ಸಿಬಿಎಸ್ಸಿ ಪಠ್ಯದಲ್ಲಿ ಝಾನ್ಸಿ ರಾಣಿಗೆ ಅವಮಾನ ಹಿಂದೂ ಜನಜಾಗೃತಿ ಸಮಿತಿ ಖಂಡನೆ

Monday, August 5th, 2013
Hindu Jana Jagruthi

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಭಾನುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಸಿಬಿಎಸ್ ಸಿ ಪಠ್ಯದಲ್ಲಿ ಝಾನ್ಸಿ ರಾಣಿಗೆ ಅವಮಾನ ಮಾಡಿರುವುದನ್ನುದು ಖಂಡಿಸಿ ಪ್ರತಿಭಟನೆ ಸಭೆ ನಡೆಯಿತು. ಜನಜಾಗೃತಿ ಸಮಿತಿಯ ಸುಕನ್ಯ ಆಚಾರ್ಯ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸಿಬಿಎಸ್ ಸಿ ಪಠ್ಯದಲ್ಲಿ ಝಾನ್ಸಿ ರಾಣಿಗೆ ಅಪಮಾನ ವಾಗುವಂತೆ ಚಿತ್ರಿಸಲಾಗಿದೆ.  ಇದಕ್ಕೆ ಕಾರಣರಾದವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಲೆಕ್ಕಿಸದೆ ಹೋರಾಡಿದ ಮಹಿಳೆಯ ಅವಮಾನಿಸಿದ್ದು ಖಂಡನೀಯ ಎಂದು ಅವರು ಹೇಳಿದರು. ಉದ್ಯಮಿಜಿಲ್ಲಾ ಸಂಚಾಲಕ ಪ್ರಸನ್ನ ಕಾಮತ್, ಅನಂತ್ ಕಾಮರ್, ವಕೀಲ […]

ಒಡಿಯೂರು ಶ್ರೀಗಳ 53ನೇ ಜನ್ಮದಿನೋತ್ಸವ ಮತ್ತು ಗ್ರಾಮೋತ್ಸವ

Sunday, August 4th, 2013
odiyoor gramothsava

ವಿಟ್ಲ : ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜುಲೈ 3, ಶನಿವಾರ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸ್ವಾಮೀಜಿಯವರ 53ನೇ ಜನ್ಮದಿನೋತ್ಸವ ಮತ್ತು ಗ್ರಾಮೋತ್ಸವ ನಡೆಯಿತು. ಜನ್ಮದಿನೋತ್ಸವ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು  ಪ್ರಕೃತಿ ಸಂರಕ್ಷಣೆ, ಗೋ ಸಂರಕ್ಷಣೆಗಳಿಂದ. ಮಾನವ ಸಂಪತ್ತು ಸದ್ಬಳಕೆಯಿಂದ ಗ್ರಾಮಗಳ ವಿಕಾಸವಾಗುವುದು. ಸಂಸ್ಕಾರ, ಜ್ಞಾನ, ಭಕ್ತಿ, ಶ್ರದ್ಧೆಗಳಿಂದ ಭಗವಂತನ ಆರಾಧನೆ ಮಾಡಬೇಕು ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು. ಇದೇ ಸಂದರ್ಭ ಅವರು ಗ್ರಾಮೋತ್ಸವಕ್ಕೆ ಚಾಲನೆ ನೀಡಿದರು. ವಿಶ್ವಮಾನವ ಧರ್ಮದ […]

