿರಿಯ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿದ್ದು ಕನ್ನಡ ಮತ್ತು ತುಳು ಭಾಷೆಗಳಿಗೆ ಅಪೂರ್ವ ಕೊಡುಗೆಗಳನ್ನು ನೀಡಿರುವ ಡಾ. ಪುರುಷೋತ್ತಮ ಬಿಳಿಮಲೆ ಅವರು ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಡಾ. ಬಿಳಿಮಲೆ ಅವರು ದೆಹಲಿ ಕರ್ನಾಟಕ ಸಂಘದಲ್ಲಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಸಾಂಸ್ಕೃತಿಕ ಸಮುಚ್ಛಯದ ನಿರ್ಮಾಣವಾಯಿತು. ಇದೇ ಆಗಸ್ಟ್ ೯ರಂದು […]

ಶತಾಯುಷಿ, ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿಯ ನಾಯಕ, ಕಯ್ಯಾರ ಕಿಞ್ಞಣ್ಣ ರೈ ಇನ್ನು ನೆನಪು ಮಾತ್ರ

Tuesday, August 11th, 2015
Kayyara Kinhanna Rai

ಕಾಸರಗೋಡು: ಮಹಾಕವಿ, ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು, ಕಾಸರಗೋಡಿನ ಬದಿಯಡ್ಕ ಗ್ರಾಮದ ಮನೆಯಲ್ಲಿ ತನ್ನ 101ನೆಯ ಇಳಿ ವಯಸ್ಸಿನಲ್ಲಿ ಭಾನುವಾರ ನಿಧನರಾದರು. ಅಖಿಲಭಾರತ ಮಟ್ಟದಲ್ಲಿ ಜರುಗಿದ 66 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕಯ್ಯಾರ ಕಿಞ್ಞಣ್ಣ ರೈ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ದುಗ್ಗಪ್ಪ ರೈ-ದೈಯಕ್ಕೆ ದಂಪತಿಗಳ ಮಗನಾಗಿ […]

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ

Friday, August 7th, 2015
vidyarathna English medium school

ಉಳ್ಳಾಲ : ಪರಿಸರ ಆರೋಗ್ಯ ಪೂರ್ಣವಾಗಬೇಕಾದರೆ ಗಿಡಮರಗಳು ಅತ್ಯಗತ್ಯ. ಗಿಡಮರಗಳನ್ನು ಬೆಳೆಸಿ ಪೋಷಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಟ್ರಸ್ಟಿನ ಇಕೋ ಕ್ಲಬ್ ವತಿಯಿಂದ ಶಾಲಾ ವಠಾರದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಸಂಸ್ಥೆಯ ಕಾರ್‍ಯದರ್ಶಿ ಸೌಮ್ಯಾ.ಆರ್.ಶೆಟ್ಟಿ, ಮುಖ್ಯೋಪಧ್ಯಾಯಿನಿ ನಯೀಂ ಹಮೀದ್, ಶಿಕ್ಷಕರಾದ ನವೀನ್, ವೀಣಾ, ಪ್ರಜ್ಞಾ, ಶರಣ್ಯಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಸಸಿಗಳನ್ನು […]

ಬಿ.ಸಿ.ರೋಡಿನ ಮುಖ್ಯವೃತಕ್ಕೆ ನಾಮಕರಣ ಗೊಂದಲ

Thursday, August 6th, 2015
bantwal circle

ಬಂಟ್ವಾಳ: ಡಾ. ಬಾಬಾ ಸಾಹೇಬ್ ಅಂಬೇಡ್ಕ್‌ರ್ ಅವರ ಹೆಸರನ್ನು ತಿರಸ್ಕರಿಸಿ ಬಿ.ಸಿ.ರೋಡಿನ ಮುಖ್ಯವೃತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿಡುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆ ಕೈಗೊಂಡ ನಿರ್ಣಯದ ಬಗ್ಗೆ ದಲಿತ ಸಮುದಾಯದಿಂದ ಅಪಸ್ವರ ಕೇಳಿ ಬಂದ ಬೆನ್ನಲ್ಲೆ ಮುಖ್ಯ ವೃತ್ತಕ್ಕೆ ಮತ್ತೆ ನಾಮಕರಣ ಗೊಂದಲ ಕಾಡಲಾರಂಭಿಸಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶೋಷಿತ ಸಮುದಾಯದ ಪರವಾಗಿ ಹೋರಾಟ ನಡೆಸಿದ ಧೀಮಂತ ನಾಯಕ ಬಂಟ್ವಾಳ ತಾಲೂಕಿನವರೇ ಆದ ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರಿಡ ಬೇಕೆನ್ನುವ ಒತ್ತಾಯಗಳು ಜನ ಸಮುದಾಯದಿಂದ […]

