ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

Wednesday, March 12th, 2014
PU Bangalore

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಬುಧವಾರದಿಂದ (ಮಾ.12) ರಾಜ್ಯಾದ್ಯಂತ ಆರಂಭವಾಗಲಿದೆ. ಮಾ. 27ರವರೆಗೆ ಪರೀಕ್ಷೆ ನಡೆಯಲಿದ್ದು, ಸಂಗೀತ ಮತ್ತು ಪ್ರಂಚ್‌ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಿಗೆ ಪ್ರತೀ ದಿನ ಬೆಳಗ್ಗೆ 9ರಿಂದ 12.15ರವರೆಗೆ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು 6,15,780 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಮೊದಲನೇ ದಿನವಾದ ಬುಧವಾರ ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯಲಿವೆ. ಯಾವುದೇ ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಬಹಿರಂಗದಂತಹ ಅಚಾತುರ್ಯ ನಡೆಯದಂತೆ ಎಚ್ಚರ ವಹಿಸಲಾಗಿದ್ದು, ಈ ಸಂಬಂಧ […]

ಸಿಎಂ ಸಿದ್ದರಾಮಯ್ಯಗೆ ಬಿತ್ತು ಟಾರ್ಗೆಟ್ ಇಪ್ಪತ್ತು

Wednesday, March 12th, 2014
Siddaramaiah

ಬೆಂಗಳೂರು: ಲೋಕಸಭಾ ಚುನಾವಣೆ ಇನ್ನೂ ಕಾವೇರದ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಪಿಂಗ್ ಮೂಡಿನಲ್ಲಿರುವಾಗ ಕಾಂಗ್ರೆಸ್ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಹಾಲಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ 20 ಸ್ಥಾನಗಳನ್ನು ಪಕ್ಷಕ್ಕಾಗಿ ಗೆಲ್ಲಿಸಿಕೊಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದುಗೆ ಸ್ಪಷ್ಟ ಟಾರ್ಗೆಟ್ ನೀಡಿದೆ ಎಂದು ತಿಳಿದುಬಂದಿದೆ. ಸಿಎಂ ಸಿದ್ದರಾಮಯ್ಯಗೆ ಬಿತ್ತು ಟಾರ್ಗೆಟ್ ಇಪ್ಪತ್ತು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಾ […]

ನಕ್ಸಲ್ ರಕ್ತದೋಕುಳಿ 20 ಯೋಧರ ಹತ್ಯೆ

Wednesday, March 12th, 2014
Naxal

ನವದೆಹಲಿ: ಛತ್ತೀಸ್‌ಗಡದಲ್ಲಿ ನಕ್ಸಲೀಯರು ಮತ್ತೆ ರಕ್ತದೋಕುಳಿ ಹರಿಸಿದ್ದಾರೆ. ಕೆಂಪು ಉಗ್ರರು ನಡೆಸಿದ ದಾಳಿಗೆ 20 ಮಂದಿ ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ. ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ.  ಬೆಳಗ್ಗೆ 10.30ರ ವೇಳೆಗೆ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 15 ಮಂದಿ ಸಿಆರ್‌ಪಿಎಫ್ ಯೋಧರು ಹಾಗೂ 5 ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ. ಕೆಲವು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಕ್ಸಲರ ಪ್ರಾಣಹಾನಿ ಬಗ್ಗೆ ಯಾವುದೇ […]

ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಪೆರ್ನೆಯಲ್ಲಿ ಉಚಿತ ದಂತ ವೈದ್ಯಕೀಯ ಶಿಬಿರ

Wednesday, March 12th, 2014
Yenapoya

ಬಂಟ್ವಾಳ: ಎಸ್.ಕೆ.ಎಸ್.ಎಸ್.ಎಫ್  ಪೆರ್ನೆ ಶಾಖಾ ವತಿಯಿಂದ ಯೆನಪೋಯ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ದಂತ ವೈದ್ಯಕೀಯ ಶಿಬಿರವು ಇತ್ತೀಚೆಗೆ ಪೆರ್ನೆ ಶಾಲೆಯಲ್ಲಿ ಹಾಜಿ ಅಬ್ದುಲ್ ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ನೆಡೆಯಿತು. ಸಭೆಯನ್ನು ಝಕರಿಯಾ ದಾರಿಮಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿ ಡಾ| ರಾಜಗೋಪಾ ಶರ್ಮ ಮಾತನಾಡಿ ದೇಶವನ್ನು ಸೈನಿಕರು ಹೇಗೆ ರಕ್ಷಿಸುತ್ತಾರೆ ಅದೇ ರೀತಿ ದೇಹವನ್ನು ದಂತಗಳು ರಕ್ಷಿಸುತ್ತದೆ. ಇಂತಹ ಕಾರ್ಯಕ್ರಮವನ್ನು ಕೈಗೊಂಡ ಎಸ್ ಕೆ ಎಸ್ ಎಸ್ ಎಫ್ ನ ಕಾರ್ಯಕ್ರಮವನ್ನು ಶ್ಲಾಘನೀಯ ಎಂದು ನುಡಿದರು. ಕೃಷ್ಣ […]

