ನಗರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ಬೇಡ: ಜಿಲ್ಲಾಧಿಕಾರಿ

Friday, April 15th, 2011
ಜಿಲ್ಲಾಧಿಕಾರಿ ಸುಬೋಧ್ ಯಾದವ್

ಮಂಗಳೂರು : ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಅದರಲ್ಲೂ ಮುಖ್ಯವಾಗಿ ಯೋಜನೆ ಉಲ್ಲಂಘಿಸಿ ನಿರ್ಮಾಣವಾಗುವ ಕಟ್ಟಡಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸ ಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು. ಅವರಿಂದು ಕಾರ್ಪೋರೇಷನ್ ಕಚೇರಿಯಲ್ಲಿ ನಡೆದ ಪಾಲಿಕೆ ಅಭಿವೃದ್ಧಿ ಸಭೆಯಲ್ಲಿ ಪ್ರಗತಿಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಕಟ್ಟಡ ನಿರ್ಮಾಣದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿದ್ದು, ನಗರ ಯೋಜನಾಧಿಕಾರಿಗಳು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದರು. ಅಕ್ರಮಗಳ ದೂರು ವ್ಯಾಪಕವಾದರೆ ತನ್ನ ಮಧ್ಯಪ್ರವೇಶ ಅನಿವಾರ್ಯವಾದೀತು ಎಂಬ ಎಚ್ಚರಿಕೆಯನ್ನು […]

ಅಡ್ವಾಣಿ ಬ್ಲಾಗ್ ನಲ್ಲಿ ಅಣ್ಣಾ ಹಜಾರೆಗೆ ಖಂಡನೆ

Tuesday, April 12th, 2011
ಎಲ್ .ಕೆ. ಅಡ್ವಾಣಿ

ನವದೆಹಲಿ : ಜನಲೋಕಪಾಲ್ ಮಸೂದೆ ಜಾರಿ ಹೋರಾಟದಲ್ಲಿ ಅಣ್ಣಾ ಹಜಾರೆ ಎಲ್ಲಾ ರಾಜಕಾರಣಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುವ ಅಣ್ಣಾ ಅವರ ಧೋರಣೆ ಬಗ್ಗೆ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಜೆಪಿಸಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸತತ ಎರಡು ತಿಂಗಳ ಕಾಲ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವಾಗಿತ್ತು. ಆದರೆ ಅಣ್ಣಾ ಹಜಾರೆ ಅವರು ಕೇವಲ ನಾಲ್ಕು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ […]

ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆ

Sunday, April 10th, 2011
ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆ

ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಇನ್ನಿತರ ಹಿಂದೂ ಸಂಘಟನೆಗಳು, ಮತಾಂತರದ ವಿರುದ್ಧ ಶನಿವಾರ ದ.ಕ ಜಿಲ್ಲಾಧಿಕಾರಿ ಕಚೇರಿಯ  ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮತಾಂತರದ ವಿರದ್ಧ ಕೂಡಲೇ ಕ್ರಮ ಜರಗಿಸುವಂತೆ ಮನವಿ ಸಲ್ಲಿಸಿತು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ  ಬಡ ಹಿಂದೂ ಕುಟುಂಬಗಳ ಎಳೆಯ ಮಕ್ಕಳಿಗೆ ಉಚಿತ ಸೌಲಭ್ಯ ನೀಡುವ  ಆಮಿಷದ ಮೂಲಕ ಕ್ರೈಸ್ತ ಮಿಶನರಿಗಳು ಮತಾಂತರ ಕಾರ್ಯವನ್ನು ಮಾಡುತ್ತಿದೆ. ಕರಾವಳಿ ಜಿಲ್ಲೆಯಲ್ಲಿ 40ಕ್ಕೂ ಮಿಕ್ಕಿದ ಮತಾಂತರ ಕೇದ್ರಗಳು […]

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.ಸಿ. ಕಚೇರಿಗೆ ಮುತ್ತಿಗೆ

Thursday, April 7th, 2011
ರಾಜ್ಯ ರೈತ ಸಂಘ

ಮಂಗಳೂರು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು, ದ.ಕ, ಉಡುಪಿ, ಉ.ಕ., ಕೊಡಗು ಜಿಲ್ಲೆ ಅಡಿಕೆ ಬೆಳೆಗಾರರ ಎಲ್ಲಾ ಕೃಷಿ ಸಾಲ ಮನ್ನಾ-ಪನರ್ವಸತಿ ಪ್ಯಾಕೇಜ್ ನೀಡಲು ಮತ್ತು ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಸ್ವಾಧೀನದ ವಿರುದ್ಧ ಇಂದು ಮಧ್ಯಾಹ್ನ ದಕ್ಷಿಣ ಕನ್ನಡ ಡಿ.ಸಿ. ಕಚೇರಿಗೆ ಮುತ್ತಿಗೆ ಹಾಕಿತು. ನಗರದ ಜ್ಯೋತಿ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲೆಯ ವಿವಿದೆಡೆಗಳಿಂದ ಬಂದ ರೈತರು ದ.ಕ ಜಿಲ್ಲಾಧಿಕಾರಿ ಕಛೇರಿ ಬಳಿ ಬೇಡಿಕೆಗಾಗಿ ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘದ […]

