ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ : ಮಮತಾ ಗಟ್ಟಿ

Tuesday, March 5th, 2013
Mahila Congress Chief

ಮಂಗಳೂರು : ಬಿಜೆಪಿ ಯು ಅಧಿಕಾರಕ್ಕೆ ಬಂದ ನಂತರ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಜನರು ಬಿಜೆಪಿ ಯನ್ನು ಸೋಲಿಸುವುದು ಖಂತಡಿತ ಎಂದು ಜಿಲ್ಲಾ ಮಹಿಳಾ ಕಾಂಗ್ರಸ್ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು. ಅವರು ಸೋಮವಾರ ನಗರದಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅನಾಚಾರ, ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಹಾಲಿನ ದರ, ವಿದ್ಯುತ್ ದರದಲ್ಲಿ ಗಣನೀಯವಾಗಿ ಹೆಚ್ಚಳವನ್ನು ಮಾಡಿ ಮಹಿಳೆಯರನ್ನು […]

ಗುರುಪುರ ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Monday, March 4th, 2013
watery grave in Gurupur river

ಮಂಗಳೂರು : ಸ್ನೇಹಿತರ ಜೊತೆ ಗುರುಪುರ ಹೊಳೆಯ ಬಳಿಯ ಅದ್ಯಪಾಡಿ ಡ್ಯಾಂಗೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ  ಮೃತ ಪಟ್ಟ ಘಟನೆ ಶನಿವಾರ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ನಗರದ ಎಸ್.ಡಿ.ಎಂ ಉದ್ಯಮಾಡಳಿತ ಕಾಲೇಜಿನ ಪ್ರಥಮ ವರ್ಷದ ಬಿಬಿಎಂ ವಿದ್ಯಾರ್ಥಿ ನಿಹಾಲ್ ಬಂಗೇರ(18) ಎನ್ನಲಾಗಿದೆ. ಈತ ಬೊಕ್ಕಪಟ್ಣದ ಕರ್ನಲ್‌ ಗಾರ್ಡನ್‌ ಕೇಶವ ಬಂಗೇರ ಮತ್ತು ರತ್ನ ಬಂಗೇರ ರ ಇಬ್ಬರು ಮಕ್ಕಳಲ್ಲಿ ಈತ ಹಿರಿಯವನಾಗಿದ್ದಾನೆ. ಶನಿವಾರ ಬೆಳಗ್ಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ಮುಗಿದ ಬಳಿಕ ಮಧ್ಯಾಹ […]

ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಮೇಲೆ ಲೋಕಾಯುಕ್ತ ದಾಳಿ ಮೂರು ಅಧಿಕಾರಿಗಳ ಬಂಧನ

Monday, March 4th, 2013
Food & Civil Supplies department

ಮಂಗಳೂರು : ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿಯ ಜಿಲ್ಲಾ ವ್ಯವಸ್ಥಾಪಕ ಮುರಳೀಧರ ರಾವ್ ಸೇರಿದಂತೆ ಮೂರು ಮಂದಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ಜಿಲ್ಲಾ ವ್ಯವಸ್ಥಾಪಕ ಕಚೇರಿಯಲ್ಲಿ ನಡೆಯಿತು. ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿಯ ಮೇಲೆ  ಶನಿವಾರ ಸಂಜೆ ಸುಮಾರು 6.30 ಕ್ಕೆ ದಾಳಿ ನಡೆಸಿ ರಾತ್ರಿ 10 ಗಂಟೆಯವರೆಗೆ ವಿವಿಧ ದಾಖಲೆಗಳ ಪತಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸರು ಜಿಲ್ಲಾ […]

ಸೌಮ್ಯ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ಗೆ ಒತ್ತಾಯಿಸಿ ಗ್ರಾಮಸ್ಥರಿಂದ ಹಕ್ಕೊತ್ತಾಯ ಸಭೆ

