ಐದು ವರ್ಷದ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದ ತಾಯಿಯ ಬಂಧನ

Monday, April 21st, 2014
belthangady

ಬೆಳ್ತಂಗಡಿ : ಗುರುವಾಯನಕೆರೆ ಸಮೀಪದ ಪಣೆಜಾಲು ಎಂಬಲ್ಲಿ ತನ್ನ ಐದು ವರ್ಷದ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದ ತಾಯಿಯನ್ನು ಬೆಳ್ತಂಗಡಿ ಪೊಲೀಸರು ರವಿವಾರ ಬಂಧಿಸಿದ್ದು ತಾಯಿಗೆ 1 ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಂದೆ ನಾಪತ್ತೆಯಾಗಿದ್ದಾನೆ. ಕುವೆಟ್ಟು ಗ್ರಾಮದ ಪಣೆಜಾಲುವಿನ ಮಹಮ್ಮದ್‌ ಶಾಫಿ ಹಾಗೂ ಪೌಝಿಯಾ ಆರೋಪಿಗಳಾಗಿದ್ದು ಪೌಝಿಯಾಳನ್ನು ಬಂಧಿಸಲಾಗಿದೆ. ಇವರು ತಮ್ಮ ಐದು ವರ್ಷದ ಮಗು ಫೈಮಾಗೆ ಚಿತ್ರಹಿಂಸೆ ನೀಡುತ್ತಿದ್ದರು. ದೊಣ್ಣೆಯಿಂದ ಕಾಲಿನ ಗಂಟು, ಕೈ, ಮುಖ, ಮೂಗು, ಕತ್ತುವಿಗೆ ಗಾಯವಾಗುವಂತೆ ಹೊಡೆದಿದ್ದರು. ಪಣೆಜಾಲಿನ ರುಬಿಯಾ […]

ಮಂಗಳೂರಿನ ಚರ್ಚ್‌ಗಳಲ್ಲಿ ಈಸ್ಟರ್‌ ಹಬ್ಬದ ವಿಶೇಷ ಪ್ರಾರ್ಥನೆ

Monday, April 21st, 2014
ಮಂಗಳೂರಿನ  ಚರ್ಚ್‌ಗಳಲ್ಲಿ ಈಸ್ಟರ್‌ ಹಬ್ಬದ ವಿಶೇಷ ಪ್ರಾರ್ಥನೆ

ಮಂಗಳೂರು : ಈಸ್ಟರ್‌ ಹಬ್ಬದ ಅಂಗವಾಗಿ ಕ್ರೈಸ್ತರು ಶನಿವಾರ ರಾತ್ರಿ ಮತ್ತು ರವಿವಾರ ಮಂಗಳೂರಿನ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌ನ್ನು ಸಂಭ್ರಮದ ಬಲಿಪೂಜೆಯೊಂದಿಗೆ ಶ್ರದ್ಧೆ ಭಕ್ತಿಯಿಂದ ಆಚರಿಸಿದರು. ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಶನಿವಾರ ರಾತ್ರಿ ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ ಈಸ್ಟರ್‌ ಬಲಿ ಪೂಜೆ ಅರ್ಪಿಸಿದರು. ಮಂಗಳೂರಿನ ಬಲ್ಮಠದ ಚರ್ಚ್‌ ಆಫ್‌ ಸೌತ್‌ ಇಂಡಿಯಾದ ಬಿಷಪ್‌ ರೆ| ಜೆ.ಎಸ್‌. ಸದಾನಂದ […]