11 ಮರಳು ಸಾಗಣೆ ಲಾರಿ ವಶ

Thursday, April 7th, 2011
ಮರಳು ಸಾಗಣೆ ಲಾರಿ ವಶ

ಮಂಗಳೂರು : ಮಂಗಳೂರು ತಾಲೂಕು ವ್ಯಾಪ್ತಿಯ ಅಡ್ಯಾರ್, ಉಳಾಯಿಬೆಟ್ಟು ಮತ್ತು ಬಂಟ್ವಾಳ ತಾಲೂಕಿನ ಪೊಳಲಿ, ಬರಿಮಾರ್ನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದ 11 ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 5 ಮರಳು ತುಂಬಿದ ಲಾರಿಗಳು ಮತ್ತು 6 ಖಾಲಿ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಕಂದಾಯ ಇಲಾಖೆ ಈ ದಾಳಿಯ ನೇತೃತ್ವ ವಹಿಸಿತ್ತು. ಗಣಿ ಇಲಾಖೆ ಅಧಿಕಾರಿಗಳು ಬಳಿಕ ಘಟನಾ ಸ್ಥಳಕ್ಕೆ ತಲುಪಿ ಕಾನೂನು ಕ್ರಮಕೈಗೊಂಡಿದ್ದಾರೆ. 420, 379 ನಿಯಮಗಳಡಿ ಎಫ್ ಐ ಆರ್ ದಾಖಲಿಸಿದ್ದು, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. […]

ಕೃಷಿಗೆ ಆದ್ಯತೆ ನೀಡಿ-ಪಿ.ಶಿವಶಂಕರ್

Wednesday, April 6th, 2011
ಪಿ.ಶಿವಶಂಕರ್

ಮಂಗಳೂರು : ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಜಿಲ್ಲಾ ಸಾಲ ಯೋಜನೆ 2011-12 ರಲ್ಲಿ ಹೆಚ್ಚಿನ ಅನುದಾನವನ್ನು ನಿಗಧಿಪಡಿಸುವ ಮೂಲಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಶ್ರೀ ಪಿ.ಶಿವಶಂಕರ್ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದ ಮುಖ್ಯಸ್ಥರಿಗೆ ಕರೆ ನೀಡಿದ್ದಾರೆ. ಅವರು ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ 2011-12 ನೇ ಸಾಲಿನ ಜಿಲ್ಲಾ ಬ್ಯಾಂಕಿಂಗ್ ಸಾಲಯೋಜನೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 2010-11 ನೇ ಸಾಲಿನಲ್ಲಿ […]

ಸೇನಾ ನೇಮಕಾತಿ ರಾೄಲಿಗೆ 3800ಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಜರ್

Wednesday, April 6th, 2011
ಭಾರತೀಯ ಸೇನೆಯ ವಿವಿಧ ಹುದ್ದೆಗಳ ನೇಮಕಾತಿ

ಮಂಗಳೂರು : ಭಾರತೀಯ ಸೇನೆಯ ವಿವಿಧ ಹುದ್ದೆಗಳ ನೇಮಕಾತಿಗಾಗಿ ಎಪ್ರಿಲ್ 1 ರಿಂದ ಆರಂಭವಾಗಿರುವ ನೇಮಕಾತಿ ರಾೄಲಿಗೆ ರಾಜ್ಯದ 11 ಜಿಲ್ಲೆಗಳಿಂದ ಸುಮಾರು 3800 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆಯೆಂದು ನೆಮಕಾತಿ ರ್ಯಾಲಿಯ ಮುಖ್ಯ ಬ್ರಿಗೇಡಿಯರ್ ಎಂ.ಎಂ.ಗುಪ್ತಾ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು. ಅವರು ಮಂಗಳಾ ಕ್ರೀಡಾಂಗಣದಲ್ಲಿ ಇಂದು ನಡೆದ ಅಭ್ಯರ್ಥಿಗಳ ಸಂದರ್ಶನದ ವೇಳೆಯಲ್ಲಿ ಮಾತನಾಡಿ, ಭಾರತೀಯ ಸೇನೆಗೆ ನೇಮಕ ವಾದಲ್ಲಿ ಆರಂಭದಲ್ಲೆ ರೂ.15,000 ಮೇಲ್ಪಟ್ಟು ವೇತನ ಸಿಗಲಿದೆ.ಇದರ ಜೊತೆಗೆ ಆಕರ್ಷಕ ಭತ್ಯೆಗಳು ದೊರೆಯಲಿವೆ. ಮೈಸೂರಿನ ಚಾಮುಂಡಿ […]

