ಕೊಲ್ಲೂರು ಮೂಕಾಂಬಿಕೆಗೆ ರೇಶ್ಮೆ ಸೀರೆ ಸಮರ್ಪಿಸಿದ ರಾಧಿಕಾ ಕುಮಾರ ಸ್ವಾಮಿ

Sunday, April 27th, 2014
Radhika K

ಕೊಲ್ಲೂರು : ಖ್ಯಾತ ನಟಿ, ನಿರ್ಮಾಪಕಿ ರಾಧಿಕಾ ಕುಮಾರ ಸ್ವಾಮಿ ಎ. 25ರಂದು ಬೆಳಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ರೇಶ್ಮೆ ಸೀರೆಯನ್ನು ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಸಮರ್ಪಿಸಿದರು. ಬೆಳಗ್ಗಿನ ಜಾವ ಕುಟುಂಬದ ಸದಸ್ಯರೊಡನೆ ಆಗಮಿಸಿದ ರಾಧಿಧಿಕಾ ಅವರನ್ನು ಜೆ.ಡಿ.ಎಸ್‌. ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಕೆ.ಎನ್‌. ಶ್ರೀಕಾಂತ ಅಡಿಗ ಕೊಲ್ಲೂರಿನಲ್ಲಿ ಸ್ವಾಗತಿಸಿದರು.

ಬ್ರಹ್ಮರಕೂಟ್ಲಿನ ಬಳಿ ಟೋಲ್ ಗೇಟನ್ನು ತಕ್ಷಣ ನಿಲ್ಲಿಸಬೇಕೆಂದು ಪ್ರತಿಭಟನೆ

Friday, April 25th, 2014
Toll Gate

ಬಂಟ್ವಾಳ: ಬಂಟ್ವಾಳ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲಿನ ಬಳಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಶುಕ್ರವಾರ ಟೋಲ್ ಗೇಟ್ ಮುಂಬಾಗದಲ್ಲಿ ಹೆದ್ದಾರಿ ತಡೆ ಹಾಗೂ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಹೆದ್ದಾರಿ ತಡೆ ನಡೆಸಿದರು ಬಳಿಕ ಪ್ರತಿಭಟನಾಕಾರರು ಟೋಲ್ ಸಂಗ್ರಹ ಕೇಂದ್ರದೆಡೆಗೆ ನುಗ್ಗಿ ಟೋಲ್ ಸಂಗ್ರಹವನ್ನು ತಡೆದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತು ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ […]

ನೀತಿ ಸಂಹಿತೆಯ ನೆಪದಲ್ಲಿ ಜಿಲ್ಲೆಯ ಗಂಭೀರ ಸಮಸ್ಯೆಗಳಿಗೆ ಕುತ್ತು

Thursday, April 24th, 2014
Pratapa simha nayaka

ಮಂಗಳೂರು : ನೀತಿ ಸಂಹಿತೆಯ ನೆಪದಲ್ಲಿ ಜಿಲ್ಲೆಯ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 42 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು ಸರಕಾರ ತಕ್ಷಣ ಸಮಸ್ಯೆಗೆ ಸ್ಪಂದಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಮತ್ತು ಸರಕಾರ ನೀರಿನ ಸಮಸ್ಯೆಗೆ ಯಾವುದೇ ಪರಿಹಾರ ಯೋಜನೆಗಳನ್ನು ಹಾಕಿಕೊಂಡಿಲ್ಲ. ಉಳ್ಳಾಲ, ಕೊಣಾಜೆ, ಪುದು ಮುಂತಾದೆಡೆ ನೀರಿನ ಗಂಭೀರ ಸಮಸ್ಯೆಗಳಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 26 […]

ಕಬೀರ್ ತಾಯಿಯ ಹೆಸರಿನಲ್ಲಿ ಸುರತ್ಕ್ ಲ್ ನಲ್ಲಿ ನಿಧಿ ಸ್ಥಾಪನೆ : ಮೊಯ್ದಿನ್ ಬಾವ

Thursday, April 24th, 2014
Moideen Bawa

ಮಂಗಳೂರು : ಶೃಂಗೇರಿ ಚೆಕ್ ಪೋಸ್ಟ್ ಬಳಿ ಎಎನ್ ಎಫ್ ಗುಂಡೇಟಿಗೆ ಬಲಿಯಾದ ಕಬೀರ್ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ಕಬೀರ್ ಕುಟುಂಬ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಆತನ ತಾಯಿಯ ಹೆಸರಿನಲ್ಲಿ ಬ್ಯಾಂಕ್ ಖಾತೆಯ ಮೂಲಕ ಸುರತ್ಕ್ ಲ್ ನಲ್ಲಿ ನಿಧಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಮೊಯ್ದಿನ್ ಬಾವ ಹೇಳಿದ್ದಾರೆ. ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಪ್ರಕರಣಕ್ಕೆ ಕೋಮು […]