ಎರೆಹುಳ ಗೊಬ್ಬರ, ತಾರಸಿ ಕೈತೋಟ ಕಾರ್ಯಾಗಾರ

Thursday, August 6th, 2015
Fertilizer

ಮಂಗಳೂರು : ಪಾನೀರು ದಯಾಮಾತೆ ಇಗರ್ಜಿಯಲ್ಲಿ ಸ್ತ್ರೀ ಸಂಘಟನೆ ಪಾನೀರು ಘಟಕದ ಆಶ್ರಯದಲ್ಲಿ ಭಾನುವಾರ ಇಗರ್ಜಿ ಸಭಾಂಗಣದಲ್ಲಿ ಎರೆಹುಳ ಗೊಬ್ಬರ ಮತ್ತು ತಾರಸಿ ಕೈತೋಟಗಳ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾನೀರು ಇಗರ್ಜಿಯ ಧರ್ಮಗುರು ರೇ.ಪಾ|| ಡೆನ್ನಿಸ್ ಸುವಾರಿಸ್ ಕೃಷಿಗಳ ಬಗ್ಗೆ ಕಾರ್ಯಾಗಾರ ನಡೆಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸ್ತ್ರೀ ಸಂಘಟನೆಗೆ ಅಭಿನಂದಿಸಿದರು. ಇಂದು ತರಕಾರಿ, ಹಣ್ಣುಗಳು ಕಾಣಲು ಮಾತ್ರ ಸುಂದರವಾಗಿದ್ದರೂ ವಿಷಯುಕ್ತವಾಗಿರುತ್ತವೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಮಾಹಿತಿ ಕಾರ್ಯಾಗಾರ ಉಪಯುಕ್ತ. ಸಂಪನ್ಮೂಲ ವ್ಯಕ್ತಿ ಡಾ|| […]

ಪಿಲಿಕುಳ ಕೆರೆಗೆ 20,000 ಮೀನುಗಳ ಬಿಡುಗಡೆ

Tuesday, August 4th, 2015
pilikula fish

ಮಂಗಳೂರು : ಪಿಲಿಕುಳ ದೋಣಿ ವಿಹಾರದ ಸುಮಾರು ೭ ಎಕೆರೆ ವಿಸ್ತೀರ್ಣದ ವಿಶಾಲವಾದ ಕೆರೆಯಲ್ಲಿ ಸುಮಾರು 20,000 ಮೀನುಮರಿಗಳನ್ನು ಯುವ ಸಬಲೀಕರಣ, ಕ್ರೀಡೆ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಕೆ ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ಭಾನುವಾರ ನೀರಿಗೆ ಬಿಡಲಾಯಿತು. ಈ ಸಂದರ್ಭದಲ್ಲಿ ದ.ಕ ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ, ಜಿಲ್ಲಾ ಪಂಚಾಯತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಐ. ಶ್ರೀವಿದ್ಯಾ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಸ್ ಎ ಪ್ರಭಾಕರ ಶರ್ಮ, ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ […]

