ಕೇಂದ್ರದ ನೀತಿ ಖಂಡಿಸಿ ಇಂದು ಬ್ಯಾಂಕ್ ಮುಷ್ಕರಕ್ಕೆ ಕರೆ

Tuesday, October 22nd, 2019
Bank-Mushkara

ನವದೆಹಲಿ : 10 ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು 4 ಬ್ಯಾಂಕುಗಳನ್ನಾಗಿ ವಿಲೀನಗೊಳಿಸುತ್ತಿರುವ ಕೇಂದ್ರ ಸರ್ಕಾರ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟ (ಎಐಬಿಇಎ) ಮತ್ತು ಬ್ಯಾಂಕ್ ಉದ್ಯೋಗಿಗಳ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‍ಐ) ಮಂಗಳವಾರ ಮುಷ್ಕರಕ್ಕೆ ಕರೆ ನೀಡಿವೆ. ಮುಷ್ಕರದಿಂದ ಮಂಗಳವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳ ಸೇವೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದ್ದು, ಖಾಸಗಿ ವಲಯದ ಬ್ಯಾಂಕ್‍ಗಳು ಈ ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ. ಮುಷ್ಕರ ನಡೆಯುವ ಪ್ರದೇಶದಲ್ಲಿ ಎಟಿಎಂಗಳನ್ನೂ ಮುಚ್ಚುವುದಾಗಿ ಸಂಘಟನೆಗಳು ತಿಳಿಸಿವೆ. ಬ್ಯಾಂಕ್ ಮುಷ್ಕರವನ್ನು ಹಿಂದಕ್ಕೆ ಪಡೆಯುವಂತೆ ಸರ್ಕಾರ […]

ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

Tuesday, October 22nd, 2019
Red-Alert

ಮಂಗಳೂರು : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 4 ದಿನಗಳವರೆಗೆ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಅ.26ರವರೆಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಈ ಹಿನ್ನೆಲೆಯಲ್ಲಿ ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯಲಿದೆ. ಅ.23ರಂದು ಬೆಳಗ್ಗೆ 8:30ರಿಂದ ಆರಂಭಗೊಳ್ಳುವ ರೆಡ್ ಅಲರ್ಟ್ ಅ.26ರಂದು ಬೆಳಗ್ಗೆ 8:30ರವೆಗೂ ಮುಂದುವರಿಯಲಿದೆ. ಈ ಸಂದರ್ಭ ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ […]

ಎರಡು ವಾರ ಕಳೆದರೂ ಪತ್ತೆಯಾಗದ ವಿದ್ಯಾರ್ಥಿನಿ : ಪೋಷಕರಲ್ಲಿ ಆತಂಕ

Tuesday, October 22nd, 2019
fiyoona

ಮಂಗಳೂರು : ಖಾಸಗಿ ಕಾಲೇಜು ವಿದ್ಯಾರ್ಥಿನಿಯೊರ್ವಳು ನಾಪತ್ತೆಯಾಗಿ ಎರಡು ವಾರ ಕಳೆದರೂ ಇನ್ನೂ ಪತ್ತೆಯಾಗಿಲ್ಲದಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಫಿಯೋನಾ ಸ್ವೀಡಲ್ ಕುಟಿನ್ಹೋ(16) ಎಂಬ ವಿದ್ಯಾರ್ಥಿನಿ ನಾಪತ್ತೆಯಾಗಿ ಎರಡು ವಾರವಾದರೂ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೂ ಯಾವುದೇ ಮಾಹಿತಿದೊರೆತಿಲ್ಲ. ಮುಡಿಪು ನಿವಾಸಿ ಫಿಯೋನಾ ಅವರು ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಅ.8ರಂದು ಕಾಲೇಜಿಗೆಂದು ಮನೆಯಿಂದ ಹೊರಟು ಬಂದವರು ಮರಳಿ ಮನೆಗೆ ಮರಳಿಲ್ಲ. ಆಕೆ ಮನೆಯಿಂದ ತೆರಳುವಾಗ ಮೊಬೈಲ್ ಕೂಡಾ ಕೊಂಡೊಯ್ದಿಲ್ಲದಿರುವುದರಿಂದ ಯುವತಿಯ ಕಣ್ಮರೆ ವಿಚಾರ […]

