ದಸರಾ ಉತ್ಸವಕ್ಕೆ ಪೊಲೀಸ್ ಪರ್ಮಿಸನ್ ಇದ್ದರೆ ಮಾತ್ರ ಹುಲಿವೇಷ

Wednesday, September 28th, 2011
Huli Vesha

ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ನವರಾತ್ರಿ ಉತ್ಸವಕ್ಕೆ ಹುಲಿವೇಷ ಮತ್ತು ಇತರ ವೇಷಗಳನ್ನು ಧರಿಸುವವರು ಸಂಬಂಧಪಟ್ಟ ಪೊಲೀಸ್‌ ಠಾಣೆಗಳಿಂದ ಅನುಮತಿ ಪಡೆದುಕೊಳ್ಳುವುದು ಅಗತ್ಯ ಎಂದು ಪೊಲೀಸ್‌ ಆಯುಕ್ತರು ಪ್ರಕಟನೆಯಲ್ಲಿ  ತಿಳಿಸಿದ್ದಾರೆ ನವರಾತ್ರಿ ಮೆರವಣಿಗೆಯಲ್ಲಿ ಭಾಗವಹಿಸುವ ಟ್ಯಾಬ್ಲೋ ವಾಹನಗಳು ಅನುಮತಿಯನ್ನು ಪಡೆದುಕೊಳ್ಳಬೇಕು. ಯಾವುದೇ ವಾಹನದಲ್ಲಿ, ಟ್ಯಾಬ್ಲೋಗಳಲ್ಲಿ ಡಿಜೆ ಬಳಸಬಾರದು. ಟ್ಯಾಬ್ಲೊ ಮತ್ತು ಇತರ ಕಡೆಗಳಲ್ಲಿ ಧರಿಸುವ ವೇಷಗಳು ಯಾವುದೇ ಧರ್ಮ ಅಥವಾ ಜಾತಿಯವರಿಗೆ ಅವಹೇಳನವಾಗುವ ಹಾಗೂ ಅಸಭ್ಯತೆ ತೋರುವ ರೀತಿಯಲ್ಲಿ ಇರಬಾರದು. ಈ ಸೂಚನೆಗಳನ್ನು ಉಲ್ಲಂಘಿಸುವವ ವಿರುದ್ಧ ಕಾನೂನು […]

ಪೂಜಾ ಗಾಂಧಿಗೆ ಹೊಸ ಚಿತ್ರವೊಂದರಲ್ಲಿ ಸೆಕ್ಷೀ ಪಾತ್ರ ಸಿಕ್ಕಿದೆಯಂತೆ.

Wednesday, September 28th, 2011
pooja-gandhi

ಬೆಂಗಳೂರು : ಇದುವರೆಗೆ ಮೈ ತುಂಬಾ ಬಟ್ಟೆ ಹಾಕಿಕೊಂಡು ನಟಿಸುತ್ತಿದ್ದ ‘ಮಳೆ’ ಹುಡುಗಿ ಪೂಜಾ ಗಾಂಧಿಗೆ ಹೊಸ ಚಿತ್ರವೊಂದರಲ್ಲಿ ಸೆಕ್ಷೀ ಪಾತ್ರ ಸಿಕ್ಕಿದೆಯಂತೆ. ಮುಂಗಾರು ಮಳೆಯ ನಂತರ ಒಂದಷ್ಟು ಜನಪ್ರಿಯತೆಯನ್ನು ಈಗಲೂ ಉಳಿಸಿಕೊಂಡಿರುವ ನಾಯಕಿ ಈಕೆ. ಸದ್ಯ ಆಕೆ ಒಪ್ಪಿಕೊಂಡ ಚಿತ್ರಗಳು ಖಾಲಿಯಾಗಿವೆ. ಅನಿರೀಕ್ಷಿತವಾಗಿ ಬಂದಿರುವ ಆಫರ್ ಒಂದನ್ನು ಕಣ್ಮುಚ್ಚಿ ಒಪ್ಪಿಕೊಂಡಿರುವ ಆಕೆ ಇದುವರೆಗೂ ನಟಿಸಿರದಷ್ಟು ವಿಭಿನ್ನವಾದ ಮತ್ತು ಮಾದಕ ಪಾತ್ರವನ್ನು ಇದರಲ್ಲಿ ಮಾಡುತ್ತಿದ್ದಾರಂತೆ! ‘ಕೋಟೆ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು. ಅವರು ನಿರ್ಮಿಸುತ್ತಿರುವ ‘ದಂಡುಪಾಳ್ಯ’. ಸಿನಿಮಾದಲ್ಲಿ […]

