ಮಕ್ಕಳಾಟಿಕೆ ಸೃಷ್ಟಿಸಿದ ನಕ್ಸಲ್ ಪ್ರಸಂಗ

Thursday, November 29th, 2012
Boys in forest

ಬೆಳ್ತಂಗಡಿ :ಚಾರ್ಮಾಡಿಯಲ್ಲಿ ಎಎನ್‌ಎಫ್ ಪೊಲೀಸರ ಕೂಂಬಿಂಗ್ ಕಾರ್ಯಾಚರಣೆ ಸಂದರ್ಭ ಬಾಲಕರಿಬ್ಬರು ಕಾಡಿನಲ್ಲಿ ಪತ್ತೆಯಾಗುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಘಟನೆ ಬುಧವಾರ ಚಾರ್ಮಾಡಿಯ ಪೇಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ. ಮೀ. ದೂರದಲ್ಲಿ ನಡೆದಿದೆ. ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಮಂಗಳವಾರ ರಾತ್ರಿ ಚಾರ್ಮಾಡಿಯಲ್ಲಿ ನಕ್ಸಲ್ ತಂಡವಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ ಬುಧವಾರ ಬೆಳಗ್ಗೆ ತಂಡವೊಂದು ಚಾರ್ಮಾಡಿ ಪೇಟೆ ಬಳಿಯ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಚಾರ್ಮಾಡಿ ಪೇಟೆಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ […]

ನಿರುದ್ಯೊಗಿಗಳಿಗೆ ಉದ್ಯೋಗ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಡಿ.ವೈ.ಎಫ್.ಐ ಸಮಿತಿ ವತಿಯಿಂದ ಪ್ರತಿಭಟನೆ

Wednesday, November 28th, 2012
employment or Allowance

ಮಂಗಳೂರು :ಡಿ.ವೈ.ಎಫ್.ಐ.ರಾಜ್ಯ ಸಮಿತಿ ವತಿಯಿಂದ ನಿರುದ್ಯೊಗಿಗಳಿಗೆ ಉದ್ಯೋಗ ಒದಗಿಸಿ ಕೊಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯನ್ನುದ್ದೇಷಿಸಿ ಮಾತನಾಡಿದ ಡಿ.ವೈ.ಎಫ್.ಐ. ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ವಿದ್ಯಾವಂತ ನಿರುದ್ಯೋಗಿ ಯುವಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಮ್ಮ ಸರ್ಕಾರವು ಈ ಬಗ್ಗೆ ಯಾವುದೇ ಚಿಂತನೆ ನಡೆಸದೆ ಇರುವುದರಿಂದ ನಮ್ಮ ಯುವಕರು ಹೊಟ್ಟೆಪಾಡಿಗಾಗಿ ಅಪರಾಧ ಚಟುವಟಿಕೆಗಳಂತಹ ಅನ್ಯ ಮಾರ್ಗವನ್ನು ಅನುಸರಿಸುವ ಅಪಾಯ ಎದುರಾಗಿದೆ. ಈ ಅಪಾಯದಿಂದ ಹೊರಬರಲು […]

ಎಕ್ಕಾರು ಕೋಳಿ ಫಾರ್ಮ್ ಕಾರ್ಮಿಕನ ಕೊಲೆ

Wednesday, November 28th, 2012
Bajpe Labour murder

ಮಂಗಳೂರು : ದುರ್ಗಾ ನಗರದ ಕೋಳಿ ಫಾರ್ಮ್‌ನಲ್ಲಿ ಕಳೆದ 20 ವರ್ಷಗಳಿಂದ ಕಾರ್ಮಿಕನಾಗಿ ದುಡಿಯುತ್ತಿದ್ದ ಭದ್ರಾವತಿ ಮೂಲದ ಸಿದ್ದಪ್ಪ (38) ಎಂಬಾತನನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂದಿಸಿದಂತೆ ಇನ್‌ಸ್ಪೆಕ್ಟರ್ ದಿನಕರ ಶೆಟ್ಟಿ ನೇತೃತ್ವದ ಬಜಪೆ ಪೊಲೀಸರ ತಂಡ ಆರೋಪಿಯನ್ನು ಬಂಧಿಸಲಾಗಿದೆ. ಸಿದ್ದಪ್ಪ ಕಳೆದ 20 ವರ್ಷಗಳಿಂದ ಇದೇ ಕೋಳಿ ಫಾರ್ಮ್ ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಈ ಮೊದಲು ಇದೇ ಫಾರ್ಮ್ ನಲ್ಲಿ ಕೆಲಸಮಾಡುತ್ತಿದ್ದ ಕಿರಣ್ ಎಂಬಾತನನ್ನು ಹಣ ದುಂದುವೆಚ್ಚ ಮಾಡುತ್ತಿದ್ದ ಆರೋಪದಲ್ಲಿ ಕೆಲಸದಿಂದ ತೆಗೆದು […]