Monday, March 4th, 2013
Baltila Villagers

ಬಂಟ್ವಾಳ : ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ಯಲ್ಲಿ ಅತ್ಯಾಚಾರ ಯತ್ನ, ಕೊಲೆಗೀಡಾದ  ಸೌಮ್ಯಳ ಕೊಲೆ ಆರೋಪಿ ಸತೀಶನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಶನಿವಾರ ಬಾಳ್ತಿಲ ಗ್ರಾಮದ ನೂರಾರು ಸಂಖೆಯ ಗ್ರಾಮಸ್ಥರು ಗ್ರಾಮಪಂಚಾಯತ್ ಸಭಾಂಗಣದಲ್ಲಿ ಸೇರಿ  ಹಕ್ಕೊತ್ತಾಯ ಸಭೆ ನಡೆಸಿದರು. ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರ ಸಾಲ್ಯಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಊರ ಗಣ್ಯರು ಭಾಗವಹಿಸಿ ಸೌಮ್ಯಳ ಸಾವಿಗೆ ಸಂತಾಪ ವ್ಯಕ್ತಪಡಿಸಿದರು. ಇಂತಹ ಅಮಾನುಷ ಕೃತ್ಯ ಎಸಗಿದ ಆರೋಪಿಗೆ  ತಕ್ಕುದಾದ ಶಿಕ್ಷೆ […]

ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿರುದ್ಧ ದ ಹೋರಾಟಕ್ಕೆ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಬೆಂಬಲ

Saturday, March 2nd, 2013
Sri Vishwesha Theertha Swamiji

ಉಡುಪಿ : ಮೂಡುಬಿದಿರೆ ಸಮೀಪದ ನಿಡ್ಡೋಡಿಯಲ್ಲಿ ಸರ್ಕಾರ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿಯೇ ಶುಕ್ರವಾರ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ  ಸ್ಥಳೀಯ ಜನರ ಹೋರಾಟಕ್ಕೆ ತಾವು  ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಶುಕ್ರವಾರ ಪೇಜಾವರ ಮಠದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸ್ಥಾಪನೆಯಾದ ವಿಶೇಷ ಆರ್ಥಿಕ ವಲಯದ ವಿರುದ್ಧ ಕೂಡ ನಾನು ದನಿಯೆತ್ತಿದ್ದೆ ಇದಕ್ಕೆ ಪ್ರತಿಯಾಗಿ ಕೆಲವು ರಾಜಕೀಯ ನಾಯಕರು ನನ್ನನ್ನು ಟೀಕಿಸಿದ್ದರು ಆದರೆ ನಾನು ಇವು ಯಾವುದರ […]

ಪೆಟ್ರೋಲು ಬೆಲೆ ಲೀಟರಿಗೆ 1.40 ರೂಪಾಯಿ ಏರಿಕೆ

Saturday, March 2nd, 2013
Petrol price hike

ಹೊಸದಿಲ್ಲಿ : ಪೆಟ್ರೋಲು ಬೆಲೆಯನ್ನು ಲೀಟರಿಗೆ 1.40 ರೂಪಾಯಿಯಂತೆ ಏರಿಸಲಾಗಿದ್ದು, ಇದು ಇತ್ತೀಚೆಗಿನ ಕೆಲವು ವಾರಗಳಲ್ಲಿ ಆಗಿರುವ ದೊಡ್ಡ ಮೊತ್ತದ ಹೆಚ್ಚಳ.ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯೇರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲು ಬೆಲೆಯನ್ನು ರೂ. 1.40ರಂತೆ ಏರಿಸುವುದು ಅನಿವಾರ್ಯ ಎಂದು ಭಾರತೀಯ ತೈಲ ನಿಗಮ ಹೇಳಿದೆ. ಈ ಏರಿಕೆಯಲ್ಲಿ ಸ್ಥಳೀಯ ತೆರಿಗೆಗಳು ಒಳಗೊಂಡಿಲ್ಲ. ವ್ಯಾಟ್‌ ಸೇರಿಸಿದ ಬಳಿಕ ಏರಿಕೆ ಇನ್ನೂ ತುಸು ಹೆಚ್ಚಾಗಲಿದೆ. ಫೆ. 16ರಂದು ವ್ಯಾಟ್‌ ಸೇರಿಸದೆ ರೂಪಾಯಿ 1.50 […]