ವಿಜಯ ಬ್ಯಾಂಕ್ ನ ಮಾಜಿ ಆಡಳಿತ ನಿರ್ದೇಶಕ ಬಿ.ಬಿ. ಶೆಟ್ಟಿ ನಿಧನ

Sunday, August 4th, 2013
bb shetty

ಮಂಗಳೂರು: ವಿಜಯ ಬ್ಯಾಂಕ್ ನ ಮಾಜಿ ಅಧ್ಯಕ್ಷ  ಮತ್ತು ಆಡಳಿತ ನಿರ್ದೇಶಕ ಬಿ.ಬಿ. ಶೆಟ್ಟಿ (77) ಅವರು ಜುಲೈ 2 ಶುಕ್ರವಾರ ಮಧ್ಯರಾತ್ರಿ ನಿಧನರಾದರು. ಬಿ.ಬಿ. ಶೆಟ್ಟಿ ಅವರು ಪತ್ನಿ ಕಲಾವತಿ ಸಹೋದರ ಸುಬ್ಬಯ್ಯ ಶೆಟ್ಟಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬಿ.ಬಿ. ಶೆಟ್ಟಿ ಅವರು 1975ರ ಡಿಸೆಂಬರ್ ನಲ್ಲಿ ಆಡಳಿತ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಶೆಟ್ಟಿ ಅವರು ವಿಜಯ್ ಬ್ಯಾಂಕ್ ಗೆ ಸೇರಿದ್ದರು.  1992ರಿಂದ 1996ರ ತನಕ ವಿಜಯ ಬ್ಯಾಂಕ್ ನ ಆಡಳಿತ ನಿರ್ದೇಶಕರಾಗಿದ್ದರು. 1984ರ […]

ಅರಣ್ಯ ರಕ್ಷಣೆ ದೃಷ್ಟಿಕೋನ ವಿಸ್ತಾರವಾಗಲಿ: ರಮಾನಾಥ ರೈ

Sunday, August 4th, 2013
Laksha Vruksha

ಮಂಗಳೂರು : ಪ್ರಾಕೃತಿಕ ಸಮತೋಲನ ಕಾಯ್ದು ಕೊಳ್ಳುವ ಹೊಣೆ ಪ್ರತಿಯೊಬ್ಬರದ್ದು. ಪರಿಸರವಿಲ್ಲದೆ ಜೀವರಾಶಿ ಇಲ್ಲ ಎಂಬ ಸತ್ಯವನ್ನು ಅರಿತು ಮರಗಿಡಗಳನ್ನು ಬೆಳೆಸುವ ಹೊಣೆ ಎಲ್ಲರದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಶ್ರೀ ಬಿ ರಮಾನಾಥ ರೈ ಅವರು ಹೇಳಿದರು. ಅವರು ನಗರದ ಪುರಭವನದಲ್ಲಿ ಜುಲೈ3, ಶನಿವಾರ ಆಯೋಜಿಸಲಾದ ರಾಜ್ಯ ಮಟ್ಟದ ‘ಲಕ್ಷ ವೃಕ್ಷ’ ಅಭಿಯಾನ ಉದ್ಘಾಟಿಸಿ ಮಾತನಾಡುತ್ತಿದ್ದರು. ಪರಿಸರ ಸಂರಕ್ಷಣೆ, ಅರಣ್ಯ ನಿರ್ಮಾಣ ಕೇವಲ ಅರಣ್ಯ ಇಲಾಖೆಯ ಹೊಣೆಯಲ್ಲ; ಜನರಲ್ಲಿ […]

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಕ್ಯಾರಿ ಓವರ್ ಸಮಸ್ಯೆಯ ಪರಿಹಾರಕ್ಕಾಗಿ ಉಪವಾಸ ಸತ್ಯಾಗ್ರಹ

Saturday, August 3rd, 2013
polytechnic student

ಮಂಗಳೂರು : ಕರ್ನಾಟಕ ಪಾಲಿಟೆಕ್ನಿಕ್ ಕ್ಯಾರಿ ಓವರ್ ಸಮಸ್ಯೆಯ ಪರಿಹಾರಕ್ಕೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಉಪವಾಸ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಮುಂಬಾಗದಲಲಿ ಶನಿವಾರ ಬೆಳಿಗ್ಗೆ 8 ರಿಂದ ಸಂಜೆ 5 ರ ತನಕ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ನಡೆಯಿತು. ಉಪವಾಸ ನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಮಾತನಾಡಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುವ ಕ್ಯಾರಿ ಓವರ್ ನಿಯಮದಿಂದ ಸಮಸ್ಯೆ ಉದ್ಭವಿಸಿದ್ದು, ಕರಾವಳಿ ಕರ್ನಾಟಕ ಭಾಗದ ಸುಮಾರು 5000ಕ್ಕೂ […]

