Blog Archive

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅರಿವು ಕಾರ‍್ಯಕ್ರಮ

Tuesday, March 24th, 2015
Water seminar

ಬಂಟ್ವಾಳ: ದ.ಕ.ಜಿಲ್ಲಾ ಪಂ. ಮಂಗಳೂರು, ತಾ.ಪಂ.ಬಂಟ್ವಾಳ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅರಿವು ಮೂಡಿಸುವ ಸಪ್ತಾಹ ಕಾರ‍್ಯಕ್ರಮ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. ಕಾರ‍್ಯಕ್ರಮವನ್ನು ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರಕಾರದ ಯಾವುದೇ ಯೋಜನೆಗಳು ಕಾರ್ಯಗತಗೊಳ್ಳಲು ಸಾರ್ವಜನಿಕರ ಸಹಕಾರ ಅತೀ ಅಗತ್ಯ, ಅ ನಿಟ್ಟಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ‍್ಯಕ್ರಮ ಯಶಸ್ವಿಗೊಳ್ಳಲು ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಒಮ್ಮತದ ಕೆಲಸ ಆಗಬೇಕಾಗಿದೆ ಎಂದರು. ವೇದಿಕೆಯಲ್ಲಿ ಸ್ಥಾಯಿ […]

ಬಂಟ್ವಾಳ : ಆಹಾರವನ್ನು ಹುಡುಕಿ ಬಂದ ಚಿರತೆ ಆಯತಪ್ಪಿ ಬಾವಿಯೊಳಗೆ ಬಿತ್ತು

Wednesday, March 18th, 2015
Chita

ಬಂಟ್ವಾಳ : ಆಹಾರವನ್ನು ಹುಡುಕಿ ಬಂದ ಚಿರತೆ ಆಯತಪ್ಪಿ ಬಾವಿಯೊಳಗೆ ಬಿದ್ದ ಘಟನೆ ಬಂಟ್ವಾಳದ ವಳಲೂರು ಎಂಬಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಿಸಿ ಪಿಲಿಕುಳ ವನ್ಯಧಾಮ ಕೇಂದ್ರಕ್ಕೆ ರವಾನಿಸಿದ್ದಾರೆ. ಮಂಗಳವಾರ ರಾತ್ರಿ ಕೋಳಿ ತಿನ್ನಲು ಬಂದ ಚಿರತೆ ವಳವೂರಿನ ನಿವಾಸಿ ಲಿಂಗಪ್ಪ ಪೂಜಾರಿ ಅವರ ಮನೆ ಸಮೀಪದ ಬಾವಿಗೆ ಬಿದ್ದಿತ್ತು. ಬುಧವಾರ ಬೆಳಗ್ಗೆ ಚಿರತೆಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಬಾವಿಗೆ ಬಿದ್ದಿದ್ದ ಚಿರತೆ ಪೈಪನ್ನು […]

18 ಸಾವಿರ ಹಿಡಿದುಕೊಂಡು ಬಂಟ್ವಾಳದಿಂದ ಬಾಲಕ ಪರಾರಿ

Tuesday, March 10th, 2015
Anil

ಬಂಟ್ವಾಳ: ಬಾಲಕನೋರ್ವ ನಗದು ಸಹಿತ ಕಾಣೆಯಾದ ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಣೆಯಾದ ಬಾಲಕನನ್ನು 12 ವರ್ಷ ಪ್ರಾಯದ ಅನಿಲ್ ಎನ್ನಲಾಗಿದೆ. ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಕೊಳಕೆ ನಿವಾಸಿ ಸೋಮಪ್ಪ ಅವರ ಮಗ ಅನಿಲ್ ಎಂಬ ಹುಡುಗ ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತುಕೊಂಡಿದ್ದ. ತಂದೆ ಮತ್ತು ತಾಯಿ ಕೆಲಸಕ್ಕೆ ಹೋದ ಸಂದರ್ಭ ಅನಿಲ್ ಮನೆಯ ಕಪಾಟಿನಲ್ಲಿ ಇಟ್ಟಿದ್ದ ರೂ 18 ಸಾವಿರ ಹಿಡಿದುಕೊಂಡು ಮನೆಯಿಂದ ಹೋದವನು ವಾಪಾಸು ಬರದೆ ಕಾಣೆಯಾಗಿದ್ದಾನೆ ಎಂದು ಬಾಲಕನ […]