ಉಪ್ಪಿನಂಗಡಿ : ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನ ಬಂಧನ

Wednesday, April 23rd, 2014
Annaih Gowda

ಉಪ್ಪಿನಂಗಡಿ : ಶನಿವಾರ ರಾತ್ರಿ ಕಳೆಂಜ ಗ್ರಾಮದ ಶಾಲೆತಡ್ಕ ನಿವಾಸಿ ಅಣ್ಣಯ್ಯ ಗೌಡ (48) ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಜಿಲ್ಲಾ ಅಪರಾಧಿ ಪತ್ತೆ ದಳ ಪೊಲೀಸರು, ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿರುವ ರುದ್ರೇಶ್ (29) ಹಾಗು ಕೊಲೆಗೀಡಾದ ಅಣ್ಣಯ್ಯ ಗೌಡರ ಪತ್ನಿ ಅಮಿತಾ (38) ಬಂಧಿತ ಆರೋಪಿಗಳು. ಅಣ್ಣಯ್ಯ ಗೌಡರ ಮನೆಗೆ ಶನಿವಾರ ರಾತ್ರಿ ಬಂದಿದ್ದ ರುದ್ರೇಶ್ ತನ್ನ ಕಾಮದಾಟಕ್ಕೆ ತಡೆಯಾಗಿದ್ದ ಗೌಡರನ್ನು ಕಬ್ಬಿಣದ […]

ರಾಜ್ಯದ 13 ಕಡೆ 11,500 ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ

Wednesday, April 23rd, 2014
Geroge

ಬೆಂಗಳೂರು : ಶಿವಾಜಿನಗರದಲ್ಲಿನ ಪೊಲೀಸ್ ವಸತಿ ಗೃಹಗಳಿಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಬುಧವಾರ ಭೇಟಿ ನೀಡಿದರು. ರಾಜ್ಯದ 13 ಕಡೆ 11,500 ಪೊಲೀಸ್ ವಸತಿ ಗೃಹಗಳನ್ನು 1800 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅದರಲ್ಲಿ ಬೆಂಗಳೂರಿನಲ್ಲಿ 2500 ವಸತಿ ಗೃಹಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ಈ ಸಂಧರ್ಭ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಶಿವಾಜಿನಗರದ ವಸತಿ ಗೃಹದಲ್ಲಿರುವವರನ್ನು ನೂತನ ವಸತಿ ಗೃಹಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ. ಸ್ಥಳಾಂತರ ಪೂರ್ಣಗೊಂಡ ಬಳಿಕ ಶಿವಾಜಿನಗರ ವಸತಿ ಗೃಹವಿರುವ ಸ್ಥಳದಲ್ಲಿ ನೂತನ […]

ಸಬ್‌ ಇನ್‌ಸ್ಪೆಕ್ಟರ್‌ ಗೆ ಮೈದಾನ ಸುತ್ತು­ಹಾಕವ ಶಿಕ್ಷೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Wednesday, April 23rd, 2014
SI T R Rangappa

ಕೋಲಾರ: ಮಾಲೂರು ತಾಲ್ಲೂಕಿನ ಮಾಸ್ತಿ ಠಾಣೆಯ ಟಿ.ಆರ್‌.ರಂಗಪ್ಪ ಅವರನ್ನು ಪ್ರಕರಣವೊಂದರ ಸಂಬಂಧ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಕವಾಯತು ಮೈದಾನವನ್ನು ಮೂರು ದಿನ ಸುತ್ತು ಹಾಕುವ ಶಿಕ್ಷೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ ಹಿಲೋರಿ ವಿಧಿಸಿದ ಘಟನೆ ಬೆಳಕಿಗೆ ಬಂದಿದೆ. ಮಾಸ್ತಿ ಠಾಣೆಯ ಟಿ.ಆರ್‌.ರಂಗಪ್ಪ ಲೋಕಸಭೆ ಚುನಾವಣೆಯ ದಿನ­ವಾದ ಗುರುವಾರ ರಾತ್ರಿ ಅವರು ಮಾಲೂರು ತಾಲ್ಲೂಕಿನ ಹುಳದೇನ­ಹಳ್ಳಿಯಲ್ಲಿ ಜಮೀನು ವಿವಾದ ಸಂಬಂಧ ನಡೆದ ಹಲ್ಲೆ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯ ಮಾಡಿ­ದ್ದರು. ಪ್ರಕರಣದ ಮಾಹಿತಿ­ಯನ್ನು ತಮಗೆ ನೇರವಾಗಿ ನೀಡಲಿಲ್ಲ […]