ಪ್ರಗತಿಪರಿಶೀಲನೆ: ಪೂರ್ವಭಾವಿ ಸಭೆ

Wednesday, April 6th, 2011
ಇಲಾಖೆಗಳ ಪ್ರಗತಿ ಪರಿಶೀಲನೆ

ಮಂಗಳೂರು : ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು ಏಪ್ರಿಲ್ 8ರಂದು ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದ್ದು, ಈ ಸಂಬಂಧ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಯಿತು. ಮಹಾನಗರಪಾಲಿಕೆ, ಜಿಲ್ಲಾ ಪಂಚಾಯತ್ ಒಳಗೊಂಡಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ವಿಶೇಷ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ ಕೆ ಎನ್ ವಿಜಯಪ್ರಕಾಶ್, […]

ನಿವೇಶನ ಕೊಡುವುದಿರಲಿ, ಬಿಡಿಎಗೆ ನಿರ್ದೇಶನ ನೀಡಲು ಕೂಡ ಸರಕಾರಕ್ಕೆ ಅಧಿಕಾರವಿಲ್ಲ

Tuesday, April 5th, 2011
ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು  : ದೇಶಾಭಿಮಾನದಿಂದ ಭಾರತ ವಿಶ್ವಕಪ್ ಗೆದ್ದಾಗ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರ ಉತ್ಸಾಹ ಮಿತಿಮೀರಿತ್ತು, ಅದೇ ಉತ್ಸಾಹದಲ್ಲಿ ಕ್ರಿಕೆಟ್ ಆಟಗಾರರರಿಗೆ 50×80 ಬಿಡಿಎ ನಿವೇಶನ ನೀಡುವುದಾಗಿ ಘೋಷಿಸಿಯೂಬಿಟ್ಟರು. ಇಂಥ ವಾಗ್ದಾನವನ್ನು ನೀಡಲು  ಮುಖ್ಯಮಂತ್ರಿಗಳಿಗೆ ಅಧಿಕಾರವೇ ಇಲ್ಲ. ಸರಕಾರ ನಿವೇಶನ ಕೊಡುವುದಿರಲಿ, ಬಿಡಿಎಗೆ ನಿರ್ದೇಶನ ನೀಡಲು ಕೂಡ ಸರಕಾರಕ್ಕೆ ಅಧಿಕಾರವಿಲ್ಲ. ಏಕೆಂದರೆ, ಬಿಡಿಎ ಒಂದು ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರಿಗೆ ನೀಡಲಾಗಿದ್ದ ಬಿಡಿಎ ನಿವೇಶನಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನಲ್ಲಿ […]

ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾ

Sunday, April 3rd, 2011
ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾ

ಮುಂಬೈ : 28 ವರ್ಷಗಳ ಬಳಿಕ ಭಾರತವು  ಮುಂಬೈಯ ಕಿಕ್ಕಿರಿದ ವಾಂಖೇಡೆ ಕ್ರೀಡಾಂಗಣದಲ್ಲಿ 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತು. ಶನಿವಾರ ನಡೆದ ಫೈನಲ್ ಪಂದ್ಯವು ಏಷ್ಯಾದ ಪ್ರಬಲ ತಂಡಗಳೆರಡರ  ಹೋರಾಟಕ್ಕೆ ಸಾಕ್ಷಿಯಾಗಿ ಭಾರತವು 1983ರ ಏಪ್ರಿಲ್ 2ರ ಶನಿವಾರ ಮಾಡಿದ ಸಾಧನೆಯನ್ನೇ ಅದೇ ವಾರ ಅದೇ ತಾರೀಕಿನಲ್ಲಿ 28 ವರ್ಷಗಳ ಬಳಿಕ ಪುನರಾವರ್ತಿಸಿ, ಏಕದಿನ ಕ್ರಿಕೆಟ್ ನಲ್ಲಿ ನಂ.1 ಪಟ್ಟಕ್ಕೇರಿತು. ಶ್ರೀಲಂಕಾ ಒಡ್ಡಿದ 275 ರನ್ನುಗಳ ಬೆಂಬತ್ತಿದ ಭಾರತ, ಅಂತಿಮವಾಗಿ 48.2 ಓವರುಗಳಲ್ಲಿ 4 ವಿಕೆಟ್ […]