“ಭಾರತದಲ್ಲಿ ಧರ್ಮದ ಪುನರ್‌ಚಿಂತನೆ” ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ

Wednesday, November 28th, 2012
Re Thinking religion in Ind

ಮಂಗಳೂರು :ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ‘ಭಾರತದಲ್ಲಿ ಧರ್ಮದ ಪುನರ್‌ಚಿಂತನೆ’ ಎಂಬ ವಿಷಯದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ದಿನವಾದ ಮಂಗಳವಾರ ಬೆಳಗ್ಗೆ ‘ಲೀಗಲ್‌ ಓಪಸ್‌ ಮತ್ತು ಪರ್ಲ್ಸ್‌ ಆಫ್‌ ವಿಸ್ಡಮ್‌ ಜರ್ನಲ್‌’ ಪುಸ್ತಕವನ್ನು ಡಾ| ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಧರ್ಮದ ಹೆಸರಿನಲ್ಲಿ ಪರಸ್ಪರ ದ್ವೇಷ ಅಸೂಯೆಗಳು ಮೂಡಿ ಯುದ್ಧಕ್ಕೆ ಕಾರಣವಾದ ಉದಾಹರಣೆಗಳಿವೆ. ಈ ನೆಲೆಯಲ್ಲಿ ಧರ್ಮದ ಕುರಿತು ಆಳವಾದ ಅಧ್ಯಯನ ನಡೆಯುವ ಅನಿವಾರ್ಯತೆ ಇದೆ. ಪ್ರತಿಯೊಂದು […]

ಮಂಗಳೂರಿ ನಲ್ಲಿ ಪ್ರಪ್ರಥಮ ಸುಸಜ್ಜಿತ ಪಂಚತಾರ ಹೋಟೆಲ್ ದೀಪ ಗ್ರಾಂಡ್ಯೂರ್ ಗೆ ಶಿಲಾನ್ಯಾಸ

Tuesday, November 27th, 2012
Deepa Grandeur

ಮಂಗಳೂರು :ಮಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ ದೀಪ ಡೆವಲಪರ್ಸ್ ಸಂಸ್ಥೆಯಿಂದ ನಗರದ ಎಂ.ಜಿ.ರಸ್ತೆಯಲ್ಲಿ ದೀಪ ಗ್ರಾಂಡ್ಯೂರ್ ಎಂಬ ಸುಸಜ್ಜಿತವಾದ ಪಂಚತಾರ ಹೊಟೇಲನ್ನು ಸ್ಥಾಪಿಸಲಾಗುವುದಾಗಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಜನತಾ ಕನ್ಟ್ರಕ್ಷನ್ ಸಂಸ್ಥೆಯ ಆಡಳಿತ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು. ಮಂಗಳೂರಿನಲ್ಲಿ ಈ ವರೆಗೆ ಪಂಚತಾರಾ ಹೋಟೆಲ್ ಇಲ್ಲದೇ ಇದ್ದು ಇದು ಮೊದಲ ಹೊಟೇಲಾಗಿದೆ. ಮತ್ತು ಇದರ ಜೊತೆಗೆ ಪಕ್ಕದಲ್ಲಿ ಸುಸಜ್ಜಿತ ಸೌಕರ್ಯವುಳ್ಳ ವಸತಿ ಹಾಗೂ ವಾಣಿಜ್ಯ ಸಂಕೀರ್ಣವನ್ನು ಕೂಡ ಸ್ಥಾಪಿಸಲಾಗುವುದು. ಈ ಎರಡು ಕಟ್ಟಡಗಳಿಗೂ ನವೆಂಬರ್ […]