ಪೊಲೀಸ್‌ ಉಪಸ್ಥಿತಿಯಲ್ಲಿ ಟೋಲ್‌ ಸಂಗ್ರಹ ಆರಂಭ

Monday, April 21st, 2014
Toll Gate

ಬಂಟ್ವಾಳ : ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಟೋಲ್‌ ಗೇಟ್ ನಲ್ಲಿ ನಡೆದ ಹಲ್ಲೆಯ ಬಳಿಕ ನಿಲುಗಡೆ ಆಗಿದ್ದ ಟೋಲ್‌ ಸಂಗ್ರಹವನ್ನು ಎ. 20ರಂದು ಬೆಳಗ್ಗೆ 10 ಗಂಟೆಯಿಂದ ಪೊಲೀಸ್‌ ರಕ್ಷಣೆಯಲ್ಲಿ ಆರಂಭಿಸಲಾಗಿದೆ. ಶುಕ್ರವಾರ ರಾತ್ರಿ ಟೋಲ್‌ ಸಂಗ್ರಹ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಟೋಲ್‌ ಸಂಗ್ರಹ ನಿಲುಗಡೆಗೊಂಡಿತ್ತು. ಮುಂಜಾನೆ ಊರಿನ ಜನತೆ ಘಟನೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಪೊಲೀಸ್‌ ರಕ್ಷಣೆ ಒದಗಿಸಿಯಾದರೂ ಟೋಲ್‌ ಸಂಗ್ರಹ ನಡೆಯಬೇಕು ಎಂಬ […]

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 76.67 ಮತದಾನ

Friday, April 18th, 2014
lok sabha Dakshin Kannada

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆ ಸಂಪೂರ್ಣ ಶಾಂತಿಯುತವಾಗಿದ್ದು ಶೇ. 76.67 ಮತದಾನವಾಗಿದೆ. ಒಟ್ಟು 15,64,114 ಮತದಾರನಲ್ಲಿ 11,96,531 ಮಂದಿ ಮತದಾನ ಮಾಡಿದ್ದಾರೆ. ಒಂದೆರಡು ಕಡೆ ಮತಯಂತ್ರಗಳ ತಾಂತ್ರಿಕ ದೋಷದಿಂದ ಸ್ವಲ್ಪ ವಿಳಂಬ‌ ವಾದ ಬಗ್ಗೆ ವರದಿಯಾಗಿದೆ. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಲೇಡಿಹಿಲ್ ನ ಮತಗಟ್ಟೆಯೊಂದರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಬೆಳಗ್ಗೆಯೇ ಬಂಟ್ವಾಳದಲ್ಲಿನ ಮತದಾನ ಕೇಂದ್ರವೊಂದರಲ್ಲಿ ಸರತಿ ಸಾಲಿನಲ್ಲಿ […]

ಸೀಮಂತ ಕಾರ್ಯಕ್ರಮದಲ್ಲೂ ಮತದಾರರ ವಿಭಿನ್ನ ಜಾಗೃತಿ..!

Tuesday, April 15th, 2014
Seemantha

ಮಂಗಳೂರು : ಅದು ಮೂಲ್ಕಿ ಕೆರೆಕಾಡಿನ “ನಮ್ಮನೆ” ಆ ಮನೆಯಲ್ಲಿ ನಮ್ಮತನದ ಏನಾದರು ವಿಶೇಷತೆ ಸದಾ ಇರುತ್ತದೆ, ಅಂದು ಸಹ ನಮ್ಮನೆಗೆ ಎಲ್ಲರೂ ಬಂದಿದ್ದು ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಏಳು ತಿಂಗಳ ಗರ್ಭಿಣಿಗೆ ಅಶೀರ್ವಾದ ನೀಡಿ ಶುಭ ಹಾರೈಕೆ ಮಾಡಲು ಆದರೆ ಅಲ್ಲಿ ಅವರಿಗೆ ಆಶ್ವರ್ಯ ವಾಗಿತ್ತಲ್ಲದೇ ಒಂದು ವಿಶಿಷ್ಠ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂತೃಪ್ತಿಯು ಒಂದೆಡೆ ಸಹ ಮನೆ ಮಾಡಿತ್ತು. ಇದು ಮೂಲ್ಕಿ ಬಳಿಯ ಕೆರೆಕಾಡುವಿನ “ನಮ್ಮನೆ” ನಿವಾಸದಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ […]