ಕಿಡ್ನಿಗಳ ವೈಪಲ್ಯದಿಂದ ನರಳುತ್ತಿರುವ 8 ವರ್ಷದ ಬಾಲಕನಿಗೆ ಸಹಾಯಮಾಡಿ

Wednesday, March 12th, 2014
Rashan

ಮಂಗಳೂರುಃ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕು, ಬೆಳ್ಳಾರೆ ಗ್ರಾಮದ ಕೊಡಿಯಾಲದಲ್ಲಿ ವಾಸವಾಗಿರುವ ಪುರುಷೋತ್ತಮ ಹಾಗೂ ಭವ್ಯಶ್ರೀ ದಂಪತಿಯ ಮಗನಾದ 8 ವರುಷ ಪ್ರಾಯದ ರೋಶನ್ ಎರಡೂ ಕಿಡ್ನಿಗಳು ವಿಫಲವಾಗಿದೆ. ಊರಿನ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿ ಆಗಲಿಲ್ಲ. ಇದೀಗ ಫಾದರ್ಮುಲ್ಲಾರ್ ಆಸ್ಪತ್ರೆ ಕಂಕನಾಡಿ- ಮಂಗಳೂರು ಇಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಎರಡೂ ಕಿಡ್ನಿಗಳ ಕಸಿಗಾಗಿ ಸುಮಾರು 6 ಲಕ್ಷ ರೂ. ವೆಚ್ಚವಾಗಲಿದೆ. ಇದಲ್ಲದೇ ಡಯಾಲಿಸಿಸ್ಗಾಗಿ ಮಾಸಿಕ 25 ಸಾವಿರ ರೂ. ವೆಚ್ಚವಾಗಲಿದೆ ಮತ್ತು ವಾರಕ್ಕೆ ಮೂರು […]

ಯೋಗೇಶ್ವರ್ ಕಾಂಗ್ರೆಸ್ ಗೆ ಸೇರ್ಪಡೆ

Wednesday, March 12th, 2014
CP-Yogeshwar

ನವದೆಹಲಿ: ಚನ್ನಪಟ್ಟಣ ಕ್ಷೇತ್ರದ ಸಮಾಜವಾದಿ ಪಕ್ಷದ ಏಕೈಕ ಶಾಸಕ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಂಗಳವಾರ ಎಐಸಿಸಿ ಯೋಗೇಶ್ವರ್ಗೆ ಹಸಿರು ನಿಶಾನೆ ನೀಡಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಲೋಕಸಭಾ ಉಪ ಚುನಾವಣೆ ವೇಳೆ ಪರೋಕ್ಷವಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಲೆಕ್ಕಾಚಾರಗಳು ಬದಲಾಗಿವೆ. ಜೆಡಿಎಸ್ ವಶದಲ್ಲಿದ್ದ ಆ ಕ್ಷೇತ್ರವನ್ನು ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಶಪಡಿಸಿಕೊಂಡಿತ್ತು. ಡಿ.ಕೆ.ಶಿವಕುಮಾರ್ ಅವರ ಸಹೋದರ […]

ಮಲೇಷ್ಯಾ ವಿಮಾನದ ಕುರುಹು ಪತ್ತೆ

Wednesday, March 12th, 2014
Malaysian-plane

ಕೌಲಾಲಂಪುರ: ನಾಲ್ಕು ದಿನದ ಹಿಂದೆ ಜಲಸಮಾಧಿಯಾಗಿದ್ದ ಮಲೇಷ್ಯಾ ವಿಮಾನದ ಗುರುತು ಪತ್ತೆಯಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಕೋಲಲಂಪೂರ್‌ನಿಂದ ಚೀನಾದ ಬೀಜಿಂಗ್‌ನತ್ತ ಹೋರಟಿದ್ದ ವಿಮಾನ ಸೇನಾ ರಡಾರ್‌ನಲ್ಲಿ ಮಲಾಕ್ಕಾ ಬಳಿ ಪತ್ತೆಯಾಗಿದೆ ಎಂದು ಸೇನೆ ತಿಳಿಸಿದೆ. ಮಲೆಷ್ಯಾ ವಿಮಾನ ಶೋಧಕ್ಕೆ 10 ಉಪಗ್ರಹಗಳ ಬಳಕೆ ಮಾಡಲಾಗಿದ್ದು, 20 ವಿಮಾನಗಳು ಹಾಗೂ 40 ಹೆಚ್ಚು ಹಡಗುಗಳಿಂದ ಶೋಧ ಕಾರ್ಯ ಮುಂದುವರೆಸಲಾಗಿದೆ. ಮಲೇಷಿಯಾ ಮತ್ತು ಚೀನಾ ವಿಯಟ್ನಾಂ ಸರ್ಕಾರ ಜಂಟಿಯಾಗಿ ಶೋಧ ಕಾರ್ಯ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಮಲೈಷ್ಯಾದಿಂದ […]

