ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ 43.2 ಲಕ್ಷ ಮೊತ್ತದ ಚೆಕ್ ವಿತರಣೆ

Monday, July 22nd, 2013
Perne Accident

ಬಂಟ್ವಾಳ: ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪೆನಿಯಿಂದ  ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ ಒಟ್ಟು 43.2 ಲಕ್ಷ ಮೊತ್ತದ ಚೆಕ್ಕನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾನುವಾರ ಬಿ.ಸಿ.ರೋಡ್ ನ ಸಚಿವರ ಕಚೇರಿಯಲ್ಲಿ ವಿತರಿಸಿದರು. ಒಟ್ಟು 14 ಮಂದಿಗೆ ಪರಿಹಾರ ಧನವಾಗಿ 43.2 ಲಕ್ಷ ಮೊತ್ತದ ಚೆಕ್ ನ್ನು ವಿತರಿಸಲಾಯಿತು. ದುರಂತದಲ್ಲಿ ಜೀವಹಾನಿ ಮತ್ತು  ಮನೆ ಅಪಾರ ಆಸ್ತಿ ನಷ್ಟ ಉಂಟಾಗಿತ್ತು.  ಸ್ಥಳೀಯ ನಿವಾಸಿಗಳಾದ ಸಂದರ ರೈ ಅವರಿಗೆ 7.43 ಲಕ್ಷ, […]

ಪಡೀಲ್ ನ ಮೊರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ 38ನೇ ಆರೋಪಿ ಬಂಧನ

Monday, July 22nd, 2013
Homestay attack

ಮಂಗಳೂರು: ಪಡೀಲ್ ನ ಮೊರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾದ 38ನೇ ಆರೋಪಿ ಕಂದಾವರದ ಮನೋಜ್ ಎಂಬಾತನನ್ನು ಭಾನುವಾರ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಮನೋಜ್ s/0 ಸುಂದರ ಮೂಡಬಿದರೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ಕಂಕನಾಡಿ ಪೊಲೀಸರು ಬಜ್ಪೆ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 44 ಆರೋಪಿಗಳಲ್ಲಿ ಈತ 38ನೇ ಆರೋಪಿಯಾಗಿದ್ದಾನೆ. ಇನ್ನು ಆರು ಮಂದಿ ಆರೋಪಿಗಳ ಬಂಧನವಾಗಬೇಕಾಗಿದೆ. 2012ರ ಜುಲೈ 28ರಂದು ನಡೆದ ಹೋಮ್ ಸ್ಟೇ ದಾಳಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗಳ ಪೈಕಿ 17 ಮಂದಿ […]

ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಇಬ್ಬರು ಆರೋಪಿಗಳ ಬಂಧನ

Monday, July 22nd, 2013
Kerala Rapist

ಕಾಸರಗೋಡು:  ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಗೆ ಬಿಡುವುದಾಗಿ ಹೇಳಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ತನ್ನ ಗೆಳೆಯನ ಜೊತೆ ಸೇರಿ ಅತ್ಯಾಚಾರ ಮಾಡಿದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಾರಡ್ಕ ನಿವಾಸಿ ಆಟೋರಿಕ್ಷಾ ಚಾಲಕ ಇಬ್ರಾಹಿಂ ಬಾಲಕಿಯನ್ನು ಜು.17ರಂದು ಬಲವಂತವಾಗಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ತನ್ನ ಗೆಳೆಯ ಖಾಲಿದ್ ನೊಂದಿಗೆ ಜನವಾಸವಿಲ್ಲದ ಮನೆಯಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಲಭಿಸಿದ ದೂರಿನನ್ವಯ ತನಿಖೆ ನಡೆಸಿದಾಗ ಆರೋಪಿಗಳ ಹೆಸರು ಬಹಿರಂಗವಾಗಿದೆ.

ದೇವಾಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 6ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

Monday, July 22nd, 2013
Devadiga Sanga

ಮಂಗಳೂರು : ಕರ್ನಾಟಕ ರಾಜ್ಯ ದೇವಾಡಿಗ ಸಂಘ ಹಾಗೂ ದುಬೈ ದೇವಾಡಿಗರ ಸಂಘದ ವತಿಯಿಂದ ಬಾನುವಾರ ನಗರದ ಮಣ್ಣಗುಡ್ಡ, ಗಾಂದಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಸಮಾಜ ಭವನದಲ್ಲಿ  ದೇವಾಡಿಗ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಡಿಗ್ರೀ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜರಗಿತು. ದುಬೈ ದೇವಾಡಿಗರ ಸಂಘದ ಅಧ್ಯಕ್ಷರಾದ ಹರೀಶ್ ಸೇರಿಗಾರ್ ಅವರು ಮಾತನಾಡಿ, ನಾವು ಸಮಾಜದಲ್ಲಿ ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಒಂದು ಕೈ ಯಿಂದ […]