ಕಲ್ಲು ಕಂಡಲ್ಲಿ ಹೂ ಹಾಕುವುದು, ಗುಂಡ ಕಂಡಲ್ಲಿ ಅಡ್ಡ ಬೀಳುವುದರ ಹಿಂದೆ ಸತ್ಯವಿದೆ-ದಯಾನಂದ ಕತ್ತಲ್ಸಾರ್

Monday, April 14th, 2014
Sri Devi Temple Thoudugoli

ಮಂಗಳೂರು : ಕಲ್ಲು ಕಂಡಲ್ಲಿ ಹೂ ಹಾಕುವುದು, ಗುಂಡ ಕಂಡಲ್ಲಿ ಅಡ್ಡ ಬೀಳುವುದು ಯಾಕೆಂಬ ಹಲವರ ಪ್ರಶ್ನೆಗಳಿಗೆ ಅಣು ರೇಣು ತೃಣ ಕಾಷ್ಠ ಜಂಗಮ ಸ್ಥಾವರದಲ್ಲಿ ನಾವು ದೇವರನ್ನು ಕಾಣುತ್ತೇವೆ ಎಂಬ ಸತ್ಯದಡಿಯಲ್ಲಿ ನಾವು ಬದುಕುತ್ತೇವೆ ಎಂಬ ಅರಿವಾಗಬೇಕು ಎಂದು ಜಿಲ್ಲಾ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಯಾನಂದ ಕತ್ತಲ್ಸಾರ್ ಅಭಿಪ್ರಾಯಪಟ್ಟರು. ವರ್ಕಾಡಿ ತೌಡುಗೋಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ವಿಷು ವಿಶೇಷ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. […]

ಮಹಾರಾಷ್ಟ್ರದ ಅಯೋಧ್ಯನಗರಿ ಪ್ರಸಿದ್ಧಿ ವಡಾಲದ ಶ್ರೀರಾಮ ಮಂದಿರದಲ್ಲಿ ಸಂಭಮೋಲ್ಲಾಸದ ಶ್ರೀ ರಾಮ ನವಮಿ-ರಥೋತ್ಸವ ಸಂಭ್ರಮ

Thursday, April 10th, 2014
Rama Navami

ಮುಂಬಯಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಮುಂಬಯಿ ಇದರ ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀರಾಮ ಮಂದಿರದಲ್ಲಿ ಇಂದಿಲ್ಲಿ ಮಂಗಳವಾರ ಮರ್ಯಾದ ಪುರುಷೋತ್ತಮ ಭಗವಾನ್ ಶ್ರೀರಾಮ ನಮಿತ ರಾಮ ನವಮಿ ಮಹೋತ್ಸವವನ್ನು ವಿಜೃಂಭನೆಯಿಂದ ಸಂಭ್ರಮಿಸಲಾಯಿತು. ವಡಾಲದ ಕತ್ರಾಕ್ ರಸ್ತೆಯಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ದ್ವಾರಕನಾಥ್ ಭವನದಲ್ಲಿ ಕಳೆದ ನಿರಂತರ ಹತ್ತು ದಿನಗಳಿಂದ ದೇವತಾ ಪ್ರಾರ್ಥನೆ, ಅಖಂಡ ರಾಮ ನಾಮ ಸಂಕೀರ್ತನೆ, ಅಭಿಷೇಕ, ಅಷ್ಟವದಾನ ಸೇವೆಗಳೊಂದಿಗೆ ರಾಮನವಮಿ ಸಂಭ್ರಮಕ್ಕೆ ಪೂರ್ಣ ಪ್ರಮಾಣದಲ್ಲಿ […]

ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ವೆಬ್ ಸೈಟ್ ಉದ್ಫಾಟನೆ

Wednesday, April 9th, 2014
Congress Web

ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ಸೈಟ್ ಉದ್ಘಾಟನಾ ಸಮಾರಂಭವು ಪಕ್ಷದ ಚುನಾವಣಾ ಪ್ರಚಾರ ಕಛೇರಿಯಲ್ಲಿ ಮಂಗಳವಾರ ಸಂಜೆ ನಡೆಯಿತು. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ. ರಮಾನಾಥ ರೈ ವೆಬ್ ಸೈಟ್ ಉದ್ಫಾಟನೆ ಮಾಡಿದರು. ಸಾಮಾಜಿಕ ತಾಣಗಳಲ್ಲಿ ಸಾರ್ವಜನಿಕರ ಹಾದಿ ತಪ್ಪಿಸುವ ಷಡ್ಯಂತ್ರಗಳು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಜನರಿಗೆ ವಸ್ತುಸ್ಥಿತಿಯ ಅರಿವು ಮೂಡಿಸಬೇಕಾದ ಅಗತ್ಯವಿದೆ. ಜನಸಾಮಾನ್ಯರಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾವಂತ ಯುವ ಸಮೂಹದಲ್ಲಿ ಮತದಾನದ ಜನಜಾಗೃತಿ ಮೂಡಿಸುವುದು. ಪಕ್ಷದ ಧ್ಯೇಯ, ಧೋರಣೆ, […]

ಯಾರು ಹಿತವರು ನಮಗೆ ಈ ಮೂವರೊಳಗೆ

Tuesday, April 8th, 2014
3 candidate

ಮಂಗಳೂರು : 16 ಲಕ್ಷ ಮತದಾರರಿರುವ ದಕ್ಷಿಣ ಕನ್ನಡ ಜಿಲ್ಲೆ ಮುಖ್ಯ ಪಕ್ಷಗಳಿಂದ ಬದಲಾವಣೆಯ ಆಶೆಯನ್ನು ಇಡಬಾರದು. ಏಕೆಂದರೆ, ಕಾಂಗ್ರೆಸ್ನ ಅಭ್ಯರ್ಥಿ ಸನ್ಮಾನ್ಯ ಜನಾರ್ಧನ ಪೂಜಾರಿಯವರು 8 ಸಲ, ಈ ಕ್ಷೇತ್ರದಿಂದ ಅವರ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿ, ಚುನಾವಣೆಯಲ್ಲಿ 4 ಸಲ ಗೆದ್ದಿದ್ದಾರೆ, 4 ಸಲ ಸೋತಿದ್ದಾರೆ. ಇನ್ನೊಂದು 4 ಸಲ ಅವರನ್ನು ಅವರ ಪಕ್ಷ ರಾಜ್ಯಸಭಾ ಸದಸ್ಯರಾಗಿ ಮಾಡಿದ್ದಾರೆ. ಹಾಗಾದರೆ ಈ ಮಹಾನುಭಾವರು 8 ಸಲ ಪಾರ್ಲಿಮೆಂಟಿನಲ್ಲಿ ದಕ್ಷಿಣಕನ್ನಡದ ಪ್ರತಿನಿಧಿಯಾಗಿದ್ದರು. ಇವರು 80ರ ಅಂಚಿನಲ್ಲಿದ್ದಾರೆ. ನನ್ನ […]

ಪತ್ರಕರ್ತರ ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ

Monday, April 7th, 2014
Indiana

ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಇಂಡಿಯಾನ ಹಾಸ್ಟಿಟಲ್ ಸಹಯೋಗದಲ್ಲಿ ಪತ್ರಕರ್ತರಿಗೆ ಆಯೋಜಿಸಿರುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಇಂಡಿಯಾನ ಹಾಸ್ಪಿಟಲ್ನ ಅಧ್ಯಕ್ಷ ಡಾ.ಆಲಿ ಕುಂಬ್ಳೆ ಸೋಮವಾರ ಉದ್ಘಾಟಿಸಿದರು. ಒತ್ತಡದ ಮಧ್ಯೆ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯ ಸುರಕ್ಷತೆ ಬಗ್ಗೆ ಗಮನ ಹರಿಸುವುದು ಅವಶ್ಯ. ಕಾಯಿಲೆ ಗುಣ ಪಡಿಸುವುದಕ್ಕಿಂತ ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು. ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಇಂಡಿಯಾನ ಆಸ್ಪತ್ರೆ ಪತ್ರಕರ್ತರಿಗೆ ಈ […]