ಮಂಗಳೂರಿಗೆ ಬಂದ ಎರಡು ವಿದೇಶಿ ಐಶರಾಮಿ ಪ್ರವಾಸಿ ಹಡಗು

Tuesday, November 27th, 2012
New Mangalore Port

ಮಂಗಳೂರು :ಸುಮಾರು 1,810 ಪ್ರಯಾಣಿಕರು ಮತ್ತು 617 ಸಿಬ್ಬಂದಿಯನ್ನು ಹೊತ್ತ ಎಂ. ವಿ. ಐಡಾ ದಿವಾ ಮತ್ತು 60 ಪ್ರಯಾಣಿಕರು ಮತ್ತು 70 ಸಿಬ್ಬಂದಿಯನ್ನು ಹೊತ್ತ ಎಂ. ವಿ. ಕ್ಲಿಪ್ಪರ್ ಒಡಿಸ್ಸಿ ಎಂಬ ಐಶಾರಾಮಿ ಹಡಗುಗಳು ನವಮಂಗಳೂರು ಬಂದರಿಗೆ ನವೆಂಬೆರ್ 24ರಂದು ಆಗಮಿಸಿದವು. ಐಡಾ ದಿವಾ ಅತೀ ದೊಡ್ಡ ಐಶಾರಾಮಿ ಹಡಗುಗಳ ಪೈಕಿ ಒಂದಾಗಿದ್ದು ಮೂರನೇ ಬಾರಿಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ. ಈ ಮೂಲಕ ಕರಾವಳಿಗೆ ಮತ್ತೆ ವಿದೇಶಿ ಪ್ರವಾಸಿಗರ ದಂಡು ಹರಿದು ಬರತೊಡಗಿದೆ. ಐಡಾ […]

ಬಾಲಕಲಾವಿದೆ ಜ್ಞಾನಾ ಐತಾಳ್‌ ರವರಿಂದ ಮಕ್ಕಳ ಚಲನಚಿತ್ರೋತ್ಸವ ಸಮಾರಂಭಕ್ಕೆ ಚಾಲನೆ

Tuesday, November 27th, 2012
Children s Film Festival

ಮಂಗಳೂರು :ಚಿಲ್ಡ್ರನ್ಸ್‌ ಫಿಲ್ಮ್ ಸೊಸೈಟಿ ಚೆನೈ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಸೋಮವಾರ ಮಕ್ಕಳ ಚಲನಚಿತ್ರೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಪ್ರತಿಭಾವಂತ ಬಾಲಕಲಾವಿದೆ ಜ್ಞಾನಾ ಐತಾಳ್‌ ಸಮಾರಂಭಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ಎನ್. ವಿಜಯಪ್ರಕಾಶ್ ಅಧ್ಯಕ್ಷತೆ ವಹಿಸಿ ಅಸಾಧಾರಣ ಪ್ರತಿಭೆ ಮೂಲಕ ಅರ್ಥಪೂರ್ಣ ಉದ್ಘಾಟನೆ ನಡೆದಿದೆ. ಚಲನಚಿತ್ರದ ಸಂದೇಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸುವುದು ಪ್ರದರ್ಶನದ ಉದ್ದೇಶ. ವಿದ್ಯಾರ್ಥಿಗಳು ರಾಷ್ಟ್ರಪ್ರೇಮ, ಸತ್ಯ, ನಿಷ್ಠೆ […]

