ಅಡ್ಡಹೊಳೆ ಮನೆಯಲ್ಲಿ ಊಟ ಮಾಡಿದ ನಕ್ಸಲರ ತಂಡ, ಮುಂದುವರಿದ ಕೂಂಬಿಂಗ್ ಕಾರ‍್ಯಾಚರಣೆ

Saturday, July 21st, 2012
naxal

ಪುತ್ತೂರು:  ಪುತ್ತೂರು ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಪ್ರದೇಶದಲ್ಲಿ ನಕ್ಸಲ್ ತಂಡ ಮತ್ತೆ ಕಾಣಿಸಿ ಕೊಂಡಿದೆ. ಬೆಳ್ತಂಗಡಿ ಶಿಶಿಲ ಪ್ರದೇಶದಲ್ಲಿ ನಕ್ಸಲರಿಗಾಗಿ ಎಎನ್‌ಎಫ್ ಹಾಗೂ ಪೊಲೀಸರು ಕೂಂಬಿಂಗ್ ಕಾರ್ಯಚರಣೆ ನಡೆಸುತ್ತಿದ್ದು ಈ ನಡುವೆ ಶಿರಾಡಿಯಲ್ಲಿ ನಕ್ಸಲ್ ತಂಡ ಪ್ರತ್ಯಕ್ಷ ವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಅಡ್ಡಹೊಳೆಯ ವರ್ಗೀಸ್ ಎಂಬವರ ಮನೆಗೆ ಹಾಗೂ ಸಮೀಪದ ಇನ್ನೆರಡು ಮನೆಗಳಿಗೆ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವ ಬಂದ ಐದು ಮಂದಿಯ ತಂಡ ಆ ಮನೆಯಲ್ಲಿ ಊಟ ನೀಡುವಂತೆ ಕೇಳಿಕೊಂಡಿದೆ, ಊಟ ಮುಗಿಸಿ ಬಳಿಕ […]

ಡಾ. ಬಿ.ಮಾಧವ ಭಂಡಾಯವರಿಗೆ ಗಣ್ಯರಿಂದ ಅಂತಿಮ ನಮನ

Friday, July 20th, 2012
Madava Bandary

ಮಂಗಳೂರು : ಮಂಗಳವಾರ ರಾತ್ರಿ ನಿಧನರಾದ ಆರೆಸ್ಸೆಸ್ ಮಾಜಿ ವಿಭಾಗ ಸಂಘ ಚಾಲಕ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಮಾಧವ ಭಂಡಾರಿ ಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಗರದ ಬೋಳೂರು ರುದ್ರಭೂಮಿಯಲ್ಲಿನೆರವೇರಿತು. ನಗರದ ಸಂಘನಿಕೇತನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು  ಸಮಾಜ ಬಾಂಧವರು ಪಡೆದು ಗೌರವ ಸಲ್ಲಿಸಿದರು. ಬಿ. ಜನಾರ್ದನ ಪೂಜಾರಿ  ಮಾಧವ ಭಂಡಾರಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಆರೆಸ್ಸೆಸ್ ಹಿರಿಯ ನಾಯಕ ದಾ.ಮ. ರವೀಂದ್ರ, ಆರೆಸ್ಸೆಸ್ ನಲ್ಲಿ […]

ಹೊಸಮನೆ ಲಿಂಗಪ್ಪ ಮಲೆಕುಡಿಯ ಹಾಗೂ ವಿಠಲ ಮಲೆಕುಡಿಯರಿಗೆ ಜಾಮೀನು

Wednesday, July 4th, 2012
vitala Malekudiya

ಬೆಳ್ತಂಗಡಿ: ಕುತ್ಲೂರು ಗ್ರಾಮ ಮಣಿಲ ಹೊಸಮನೆ ಲಿಂಗಪ್ಪ ಮಲೆಕುಡಿಯ ಹಾಗೂ ಅವರ ಪುತ್ರ ಮಂಗಳೂರು ವಿ.ವಿ. ವಿದ್ಯಾರ್ಥಿ ವಿಠಲ ಮಲೆಕುಡಿಯನಿಗೆ ಬೆಳ್ತಂಗಡಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ನಕ್ಸಲ್‌ ಸಂಪರ್ಕದ ಆರೋಪದಲ್ಲಿ ಮಾ.2ರಂದು ನಕ್ಸಲ್‌ ನಿಗ್ರಹ ದಳದರು ವಿಠಲ ಹಾಗೂ ಅವರ ತಂದೆಯನ್ನು ಬಂಧಿಸಿದ್ದರು. ಆ ಸಂಧರ್ಭದಲ್ಲಿ ಪೊಲೀಸರಿಂದ ಹಲ್ಲೆಗೊಳಗಾದ ಲಿಂಗಪ್ಪ ಮಲೆಕುಡಿಯರನ್ನು ಆಸ್ಪತ್ರೆಗೆ ಸೇರಿಸಲು ಬಂದಾಗ ಬಲಾತ್ಕಾರವಾಗಿ ಬಂಧಿಸಿದ್ದರು ಎಂದು ವಿಠಲನ ತಾಯಿ ಆರೋಪಿಸಿದ್ದರು. ರಾಜ್ಯ ಉನ್ನತ ನ್ಯಾಯಾಲಯದಲ್ಲಿಯೂ ವಿಠಲನ ಜಾಮೀನು ಬೇಡಿಕೆ ಈಡೇರಿರಲಿಲ್ಲ. ನ್ಯಾಯಾಲಯ […]