ಮಂಗಳೂರು ದಕ್ಷಿಣ ವಿಧಾನಸಭಾ ಕಚೇರಿಯಲ್ಲಿ ಜೆಡಿಎಸ್ ಸೇರಿದ ಬಿಜೆಪಿ ಕಾರ್ಯಕರ್ತರು

Saturday, March 2nd, 2013
BJP activists jion to JDS

ಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ಪ್ರಮುಖ ರಾಜಕೀಯ ಪಕ್ಷಗಳು ಬೇರೆ ಪಕ್ಷಗಳಲ್ಲಿನ  ಕಾರ್ಯಕರ್ತರನ್ನು ತಮ್ಮತ್ತ ಸೇಳೆಯುವ ಕಡೆ  ಗಮನಹರಿಸಿವೆ. ಅದರಲ್ಲೂ ಮುಖ್ಯವಾಗಿ ಜೆಡಿಎಸ್ ಈ ವಿಷಯದಲ್ಲಿ ಮುಂದಿದೆ. ನಗರದ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮರಕಡ ವಾರ್ಡ್ ಸಂಖ್ಯೆ 14ರ ಬಿಜೆಪಿ ಕಾರ್ಯಕರ್ತರಾದ ಪ್ರವೀಣ್ ಶೆಟ್ಟಿ, ಸುರೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ಇವರ ನಾಯಕತ್ವದಲ್ಲಿ ಹಲವಾರು ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆಗೊಂಡರು. ಈ […]

ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

Saturday, March 2nd, 2013
BJP’s election manifesto

ಮಂಗಳೂರು : ಕಾನೂನು ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್‌ ಕುಮಾರ್‌ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ಕಳೆದ ೫ ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾರ್ಥಕ ಸಾಧನೆಯನ್ನು ಬಿಜೆಪಿ ಮಾಡಿದೆ. ನಗರದ ರಸ್ತೆಗಳನ್ನು ಉನ್ನತದರ್ಜೆಗೇರಿಸುವಲ್ಲಿ ಆದ್ಯತೆಯ ಮೇರೆಗೆ ಈಗಾಗಲೇ 75 ಕಿ.ಮೀ. ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿದೆ. 40 ಕಿ.ಮೀ. ರಸ್ತೆಯನ್ನು ಇಂಟರ್‌ಲಾಕ್‌ ರಸ್ತೆಯಾಗಿ ನಿರ್ಮಾಣ ಮಾಡಿದೆ. ಫ‌ುಟ್‌ಪಾತ್‌ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿ ನಡೆಯತ್ತಿದೆ ಎಂದರು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ […]

ಅಕ್ರಮ ಗಾಂಜಾ ಸಾಗಾಟ ನಾಲ್ವರು ಆರೋಪಿಗಳ ಸೆರೆ

Saturday, March 2nd, 2013
ganja seized at Sullia

ಸುಳ್ಯ : ಶುಕ್ರವಾರ ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೂಲಿ ಶೆಡ್ಡ್ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಜಾಲವನ್ನು ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ಸುಳ್ಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಿ ಅವರ ಬಳಿಯಲ್ಲಿದ್ದ 1.100 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರದ ಆಸುಪಾಸಿನ ಅವಿನಾಶ್‌(29), ಅರುಣ್‌ ಶೆಟ್ಟಿ(38), ನೆಲ್ಸನ್‌ ಡಿಸೋಜ(29) ಮತ್ತು ಪ್ರಥ್ವಿ ಆಳ್ವ(38) ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ರೂಪಾಯಿ  35049 ನಗದು, 6 ಮೊಬೈಲ್‌, 1 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ […]

ಕಾಂಗ್ರೆಸ್ : ಮಹಾನಗರ ಪಾಲಿಕೆ ಚುನಾವಣೆಯ ಪ್ರಣಾಳಿಕೆ ಬಿಡುಗಡೆ

Saturday, March 2nd, 2013
Congress election manifesto

ಮಂಗಳೂರು : ಕದ್ರಿಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಚೇರಿಯಲ್ಲಿ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮಂಗಳೂರು ಒಂದು. ಈ ನಗರವನ್ನು ಬೆಂಗಳೂರಿನಂತೆ ಸಿಲಿಕಾನ್ ಸಿಟಿಯಾಗಿ ಅಭಿವೃದ್ಧಿ ಪಡಿಸಲು ಕಾಂಗ್ರೆಸ್ ಬದ್ಧವಾಗಿದೆ. ಮನಪಾ ಚುನಾವಣೆಗೆ ಸಂಬಂಧಿಸಿದಂತೆ ನಗರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ನಾಗರಿಕ ಸೌಲಭ್ಯವನ್ನು ಒದಗಿಸಲು ಕಾಂಗ್ರೆಸ್ ಹೆಚ್ಚಿನ ಆಧ್ಯತೆ ನೀಡಲಿದೆ ಎಂದರು. […]