ಮಂಗಳೂರು ಮಹಾನಗರಪಾಲಿಕೆ ಮತ್ತು ಉಡುಪಿ ನಗರ ಸಭೆ ಕಾಂಗ್ರೆಸ್ ತೆಕ್ಕೆಗೆ, ಬಿಜೆಪಿ ಹೀನಾಯ ಸೋಲು

Monday, March 11th, 2013
MCC Election Winners

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಆಡಳಿತ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದು, ಮಾರ್ಚ್ 7 ರಂದು ನಡೆದ 60 ವಾರ್ಡ್ ಗಳ ಫಲಿತಾಂಶ  ಮಾರ್ಚ್ 11 ರಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಹೊರಬಿದ್ದಿದೆ. ಮಂಗಳೂರು ಮಹಾನಗರಪಾಲಿಕೆ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್-2, ಸಿಪಿಐಯು-1, ಪಕ್ಷೇತರ-1. ಪುತ್ತೂರು ಒಟ್ಟು  27, ಘೋಷಿತ-27. ಬಿಜೆಪಿ-12, ಕಾಂಗ್ರೆಸ್-15, ಜೆಡಿಎಸ್-1. ಮೂಡಬಿದ್ರೆ ಒಟ್ಟು 23 ಸ್ಥಾನಗಳು ಘೋಷಿತ 23 ಸ್ಥಾನಗಳು. ಬಿಜೆಪಿ-5, ಕಾಂಗ್ರೆಸ್-14, ಜೆಡಿಎಸ್-3, ಸಿಪಿಐಯಂ -1. ಬಂಟ್ವಾಳ ಒಟ್ಟು 23 […]

ಮಂಗಳೂರು : ರವೀಂದ್ರ ಕಲಾಭವನದಲ್ಲಿ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ

Saturday, March 9th, 2013
Vidyarhi sahitya sammelana

ಮಂಗಳೂರು : ಮಂಗಳೂರು ವಿಶ್ವ ವಿದ್ಯಾನಿಲಯ ಸ್ನಾತಕೋತ್ತರ ಹಳೆ ವಿದ್ಯಾರ್ಥಿ ಸಂಘ ಹಾಗೂ ವಿಶ್ವ ವಿದ್ಯಾನಿಲಯ ಕಾಲೇಜಿನ ಕನ್ನಡ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಾರ್ಚ್ 9 -ಶನಿವಾರ ನಡೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರು ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿದರು.  ತಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಜಾತಿ ಧರ್ಮದ ಬಗೆಗೆ ತಪ್ಪು ಸಂದೇಶವನ್ನು […]

ಕದ್ರಿ ಉದ್ಯಾವನದಲ್ಲಿ ಫಲಪುಷ್ಪ ಹಾಗೂ ಮಧುವೇಳದ ಉದ್ಘಾಟನೆ

Saturday, March 9th, 2013
Palapushpa pradarshana

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಸಿರಿ ತೋಟಗಾರಿಕೆ ಸಂಘ (ರಿ) ಹಾಗೂ ತೋಟಗಾರಿಕೆ ಇಲಾಖೆ ದ.ಕ ಮಂಗಳೂರು ಇವುಗಳ ಜಂಟಿ ಆಶ್ರಮದಲ್ಲಿ ಫಲಪುಷ್ಪ ಪ್ರದರ್ಶನ – 2013 ಹಾಗೂ ಮಧುವೇಳವು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಮಾರ್ಚ್ 9ನೇ ಶನಿವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು. ಫಲಪುಷ್ಪ ಪ್ರದರ್ಶನ ಉದ್ಘಾಟನೆಯನ್ನು ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಇವರು ನೆರೆವೇರಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಡಾ. ಮೋಹನ್ ಆಳ್ವ. ಸಸ್ಯ ಸಂಪತ್ತು […]