ಕಾಸರಗೋಡು :ತುಳು ಶಾಸನ ಪತ್ತೆ

Tuesday, November 27th, 2012
Ancient Tulu inscription

ಉಡುಪಿ :ಕಾಸರಗೋಡಿನ ಪರಕ್ಕಿಲ ಎಂಬಲ್ಲಿ ತುಳು ಶಾಸನವೊಂದು ಪತ್ತೆಯಾಗಿದ್ದು, ಕಾಸರಗೋಡಿನಿಂದ ಮಧೂರು ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮಧೂರು ದೇವಸ್ಥಾನಕ್ಕಿಂತ ಸುಮಾರು ಒಂದು ಕಿ.ಮೀ. ಮೊದಲು ಉಳಿಯತ್ತಡ್ಕದಿಂದ ಕವಲೊಡೆಯುವ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಪರಕ್ಕಿಲ ಮಹಾಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ಪಡುಗೋಪುರದಲ್ಲಿ ಶಾಸನವು ದೊರೆತ್ತಿದ್ದು ಶಾಸನದ ಎಡದಲ್ಲಿ ಅಂಕುಶದ ಚಿಹ್ನೆ ಇದೆ, ಮಧೂರು ಸಿದ್ಧಿವಿನಾಯಕನ ಹಸ್ತಶೋಭಿ ಒಂದು ಅಂಕುಶವೂ ಇದೆ. ಈ ಹಿನ್ನೆಲೆಯಲ್ಲಿ ಇದು ಎರಡು ದೇವಾಲಯಗಳಿಗೆ ಸಂಬಧಿಸಿರಬಹುದಾದ ಶಾಸನವಾಗಿರಬಹುದು. ಶಾಸನವು ಬಹಳಷ್ಟು ಸವೆದಿರುವುದರಿಂದ ಓದಲಾಗದ ಸ್ಥಿತಿಯಲ್ಲಿದೆ. […]

ಮಂಗಳೂರು :ನೂತನ ಪ್ರವಾಸಿ ತಾಣ “ಕುಡ್ಲ ಕುದ್ರು” ಉದ್ಘಾಟನೆ

Monday, November 26th, 2012
Kudla Kudru island

ಮಂಗಳೂರು :ಶಾಸಕ ಕೃಷ್ಣ ಜೆ ಪಾಲೆಮಾರ್ ರವರು ನಗರದ ಬೊಕ್ಕಪಟ್ಟಣದ ನಡುಕುದ್ರುವಿನಲ್ಲಿ ನೂತನ ಪ್ರವಾಸಿ ತಾಣ ‘ಕುಡ್ಲ ಕುದ್ರುವನ್ನು’ ವನ್ನು ರವಿವಾರ ಸಂಜೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕರಾವಳಿ ಜನತೆಯ ಆಧ್ಯತೆಯ ಮೇರೆಗೆ ಇಲ್ಲಿ ಪ್ರವಾಸಿ ತಾಣಗಳು ರೂಪುಗೊಳ್ಳುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದ್ದು ಈ ಪ್ರವಾಸಿ ತಾಣವು ಕರಾವಳಿ ಪ್ರವಾಸೋಧ್ಯಮಕ್ಕೆ ಹೊಸ ಮುನ್ನುಡಿ ಎಂದವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದಾನಸಭಾ ಉಪಸಭಾಪತಿ ಎನ್ ಯೋಗೀಶ್ ಭಟ್ ವಹಿಸಿದ್ದರು. ಮಂಗಳೂರು ಮೇಯರ್ ಗುಲ್ಜಾರ್ ಬಾನು, ಉಪ ಮೇಯರ್ […]

ನಗರದಲ್ಲಿನ ಮಂಗಳಮುಖಿಯರ ಅಂಕಿ ಅಂಶ ಸಂಗ್ರಹಕ್ಕೆ ಪೊಲೀಸ್‌ ಆಯುಕ್ತ ಮನೀಶ್‌ ಕರ್ಬೀಕರ್‌ ಸೂಚನೆ

Monday, November 26th, 2012
Manish Karbikar

ಮಂಗಳೂರು :ಕೆಲವು ಮಂದಿ ಸೋಮಾರಿ ಪುರುಷರು ಮಂಗಳಮುಖೀಯರ ವೇಷ ಹಾಕಿಕೊಂಡು ಮಂಗಳೂರು ನಗರ, ಪಣಂಬೂರು ಬೀಚ್‌ ಮತ್ತು ಸುತ್ತಮುತ್ತ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದಾಗಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಆನಂದ ಎಸ್‌.ಪಿ. ಅವರು ರವಿವಾರ ಪೊಲೀಸ್‌ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ -ಪಂಗಡದ ದೌರ್ಜನ್ಯ ತಡೆ ಬಗೆಗಿನ ಮಾಸಿಕ ಸಭೆಯಲ್ಲಿ ತಿಳಿಸಿದರು. ಈ ಸಬಂಧ ಸಭೆಯ ಅಧ್ಯಕ್ಷತೆ ವಹಿಸಿದ ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್‌ ರವರು ನಗರದಲ್ಲಿರುವ ಮಂಗಳಮುಖೀಯರ ಬಗ್ಗೆ ಸಮೀಕ್ಷೆ ನಡೆಸಿ ಅಂಕಿ […]