ಮಹಿಳೆಯನ್ನು ಮಗುವಿನ ಎದುರೇ ಬರ್ಬರವಾಗಿ ಇರಿದು ಕೊಲೆ

Saturday, August 3rd, 2013
jyothi

ಬೆಂಗಳೂರು: ವೆಂಕಟಾದ್ರಿ ಲೇಔಟ್ ಎರಡನೇ ಅಡ್ಡರಸ್ತೆ  ಮಹಿಳೆಯೊಬ್ಬರನ್ನು ಅವರ ಐದು ವರ್ಷದ ಮಗುವಿನ ಎದುರೇ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜೆ.ಪಿ.ನಗರ ಸಮೀಪ ಗುರುವಾರ ರಾತ್ರಿ ನಡೆದಿದೆ. ದುಷ್ಕರ್ಮಿಯೊಬ್ಬ ರಾತ್ರಿ  ಮನೆಗೆ ನುಗ್ಗಿ ಜ್ಯೋತಿಲಕ್ಷ್ಮಿಯ ಕತ್ತು ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಆಗ ಅವರು ಜೀವ    ರಕ್ಷಣೆಗಾಗಿ  ಕೂಗಿಕೊಂಡರು. ಈ ವೇಳೆ ನಡುಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದ ಜಾಗೃತಿ, ತಾಯಿಯ ಚೀರಾಟ ಕೇಳಿ ಕೊಠಡಿಯೊಳಗೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ದುಷ್ಕರ್ಮಿ ಆಕೆಯನ್ನು ತಳ್ಳಿ ಪರಾರಿಯಾಗಿದ್ದಾನೆ. […]

ಲೋಕಸಭೆ ಉಪ ಚುನಾವಣೆ ಶಾಸಕಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ.

Saturday, August 3rd, 2013
Anitha-Kumaraswami

ಬೆಂಗಳೂರು: ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ  ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆಗೆ ಶನಿವಾರ ನಾಮಪತ್ರ ಸಲ್ಲಿಸಿದರು. ತನ್ನ ಪತಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅವರು ತಮ್ಮಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾ ಅವರು ಉಪಸ್ಥಿತರಿದ್ದರು. ಇಲ್ಲಿ  ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಸ್ಪರ್ಧಿಸುತ್ತಿದ್ದು, ಇಬ್ಬರ ನಡುವೆ ನೇರ ಹಣಾಹಣಿ ಏರ್ಪಡಲಿದೆ. […]

ಯುವ ಉದ್ಯಮಿ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಗುಂಡು ಹಾರಾಟ

Saturday, August 3rd, 2013
shoot out at ballalbagh

ಮಂಗಳೂರು :ನಗರದ ಯುವ ಉದ್ಯಮಿ ವಿಜಯೇಂದ್ರ ಭಟ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಶುಕ್ರವಾರ ಸಂಜೆ 6 ರ ಸುಮಾರಿಗೆ ಗುಂಡಿನ ದಾಳಿ ನಡೆಸಿ ಪರಾರಿಯಾದ ಘಟನೆ  ಬಳ್ಳಾಲ್‌ಬಾಗ್ ಸಮೀಪ ನಡೆದಿದೆ. ಸುದೀಂದ್ರ ಫುಡ್ ಇಂಡರ್‌ಸ್ಟ್ರೀಯಲ್ ಹಾಗೂ ಪಿವಿಎಸ್ ಸಮೀಪದ ಸುದೀಂದ್ರ ಸೂಪರ್ ಮಾರ್ಕೇಟ್‌ನ ಮತ್ತು ಮಣ್ಣ ಗುಡ್ಡದಲ್ಲಿರುವ ಟೋಮ್ ಅಂಡ್ ಇಲ್ಲಿ ರೆಸ್ಟೊರೆಂಟಿನ ಮಾಲಕರಾದ ವಿಜಯೇಂದ್ರ ಭಟ್ ಅವರಿಗೆ ವಿಕ್ಕಿ ಶೆಟ್ಟಿ ಯಿಂದ ಹಪ್ತಾ ವಸೂಲಿಗಾಗಿ ಕರೆ ಬಂದಿತ್ತು. ವಿಜಯೇಂದ್ರ ಭಟ್ ಅವರು ಇಂದು ತಮ್ಮ ಸ್ಕಾರ್ಪಿಯೋ […]