ದಕ್ಷಿಣಾರ್ಧ ಗೆಲವು ನಮ್ಮದೇ: ವೆಂಕಯ್ಯ ನಾಯ್ಡು

Wednesday, March 12th, 2014
M.-Venkaiah-Naidu

ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ 272ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಅಭಿಯಾನ ನಡೆಸುತ್ತಿರುವ ಬಿಜೆಪಿ, ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳಲ್ಲಿ ಅರ್ಧದಷ್ಟು ಗೆಲ್ಲುವ ಗುರಿ ಹಾಕಿಕೊಂಡಿದೆ. ದಕ್ಷಿಣ ಭಾರತದಲ್ಲಿರುವ 132 ಕ್ಷೇತ್ರಗಳಲ್ಲಿ 66ಕ್ಕೂ ಅಧಿಕ ಸೀಟುಗಳನ್ನು ಎನ್‌ಡಿಎ ಅಥವಾ ಬಿಜೆಪಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿಯ ಬಲವರ್ಧನೆಯಾಗುತ್ತಿದೆ. ಕೆಲ ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಹೊಸ ಪಕ್ಷಗಳು ಬರುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದ್ದಾರೆ. ತಮಿಳುನಾಡಿನಲ್ಲಿ […]

ಬೆಂಬಲಿಗರಿಗೆ ಟಿಕೆಟ್; ಸ್ಪರ್ಧೆಯಿಂದ ಹಿಂದೆ ಸರಿಯಲು ಬಿಎಸ್‌ವೈ ತಂತ್ರ

Wednesday, March 12th, 2014
yeddyurappa

ಬೆಂಗಳೂರು: ಬಿಜೆಪಿಗೆ ಮರಳಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಬಗ್ಗೆ ಒತ್ತಡತಂತ್ರ ಅನುಸರಿಸುತ್ತಿದ್ದು, ಇದು ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಘೋಷಣೆಗೆ ಅಡ್ಡಿಯಾಗಿ ಪರಿಣಮಿಸಿದೆ. ಒತ್ತಡ ತಂತ್ರಗಳು ಫಲಿಸದೇ ಇದ್ದಲ್ಲಿ, ಅಂತಿಮವಾಗಿ ಶಿವಮೊಗ್ಗ ಕಣದಿಂದ ಹಿಂದೆ ಸರಿಯುವ ಬೆದರಿಕೆ ಒಡ್ಡುವ ಸಿದ್ಧತೆಯಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪತ್ರ ಬರೆವ ಮೂಲಕ ಒತ್ತಡ ತಂತ್ರ: ಲೋಕಸಭೆ ಚುನಾವಣೆಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆಯ ಅಂತಿಮ ಹಂತದಲ್ಲಿ ಯಡಿಯೂರಪ್ಪ ದಾಳ ಉರುಳಿಸಿದ್ದು, ಶೋಭಾ […]

ಹತ್ತೇ ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ರೆಬಲ್ ಸ್ಟಾರ್

Tuesday, March 11th, 2014
ಹತ್ತೇ ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ರೆಬಲ್ ಸ್ಟಾರ್

ಬೆಂಗಳೂರುಃ ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಾಲಾಗಿ ಚಿಕಿತ್ಸೆ ಪಡೆಯುತ್ತಿರುವ ನಟ, ವಸತಿ ಸಚಿವ ಅಂಬರೀಶ್ ಅವರ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ. ಇನ್ನು ಹತ್ತೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ಸಾಧ್ಯತೆಗಳಿವೆ. ಈಗಾಗಲೆ ಅವರಿಗೆ ಹಾಕಲಾಗಿದ್ದ ವೆಂಟಿಲೇಟರನ್ನು ತೆಗೆಯಲಾಗಿದ್ದು ವಿಶೇಷ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಮೌಂಟ್ ಎಲಿಜತ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಇದುವರೆಗೂ ದ್ರವಾಹಾರ ಸೇವಿಸುತ್ತಿದ್ದ ಅವರು ಈಗ ಲಘು ಉಪಹಾರ ಸೇವಿಸುವಂತಾಗಿದೆ.  ಹತ್ತೇ ದಿನಗಳಲ್ಲಿ […]