ವಿಟ್ಲ : ಕಾಶಿಮಠದಲ್ಲಿ ಯುವ ಸಮ್ಮಿಲನ ಸಾಂಸ್ಕೃತಿಕ ಹಬ್ಬ

Tuesday, October 22nd, 2019
yuva-sanmelana

ವಿಟ್ಲ : ಕಾಶಿಮಠದಲ್ಲಿ ಯುವ ಸಮ್ಮಿಲನ ಸಾಂಸ್ಕೃತಿಕ ಹಬ್ಬವು ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ವಿಟ್ಲ ಕಾಶೀಮಠ ಶ್ರೀ ಕಾಶೀ ಮಹಿಳಾ ಮಂಡಲ ಹಾಗೂ ಶ್ರೀ ಕಾಶೀ ಯುವಕ ಮಂಡಲ ವತಿಯಿಂದ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಇತ್ತೀಚೆಗೆ ನಡೆಯಿತು. ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಹಳ್ಳಿಯ ಮಹಿಳೆಯರನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿವುದು ಶ್ಲಾಘನೀಯ. ಮಹಿಳೆಯರು ಬರೆಯುವ ಹವ್ಯಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ತರಂಗ ವಾರಪತ್ರಿಕೆ ಮಾಜಿ ಸಂಪಾದಕಿ ಅನಿತಾ […]

ಬಿಸಿರೋಡು ಅಭಿವೃದ್ಧಿಗೆ ಸರ್ವ ಸಹಕಾರ : ಕಂದಾಯ ಸಚಿವ ಅಶೋಕ್

Monday, October 21st, 2019
bantwal development

ಮಂಗಳೂರು : ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ. ರೋಡು ಪೇಟೆಯ ಅಭಿವೃದ್ಧಿ ಹಾಗೂ ಸೌಂದರ್ಯೀಕರಣಕ್ಕೆ ತೊಡಕಾಗಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಪೇಟೆಯ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಅವರು ಸೋಮವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಬಿ.ಸಿ. ರೋಡು ಅಭಿವೃದ್ಧಿ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು. ಮುಖ್ಯವಾಗಿ ಬಿ.ಸಿ. ರೋಡ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ ಸುವ್ಯಸ್ಥಿತ ರೀತಿಯಲ್ಲಿ ಇಲ್ಲದೇ ಇರುವುದು ಪ್ರಮುಖ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಹೆದ್ದಾರಿಯ […]

ಹಾಸನ : ಹೋಟೆಲ್ ಹಿಂಭಾಗದಲ್ಲಿ ಯುವತಿಯೊಬ್ಬಳ ಮೃತ ದೇಹ

Monday, October 21st, 2019
bhavitha

ಹಾಸನ : ಯುವತಿಯೊಬ್ಬಳ ಮೃತ ದೇಹ ಬಿಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ಬಳಿ ಸೋಮವಾರ ಪತ್ತೆಯಾಗಿದೆ. ಮೃತ ಯುವತಿಯನ್ನು ಅರಕಲಗೂಡು ಮೂಲದ ಭವಿತಾ (23) ಎಂದು ಗುರುತಿಸಲಾಗಿದೆ. ಕಳೆದ 12 ದಿನಗಳಿಂದ ಬಿಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದ ಯುವತಿಯ ಮೃತ ದೇಹ ಸೋಮವಾರ ಬೆಳಗ್ಗೆ ಹೋಟೆಲ್ ಹಿಂಭಾಗದಲ್ಲಿ ಪತ್ತೆಯಾಗಿತ್ತು. ದೇಹದ ಹಲವು ಭಾಗಗಳಿಗೆ ಹಚ್ಚೆ ಹಾಕಿಸಿಕೊಂಡಿರುವ ಭವಿತಾ  ರಟ್ಟೆಯ ಮೇಲೆ ಪುನಿತ್ ಎಂದು ಹಚ್ಚೆ ಹಾಕಿಸಿಕೊಂಡಿರುವುದರಿಂದ ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ […]

ಮೈಸೂರು : ಹುತಾತ್ಮ ಪೊಲೀಸ್ ರಿಗೆ ಗೌರವ ಸಮರ್ಪಣೆ

Monday, October 21st, 2019
mysuru-Martyrs-day

ಮೈಸೂರು : ಪೊಲೀಸ್ ಮಹಾನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ನಗರ, ಜಿಲ್ಲೆ, ಕರ್ನಾಟಕ ಪೊಲೀಸ್ ಅಕಾಡೆಮಿ, ಕೆಎಸ್ಆರ್ ಪಿ ಮತ್ತು ಕೆಎಆರ್ ಪಿ ಘಟಕದ ವತಿಯಿಂದ ನಗರದ ನಜರ್ ಬಾದ್ ನಲ್ಲಿರುವ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಸೋಮವಾರ ಆಚರಿಸಲಾಯಿತು. ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಅವರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂವಿನ ಗುಚ್ಛವಿಟ್ಟು ಗೌರವ ಅರ್ಪಿಸಿದರು. ಪೊಲೀಸ್ ಸಿಬ್ಬಂದಿಯಿಂದ ವಾಲಿ ಫೈರಿಂಗ್ ಮೂಲಕ ಹುತಾತ್ಮ ಪೊಲೀಸ್ ರಿಗೆ ಗೌರವ ಸಮರ್ಪಿಸಿದರು. […]

ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್​ ವಿದ್ಯಾರ್ಥಿ

Monday, October 21st, 2019
harsha

ಆನೇಕಲ್ : ಈತ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ಪ್ರತಿಷ್ಠಿತ ಕಂಪನಿಯೊಂದರ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿದ್ದ. ವರ್ಷಕ್ಕೆ 14 ಲಕ್ಷ ರೂಪಾಯಿ ಸಂಬಳ ಬರುವ ಕೆಲಸ ಅದಾಗಿತ್ತು. ಕಂಪನಿ ಕಾಲ್ ಲೆಟರ್ನ್ನೂ ಕೊಟ್ಟಿತ್ತು. ಇಷ್ಟೆಲ್ಲ ಆದ ಮೇಲೆ ಈಗ ಆ ಯುವಕ ತಾನು ಓದುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ಏಳನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮೃತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಹರ್ಷ ಮೃತ ವಿದ್ಯಾರ್ಥಿ. ಈತನನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿತ್ತು. ಅಷ್ಟೇ ಅಲ್ಲದೆ […]

ಚಂದನ್ ಶೆಟ್ಟಿ- ನಿವೇದಿತಾ ಗೌಡ ಅದ್ಧೂರಿ ನಿಶ್ಚಿತಾರ್ಥ

Monday, October 21st, 2019
chandan-shetty

ಮೈಸೂರು : ಗಾಯಕ ಚಂದನ್ ಶೆಟ್ಟಿ ಮತ್ತು ಬಾರ್ಬಿ ಗರ್ಲ್ ನಿವೇದಿತಾ ಗೌಡ ನಿಶ್ವಿತಾರ್ಥ ಇಂದು ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಶುಭಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು. ಇದೀಗ ಚಂದನ್, ನಿವೇದಿತಾಗೆ ಮತ್ತೊಮ್ಮೆ ರಿಂಗ್ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖಾಸಗಿ ವಾಹಿನಿಯ […]

ಮೂಲಂಗಿ ಮತ್ತು ಪುದೀನಾದಿಂದ ಚರ್ಮಕ್ಕೆ ಯಾವ ರೀತಿ ರಕ್ಷಣೆ

Monday, October 21st, 2019
Pudeena

* ಪುದಿನಾ ಒಡೆದ ಚರ್ಮಕ್ಕೆ ರಾಮಬಾಣ. * ಕೀಟಗಳು ಕಚ್ಚಿದ ಜಾಗ ಅಥವಾ ಅಲರ್ಜಿಯಾದ ಭಾಗಕ್ಕೆ ಪುದಿನಾ ಸೊಪ್ಪನ್ನು ಜಜ್ಜಿ ಅದರ ರಸವನ್ನು ಹಚ್ಚಿದಲ್ಲಿ ಮಾಯವಾಗುತ್ತದೆ. * ಇದು ಸತ್ತ ಚರ್ಮಕೋಶಕ್ಕೆ ಜೀವ ನೀಡಲಿದ್ದು ಚರ್ಮ ಒಡೆದಿದ್ದಲ್ಲಿ ಹಚ್ಚಿ. * ಮೊಡವೆ ಕಲೆಗಳ ನಿವಾರಣೆಗೂ ಕೂಡ ಸೂಕ್ತ. * ಸ್ವಲ್ಪ ಎಲೆಗಳನ್ನು ನೀರಿಗೆ ಹಾಕಿ ಕಾಯಿಸಿ ಅದರಲ್ಲಿ ಪಾದಗಳನ್ನು ಇರಿಸಿ ಆಗ ಕಾಲಿನ ಒಡಕು ಮತ್ತು ದುರ್ವಾಸನೆ ಮಾಯವಾಗುತ್ತದೆ. ಹೀಗೆ ವಾರಕ್ಕೊಮ್ಮೆ ಮಾಡಿ. ಮೂಲಂಗಿ ಅನೇಕ ಖಾಯಿಲೆಗಳನ್ನು […]