‘ಪವಿತ್ರ’ ತುಳು ಚಿತ್ರಕ್ಕೆ ನಾಗುರಿ ಗರೋಡಿ(ಕೋಟಿ-ಚೆನ್ನಯ) ದೇವಸ್ಥಾನದಲ್ಲಿ ಮುಹೂರ್ತ

Monday, August 3rd, 2015
Pavithra Tulu Film

ಮಂಗಳೂರು : ಶ್ರೀ ಇಂದಿರಾ ಮೂವೀಸ್ ಲಾಂಛನದ ಎರಡನೇ ಚಿತ್ರ ‘ಪವಿತ್ರ’ (ತುಳು ಸಿನಿಮಾ)ದ ಮುಹೂರ್ತ ಇಂದು ಬೆಳಿಗ್ಗೆ ನಾಗುರಿ (ಕೋಟಿ-ಚೆನ್ನಯ) ಗರೋಡಿಯಲ್ಲಿ ನಡೆಯಿತು. ಜಯಕಿರಣ ಮೂವೀಸ್‌ನ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಕ್ಯಾಮರಾ ಆನ್ ಮಾಡುವ ಮೂಲಕ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಶ್ರೀ ಮುತ್ತು ಫಿಲಂಸ್ ನ ಪ್ರವೀಣ್ ಕೊಂಚಾಡಿ, ಸಾಹಿತಿ ಮಧು ಸುರತ್ಕಲ್, ತುಳು ರಂಗಭೂಮಿಯ ಕಲಾವಿದರಾದ […]

ರೈತರಿಗೆ ಆತ್ಮಸ್ಥೈರ್ಯ ತುಂಬಲು ಸಾಂತ್ವನ ಯಾತ್ರೆ ’ಬದುಕು ಬೇಸಾಯ’

Sunday, August 2nd, 2015
Raita

ಮಂಗಳೂರು : ರಾಜ್ಯದ ವಿವಿದೆಡೆ ರೈತರ ಅತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ರೈತರಲ್ಲಿ ಬದುಕುವ ಧೈರ್ಯ ತುಂಬಲು ಆಗಸ್ಟ್ 3ರಿಂದ ರಾಜ್ಯದಲ್ಲಿ ’ಬದುಕು ಬೇಸಾಯ’ ಎಂಬ ಹೆಸರನಲ್ಲಿ ರೈತರ ಸಾಂತ್ವನ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ. ರೈತರ ಮನ: ಪರಿವರ್ತನೆ ಮಾಡಲು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶವಾಗಿದೆ. ಬದುಕಿನಲ್ಲಿ ಬರುವ ಕಷ್ಟಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಸಮಸ್ಯೆಯನ್ನು ಮೆಟ್ಟಿ ನಿಂತರೆ ಬದುಕು ಹಸನಾಗುತ್ತದೆ ಎನ್ನುವ ಜಾಗೃತಿಯನ್ನು ವಿವರಿಸುವುದು ಯಾತ್ರೆಯ ಉದ್ದೇಶ. ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯು […]

ನಮ್ಮ ಅಂತರ್ಯಾಮಿ ಪರಮಾತ್ಮ ಮೆಚ್ಚಿಕೊಳ್ಳುವಂತೆ ಬಾಳಬೇಕು : ಕೊಂಡೆವೂರು ಶ್ರೀ

Sunday, August 2nd, 2015
Kondevooru

ಉಪ್ಪಳಃ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶುಕ್ರವಾರ ಗುರುಪೂರ್ಣಿಮೆಯ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಗಣಹೋಮ, ಪಂಚಾಮೃತ ಅಭಿಷೇಕ, ವ್ಯಾಸಪೂಜೆಯ ವೈದಿಕ ಕಾರ್ಯಕ್ರಮಗಳು ನಡೆದವು. ಸಂಜೆ ಭಜನೆ ನಡೆಯಿತು. ಪರಿಸರ ಉಳಿವಿಗೆ ಈ ಶುಭದಿನ ನವಗ್ರಹ ವನ, ರಾಶಿವನ, ನಕ್ಷತ್ರ ವನ ಗಳನ್ನು ನಿರ್ಮಿಸಲು ನವಗ್ರಹದ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು. ನಿತ್ಯ ಅನ್ನದಾನ ವ್ಯವಸ್ಥೆಗಾಗಿ ಉಗಿ ಚಾಲಿತ ಅಡುಗೆ ವ್ಯವಸ್ಥೆ (sಣeಚಿm ಛಿooಞiಟಿg sಥಿsಣem) ಯನ್ನು ಉದ್ಘಾಟಿಸಲಾಯಿತು. ಇದೇ […]