ಮಲ್ಪೆ ಬೀಚ್‌ ನಲ್ಲಿ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Sunday, July 21st, 2013
Dog fighting

ಮಲ್ಪೆ: ಮಲ್ಪೆ ಬೀಚ್‌ ಕಡಲತೀರದಲ್ಲಿ ಮೀನು ಹಿಡಿಯುವುದನ್ನು ನೋಡಲು ಹೋಗಿದ್ದ ಬಾಲಕಿಯೊರ್ವಳ ಮೇಲೆ ಏಳೆಂಟು ನಾಯಿಗಳು ದಾಳಿ ನಡೆಸಿ ಗಂಭೀರಗಾಯಗೊಳಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಪೆ ಕೊಳದಲ್ಲಿ ವಾಸವಾಗಿರುವ ಪ್ರಕಾಶ್‌ ಅವರ ಮಗಳು ಸೌಂದರ್ಯ (6) ನಾಯಿ ದಾಳಿಗೆ ಒಳಗಾದ ಮಗು. ತಾಯಿಯ ಹಿಂದೆ ನಡೆದು ಹೋಗುತ್ತಿದ್ದ ಮಗುವಿನ ಮೇಲೆ ಸುಮಾರು 7-8 ನಾಯಿಗಳು ಏಕಾಏಕಿ  ದಾಳಿ ನಡೆಸಿ ಬೆನ್ನು, ತೊಡೆ ಮತ್ತು ಕಾಲುಗಳಿಗೆ ಕಚ್ಚಿ ತೀವ್ರ ಗಾಯಗೊಳಿಸಿದೆ. ಈ […]

ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಿರ್ಸಿ ಮೂಲದ ಯುವಕ ನಾಪತ್ತೆ

Sunday, July 21st, 2013
Vinay Vaz

ಮಂಗಳೂರು:  ಶುಕ್ರವಾರ ರಾತ್ರಿ ಕೇರಳದ ಎರ್ನಾಕುಳಂನಿಂದ ಮಂಗಳೂರು ಕಡೆಗೆ ಬರುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಸಿರ್ಸಿ ಮೂಲದ ವಿನಯ್‌ ವಾಜ್‌ (24) ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದಾರೆ. ನೇತ್ರಾವತಿ ಸೇತುವೆ ಬಳಿ ತಲುಪಿದಾಗ ರೈಲು ನಿಧಾನವಾಗಿ ಚಲಿಸಲಾರಂಭಿಸಿದ್ದು, ಇದು ನಿಲ್ದಾಣವಾಗಿರಬೇಕು ಎಂದು ಭಾವಿಸಿ ಕತ್ತಲೆಯಲ್ಲಿ ವಿನಯ್‌ರಾಜ್‌ ಇಳಿದು ನೇತ್ರಾವತಿ ನದಿಗೆ ಬಿದ್ದಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ವಿನಯರಾಜ್‌ ಸಹಿತ 47 ಮಂದಿಯ ತಂಡ  ಕೇರಳದಿಂದ ಕುಮಟಾಕ್ಕೆ ಪ್ರಯಾಣಿಸುತ್ತಿತ್ತು.  173 ಸೆ.ಮೀ. […]

ಏರ್‌ ಇಂಡಿಯಾ ವಿಮಾನದಲ್ಲಿ ಆಕ್ರಮ ಚಿನ್ನ ಸಾಗಾಟ ; 52 ಲಕ್ಷ ರೂ. ಮೌಲ್ಯದ 2.16 ಕೆ.ಜಿ ಚಿನ್ನ ವಶ

Sunday, July 21st, 2013
Illigal Gold

ಮಂಗಳೂರು: ಶನಿವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ  ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟದ ಎರಡು ಪ್ರಕರಣಗಳನ್ನು ಪತ್ತೆಹಚಿದ್ದಾರೆ. ಆಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ದಂಪತಿ ಸಹಿತ ಒಟ್ಟು ಮೂವರನ್ನು ಬಂಧಿಸಿ 52 ಲಕ್ಷ ರೂ. ಮೌಲ್ಯದ 2.16 ಕೆ.ಜಿ ಬಂಗಾರವನ್ನು ವಶಪಡಿಸಿ ಕೊಂಡಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಬೆಳಗ್ಗೆ 9.30 ಕ್ಕೆ  ತಲುಪಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಈ […]