ಮಹಿಳಾ ದೌರ್ಜನ್ಯದ ವಿರುದ್ಧ ಬೆಸೆಂಟ್ ಮಹಿಳಾ ಕಾಲೇಜು ವಿದ್ಯಾರ್ಥಿ ಗಳಿಂದ ಬೀದಿ ನಾಟಕ

Friday, March 8th, 2013
Besant students

ಮಂಗಳೂರು :ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ದೇಶದಲ್ಲಿ ಇಂದು ಮಹಿಳೆಯ ಮಳೆ ನಡೆಯುತ್ತಿರುವ ದೌರ್ಜನ್ಯ ಮತ್ತು ಈ ದೌರ್ಜನ್ಯಗಳ ವಿರುದ್ಧ ದ್ವನಿ ಎತ್ತಬೇಕಾದ ಅಗತ್ಯಗಳ ಬಗ್ಗೆ ಬೀದಿ ನಾಟಕವನ್ನು ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಳು ಪ್ರಸ್ತುತಪಡಿಸಿದರು. ಬೀದಿ ನಾಟಕದಲ್ಲಿ ಕಾಲೇಜಿನ ಸುಮಾರು ೨೦ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ನಾಟಕವನ್ನು ಪ್ರಮುಖವಾಗಿ ಕೇಂದ್ರ ಮಾರುಕಟ್ಟೆ, ರಥಬೀದಿ, ಸಿಟಿ ಸೆಂಟರ್ ಮಾಲ್ ಹಾಗೂ ಬೆಸೆಂಟ್ ಕಾಲೇಜುಗಳ ಬಳಿ ಆಡಿಸಲಾಯಿತು. ಈ ಬೀದಿ […]

ನರ್ಸ್ ಜೆಸಿಂತಾ ಕಾನೂನು ಹೋರಾಟ, ಆರ್ಥಿಕ ಸಂಕಷ್ಟದಲ್ಲಿ ಕುಟುಂಬ

Friday, March 8th, 2013
jacintha saldanha legal case

ಲಂಡನ್ : ಇಂಗ್ಲೆಂಡ್ ರಾಜಮನೆತನದ ಅಧೀನದಲ್ಲಿರುವ ಕಿಂಗ್‌ ಎಡ್ವರ್ಡ್ಸ್‌ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆಸಲ್ಲಿಸುತ್ತಿದ್ದ  ಉಡುಪಿ ಶಿರ್ವಾ ಮೂಲದ ನರ್ಸೆ ಜೆಸಿಂತಾ ರೇಡಿಯೋ ಜಾಕಿಗಳ ತಮಾಷೆಯ ಕರೆಗೆ ಬೇಸತ್ತು ಆತ್ಮಹತೆ ಮಾಡಿಕೊಂಡಿದ್ದರು. ಇದೀಗ ಆಕೆಯ ಆಕೆಯ ಸಾವಿನ ಪ್ರಕರಣದ ಕುರಿತಾಗಿ ಸರಕಾರದ ಕಾನೂನಿನ ನೆರವನ್ನು ಪಡೆಯಲು ಆಕೆಯ ಕುಟುಂಬ ನಿರಾಕರಿಸಿದೆ. ಜೆಸಿಂತಾ ಸಾವಿನ ಪ್ರಕರಣ ಇನ್ನು ನಿಗೂಡ ವಾಗಿಯೇ ಉಳಿದಿದ್ದು, ಸರಕಾರ ನೀಡುವ ಕಾನೂನು ನೆರವನ್ನು ಕುಟುಂಬ ನಿರಾಕರಿಸಿರುವ ಹಿನ್ನಲೆಯಲ್ಲಿ ಜೆಸಿಂತಾ ಕುಟುಂಬ ವೇ ಕಾನೂನು ತಜ್ಞ್ಯರಿಗೆ […]