ಮೂರು ಮಕ್ಕಳನ್ನು ಹುಟ್ಟಿಸಿದರೆ ಮೂರು ತಿಂಗಳು ಜೈಲು 10 ಸಾವಿರ ದಂಡ

Wednesday, September 28th, 2011
Kerala family plan

ತಿರುವನಂತಪುರ : ಕೇರಳದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಜನಸಂಖ್ಯೆ ನಿಯಂತ್ರಣ ಯೋಜನೆಯನ್ನು ಕಟ್ಟುನಿಟ್ಟುಗೊಳಿಸುವ ಸಲುವಾಗಿ ಕೇರಳ ಸರ್ಕಾರ ಎರಡು ಮಕ್ಕಳು ಮಾತ್ರ ಎಂಬ ಕಾಯಿದೆ ಜಾರಿಗೊಳಿಸಲು ನಿರ್ಧರಿಸಿದೆ. ನ್ಯಾ.ವಿ.ಆರ್.ಕೃಷ್ಣ ಅಯ್ಯರ್ ನೇತೃತ್ವದ ಆಯೋಗ ಹಲವು ಕಠಿಣ ಕ್ರಮಗಳನ್ನು ಜ್ಯಾರಿ ಗೊಳಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅದರಂತೆ ಮೂರನೇ ಮಗುವನ್ನು ಹೊಂದುವ ತಂದೆ ತಾಯಿಗೆ ಜೈಲು ಶಿಕ್ಷೆ ಮತ್ತು ಸರ್ಕಾರಿ ಸೌಲಭ್ಯ ಮಾನ್ಯತೆಯನ್ನು ರದ್ದುಗೊಳಿಸುವುದು ಮುಂತಾದ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಚಿಂತಿಸಿದೆ. ಆಯೋಗದ 12 ಸದಸ್ಯರ ಸಲಹೆ […]

ಮಾಧ್ಯಮ ಪ್ರತಿನಿಧಿಗಳ ಕುಟುಂಬ ಸದಸ್ಯರಿಗಾಗಿ ‘ಆಧಾರ್‌’ ಗುರುತು ಚೀಟಿ ನೋಂದಣಿ

Wednesday, September 28th, 2011
Adhar Card

ಮಂಗಳೂರು: ದ. ಕ. ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳ ಕುಟುಂಬ ಸದಸ್ಯರಿಗಾಗಿ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ‘ಆಧಾರ್‌’ ಗುರುತು ಚೀಟಿ ನೋಂದಣಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮಸ್ಯೆಗಳ ನಿವಾರಣೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ವಿಶಿಷ್ಟ ಗುರುತು ಚೀಟಿ ‘ಆಧಾರ್‌’ ಪಡೆಯುವುದು ಆವಶ್ಯವಾಗಿದೆ, ಆಧಾರ್‌ ಕುರಿತು ಮಾಧ್ಯಗಳು ಸಾರ್ವಜನಿಕರಲ್ಲಿ ಇನ್ನಷ್ಟು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ್ರು. ದಿನ ನಿತ್ಯದ ಸಮಸ್ಯೆಗಳಾದ […]

ಪೆಟ್ರೋಲ್ ದರ ಎತ್ತ ಸಾಗುತ್ತಿದೆ?