ಕೋಮು ಸೌಹಾರ್ದ ವೇದಿಕೆಯ ಸುರೇಶ್ ಭಟ್ ಬಾಕ್ರಬೈಲ್ ಮುಖಕ್ಕೆ ಸೆಗಣಿ ಹಚ್ಚಿದ ಯುವಕ

Tuesday, April 22nd, 2014
Suresh Bhat Bakrabail

ಮಂಗಳೂರು: ನಗರದ ವುಡ್ ಲ್ಯಾಂಡ್ಸ್ ಹೊಟೇಲಿನಲ್ಲಿ ಇಬ್ಬರು ಯುವಕರು ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಅವರ ಮುಖಕ್ಕೆ ಸೆಗಣಿ ಹಚ್ಚಿದ ಘಟನೆ ಮಂಗಳವಾರ ನಡೆದಿದೆ. ಶೃಂಗೇರಿಯಲ್ಲಿ ಎಎನ್ ಎಫ್ ನ ಗುಂಡಿಗೆ ಬಲಿಯಾದ ಜೋಕಟ್ಟೆಯ ಕಬೀರ್ ಪರವಾಗಿ ಕೋಮು ಸೌಹಾರ್ದ ವೇದಿಕೆಯು ಪತ್ರಿಕಾಗೋಷ್ಠಿ ನಡೆಸಿತ್ತು. ಪತ್ರಿಕಾಗೋಷ್ಠಿ ಮುಗಿಸಿ ಹೊರಬರುತ್ತಿದ್ದ ಸುರೇಶ್ ಭಟ್ ಬಾಕ್ರಬೈಲು ಅವರ ಮೇಲೆ ವ್ಯಕ್ತಿಯೊಬ್ಬ ಸೆಗಣಿ ಹಚ್ಚಿದ್ದಾನೆ. ಈತನನ್ನು ಹರೀಶ್ ಎಂದು ಗುರುತಿಸಲಾಗಿದ್ದು ಅಲ್ಲೇ ಇದ್ದವರು ಆತನನ್ನು ವಶಪಡಿಸಿಕೊಂಡು ಪೊಲೀಸರಿಗೆ […]

ಎಸ್‌. ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ವಿಧಿ ವಶ

Tuesday, April 22nd, 2014
shakunthala Bangarappa

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರು ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಕುಂತಲಾ ಬಂಗಾರಪ್ಪ ಅವರು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಮಧ್ಯಾಹ್ನ 3.40ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪುತ್ರರಾದ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ, ಪುತ್ರಿ ಗೀತಾ ಶಿವರಾಜ್ ಕುಮಾರ್ ಮುಂತಾದ ಕುಟುಂಬ ಸದಸ್ಯರನ್ನು ಶಕುಂತಲಾ ಬಂಗಾರಪ್ಪ ಅಗಲಿದ್ದಾರೆ. ಶಿವಮೊಗ್ಗ ಲೋಕಸಭೆ ಚುನಾವಣೆಗೆ ಜೆಡಿಎಸ್ […]

ಪಕ್ಷೇತರ ಅಭ್ಯರ್ಥಿ ಸುದತ್ತ ಜೈನ್‌ ಅವರ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಳಿನ್

Tuesday, April 22nd, 2014
Nalin Sudatta

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುದತ್ತ ಜೈನ್‌ ಅವರ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಪ್ರಕರಣ ದಾಖಲಿಸಿದ್ದಾರೆ.ತನ್ನ ಖಾಸಗಿ ಮೊಬೈಲ್ ನಂಬರ್ ನಿಂದ ಮಾಡಿದ ಕರೆಯ ಮಾಹಿತಿ ಬಹಿರಂಗಗೊಂಡ ಬಗ್ಗೆ ಖಾಸಗಿ ದೂರವಾಣಿ ಕರೆಗಳ ವಿವರಗಳನ್ನು ಸೋರಿಕೆ ಮಾಡಿರುವ ಭಾರ್ತಿಏರ್ಟೆಲ್ ಸಂಸ್ಥೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುದತ್ತ ಜೈನ್ ಹಾಗೂ ಕ್ರಿಮಿನಲ್ ವಕೀಲರೊಬ್ಬರು ಚುನಾವಣಾ ಮುನ್ನಾ ದಿನ ಅಪಪ್ರಚಾರ ಮಾಡಲು ಬಳಕೆ ಮಾಡಿಕೊಂಡಿದ್ದಾರೆ ಎಂದು […]