ಪತ್ರಕರ್ತರ ಸಂಘ ಮತ್ತು ಅರಣ್ಯ ಸಂರಕ್ಷಣಾ ಇಲಾಖೆ ಕದ್ರಿ ಪಾರ್ಕ್ ನಲ್ಲಿ ವನಮಹೋತ್ಸವ

Saturday, August 3rd, 2013
vanamahostava

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮಂಗಳೂರು ಅರಣ್ಯ ಸಂರಕ್ಷಣಾ ಇಲಾಖೆ ವತಿಯಿಂದ ನಗರದಕದ್ರಿ ಪಾರ್ಕ್ ನಲ್ಲಿ ಆಗಸ್ಟ್2 ರಂದು ಗಿಡ ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು. ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಗಿಡನೆಟ್ಟು ನೀರೆರೆಯುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿ ಲಕ್ಷವೃಕ್ಷ ಅಭಿಯಾನ ನಾಳೆಯಿಂದ ಪ್ರಾರಂಭವಾಗಲಿದ್ದು, ಮಂಗಳೂರಿನಲ್ಲಿ ನಾಳೆ ಚಾಲನೆ ನೀಡಲಾಗುವುದು. ಇದು ರಾಷ್ಟೀಯ ಮಟ್ಟದ ಕಾರ್ಯಕ್ರಮವಾಗಿರದೆ ಅಂತರಾಷ್ಟೀಯ ಮಟ್ಟದ ಕಾರ್ಯಕ್ರಮವಾಗಬೇಕಾಗಿದೆ.  ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಸ್ವಯಂ ಸೇವಾ ಸಂಘದವರು ಜೊತೆಗೂಡಿ ಕೆಲಸ ಮಾಡಬೇಕಾಗಿದೆ. […]

ನನ್ನ ಬಳಿ ಯಾವುದೇ ದಾಖಲೆಗಳಿರಲಿಲ್ಲ : ಬಂಟ್ವಾಳ ಠಾಣಾಧಿಕಾರಿ ಮಹೇಶ್ ಪ್ರಸಾದ್

Friday, August 2nd, 2013
Mahesh Prasad

ಮಂಗಳೂರು :  ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ  ಮಹಿಳೆಯೊಬ್ಬರು ವರಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ 2008 ರಲ್ಲಿ ದಾಖಲಾಗಿತ್ತು. ಅಂದಿನ ಠಾಣಾಧಿಕಾರಿಯಾಗಿರುವ ವಿನಾಯಕ ಬಿಲ್ಲವ ಪ್ರಕರಣದ ತನಿಕೆ ನಡೆಸಿ ಕೇಸು ದಾಖಲಿಸಿಕೊಂಡಿದ್ದರು. ಪ್ರಕರಣವು 2008 ರಿಂದ ಬಂಟ್ವಾಳ ನ್ಯಾಯಾಲಯದಲ್ಲಿ ಎರಡು ವರ್ಷಗಳ ಕಾಲ ತನಿಖೆಯಲ್ಲಿತ್ತು. ನಂತರ 2010 ರಲ್ಲಿ ಪ್ರಕರಣವನ್ನು ಮಂಗಳೂರು ನ್ಯಾಯಾಲಕ್ಕೆ ವರ್ಗಾಯಿಸಲಾಯಿತು. ಅಂದಿನ ಠಾಣಾಧಿಕಾರಿ ವಿನಾಯಕ ಬಿಲ್ಲವ ಸಂಬಂಧಪಟ್ಟ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿರುವುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯ ದಾಖಲೆಗಳಲ್ಲಿ ಬರೆದಿಟ್ಟಿದ್ದಾರೆ. […]