IQ ಪರೀಕ್ಷೆಯಲ್ಲಿ ಐನ್‌ಸ್ಟಿನ್‌ ರನ್ನೇ ಮೀರಿಸಿದ ನೇಹಾ

Friday, March 8th, 2013
Albert einstein

ಲಂಡನ್ : ಬುದ್ಧಿಮತ್ತೆಯಲ್ಲಿ 12ರ ಹರೆಯದ ಭಾರತೀಯ ಮೂಲದ ಬಾಲಕಿಯೊಬ್ಬಳು ಐನ್‌ಸ್ಟಿನ್‌, ಖ್ಯಾತ ಭೌತವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರನ್ನೂ ಮೀರಿಸಿದ್ದಾಳೆ. ಹಾಲಿ ಬ್ರಿಟನ್‌ ನಿವಾಸಿಯಾಗಿರುವ ಭಾರತೀಯ ಮೂಲದ ನೇಹಾ ರಾಮು ಇತ್ತೀಚೆಗೆ ನಡೆದ ಬುದ್ಧಿಮತ್ತೆ ಪರೀಕ್ಷೆಯಲ್ಲಿ 162 ಅಂಕಕ್ಕೆ 162  ಅಂಕ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾಳೆ. ಐಕ್ಯೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಐನ್‌ಸ್ಟಿನ್‌, ಖ್ಯಾತ ಭೌತವಿಜ್ಞಾನಿ ಸ್ಟೀಫ‌ನ್‌ ಹಾಕಿನ್ಸ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರನ್ನು […]

ಡ್ರಗ್ಸ್ ಸ್ಮಗ್ಲಿಂಗ್, ಬಾಕ್ಸರ್ ವಿಜೇಂದರ್‌ ಸಿಂಗ್‌ ಮೇಲೆ ಆರೋಪ

Friday, March 8th, 2013
Vijendar Sing

ಮೊಹಾಲಿ : ಡ್ರಗ್ಸ್ ಸ್ಮಗ್ಲಿಂಗ್ ಗೆ ಸಂಬಂಧಪಟ್ಟಂತೆ ಬಾಕ್ಸಿಂಗ್ ಚಾಂಪಿಯನ್, ಒಲಿಂಪಿಕ್ಸ್ ನ ಪದಕ ವಿಜೇತ  ಬಾಕ್ಸರ್‌ ವಿಜೇಂದರ್‌ ಸಿಂಗ್‌ ರವರ ಮೇಲೆ ಆರೋಪ ಕೇಳಿ ಬಂದಿದೆ. ಮೊಹಾಲಿಯ ಫ್ಲಾಟ್‌ ಒಂದರಲ್ಲಿ 130 ಕೋಟಿ ರೂಪಾಯಿ ಮೌಲ್ಯದ 26 ಕಿಲೋ ಹೆರಾಯಿನ್‌ ನನ್ನು ವಶಪಡಿಸಿಕೊಂಡ ಪಂಜಾಬ್ ಪೊಲೀಸರು ಈ ವೇಳೆ ಅನೂಪ್‌ ಖಲೋನ್‌ ಎಂಬಾತನನ್ನು ಸೆರೆಹಿಡಿದಿದ್ದಾರೆ. ವಿಚಾರಣೆಯ ವೇಳೆ ಈತ ತನಗೆ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಜತೆ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ವಿಜೇಂದರ್‌ ಕುಮಾರ್‌ಗೆ […]

ಸ್ಥಳೀಯ ಸಂಸ್ಥೆ ಚುನಾವಣೆ ದ.ಕ 66.24%, ಉಡುಪಿ 75.23% ಮತ ಚಲಾವಣೆ, ಅಲ್ಲಲ್ಲಿ ಮಾತಿನ ಸಂಘರ್ಷ, ಕಲ್ಲು ತೂರಾಟ