ಕೌಟುಂಬಿಕ ಆಸ್ತಿ ವಿವಾದ ; ಪಾಲಿಕೆಯ ವಾಹನ ಚಾಲಕನಿಗೆ ಮಾರಣಾಂತಿಕ ಹಲ್ಲೆ

Sunday, July 21st, 2013
MCC driver

ಮಂಗಳೂರು : ಕೌಟುಂಬಿಕ ಆಸ್ತಿ ವಿವಾದದ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವಾಹನ ಚಾಲಕ ಅಶೋಕನಗರದ ರೋಹಿತ್‌ (26) ಅವರನ್ನು ಶನಿವಾರ ಬೆಳಗ್ಗೆ ಬೈಕ್‌ನಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ರೋಹಿತ್‌ ಅವರು ಬೆಳಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಕರೆ ತರಲು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿದ ನಾಲ್ವರು ಅಪರಿಚಿತರು ಲೇಡಿಹಿಲ್‌ನಲ್ಲಿ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದರು  ಎಂದು ಆರೋಪಿಸಲಾಗಿದೆ. ಗಾಯಾಳು ರೋಹಿತ್‌ ಅವರನ್ನು ಆಸ್ಪತ್ರೆಗೆ […]

ಜುಲೈ 22 ರಂದು ಚಿತ್ರಾಪುರ ಮಠದ ವತಿಯಿಂದ ಚಾತುರ್ಮಾಸ ಆಚರಣೆ

Saturday, July 20th, 2013
kodial chaturmasa

ಮಂಗಳೂರು : ಪರಮಪೂಜ್ಯ ಸದ್ಯೊಜತ್ ಶಂಕರಾಶ್ರಮ ಸ್ವಾಮೀಜಿಯವರು ಈ ಬಾರಿಯ ಎರಡು ತಿಂಗಳ ಅವಧಿಯ ಚಾತುರ್ಮಾಸ ಆಚರಣೆಯನ್ನು ನಮ್ಮ ಗುರು ಪರಂಪರೆಯ ಆರನೆಯ ಮಠಧೀಶರಾಗಿದ್ದ ಪರಮ ಪೂಜ್ಯ ವಾಮನಾಶ್ರಮ ಸ್ವಾಮಿಜಿಯವರ ಮಂಗಳೂರಿನಲ್ಲಿರುವ ಸಮಾಧಿ ಸ್ಥಳದಲ್ಲಿ ಆಚರಿಸುವರು ಎಂದು ಕೊಡಿಯಾಲ್ ಚಾತುರ್ಮಾಸ ಆಚರಣಾ ಸಮಿತಿಯ ಅಧ್ಯಕ್ಷ ವಿನೋದ್ ಜಿ ಎಣ್ಣೆಮಾಡಿ ಇಂದು ಮಠದಲ್ಲಿ ನಡೆದ ಸುದ್ದಿಘೊಷ್ಟಿಯಲ್ಲಿ ತಿಳಿಸಿದರು ಜುಲೈ 22 ರಂದು  ಸಂಭ್ರಮದ ವ್ಯಾಸಪೂಜೆಯಿಂದ ಆರಂಭಗೊಳ್ಳಳಿದೆ ಈ ಚಾತುರ್ಮಾಸವು ಭಾದ್ರಪದ ಶುಕ್ಲಪೂರ್ಣಿಮ ಸೆಪ್ಟೆಂಬರ್ 19 ಪರಮ ಪೂಜ್ಯ ಸ್ವಾಮಿಜಿಯವರ […]

ಪಿಲಿಕುಲದಲ್ಲಿ 6 ದಿನದ ಜಿಲ್ಲಾ ಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನೆ

Saturday, July 20th, 2013
Pilikula Inspire Award Science exhibition

ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಸಂಸ್ಥೆ ಮತ್ತು ತರಭೇತಿ ಸಂಸ್ಥೆ ಮಂಗಳೂರು ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಇದರ ವತಿಯಿಂದ  ವಿಜ್ಞಾನ ಮಾದರಿಗಳ ಜಿಲ್ಲಾ ಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಪಿಲಿಕುಲದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ದ.ಕ.ಉಸ್ತುವಾರಿ ಸಚಿವ ರಮನಾಥ ರೈ ಯವರು ನೆರವೇರಿಸಿದರು. ಉದ್ಘಾಟನೆಯನ್ನು ಬಳಿಕ ಮಾತನಾಡಿದ ಉಸ್ತುವಾರಿ ಸಚಿವ ರಮನಾಥ ರೈ ಯವರು, ಪ್ರತಿಯೊಬ್ಬ ವಿದ್ಯಾರ್ಥಿಗಳ  ಪ್ರತಿಭೆಗಳು ಹೊರಹೊಮ್ಮಲು ಇಂತಹ ಕಾರ್ಯಕ್ರಮಗಳು ಅಗತ್ಯ. ವಿದ್ಯಾರ್ಥಿಗಳಲ್ಲಿ […]