ನೂತನ ಪೊಲೀಸ್‌ ಮಹಾ ನಿರ್ದೇಶಕ ಲಾಲ್‌ರೊಖುಮಾ ಪಚಾವ್‌ ಮಂಗಳೂರು ಭೇಟಿ

Friday, June 29th, 2012
DGP Lalrokhuma Pachau

ಮಂಗಳೂರು : ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕ ಲಾಲ್‌ರೊಖುಮಾ ಪಚಾವ್‌ ಮೇ 31ರಂದು ಡಿಜಿಪಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಅವರು ಜಿಲ್ಲಾಡಳಿತ ಮತ್ತು ಇಲ್ಲಿನ ಪೊಲೀಸ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು. ಪೊಲೀಸ್‌ ಇಲಾಖೆಯಲ್ಲಿ ಮಾನವ ಸಂಪದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಠಾಣೆಗಳಿಗೆ ಆಧುನಿಕ ತಂತ್ರಜ್ಞಾನದ ಮತ್ತು ವೈಜ್ಞಾನಿಕ ಉಪಕರಣ ಮತ್ತು ಇತರ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿ ಉನ್ನತೀಕರಿಸಲಾಗುತ್ತಿದೆ […]

ಓವರ್ ಟೇಕ್ : ಬಸ್ ಹೊಂಡಕ್ಕೆ 24 ಮ೦ದಿಗೆ ಗಾಯ

Wednesday, June 27th, 2012
Bus Accident

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಬುಧವಾರ ಬೆಳಿಗ್ಗೆ ಖಾಸಗಿ ಬಸ್ಸೊಂದು ಅತೀ ವೇಗದ ಚಾಲನೆಯಿಂದ ಉರುಳಿ ಬಿದ್ದ ಪರಿಣಾಮ 24 ಪ್ರಯಾಣಿಕರು ಗಾಯಗೊಂಡು ಇಬ್ಬರ ಸ್ಥಿತಿ ಗಂಭೀರವಾಗಿದೆ. ಬುಧವಾರ ಪೂರ್ವಾಹ್ನ 11ರ ಸುಮಾರಿಗೆ ಈ ಬಸ್‌ ಮಂಗಳೂರಿನಿಂದ ತಲಪಾಡಿಯ ಕಿನ್ಯಕ್ಕೆ ತೆರಳುತ್ತಿತ್ತು. ಕಲ್ಲಾಪು ಸಮೀಪದ ಆಡಂಕುದ್ರು ಬಳಿ ಬಲಬದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಣ್ಣಿನ ರಸ್ತೆಗೆ ಚಾಲಕ ಬಸ್ಸನ್ನು ವೇಗವಾಗಿ ತಿರುಗಿಸಿದ್ದು, ಅದೇ ವೇಳೆಗೆ ಎದುರಿನಿಂದ ಬಂದ ಇನ್ನೊಂದು ಖಾಸಗಿ ಬಸ್‌ಗೆ ಸೈಡ್‌ ನೀಡಲೆಂದು […]

ಕಮ್ಯೂನಿಸ್ಟ್‌ ಪಕ್ಷದ ಹಿರಿಯ ಮುಖಂಡ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ ನಿಧನ

Tuesday, June 5th, 2012
Bv Kakkilaya

ಮಂಗಳೂರು : ಕಮ್ಯೂನಿಸ್ಟ್‌ ಪಕ್ಷದ ಹಿರಿಯ ಮುಖಂಡ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (93) ಅವರು ಸೋಮವಾರ ಮುಂಜಾನೆ 2.30ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯ ರೂವಾರಿಗಳಲ್ಲಿ ಓರ್ವರಾಗಿ, ರಾಜ್ಯಸಭೆ ಮತ್ತು ಕರ್ನಾಟಕ ಶಾಸನ ಸಭೆಗಳ ಸದಸ್ಯರಾಗಿ, ರೈತ ಕಾರ್ಮಿಕ ಮುಖಂಡರಾಗಿ, ಕಮ್ಯೂನಿಸ್ಟ್‌ ಪಕ್ಷದ ಮುಖಂಡರಾಗಿ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಅವರು ನಾಡಿಗೆ ಸಲ್ಲಿಸಿದ ಸೇವೆ ಅಪಾರ. ಕಕ್ಕಿಲ್ಲಾಯ ಅವರು ಡಾ| ಶ್ರೀನಿವಾಸ ಕಕ್ಕಿಲ್ಲಾಯ ಸಹಿತ ನಾಲ್ವರು […]