Thursday, March 7th, 2013
MCC Election

ಮಂಗಳೂರು : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರ್ಚ್  7 ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಜೆ 5ಕ್ಕೆ ಮುಕ್ತಾಯ ಗೊಂಡಿದೆ. ಮತದಾನದ ಕೊನೆಯ ಅಂಕಿ ಅಂಶ ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 66.24 ಮತದಾನ ನಡೆದಿದೆ. ಒಟ್ಟು 1,48,311 ಪರುಷ ಮತ್ತು 1,59,226 ಮಹಿಳಾ ಮತದಾರರು ಮತಚಲಾಯಿಸಿದ್ದಾರೆ. ಬಹುತೇಕ ಶಾಂತಿಯುತ ಮತದಾನ ವಾಗಿದ್ದರೂ ಅಲ್ಲಲ್ಲಿ ಸಣ್ಣ ಪುಟ್ಟ ಮಾತಿನ ಸಂಘರ್ಷ ಮತ್ತು ಸಂಜೆಯ ವೇಳೆಗೆ ಮಂಗಳೂರಿನ ಬದ್ರಿಯ ಕಾಲೇಜು ಸಮೀಪ  ಕಲ್ಲು ತೂರಾಟ […]

ಮತದಾನದಲ್ಲಿ ಚೇತರಿಕೆ ಸಂಜೆ 3 ಕ್ಕೆ ದ.ಕ : 61:46% ಉಡುಪಿ 63.42%

Thursday, March 7th, 2013
MCC election

ಮಂಗಳೂರು : ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಜೆಯ ವೇಳೆಗೆ ಚುರುಕುಗೊಂಡಿದ್ದು ಸಂಜೆ 3 ಗಂಟೆಗೆಯವರೆಗೆ ದ.ಕ ಜಿಲ್ಲೆಯಲ್ಲಿ 61.46 % ಮತ್ತು ಉಡುಪಿ ಜಿಲ್ಲೆಯಲ್ಲಿ 63.42% ಮತದಾನವಾಗಿದೆ. ಮಂಗಳೂರು ನಗರ 51% ಉಳ್ಳಾಳ ಪುರಸಭೆ 54.8%, ಮೂಡಬಿದ್ರೆ ಪುರಸಭೆ 63.3%, ಬಂಟ್ವಾಳ ಪುರಸಭೆ  65.6% ,ಪುತ್ತೂರು ಪುರಸಭೆ 60.4%, ಬೆಳ್ತಂಗಡಿ ಪಟ್ಟಣ ಪಂಚಾಯತ್ 63.6%, ಸುಲ್ಯ ಪಟ್ಟಣ ಪಂಚಾಯತ್ 71.7% ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರ ಸಭೆ 60.35%, ಸಾಲಿಗ್ರಾಮ 67.14%, ಕುಂದಾಪುರ 61.90%, […]

ಸ್ಥಳೀಯಾಡಳಿತ ಚುನಾವಣೆ ಫೈಟ್ ಗಿಳಿದ226 ಮಹಿಳೆಯರು !

Thursday, March 7th, 2013

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ  ಏಳು ಸ್ಥಳೀಯಾಡಳಿತ ಪ್ರದೇಶಗಳಿಗೆ ನಡೆಯಲಿರುವ ಚುನಾವಣಾ ಕದನದಲ್ಲಿ  226ಮಂದಿ ಮಹಿಳೆಯರು ಫೈಟ್ ಗಿಳಿದಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ, ಮೂಡುಬಿದಿರೆ. ಉಳ್ಳಾಲ, ಬಂಟ್ವಾಳ, ಪುತ್ತೂರು ಪುರಸಭೆ,  ಬೆಳ್ತಂಗಡಿ, ಸುಳ್ಯ ಪಟ್ಟಣ ಪಂಚಾಯಿತಿ  ವ್ಯಾಪ್ತಿಯಲ್ಲಿ  ಚುನಾವಣಾ  ಕದನ ಕಣದಲ್ಲಿ ರುವ ಒಟ್ಟು 677ಮಂದಿ ಅಭ್ಯರ್ಥಿಗಳ ಪೈಕಿ 226ಮಂದಿ ಮಹಿಳೆಯರು ! ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 72ಮಂದಿ ಮಹಿಳೆಯರು ಕಣದಲ್ಲಿದ್ದರೆ, ಜೆಡಿಎಸ್ ನಿಂದ  42 ಮಂದಿ  ಸ್ತ್ರೀಯರು ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಎಸ್ ಡಿಪಿಐ […]