ಜರ್ಮನಿಯ ಪ್ರೆಮಿಗಳಿಗೆ ಪಣಂಬೂರು ಬೀಚ್ನಲ್ಲಿ ಮದುವೆ
Friday, October 28th, 2011ಪಣಂಬೂರು: ಪಣಂಬೂರು ಬೀಚ್ನಲ್ಲಿ ಗುರುವಾರ ಆಸ್ಟ್ರೇಲಿಯಾದ ಜೆಸಿಂತಾ ಮತ್ತು ಜರ್ಮನಿಯ ವೋಲ್ಫ್ರಾಮ್ ಜೋಡಿಗಳು ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿ ಸಪ್ತಪದಿ ತುಳಿದು ನೂತನ ವಧುವರರಾದರು. ಆರ್ಕಿಯಾಲೊಜಿ ವಿದ್ಯಾಭ್ಯಾಸ ಮಾಡಿದ್ದ ವೋಲ್ಫಾರಂ ಹಾಗೂ ಜರ್ಮನಿಯ ವಿವಿಯಲ್ಲಿ ಆರ್ಕಿಯೋಲಾಜಿಯ ಉಪನ್ಯಾಸಕಿಯಾಗಿರುವ ಜೆಸಿಂತಾ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಹಾರಬದಲಿಸಿದ ಜೋಡಿಗಳು, ಪೌರೋಹಿತ್ಯದ ವಿದಿವಿಧಾನದೊಂದಿಗೆ ಕರಿಮಣಿ ಧಾರಣೆ ಮಾಡಿ, ಸಪ್ತಪದಿ ತುಳಿದು ಸತಿಪತಿಗಳಾದರು. ವೋಲ್ಫಾರಂ ಮತ್ತು ಜೆಸಿಂತಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. 37 ವಯಸ್ಸಿನ ಈ ಜೋಡಿ ಅಕ್ಟೋಬರ್ ತಿಂಗಳಲ್ಲಿ ಜರ್ಮನಿಯಲ್ಲಿ ರಿಜಿಸ್ಟರ್ […]