ಸೃಷ್ಟಿ ವೈಶಿಷ್ಟ್ಯ : ಲಚ್ಚಿಲ್ ನಲ್ಲಿ ನಾಲ್ಕು ಕಾಲಿನ ಕೋಳಿ ಮರಿ ಜನನ

Thursday, October 30th, 2014
Poultry breeding

ಬಂಟ್ವಾಳ: ನಾಲ್ಕು ಕಾಲಿನ ಕೋಳಿ ಮರಿಯೊಂದು ಜನಿಸುವ ಮೂಲಕ ಅಚ್ಚರಿ ಮೂಡಿಸಿದೆ. ಬಂಟ್ವಳ ತಾಲೂಕಿನ ತುಂಬೆ ಗ್ರಾಮದ ಗಾಣದ ಲಚ್ಚಿಲ್ ಎಂಬಲ್ಲಿನ ಪದ್ಮಾವತಿ ಎಂಬವರ ಮನೆಯಲ್ಲಿ ಪ್ರಕೃತಿಯ ಈ ವೈಚಿತ್ರ ಮೂಡಿ ಬಂದಿದ್ದು ಸ್ಥಳೀಯವಾಗಿ ಜನರಲ್ಲಿ ಕುತೂಹಲ ಮೂಡಿಸಿದೆ. ಇವರ ಮನೆಯ ಸಾಕು ಕೋಳಿಯೊಂದು ಮೊಟ್ಟೆ ಇಟ್ಟು 12 ಮರಿಗಳಿಗೆ ಎರಡು ದಿನಗಳ ಹಿಂದೆಯಷ್ಟೇ ಜನ್ಮ ನೀಡಿತ್ತು. ಈ ಪೈಕಿ ಒಂದು ಕೋಳಿ ಮರಿ ವಿಶೇಷವಾಗಿ ಕಮಡು ಬಂದಿದ್ದು ಸರಿಯಾಗಿ ಪರಿಶೀಲಸಿದಾಗ ನಾಲ್ಕು ಕಾಲುಗಳಿರುವುದು ಕಂಡು ಬಂದಿದೆ. […]

ಬಂಟ್ವಾಳ : 383 ಗಣವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ

Monday, October 27th, 2014
RSS Bantwal

ಬಂಟ್ವಾಳ : ತಾಲೂಕಿನ ಅಣ್ಣಳಿಕೆಯಿಂದ ರಾಯಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದವರೆಗೆ 383 ಗಣವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ಸೋಮವಾರ ನಡೆಯಿತು. ವಿಜಯದಶಮಿ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಬೌದ್ಧಿಕ್ ಶ್ರೀ ರಾಜೇಶ್ ರವರು ಮಾತನಾಡಿ ಹಿಂದೂ ಸಮಾಜಕ್ಕೆ ಸಂಘ ಶಕ್ತಿ ತುಂಬಿದೆ ಸಮಾಜದ ಒಳಿತಿಗಾಗಿ ಲಕ್ಷಾಂತರ ಜನ ಜೊತೆಯಾಗಿ ಕೆಲಸಮಾಡುವವರನ್ನು ಕಲ್ಪಿಸಿಕೊಟ್ಟಿದೆ. ಸಂಘ ಉಪೇಕ್ಷೆ ವಿರೋಧಗಳನ್ನು ದಾಟಿ ಸ್ವೀಕಾರ ಹಂತ ತಲುಪಿದೆ. ನಮ್ಮ ಪ್ರಭಾವ ಶಕ್ತಿ ಅಲ್ಪ ಬದಲಾಗಿ ಸಂಘಸ್ಥಾನವೇ ನಮ್ಮ ಶಕ್ತಿ ಇದನ್ನು ಬಲಪಡಿಸಬೇಕಾಗಿರುವುದು ಇಂದಿನ […]

ಬೀಜದ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ಯುವತಿಯೋರ್ವಳು ಕಾಣೆ

Sunday, September 21st, 2014
Sumalatha Mugera

ಬಂಟ್ವಾಳ: ಬೀಜದ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಕಾರಿಂಜಕೊಡಿ ನಿವಾಸಿ ದಿ.ಕೃಷ್ಣಪ್ಪ ಮುಗೇರ ಅವರ ಮಗಳು ಸುಮಲತಾ (22)ಎಂದು ಹೆಸರಿಲಾಗಿದೆ. ಸುಮಾರು 1 ವರ್ಷದಿಂದ ವಗ್ಗದ ಬೀಜದ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದು ಸೆ.13ರಮದು ಬೆಳಿಗ್ಗೆ 6.30ಕ್ಕೆ ಕೆಲಸಕ್ಕೆಂದು ಮನೆಯಲ್ಲಿ ಹೇಳಿ ಹೋದವಳು ವಾಪಸು ಮನೆಗೆ ಬಾರದೆ , ಸಂಬಂದಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ತಾಯಿ […]

ನರನಾರಾಯಣನಾಗುವ ಏಕೈಕ ಭೂಮಿ ಭಾರತ : ಪ್ರಭಾಕರ ಭಟ್

Friday, June 13th, 2014
Rama Vidya Kendra Kalladka

ಬಂಟ್ವಾಳ : ಒಳ್ಳೆಯ ಚಿಂತನೆಗಳು ಯೋಜನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಅದೆಲ್ಲವೂ ದೇಶಕ್ಕೆ ಸಮರ್ಪಿತವಾದಾಗ ಅದರಿಂದ ನಮಗೂ ಒಳಿತೇ ಸಂಭವಿಸುತ್ತದೆ. ನಾವು ಯಾವುದೇ ವೃತ್ತಿಯಲ್ಲಿದ್ದರೆ ನಮ್ಮ ತನುಮನ ಧನ ದೇಶಕ್ಕೆ ಸಮರ್ಪಿತವಾದಾಗ ನಿಜವಾಗಿ ನಾವು ತೃಪ್ತರಾಗಲು ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಹೇಳಿದರು. ಅವರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಆಗತ ಸ್ವಾಗತ’ ಇದರಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ, ಪರೀಕ್ಷೆ ,ಅಂಕಗಳು ವಿದ್ಯಾಭ್ಯಾಸದ ಒಂದು ಭಾಗವಾದರೆ […]