Monday, September 26th, 2011
Petrol prize

ಕಳೆದ 2009ರ ಜುಲೈ ತಿಂಗಳಲ್ಲಿ ಪೆಟ್ರೋಲ್ ದರ ನಿಯಂತ್ರಣವನ್ನು ಸರಕಾರವು ತೈಲ ಕಂಪನಿಗಳ ಸುಪರ್ದಿಗೆ ಒಪ್ಪಿಸಿದ ಬಳಿಕ ಎರಡು ವರ್ಷಗಳಲ್ಲಿ 12ನೇ ಬಾರಿ ಪೆಟ್ರೋಲ್ ದರ ಏರಿಸಲಾಗಿದೆ. ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿಕೆಯಾಗುತ್ತಿದೆ, ಅದಕ್ಕೆ ಅನುಸಾರವಾಗಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಬೆಲೆ ಪರಿಷ್ಕರಿಸಲಾಗುತ್ತದೆ ಎಂದು ಅಂದು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹಲವಾರು ಬಾರಿ ಏರಿವೆ, ಇಳಿಕೆಯೂ ಆಗಿವೆ. ಆದರೆ ಭಾರತದಲ್ಲಿ ಮಾತ್ರ ಏರುತ್ತಲೇ ಇದೆ! ಜನರನ್ನು ಹೇಗೆ ಮೋಸಪಡಿಸುವುದು ಅಂತ ಇವರನ್ನು ನೋಡಿ […]

ಮಂಗಳೂರು ಕೆಎಂಸಿ ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನದ ಓಟ

Monday, September 26th, 2011
Heart day

ಮಂಗಳೂರು: ಕೆಎಂಸಿ ಆಸ್ಪತ್ರೆ ವತಿಯಿಂದ ರವಿವಾರ ವಿಶ್ವ ಹೃದಯ ದಿನದ ಅಂಗವಾಗಿ ಏರ್ಪಡಿಸಿದ  ಓಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಚಾಲನೆ ನೀಡಿದರು. ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಹಾಗೂ ಅಂತಾರಾಷ್ಟ್ರೀಯ ಅತ್ಲೆಟ್‌ ರೀತ್‌ ಅಬ್ರಹಾಂ ಅವರು ಮುಖ್ಯ ಅತಿಥಿಯಾಗಿದ್ದರು. ನಗರದ ಬಿಜೈ ಕೆಎಂಸಿಯಿಂದ ಓಟ ಆರಂಭಗೊಂಡು ಲಾಲ್‌ಬಾಗ್‌, ಎಂ. ಜಿ. ರೋಡ್‌, ಪಿವಿಎಸ್‌ ವೃತ್ತ, ಬಂಟ್ಸ್‌ಹಾಸ್ಟೆಲ್‌ ವೃತ್ತ ಮಾರ್ಗವಾಗಿ ಸಾಗಿ ಅಂಬೇಡ್ಕರ್‌ ಸರ್ಕಲ್‌ ಬಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಸಮಾಪನಗೊಂಡಿತು. ಉದ್ಘಾಟನೆಯ ಬಳಿಕ ಮಾತನಾಡಿದ ಪಾಲೆಮಾರ್ […]

ಉಸಿರುಗಟ್ಟಿಸಿ ಬ್ಯಾಂಕ್ ಮ್ಯಾನೇಜರ್ ಕೊಲೆ

Monday, September 26th, 2011
BANK MANAGER

ಬೆಂಗಳೂರು : ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅವರು ವಾಸವಾಗಿರುವ ಮನೆಯಲ್ಲೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಓರಿಯೆಂಟಲ್ ಬ್ಯಾಂಕ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಡುಕೋಣೆ ಮೂಲದ ಶಂಕರ್ ಪೂಜಾರಿ (55) ಅವರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಭಾನುವಾರ ರಾತ್ರಿ ವೇಳೆಗೆ ಕೊಲೆ ನಡೆದಿರಬಹುದು ಎಂದು ಡೆಪ್ಯುಟಿ ಕಮಿಷನರ್ ಸೋನಿಯಾ ನಾರಂಗ್ ತಿಳಿಸಿದ್ದಾರೆ. ಕೊಲೆಯನ್ನು ಪೂಜಾರಿಗೆ ಬಲ್ಲವರೇ ಮಾಡಿರಬಹುದೆಂದು ಶಂಕಿಸಲಾಗಿದ್ದು. ಹೊರಬಾಗಿಲಿಗೆ ಒಳಗಿನಿಂದ […]

ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆ. 28ರಿಂದ ಅ. 7ರ ತನಕ ನವರಾತ್ರಿ ಉತ್ಸವ

Sunday, September 25th, 2011
Mangaladevi Temple

ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ. 28ರಿಂದ ಅ. 7ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಶನಿವಾರ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅ. 5ರಂದು ಸಣ್ಣ ರಥೋತ್ಸವ, 6ರಂದು ರಾತ್ರಿ 7.30ಕ್ಕೆ ರಥೋತ್ಸವ ಜರಗುವುದು. ನವರಾತ್ರಿ ಉತ್ಸದ ಅವಧಿಯಲ್ಲಿ ಪ್ರತೀದಿನ ವಿವಿಧ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮ ನೀಡಲಿವೆ. ಸುಮಾರು 2,000 ಕಲಾವಿದರು ಕಾರ್ಯಕ್ರಮ ನೀಡುಲಿದ್ದು. ಸೌಂದರ್ಯ […]

ಉದ್ಯೋಗ ಮೇಳ 88 ಮಂದಿ ಉದ್ದಿಮೆದಾರರು, 1,737 ಮಂದಿ ಉದ್ಯೋಗಾಂಕ್ಷಿಗಳು

Sunday, September 25th, 2011
Job fire

ಮಂಗಳೂರು: ಕೌಶಲ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ನಗರದ ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶನಿವಾರ ಆರಂಭಗೊಂಡ 32ನೇ ಬೃಹತ್‌ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಮೇಳದ ಮೊದಲ ದಿನ 1,737 ಮಂದಿ ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಉದ್ಯೋಗ ಮೇಳದಲ್ಲಿ 88 ಮಂದಿ ಉದ್ದಿಮೆದಾರರು ಭಾಗವಹಿಸಿದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಜೆಒಸಿ, ಐಟಿಐ, ಡಿಪ್ಲೊಮಾ, ಪದವಿ, ಅಂಗವಿಕಲ ಅಭ್ಯರ್ಥಿಗಳಲ್ಲಿ ಒಟ್ಟು […]

ಮಾನವ ಹಕ್ಕುಗಳು ಹಾಗೂ ಭಾರತದ ಸವಾಲುಗಳು ಕುರಿತ ರಾಷ್ಟ್ರೀಯ ಕಾರ್ಯಾಗಾರ

Saturday, September 24th, 2011
M Veerappa Moily

ಮಂಗಳೂರು: ಸೈಂಟ್‌ ಆಗ್ನೆಸ್‌ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಮಾನವ ಹಕ್ಕು ಶಿಕ್ಷಣ ಘಟಕದ ವತಿಯಿಂದ ‘ಮಾನವ ಹಕ್ಕುಗಳು-ಬದಲಾದ ಒಲವುಗಳು ಹಾಗೂ ಭಾರತದ ಸವಾಲುಗಳು’ ವಿಷಯದ ಕುರಿತು ನಗರದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರ ನಡುವೆ ಏಕತೆ, ರಾಷ್ಟ್ರೀಯ ಭಾವೈಕ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಸರಕಾರ ಕೋಮು ಹಿಂಸೆ ತಡೆ ಮಸೂದೆ ಜಾರಿಗೊಳಿಸಲು ಉದ್ದೇಶಿಸಿದೆ,.ರಾಜ್ಯ ಸರಕಾರಗಳು […]