ನಗರದಲ್ಲಿ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನಕ್ಕೆ ಚಾಲನೆ

Sunday, June 3rd, 2012
kanoon Saksharata Ratha

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಜಿಲ್ಲಾ ಪಂಚಾಯತ್‌, ಮಂಗಳೂರು ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ತಾಲೂಕಿನಲ್ಲಿ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನವನ್ನು ಅವರು ಶನಿವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಅಶೋಕ್‌ […]

ಹೆಚ್ಚುವರಿ ಆಟೋ ತಂಗುದಾಣಕ್ಕೆ ರಿಕ್ಷಾ ಬಂದ್‌, ಮಹಾನಗರಪಾಲಿಕೆ ಕಚೇರಿ ಚಲೋ

Saturday, May 26th, 2012
Auto Strick

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಟೋ ರಿಕ್ಷಾ ಚಾಲಕರ ಸಂಘ, ಜಿಲ್ಲಾ ಆಟೋ ರಿಕ್ಷಾ ಚಾಲಕರ ಅಶೋಸಿಯೇಷನ್, ರಾಜ್ಯ ಆಟೋ ರಿಕ್ಷಾ ಚಾಲಕರ ಫೆಡರೇಷನ್, ಮೈನ್ಯಾರಿಟೀಸ್ ಆಟೋ ಡ್ರೈವರ್ಸ್ ಆಶೋಶಿಯೇಶನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಶುಕ್ರವಾರ ನಗರದಲ್ಲಿ ರಿಕ್ಷಾ ನಿಲುಗಡೆಗೆ ಸುಸಜ್ಜಿತ ತಂಗುದಾಣಗಳ ವ್ಯವಸ್ಥೆ ಕಲ್ಪಿಸ ಬೇಕು ಎಂದು ಆಗ್ರಹಿಸಿ ಮಂಗಳೂರು ಮಹಾನಗರ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಐವನ್‌ ಡಿ’ಸೋಜಾ ನೇತೃತ್ವದಲ್ಲಿ ರಿಕ್ಷಾ ಬಂದ್‌ ಮತ್ತು ಮಹಾನಗರಪಾಲಿಕೆ ಕಚೇರಿ ಚಲೋ ಕಾರ್ಯಕ್ರಮ […]

ಪಿಯುಸಿ ಫಲಿತಾಂಶಃ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ

Thursday, May 24th, 2012
PUC Result

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು,ಶೇ. 86.1 ಫಲಿತಾಂಶ ಲಭಿಸಿದೆ. ಉಡುಪಿ ದ್ವಿತೀಯ (ಶೇ.85.32) ಸ್ಥಾನ ಹಾಗೂ ಕೊಡಗು ತೃತೀಯ ಸ್ಥಾನ ಪಡೆದಿದ್ದು, ಯಾದಗಿರಿ ಶೇ.32.21ಫಲಿತಾಂಶ ಪಡೆದು ಕೊನೆಯ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಈ ಬಾರಿ ಪಿಯುಸಿಯಲ್ಲಿ ಒಟ್ಟು ಶೇ.57.03ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.8.01ರಷ್ಟು ಹೆಚ್ಚಳವಾಗಿದೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ ಎಂ.ದೀಪಾ ಮಲ್ಲೇಶ್ವರದ ಎಂಇಎಸ್ ಕಿಶೋರ ವಿದ್ಯಾಲಯದ ವಿದ್ಯಾರ್ಥಿನಿ 593 […]

ಯುವಜನರು ಶುದ್ಧ ಹೊಸ ರಾಜಕೀಯ ಪರ್ವಕ್ಕೆ ನಾಂದಿ ಹಾಡಲು ಮುಂದಾಗಿ : ಡಿವಿಎಸ್

Wednesday, May 23rd, 2012
BjpYuva Jagruti samavesha

ಮಂಗಳೂರು : ರಾಜ್ಯ ಬಿಜೆಪಿ ಯುವಮೋರ್ಚಾ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಬೃಹತ್‌ ಯುವ ಜಾಗೃತಿ ಸಮಾವೇಶವನ್ನು ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಅನುರಾಧ್‌ ಠಾಕೂರ್‌ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವಿಶೇಷ ಅಹ್ವಾನಿತರಾಗಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ ದೇಶ 60 ವರ್ಷಗಳ ಅನಂತರ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜಾಗಿದೆ. ವ್ಯಾಪಕ ಭ್ರಷ್ಟಾಚಾರ, ಭಯೋತ್ಪಾದನೆ, ಲವ್‌ ಜೆಹಾದ್‌, ನಕ್ಸಲ್‌, ಕಪ್ಪು ಹಣದಂತಹ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿ ಕೇಂದ್ರದ ಯುಪಿಎ […]