ನಾಳೆಯಿಂದ ಎಂಡೋ ಸಂತ್ರಸ್ತರ ಪುನರ್ ಸಮೀಕ್ಷೆ: ರೈ

Friday, February 28th, 2014
Ramanda-Rai

ಬಂಟ್ವಾಳ: ಮಾ. 1ರಿಂದ ಎಂಡೋ ಸಂತ್ರಸ್ತರ ಪುನರ್ ಸಮೀಕ್ಷೆ ನಡೆಸಲಾಗುವುದು. ಅರ್ಹ ಎಂಡೋ ಸಂತ್ರಸ್ತರನ್ನು ಪತ್ತೆ ಹಚ್ಚಿ ಅವರಿಗೂ ಸರ್ಕಾರದ ಸೌಲಭ್ಯ ಒದಗಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಇಲಾಖೆ ಇದರ ಆಶ್ರಯದಲ್ಲಿ ಗುರುವಾರ ಮಂಚಿಯ ಲಯನ್ಸ್ ಮಂದಿರದಲ್ಲಿ ನಡೆದ ಎಂಡೋ ಸಂತ್ರಸ್ತರ ಮಿತವೇತನದ (ಸ್ಟೈಫಂಡ್) ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಎಂಡೋ ಸಂತ್ರಸ್ತರಿಗೆ ಆದೇಶ ಪತ್ರ ವಿತರಿಸಿ […]

ದಿಢೀರ್ ಪ್ರತಿಭಟನೆ: ಆಸ್ಪತ್ರೆ ವೈದ್ಯನ ಬಂಧನ

Saturday, February 8th, 2014
Fast-to-protest

ಬಂಟ್ವಾಳ: ಬಿ.ಸಿ.ರೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ಚಂಚಲಾಕ್ಷಿ ಹಾಗೂ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾವಿರಾರು ಸಾರ್ವಜನಿಕರು ಶುಕ್ರವಾರ ಸಂಜೆ ಆಸ್ಪತ್ರೆ ಮುಂಭಾಗ ದಿಢೀರನೆ ಪ್ರತಿಭಟನೆ ನಡೆಸಿದರು. ಮುಂದೆ ನಡೆಯಬಹುದಾದ ಅಪಾಯವನ್ನು ತಪ್ಪಿಸಲು ಪೊಲೀಸರು ಆಸ್ಪತ್ರೆ ವೈದ್ಯನನ್ನು ಬಂಧಿಸಿದ್ದಾರೆ. ಆಕ್ರೋಶಿತ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿ ವೈದ್ಯನ ಬಂಧನಕ್ಕೆ ಬಂಟ್ವಾಳ ನಗರ ಪೊಲೀಸರು ವಿಳಂಬ ಧೋರಣೆ ಅನುಸರಿಸಿದ್ದಾರೆಂದು ಆರೋಪಿಸಿ ಧಿಕ್ಕಾರ ಕೂಗಿದರು. ಈ ಹಂತದಲ್ಲಿ ಆಸ್ಪತ್ರೆ ವಠಾರದೊಳಗೆ ಉದ್ವಿಗ್ನ […]

ದೂರು ಬರಲಿ ಎಂದು ಕೈಕಟ್ಟಿ ಕೂರಬೇಡಿ: ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ

Thursday, February 6th, 2014
Mescom

ಬಂಟ್ವಾಳ: ಯಾವುದೇ ಸಮಸ್ಯೆ ಬಗೆಹರಿಸಲು ಗ್ರಾಹಕರಿಂದ ದೂರು ಬರಲಿ ಎಂದು ಕಾದು ಕುಳಿತುಕೊಳ್ಳದೆ, ಸಮಸ್ಯೆಗಳಿಗೆ ಸ್ವತಃ ತಾವೇ ಮುಂದಾಗಿ ಪರಿಹಾರ ಕ್ರಮ ಕೈಗೊಳ್ಳಿ ಎಂದು ಬಂಟ್ವಾಳ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಬುಧವಾರ ಬಂಟ್ವಾಳ ತಾಪಂ ಸಭಾಂಗಣದಲ್ಲಿ ತಾಪಂ ಉಪಾಧ್ಯಕ್ಷ ಆನಂದ ಶಂಭೂರು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಪ್ರಗತಿ ವೇಳೆ ಅಧಿಕಾರಿಗಳಿಗೆ  ಈ ಮೇಲಿನ ಸೂಚನೆ ನೀಡಿದರು. ರಾಜೀವ್ ಗಾಂಧಿ […]